WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಿನಿಮಾವೊಂದು ಬಿಡುಗಡೆಗೊಂಡ 40 ದಿನಗಳಲ್ಲಿಯೂ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿರುವುದು ಬಹುಶಃ ಇದೇ ಮೊದಲ ಬಾರಿ ಇರಬೇಕು. ಹೌದು ಸ್ನೇಹಿತರೆ, ಅಂಥ ಸಾಧನೆ ಮಾಡಿದ್ದು ಕನ್ನಡದ ಹೆಮ್ಮೆಯ ಸಿನಿಮಾ ಪ್ರೇಮದ ಊರಲಿ (Premada oorali movie). ಕಡಿಮೆ ಬಜೆಟ್ ಹಾಗೂ ಭಾವನಾತ್ಮಕ ಕಥೆಯಿಂದಲೇ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರುವ ಈ ಸಿನಿಮಾ ಇಡೀ ಜಗತ್ತನ್ನು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಜೈಲರ್ ಟು, ರಣಬಾಲಿ ಅಂತಹ ಸ್ಟಾರ್ ನಟರ ಸಿನಿಮಾಗಳು ಕೂಡ ಈ ಸಿನಿಮಾ ಮುಂದೆ ಮಕಾಡೆ ಮಲಗಿದವು.

Thank you for reading this post, don't forget to subscribe!
Premada oorali movie scene
      
                    WhatsApp Group                             Join Now            
   
                    Telegram Group                             Join Now            

ಇದೀಗ ಈ ಸಿನಿಮಾ ಬಿಡುಗಡೆಯಾಗಿ 40 ದಿನ ಕಳೆದರೂ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಕಾಣುತ್ತಿದೆ. ಹಾಗಾದರೆ ಇಲ್ಲಿಯವರೆಗೆ ಈ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ನೀಡುತ್ತೇವೆ, ತಪ್ಪದೇ ಕೊನೆಯವರೆಗೆ ನೋಡಿ.

ಸ್ನೇಹಿತರೆ ತಾಯಿಯಿಲ್ಲದ ಮಗನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡಿ, ಆತನಿಗೆ ವಿದ್ಯೆ ತಲೆಗೆ ಹತ್ತಿದಿದ್ದರೂ ವಿದ್ಯಾವಂತ ಸೊಸೆಯನ್ನೇ ಹುಡುಕಿ ಮದುವೆ ಮಾಡಬೇಕೆಂಬ ಛಲ ಹಿಡಿದ ಕೃಷಿಕ ತಂದೆಯ ಹಠ, ಬಾಲ್ಯದ ಗೆಳತಿಯೊಂದಿಗೆ ಆಡಿ ಬೆಳೆದರೂ ಆಕೆಯ ಪ್ರೀತಿ ಅರಿಯದೆ ಪಟ್ಟಣದ ಹುಡುಗಿಗೆ ಮಾರುಹೋದ ನಾಯಕ, ಹೀಗೆ ಹಲವು ಕೋನಗಳ ಭಾವನಾತ್ಮಕ ಕಥಾಹಂದರ ಹೊಂದಿರುವ ಈ ಸಿನಿಮಾ ಬಿಡುಗಡೆಯಾಗಿ 39 ದಿನಗಳವರೆಗೆ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ಬಗ್ಗೆ ಕಳೆದ ಆರ್ಟಿಕಲ್ ನಲ್ಲಿ ಮಾಹಿತಿ ಕೊಟ್ಟಿದ್ದೇವೆ.

ಇವತ್ತು ಈ ಸಿನಿಮಾದ 40 ನೇ ದಿನದ ಕಲೆಕ್ಷನ್ ನೋಡುವುದಾದರೆ, ವಾರದ ಮೊದಲ ದಿನ ಸೋಮವಾರದಂದು ಕೂಡ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತನ್ನ ಮ್ಯಾಜಿಕ್ ಮುಂದುವರೆಸಿದ್ದು, 40 ನೇ ದಿನ ದೇಶಾದ್ಯಂತ 40 ಲಕ್ಷ ರೂಪಾಯಿ ಗಳಿಸಿ, ಭಾರತದಲ್ಲಿ ಒಟ್ಟು 127 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ, ಇನ್ನೂ ವಿಶ್ವಾದ್ಯಂತ ಈ ಸಿನಿಮಾ ಒಟ್ಟು 131 ಕೋಟಿಗೂ ಹೆಚ್ಚು ಗಳಿಸಿದೆ ಎಂದು ವರದಿಗಳು ಹೇಳುತ್ತಿವೆ.

Premada oorali movie still

ಇನ್ನೂ ಕೆಲವು ವರದಿಗಳ ಪ್ರಕಾರ ಈ ಗಳಿಕೆ 145 ಕೋಟಿಗಿಂತಲೂ ಹೆಚ್ಚು ಎಂದು ತಿಳಿದು ಬಂದಿದೆ. ಆದರೆ ನಿರ್ಮಾಪಕರು ಇಲ್ಲಿಯವರೆಗೆ ಈ ಸಿನಿಮಾ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಸ್ನೇಹಿತರೆ, ಅದೇನೇ ಇರಲಿ, ಪ್ರೇಮದ ಊರಲಿ ಸಿನಿಮಾ ಬೆಳ್ಳಿ ತೆರೆಯ ಮೇಲೆ ಮಿಂಚಲು ಕನಸು ಕಾಣುತ್ತಿರುವ ಹೊಸ ಕಲಾವಿದರಿಗೆ ಒಂದು ಹೊಸ ಹುಮ್ಮಸ್ಸನ್ನು ತಂದು ಕೊಟ್ಟಿದೆ ಎಂದರೆ ತಪ್ಪಾಗಲಾರದು.

ಸ್ನೇಹಿತರೆ, ಈ ಸಿನಿಮಾ 150 ಕೋಟಿ ರೂಪಾಯಿ ಗಡಿ ದಾಟುತ್ತಾ ? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ. ಇದೇ ರೀತಿಯ ಕನ್ನಡ ಸಿನಿಮಾ, ನಟ ನಟಿಯರ ಸಂಭಾವನೆ ಬಗ್ಗೆ ತಿಳಿಯಲು ನಮ್ಮ ವೆಬ್ಸೈಟ್ ಗೆ subscribe ಮಾಡಿ.

      
                    WhatsApp Group                             Join Now            
   
                    Telegram Group                             Join Now            

ಈ ಆರ್ಟಿಕಲ್ ಇಷ್ಟವಾದರೆ like ಮಾಡಿ, ನಿಮ್ಮ ಸ್ನೇಹಿತರಿಗೂ share ಮಾಡಿ. ಧನ್ಯವಾದಗಳು.

By

Leave a Reply

Your email address will not be published. Required fields are marked *