ಬಿಪಿಎಲ್ ಕಾರ್ಡ್ ಕುರಿತಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಏನು ಮತ್ತು ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚಾಸ್ಪದಕ್ಕೆ ಕಾರಣವಾಗಿದ್ದ ಬಿಪಿಎಲ್ ಕಾರ್ಡ್ (BPL Card cancelled status) ರದ್ದತಿ ಕುರಿತಂತೆ ರಾಜ್ಯ ಸರ್ಕಾರ ಇದೀಗ ಮಹತ್ವದ ಆದೇಶ ಹೊರಡಿಸಿದೆ.
Thank you for reading this post, don't forget to subscribe!ರಾಜ್ಯ ಸರ್ಕಾರವು ರಾಜ್ಯದಲ್ಲಿ ಭುಗಿಲೆದ್ದಿರುವ ರೇಷನ್ ಕಾರ್ಡ್ ರದ್ದತಿ ಮತ್ತು ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಎಂಬಂತಹ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಅಧಿಕೃತ ಸೂಚನೆಯನ್ನು ನೀಡಿ ಆದೇಶವನ್ನು ಹೊರಡಿಸಿದೆ.
ಹಾಗಾದರೆ ಬಿಪಿಎಲ್ ಕಾರ್ಡ್ ಕುರಿತಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಏನು ಮತ್ತು ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಹೌದು ರೈತ ಮಿತ್ರರೇ, ರಾಜ್ಯ ಸರ್ಕಾರವು ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳಿಗೆ ಮಾತ್ರ ಉಚಿತ ರೇಶನ್ ನೀಡಲು ತೀರ್ಮಾನಿಸಿದೆ. ಆದ್ದರಿಂದ ಯಾರು ಆರ್ಥಿಕವಾಗಿ ಸಬಲರಾಗಿರುತ್ತಾರೋ ಮತ್ತು ಅಕ್ರಮವಾಗಿ ರೇಷನ್ ಕಾರ್ಡ್ ಪಡೆದು ಉಚಿತ ರೇಷನ್ ಪಡೆಯುತ್ತಿದ್ದರೂ ಅಂತಹವರ ರೇಷನ್ ಕಾರ್ಡ್ (BPL Card status) ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ.
ಅಲ್ಲದೆ ಯಾವ ಕುಟುಂಬಾಗದಲ್ಲಿ ಸರಕಾರಿ ನೌಕರರು ಇರುತ್ತಾರೋ ಮತ್ತು ಯಾವ ಕುಟುಂಬಗಳಲ್ಲಿ ಕುಟುಂಬ ಸದಸ್ಯರು ಇರುತ್ತಾರೋ ಅಂತಹ ಕುಟುಂಬದ ಬಿಪಿಎಲ್ ಕಾರ್ಡ ಅನ್ನು ಎಪಿಎಲ್ ಕಾರ್ಡ್ ಗಳನ್ನಾಗಿ ಪರಿವರ್ತನೆ ಮಾಡಲು ಸೂಚಿಸಲಾಗಿದೆ.
ಇನ್ನು ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಸರಕಾರಿ ನೌಕರರ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದು ಪಡಿಸುವಂತೆ ರಾಜ್ಯ ಸರ್ಕಾರವು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದೆ.
ಇನ್ನು ರಾಜ್ಯದಲ್ಲಿ ಹರಡಿರುವ ಎಲ್ಲಾ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು ಎಂಬಂತಹ ಮಾಹಿತಿಗಳನ್ನು ಜನ ಸಾಮಾನ್ಯರು ನಂಬಬಾರ್ಡೆಂದು ಕೇವಲ ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಕುಟುಂಬಗಳ ಬಿಪಿಎಲ್ ಮತ್ತು ಸರಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು ಮಾಡಿ ಎಪಿಎಲ್ ಕಾರ್ಡ್ ಗಳನ್ನಾಗಿ ಪರಿವರ್ತನೆ ಮಾಡಲು ಸೂಚಿಸಲಾಗಿದೆ.
ಅಲ್ಲದೆ ಹಲವಾರು ಅರ್ಹ ಬಡ ಬಿಪಿಎಲ್ ಕುಟುಂಬಗಳ ಬಿಪಿಎಲ್ ಕಾರ್ಡ್ ರೆಡ್ಡಗಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಆಗಿವೆ. ಆದರೆ ಈ ಕುರಿತಂತೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ.
ಇಂತಹ ಕುಟುಂಬಗಳಿಗೆ ಕಳೆದ 2 ತಿಂಗಳಿನಿಂದ ರೇಷನ್ ನೀಡಿಲ್ಲ ಮತ್ತು ಗೃಹಲಕ್ಷ್ಮೀ ಯೋಜನೆಯ ಯಾವ ಕಂತು ಜಮಾ ಆಗಿಲ್ಲ. ಹಾಗಾಗೀ ರಾಜ್ಯ ಸರ್ಕಾರದ ಇಂತಹ ನಿರ್ಲಕ್ಷ್ಯ ನಡೆಗೆ ಹಲವಾರು ಕುಟುಂಬಗಳು ಬೇಸತ್ತಿವೆ.
ಯಾವುದೇ ವಿಷಯ ರಾಜಕೀಯ ವಿಷಯವಾಗಿ ಪರಿವರ್ತನೆ ಆಗುವ ತನಕ ರಾಜ್ಯ ಸರ್ಕಾರ ಮೌನವಾಗಿರುತ್ತದೆ. ಯಾವಾಗ ವಿಪಕ್ಷಗಳು ಈ ಕುರಿತಂತೆ ಕೆಂಡ ಕಾರುತ್ತಾರೋ ಆಗ ಮಾತ್ರ ಬಡ ಕುಟುಂಬಗಳ ದನಿ ಇವರಿಗೆ ಕೇಳಿಸುತ್ತದೆ ಎಂದು ಅರ್ಹ ಬಡ ಕುಟುಂಬಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿವೆ.
ಹಂತ -1) ಮೊದಲು ಕೆಳಗೆ ನೀಡಲಾಗಿರುವ ರಾಜ್ಯ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ಮತ್ತು ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
ಹಂತ -3) ನಂತರ ನಿಮಗೆ ನಿಮ್ಮ ರೇಷನ್ ಕಾರ್ಡ್ ಸಂಪೂರ್ಣ ಮಾಹಿತಿ ಸಿಗುತ್ತದೆ. ಅಲ್ಲಿ ನಿಮ್ಮ ರೇಷನ್ ಕಾರ್ಡಿನಲ್ಲಿ ಎಷ್ಟು ಜನರ ಹೆಸರಿದೆ, ನಿಮ್ಮ ರೇಷನ್ ಕಾರ್ಡ್ ಆ್ಯಕ್ಟಿವ್ ಇದೆಯೋ ಇಲ್ಲವೋ ಮತ್ತು ಈ ತಿಂಗಳು ನಿಮಗೆ ಎಷ್ಟು ರೇಷನ್ ಸಿಕ್ಕಿದೆ ಎಂಬ ಮಾಹಿತಿ ಸಿಗುತ್ತದೆ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ಇದೇ ರೀತಿಯಾಗಿ ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ದಯವಿಟ್ಟು ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…