Categories: information

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯಲ್ಲಿ ಹೆಸರು ತಿದ್ದುಪಡಿ ಮಾಡುವಂತೆ ಪಹಣಿಯಲ್ಲಿ ಹೆಸರು ತಪ್ಪಾಗಿರುವುದನ್ನು ಸಹ ರೈತರು ಸರಿಪಡಿಸಬಹುದುರೈತರು ತಮ್ಮ ಪಹಣಿಗಳಲ್ಲಿ ಹೆಸರು ತಂದೆಯ ಹೆಸರನ್ನು ಸರಿಯಾಗಿ ಗಮನಿಸಿರುವುದಿಲ್ಲ. ಸ್ಪೆಲಿಂಗ್ ಮಿಸ್ಟೇಕ್ ಇದ್ದರೂ ನೀವು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೀರಿ. ಹಾಗಾಗಿ ನಿಮ್ಮ ಪಹಣಿಯನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.  ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯಲ್ಲಿ ಹೆಸರು ತಿದ್ದುಪಡಿ ಮಾಡುವಂತೆ ಪಹಣಿಯಲ್ಲಿ ಹೆಸರು ತಪ್ಪಾಗಿರುವುದನ್ನು ಸಹ ರೈತರು ಸರಿಪಡಿಸಬಹುದು.

Thank you for reading this post, don't forget to subscribe!

ರೈತರು ತಮ್ಮ ಪಹಣಿಗಳಲ್ಲಿ ಹೆಸರು ತಂದೆಯ ಹೆಸರನ್ನು ಸರಿಯಾಗಿ ಗಮನಿಸಿರುವುದಿಲ್ಲ. ಸ್ಪೆಲಿಂಗ್ ಮಿಸ್ಟೇಕ್ ಇದ್ದರೂ ನೀವು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೀರಿ. ಹಾಗಾಗಿ ನಿಮ್ಮ ಪಹಣಿಯನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.  ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳು

ಪಹಣಿಯಲ್ಲಿ ಹೆಸರು ತಿದುಪಡಿ ಮಾಡಬೇಕಾದರೆ ರೈತರು 1964 ರಿಂದ ಪಹಣಿಗಳನ್ನು ಪಡೆಯಬೇಕು. ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು 20 ರೂಪಾಯಿಯ ಇ ಸ್ಟ್ಯಾಂಪ್ ಪೇಪರ್ ಪಡೆದುಕೊಳ್ಳಬೇಕು. ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವ ಕುರಿತು ಮಾದರಿ ಅರ್ಜಿ ಪಡೆದುಕೊಳ್ಳಬೇಕು ಹೌದು ರೈತರು ಆಯಾ ತಾಲೂಕಿನ ವ್ಯಾಪ್ತಿಯಲ್ಲಿರುವ ತಹಶೀಲ್ದಾರ್ ಕಚೇರಿಯ ಎದುರುಗಡೆ ಮಾದರಿ ಅರ್ಜಿ ಸಿಗುತ್ತದೆ.. ಅರ್ಜಿಯಲ್ಲಿ ಯಾವ ಯಾವ ಮಾಹಿತಿ ಭರ್ತಿ ಮಾಡಬೇಕು ಎಂಬುದನ್ನು ಅರ್ಜಿಯಲ್ಲಿ ತಿಳಿಸಲಾಗಿರುತ್ತದೆ. ಆ ಪ್ರಕಾರ ನೀವು ಮಾಹಿತಿಯನ್ನು ಭರ್ತಿ ಮಾಡಬೇಕು.  ಇದರೊಂದಿಗೆ ರೈತನ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಬೇಕು. ಆಧಾರ್ ಕಾರ್ಡ್ ನಲ್ಲಿ ಹೆಸರು ತಂದೆಯ ಹೆಸರು ಇರುವಂತೆ ಪಹಣಿಯಲ್ಲಿಯೂ ಬದಲಾವಣೆಯಾಗುತ್ತದೆ.

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು ಅರ್ಜಿ ಎಲ್ಲಿ ಸಲ್ಲಿಸಬೇಕು?

ಪಹಣಿಯಲ್ಲಿ ಹಸೆರು ತಿದ್ದುಪಡಿ ಮಾಡಲು 1964 ರಿಂದ ಪಹಣಿಗಳು, 20 ರೂಪಾಯಿಯ ಇ-ಸ್ಟ್ಯಾಂಪ್ ಪೇಪರ್, ಅರ್ಜಿ ಹಾಗೂ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ತಾಲೂಕು ಕಚೇರಿಯಲ್ಲಿರುವ ಭೂಮಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಭೂಮಿ ಕೇಂದ್ರದವರು  ಗ್ರಾಮಕ್ಕೆಸಂಬಂಧಿಸಿದ ಗ್ರಾಮ ಲೆಕ್ಕಿಗರು ಬಳಿ ಸದರಿ ದಾಖಲೆಗಳು ಕಳಿಸುತ್ತಾರೆ. ಆಗ ಗ್ರಾಮ ಲೆಕ್ಕಿಗರು ದಾಖಲೆಗಳನ್ನು ಪರಿಶೀಲಿಸುತ್ತಾರೆ. ದಾಖಲೆಗಳು ತಪ್ಪಾಗಿದ್ದರೆ ಗ್ರಾಮ ಲೆಕ್ಕಿಗರು ಅರ್ಜಿಯನ್ನು ತಿರಸ್ಕರಿಸಬಹುದು.

ಅರ್ಜಿಯೊಂದಿಗೆ ಸಲ್ಲಿಸಿದ ಎಲ್ಲಾ ದಾಖಲಾತಿಗಳು ಸರಿಯಿದ್ದರೆ ಪರಿಶೀಲಿಸಿ ಹೆಸರು ತಿದ್ದುಪಡಿ ಮಾಡಲು ಗ್ರಾಮ ಲೇಖಪಾಲಕರು ಭೂಮಿ ಕೇಂದ್ರಕ್ಕೆ ಕಳುಹಿಸುತ್ತಾರೆ.. ಆಗ ಭೂಮಿ ಕೇಂದ್ರದವರು ಅರ್ಜಿಯಲ್ಲಿ ನಮೂದಿಸಿರುಂತೆ ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುತ್ತಾರೆ. ಈ ರೀತಿಯಲ್ಲಿ ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಬಹುದು.

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದರಿಂದ ಆಗುವ ಉಪಯೋಗಗಳು

ರೈತರಿಗೆ ಅತ್ಯಂತ ಅಮೂಲ್ಯವಾದ ದಾಖಲೆ ಪಹಣಿಯಾಗಿರುತ್ತದೆ. ಪಹಣಿಯಲ್ಲಿ ಹೆಸರು, ತಂದೆಯ ಹೆಸರು, ಸರ್ವೆ ನಂಬರ್, ಮುಟೇಷನ್, ಖಾತಾ ಇದ್ದರೆ ಯಾವುದೇ ತೊಂದರೆಯಾಗುವುದಿಲ್ಲ.  ಜಮೀನನ್ನು ಮಾರುವಾಗ, ಕೊಳ್ಳುವಾಗ ಜಮೀನು ನೋಂದಣಿಯಾಗುತ್ತದೆ.

ಆಗ ಖರೀದಿ ಮತ್ತು ಮಾರಲು ತಕರಾರು ಆಗುವುದಿಲ್ಲ. ಜಮೀನಿನಲ್ಲಿ  ಹೆಸರು ಸರಿಯಿದ್ದರೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ಸಿಗುವುದು. ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆಯಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲ, ಬೆಳೆ ಬೆಳೆ ಸಾಲ ಪಡೆದುಕೊಳ್ಳುವಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ಒಂದು ವೇಳೆ ಪಹಣಿಯಲ್ಲಿ ರೈತನ ಮತ್ತು ತಂದೆಯ ಹೆಸರು ಆಧಾರ್ ಕಾರ್ಡ್ ನಂತೆ ಇರದಿದ್ದರೆ ಸಾಲ ಸಿಗುವ ಸಾಧ್ಯತೆಯೂ ಕಡಿಮೆಯಿರುತ್ತದೆ. ಹಾಗಾಗಿ ಸರಿಪಡಿಸಿಕೊಳ್ಳಬೇಕುು.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago

Milk-Curd: ಹಾಲಿನ ಜೊತೆ ಮೊಸರೂ ಕುಡೀತೀರಾ? ಇದು ಎಷ್ಟು ಡೇಂಜರ್ ಗೊತ್ತಾ?

ಹಾಲಿನ ಜೊತೆ ಮೊಸರು ಸೇವಿಸುವ ಅಭ್ಯಾಸ ಇದೆಯಾ? ಆಯುರ್ವೇದದ ಪ್ರಕಾರ ಈ ಫುಡ್ ಕಾಂಬಿನೇಷನ್ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ಗ್ಯಾಸ್ಟ್ರಿಕ್,…

56 years ago