ದೇಶದಾದ್ಯಂತ ದೀಪಾವಳಿಗೆ ಪಟಾಕಿ ಸಿಡಿಸದಂತೆ ಸುಪ್ರೀಂ ಕೋರ್ಟ್ ನಿರ್ಭಂಧ! ಸುಪ್ರೀಮ್ ಕೋರ್ಟ್ ಯಾಕೆ ಈ ತೀರ್ಪನ್ನು ಕೊಟ್ಟಿದೆ ಗೊತ್ತಾ?
ಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯು ಎಲ್ಲರ ಮನೆ ಮನೆಗಳಲ್ಲೂ ಹಬ್ಬದ ಸಂಭ್ರಮ ಉಂಟು ಮಾಡಲು ತಯಾರಾಗಿರುವ ಹೊಸ್ತಿಲಲ್ಲಿಯೇ ಸುಪ್ರೀಮ್ ಕೋರ್ಟ್ ನಿಂದ ಮಹತ್ವದ ತೀರ್ಪೊಂದು ಹೊರಬಿದ್ದಿದೆ.
Thank you for reading this post, don't forget to subscribe!ಇತ್ತೀಚೆಗೆ ಪಟಾಕಿ ಸಿಡಿಸುವ ಕುರಿತು ಕೇಸ್ ಒಂದನ್ನ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಅದನ್ನು ಸಂಪೂರ್ಣವಾಗಿ ಚರ್ಚಿಸಿ ದೇಶದಾದ್ಯಂತ ತತ್ ಕ್ಷಣವೇ ಜಾರಿಗೆ ಬರುವಂತೆ ದೀಪಾವಳಿ ಅಂದು ಪಟಾಕಿ ಸಿಡಿಸದಂತೆ ತೀರ್ಪನ್ನು ನೀಡಿದೆ. ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಶಬ್ದ ಮಾಲಿನ್ಯವನ್ನು ತಡೆಗಟ್ಟುವ ದೃಷ್ಟಿಯಿಂದ ಉಚ್ಚ ನ್ಯಾಯಾಲಯವು ಈ ತೀರ್ಪನ್ನ ನೀಡಿದೆ. ಜಾಗತೀಕರಣದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಇಂಥದ್ದೊಂದು ಕ್ರಮ ಬಹಳ ಅವಶ್ಯಕವಾಗಿತ್ತು ಅಲ್ಲದೆ ಹಬ್ಬದ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡುವುದು ಎಷ್ಟು ಸರಿ ಎಂಬಂತಹ ಪ್ರಶ್ನೆಗಳು ಸುಪ್ರೀಂಕೋರ್ಟ್ ಎದುರಿಗಿದ್ದವು. ಈ ಎಲ್ಲ ಪ್ರಶ್ನೆಗಳನ್ನು ಸವಿವರವಾಗಿ ಚರ್ಚಿಸಿ ಸುಪ್ರೀಂ ಕೋರ್ಟ್ ಈ ನಿರ್ಧಾರಕ್ಕೆ ಬಂದಿತು.
ಮುಂಚೆ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಕೇವಲ ರಾಷ್ಟ್ರದ ರಾಜಧಾನಿಯಾದ ದೆಹಲಿಗೆ ಮಾತ್ರ ಸೀಮಿತಗೊಳಿಸಿತ್ತು. ಆದರೆ ಈಗ ಹೊರಡಿಸಿರುವ ತೀರ್ಪಿನಲ್ಲಿ ಈ ಕ್ರಮವು ಇಡೀ ದೇಶದಾದ್ಯಂತ ಅನ್ವಯಿಸಲಿದೆ. ಇದರಿಂದ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಲಿದ್ದು ಅದರ ಜೊತೆಗೆ ಶುದ್ಧ ಗಾಳಿಯ ಪ್ರಮಾಣದಲ್ಲಿ ಏರಿಕೆ ಕಂಡು ಬರಲಿದೆ ಎಂದು ತಜ್ಞರು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ಉಸಿರಾಡಲು ಶುದ್ದಗಾಳಿಯ ಕೊರತೆ ಇದೆ ಅಂತದ್ದರಲ್ಲಿ ಪಟಾಕಿಯನ್ನು ಸೇರಿಸಿ ಅದರಿಂದ ಹೊಮ್ಮುವ ಹೊಗೆಯನ್ನು ವಾತಾವರಣಕ್ಕೆ ಬಿಡುವುದು ವಾಯುಮಾಲಿನ್ಯಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಹಾಗಾಗಿ ಮುಂಚೆ ಸುಪ್ರೀಂ ಕೋರ್ಟ್ ಇದನ್ನು ದೆಹಲಿಯಲ್ಲಿ ನಿರ್ಬಂಧಿಸಿತ್ತು. ಪ್ರಸ್ತುತ ಈ ತೀರ್ಪು ದೇಶದಾದ್ಯಂತ ಅನ್ವಯಿಸಲಿದ್ದು ಪರಿಸರ ಪ್ರೇಮಿಗಳು ಈ ತೀರ್ಪನ್ನ ಸ್ವಾಗತಿಸಿದ್ದಾರೆ.
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…