Categories: information

ಭಾರತದ ಅತಿ ವಿಚಿತ್ರವಾದ ಈ ನದಿ ಬಗ್ಗೆ ನಿಮಗೆಷ್ಟು ಗೊತ್ತು? ಅಷ್ಟಕ್ಕೂ ಏನಿದರ ವಿಶೇಷ ಗೊತ್ತಾ?

ಸ್ನೇಹಿತರೆ ಭಾರತದ ಹಲವು ನದಿಗಳು ಕಾರ್ಖಾನೆಯ ತ್ಯಾಜ್ಯದಿಂದ ದೊಡ್ಡ ದೊಡ್ಡ ನಗರಗಳ ತ್ಯಾಜ್ಯ ವಸ್ತು ವಿನಿಂದ ಕೂಡಿ ಮಲಿನವಾಗಿವೆ. ಆದರೆ ಅದೊಂದು ನದಿ ಮಾತ್ರ ಸಂಪೂರ್ಣ ತಿಳಿಯಾಗಿದ್ದು ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಈ ಕಾರಣದಿಂದಲೇ ಅಲ್ಲಿಗೆ ವರ್ಷದುದ್ದಕ್ಕೂ ಸಾವಿರಾರು ಪ್ರವಾಸಿಗರು ಬರುತ್ತಾರೆ.

Spread the love

ಸ್ನೇಹಿತರೆ ಭಾರತದ ಹಲವು ನದಿಗಳು ಕಾರ್ಖಾನೆಯ ರಾಸಾಯನಿಕದಿಂದ, ದೊಡ್ಡ ದೊಡ್ಡ ನಗರಗಳ ತ್ಯಾಜ್ಯ ವಸ್ತು ವಿನಿಂದ ಕೂಡಿ ಮಲಿನವಾಗಿವೆ. ಆದರೆ ಅದೊಂದು ನದಿ ಮಾತ್ರ ಸಂಪೂರ್ಣ ತಿಳಿಯಾಗಿದ್ದು ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಈ ಕಾರಣದಿಂದಲೇ ಅಲ್ಲಿಗೆ ವರ್ಷದುದ್ದಕ್ಕೂ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹಾಗಾದರೆ ಯಾವುದು ಆ ನದಿ ಮತ್ತು ಅದು ಎಲ್ಲಿದೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!
Davki River

ಸ್ನೇಹಿತರೆ ಆ ನದಿಯ ಹೆಸರು ಡವ್ಕಿ ನದಿ. ವಾಹ್ ಉಮ್ಗೋಟ್ ಎಂದೂ ಕರೆಯಲ್ಪಡುವ ಉಮ್ಗೋಟ್/ಡವ್ಕಿ ನದಿಯು ಭಾರತದ ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಜೈನ್ತಿಯಾ ಬೆಟ್ಟಗಳ ಕೆಳಭಾಗದಲ್ಲಿರುವ ಒಂದು ಪುಟ್ಟ ಪಟ್ಟಣವಾದ ಡಾವ್ಕಿಯ ಮೂಲಕ ಹರಿಯುವ ನದಿಯಾಗಿದೆ . ಈ ಪಟ್ಟಣವು ವ್ಯವಹಾರಿಕ ಮತ್ತು ದೇಶದ ಭದ್ರತೆ ದೃಷ್ಟಿಯಿಂದ ಪ್ರಮುಖ ಸ್ಥಳವಾಗಿದೆ. ಅಲ್ಲದೇ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯಾಪಾರ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ .

ಉಮ್ಗೋಟ್, ಭಾರತದ ಸ್ವಚ್ಛ ನದಿಗಳಲ್ಲಿ ಒಂದಾಗಿದ್ದು, ಇದು ಸ್ಥಳೀಯ ಮೀನುಗಾರರಿಗೆ ಪ್ರಮುಖ ಮೀನುಗಾರಿಕೆ ಸ್ಥಳವಾಗಿದೆ . ಅವರ ಜೀವನೋಪಾಯಕ್ಕೆ ಬೆನ್ನೆಲುಬಾಗಿದೆ. ಈ ನದಿಯು ಭಾರತ-ಬಾಂಗ್ಲಾದೇಶದ ಗಡಿಯಲ್ಲಿದ್ದು, ಪ್ರವಾಹದ ಏರಿಕೆಯಿಂದ ಉಂಟಾಗುವ ನದಿಯ ಬಿಳಿ ಭಾಗವು ಎರಡು ದೇಶಗಳ ನಡುವಿನ ಅನಧಿಕೃತ ( unofficial) ಗಡಿಯನ್ನು ಗುರುತಿಸುತ್ತದೆ. ಈ ನದಿಯ ವಿಶೇಷ ಏನೆಂದರೆ ಇಲ್ಲಿನ ನೀರು ಸಂಪೂರ್ಣ ತಿಳಿಯಾಗಿದ್ದು, ನಿಮ್ಮ ಪ್ರತಿಬಿಂಬ ನೀರಿನ ಮೇಲೆ ಬೀಳದೆ ನೀರಿನ ಕೆಳಗೆ ಕಾಣಿಸುತ್ತದೆ. ಅಷ್ಟು ಸ್ವಚ್ಛ ನದಿ ಇದಾಗಿದೆ. ಈ ಕಾರಣಕ್ಕಾಗಿ ಇಲ್ಲಿಗೆ ವರ್ಷದುದ್ದಕ್ಕೂ ಹಲವಾರು ಪ್ರವಾಸಿಗರು ಬಂದು ಈ ನದಿಯ ಸೌಂದರ್ಯವನ್ನು ಆಸ್ವಾದಿಸುತ್ತಾರೆ .

ಉಮ್ಗೋಟ್ ನದಿಯ ಮೇಲೆ ಒಂದು ತೂಗು ಸೇತುವೆ (ಡವ್ಕಿ ಸೇತುವೆ) ತೂಗುಹಾಕಲಾಗಿದೆ. ಇದನ್ನು 1932 ರಲ್ಲಿ ನಿರ್ಮಿಸಲಾಯಿತು.ಇಲ್ಲಿಂದ ದಾವ್ಕಿ ಅಥವಾ ಉಮ್ಗೊಟ್ ನದಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು. ಏಪ್ರಿಲ್ 2021 ರಲ್ಲಿ, ಮೇಘಾಲಯ ಸರ್ಕಾರವು ವಿದ್ಯುತ್ ಕೊರತೆಯ ದೃಷ್ಟಿಯಿಂದ ನದಿಗೆ ಅಣೆಕಟ್ಟು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಈ ಯೋಜನೆಯು ಉದ್ದೇಶಿತ 210 MW ಉಮ್ಗೋಟ್ ಜಲವಿದ್ಯುತ್ ಯೋಜನೆಯಾಗಿದ್ದು, ಇದು ಸ್ಥಳೀಯ ಗ್ರಾಮಸ್ಥರಿಂದ ಸಾಕಷ್ಟು ಹಿನ್ನಡೆ ಮತ್ತು ವಿರೋಧವನ್ನು ಎದುರಿಸಿದ್ದರಿಂದ ಅದು ಕೊನೆಗೆ ಅದು ರದ್ದಾಗಿತು.

ಈ ಮೇಲೆ ಕಾಣುವ ಚಿತ್ರ ನೋಡಿದರೆ ನಮಗೆ ಕಂಡು ಬರುತ್ತದೆ. ಮೇಘಾಲಯದ ದಾವ್ಕಿ ನದಿ, ಅದರ ಸ್ಪಷ್ಟ, ಪಾರದರ್ಶಕ ನೀರು ಮತ್ತು ದೈವಿಕತೆ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ ಎಂಬುದು. ಸಾಧ್ಯವಾದರೆ ಒಮ್ಮೆ ನೋಡಿ ಬನ್ನಿ..

ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನೀವು ನಮ್ಮ ವೆಬ್ ಸೈಟಿಗೆ ಮೊದಲ ಬಾರಿ ಬಂದಿದ್ದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ಗಳನ್ನು ‘allow’ ಮಾಡಿಕೊಳ್ಳಿ.

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago