ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಕಳೆದ ಸಾಲಿನ ಅಂದಾಜು ಮಳೆಗಿಂತ ಹೆಚ್ಚು ಸುರಿದ ಕಾರಣ ರಾಜ್ಯದಲ್ಲಿ ಲಕ್ಷಾಂತರ ರೈತರ ಬೆಳೆಗಳು ಹಾನಿಗೊಳಗಾಗಿವೆ.
Thank you for reading this post, don't forget to subscribe!ಇಂತಹ ಬೆಳೆ ಹಾನಿಗೊಳಗಾದ ರೈತರಿಗೆ ಇದೀಗ ಈ ಸಾಲಿನ ಬೆಳೆ ವಿಮೆ (bele vime paymemt status) ಹಣ ಜಮಾ ಮಾಡಲಾಗಿದ್ದು, ಅರ್ಹ ರೈತರ ಖಾತೆಗೆ ಈಗಾಗಲೇ ನೇರವಾಗಿ ಬೆಳೆ ಹಾನಿಯಾದ ರೈತರ ಪ್ರತಿ ಎಕರೆಗೆ ₹37,300 ರೂಪಾಯಿಯಂತೆ ಹಣ ಜಮಾ ಮಾಡಲಾಗಿದೆ.
19 ನವೆಂಬರ್ 2024 ರಂದು ವಿಧಾನಸೌಧದಲ್ಲಿ ಮಾತನಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ರಾಜ್ಯದಲ್ಲಿ ಇಲ್ಲಿಯವರೆಗೂ ಬೆಳೆ ವಿಮೆ ಮಾಡಿಸಿದ ಅರ್ಹ 17.61 ಲಕ್ಷ ರೈತರಿಗೆ 2021.71 ಕೋಟಿ ರೂಪಾಯಿ ಹಣವನ್ನು ನೇರವಾಗಿ ಡಿಬಿಟಿ ಮೂಲಕ ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: PM Kisan: ನಿಮ್ಮ ಪಿಎಂ ಕಿಸಾನ್ ಖಾತೆಗೆ ಹೊಸ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ?
ಈ ಸಾಲಿನ ಬೆಳೆ ವಿಮೆ (bele vime parihara 2024 karnataka) ಮಾಡಿಸಿದ ಅರ್ಹ ರೈತರಿಗೆ ಮಾತ್ರ ನೇರವಾಗಿ ಹಣ ಜಮಾ ಮಾಡಲಾಗಿದೆ. ರಾಜ್ಯ ಸರ್ಕಾರದ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಮುಂಗಾರು ಮಳೆಯಿಂದ ಉಂಟಾದ ಹಾನಿಯನ್ನು ಭರಿಸಲು ರಾಜ್ಯ ಸರಕಾರ ಅರ್ಹ ರೈತರಿಗೆ ಬೆಳೆ ವಿಮೆ ಹಣವನ್ನು ನೇರವಾಗಿ ಆಯಾ ರೈತರ ಖಾತೆಗೆ ಜಮಾ ಮಾಡಿದೆ, ಎಂದು ಕೃಷಿ ಸಚಿವ ಚೆಲುವರಯಸ್ವಾಮಿ ಅವರು ಮಾಧ್ಯಮಗಳಿಗೆ ತಿಳಿಸಿದರು.
ಹಾಗಾದರೆ ಈ ವರ್ಷ ನಿಮ್ಮ ಬೆಳೆ ಮುಂಗಾರಿನಿಂದ ಹಾನಿಯಾಗಿದ್ದರೆ, ನಿಮ್ಮ ಖಾತೆಗೂ ಹಣ ಜಮಾ ಆಗಿರುತ್ತದೆ. ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು ಮೊಬೈಲ್ ನಲ್ಲೇ ಸುಲಭವಾಗಿ ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಬೆಳೆ ವಿಮೆ ಹಣ ಜಮಾ ಆಗಿದೆಯಾ ಎಂದು ಹೀಗೆ ಚೆಕ್ ಮಾಡಿ:-
ಹಂತ -1) ಮೊದಲಿಗೆ ನಿಮಗೆ ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://samrakshane.karnataka.gov.in/
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ವರ್ಷ 2023-24 ಹಾಕಿ ಋತುವನ್ನು kharif ಎಂದು ಆಯ್ಕೆ ಮಾಡಿ, Go ಮೇಲೆ ಕ್ಲಿಕ್ ಮಾಡಿ.

ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು Check Status ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಬೆಳೆ ವಿಮೆಗೆ ಸಲ್ಲಿಸಿದ ಅರ್ಜಿಯ ಸಂಖ್ಯೆ ಅಥವಾ ಮೊಬೈಲ್ ನಂಬರ್ ಅಥವಾ ಆಧಾರ ಕಾರ್ಡ ನಂಬರ್ ಹಾಕಿ ಕೆಳಗೆ ನೀಡಲಾಗಿರುವ ಕ್ಯಾಪ್ಚ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ.

ಹಂತ -5) ನಂತರ ನಿಮಗೆ ಈ ಸಾಲಿನ ಬೆಳೆ ವಿಮೆ ಹಣ ಜಮಾ ಆಗಿದ್ದರೆ ,ಯಾವ ಖಾತೆಗೆ ಜಮಾ ಆಗಿದೆ ಮತ್ತು ಎಷ್ಟು ಹಣ ಜಮಾ ಆಗಿದೆ,ಯಾವ ದಿನಾಂಕದಂದು ಹಣ ಜಮಾ ಆಗಿದೆ ಎಂಬ ಮಾಹಿತಿ ಸಿಗುತ್ತದೆ.
ಇದನ್ನೂ ಓದಿ: ಗೃಹಲಕ್ಷ್ಮೀ: ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇದರಲ್ಲಿ ನಿಮ್ಮ ಮನೆಯವರ ಹೆಸರು ಇದೆಯಾ ಚೆಕ್ ಮಾಡಿ
ಒಂದು ವೇಳೆ ನಿಮಗೆ No Data Found ಎಂದು ತೋರಿಸುತ್ತಿದ್ದರೆ ನಿಮ್ಮ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ ಎಂದರ್ಥ.
ಈ ರೀತಿಯಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಈ ಸಾಲಿನ ಬೆಳೆ ವಿಮೆ ಹಣ ಜಮಾ ಆಗಿದೆಯಾ ಅಥವಾ ಇಲ್ಲವಾ ಎಂದು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
- ಪಿಎಂ ಕಿಸಾನ್: ಹಣ ಜಮಾ ಆಗಿರುವ ಮೆಸೇಜ್ ಬರುತ್ತಿಲ್ಲವೇ? ಈಗಲೇ ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ ! ಲಿಂಕ್ ಇಲ್ಲಿದೆ ನೋಡಿಕೇವಲ ಈ ಪಟ್ಟಿಯಲ್ಲಿ ಹೆಸರಿರುವ ರೈತರಿಗೆ ಮಾತ್ರ ಪಿಎಂ ಕಿಸಾನ್ ಸಮ್ಮಾನ ಯೋಜನೆಯ 20 ನೇ ಕಂತಿನ 2,000 ರೂಪಾಯಿ ಹಣ ಜಮಾ ಆಗುತ್ತದೆ. ಈ ಪಟ್ಟಿಯಲ್ಲಿ ಹೆಸರು ಇಲ್ಲದ ರೈತರಿಗೆ ಮುಂದಿನ ಯಾವ ಕಂತಿನ ಹಣವೂ ಕೂಡ ಜಮಾ ಆಗುವುದಿಲ್ಲ.(PM Kisan Samman Nidhi beneficiary status)
- ಗ್ರಾಮೀಣ ಆಸ್ತಿಗಳ ಫಾರ್ಮ 9, 11ಬಿ ಮೊಬೈಲ್ ನಲ್ಲೇ ಹೀಗೆ ಡೌನ್ಲೋಡ್ ಮಾಡಿ! ಇಲ್ಲಿದೆ ಸಂಪೂರ್ಣ ಮಾಹಿತಿ.ಗ್ರಾಮೀಣ ಆಸ್ತಿಗಳ ಫಾರ್ಮ್ 9 ಹಾಗೂ 11ಬಿ ದಾಖಲೆಗಳನ್ನು ಈಗ ಮೊಬೈಲ್ನಲ್ಲೇ ಸುಲಭವಾಗಿ ಡೌನ್ಲೋಡ್ ಮಾಡಬಹುದು. ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಸ್ಟೆಪ್–ಬೈ–ಸ್ಟೆಪ್ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
- ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ Mobile ನಲ್ಲೇ ಪಡೆಯಿರಿ ಜಾತಿ-ಆದಾಯ ಪ್ರಮಾಣಪತ್ರನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮೊಬೈಲ್ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಸಮಯ, ಹಣ ಮತ್ತು ಶ್ರಮ ಉಳಿಸುವ ಕರ್ನಾಟಕ ಸರ್ಕಾರದ ಡಿಜಿಟಲ್ ಸೇವೆಗಳ ಸಂಪೂರ್ಣ ಮಾಹಿತಿ ಇಲ್ಲಿ.
- ಶೌಚಾಲಯ ನಿರ್ಮಿಸಿ 20 ಸಾವಿರ ಸಬ್ಸಿಡಿ ಹೀಗೆ ಪಡೆಯಿರಿ!ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಿಸಲು ಸರ್ಕಾರದಿಂದ ₹20,000 ವರೆಗೆ ಸಬ್ಸಿಡಿ ನೀಡಲಾಗುತ್ತಿದೆ. ಈ ಸಹಾಯಧನ ಪಡೆಯಲು ಅರ್ಜಿ ವಿಧಾನ, ಅರ್ಹತೆ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಈಗಲೇ ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಯ ಲಾಭ ಪಡೆಯಿರಿ. 🚽
- ಪಿಎಂ ಕಿಸಾನ್: ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಚೆಕ್ ಮಾಡುವುದು ಹೇಗೆ ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
- ಕೃಷಿ ಜಮೀನಿನಲ್ಲಿ ವಿದ್ಯುತ್ ಕಂಬವಿದ್ದರೆ ರೈತರಿಗೆ ಸಿಗಲಿದೆ ₹10,000 ಮತ್ತು ಮಾಸಿಕ ಬಾಡಿಗೆ: ಇಲ್ಲಿದೆ ಸರ್ಕಾರದ ಹೊಸ ನಿಯಮಕೃಷಿ ಜಮೀನಿನಲ್ಲಿ ವಿದ್ಯುತ್ ಕಂಬ ಇದ್ದರೆ ರೈತರಿಗೆ ₹10,000 ಪರಿಹಾರ ಹಾಗೂ ಮಾಸಿಕ ಬಾಡಿಗೆ ನೀಡುವ ಸರ್ಕಾರದ ಹೊಸ ನಿಯಮ ಜಾರಿಗೆ ಬಂದಿದೆ. ಈ ನಿಯಮದಿಂದ ರೈತರ ಆದಾಯ ಹೆಚ್ಚಾಗಿ ಕೃಷಿಗೆ ಸಹಾಯವಾಗಲಿದೆ.
- ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯಲ್ಲಿ ಹೆಸರು ತಿದ್ದುಪಡಿ ಮಾಡುವಂತೆ ಪಹಣಿಯಲ್ಲಿ ಹೆಸರು ತಪ್ಪಾಗಿರುವುದನ್ನು ಸಹ ರೈತರು ಸರಿಪಡಿಸಬಹುದುರೈತರು ತಮ್ಮ ಪಹಣಿಗಳಲ್ಲಿ ಹೆಸರು ತಂದೆಯ ಹೆಸರನ್ನು ಸರಿಯಾಗಿ ಗಮನಿಸಿರುವುದಿಲ್ಲ. ಸ್ಪೆಲಿಂಗ್ ಮಿಸ್ಟೇಕ್ ಇದ್ದರೂ ನೀವು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೀರಿ. ಹಾಗಾಗಿ ನಿಮ್ಮ ಪಹಣಿಯನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.
- E-Svattu 2.0: ಇ-ಸ್ವತ್ತು ಅರ್ಜಿ ಸಲ್ಲಿಕೆ ಆರಂಭ | ಮನೆಯಲ್ಲಿ ಕೂತೆ ಅರ್ಜಿ ಸಲ್ಲಿಸಿ | ಅರ್ಜಿ ಲಿಂಕ್ ಇಲ್ಲಿದೆಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ಕುಟುಂಬಗಳು ಭೂಪರಿವರ್ತನೆ ಆದೇಶಗಳಿಲ್ಲದೆ ಮನೆಗಳನ್ನು ನಿರ್ಮಿಸಿಕೊಂಡು ನೆಲೆಸಿವೆ.ಇಂತಹ ಅಕ್ರಮ ನಿವೇಶನಗಳು ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿದ್ದರೂ, ಆಸ್ತಿ ದಾಖಲೆಗಳ ಕೊರತೆಯಿಂದಾಗಿ ತೊಂದರೆಗಳು ಎದುರಾಗುತ್ತಿವೆಇಂತಹ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಕರ್ನಾಟಕ ಸರ್ಕಾರ ಇ-ಸ್ವತ್ತು 2.0 ಯೋಜನೆಯನ್ನು ಜಾರಿಗೊಳಿಸಿದ್ದು, ಡಿಸೆಂಬರ್ 1, 2025ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಿದ್ದಾರೆ.
- ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಸಿಗುವ ಎಲ್ಲಾ ಸೇವೆಗಳ ಮಾಹಿತಿಯನ್ನು ಪಡೆಯುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!ಆತ್ಮೀಯ ಓದುಗರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ನಮ್ಮ ಸಂವಿಧಾನದ 73 ನೇ ತಿದ್ದುಪಡಿಯ ಪ್ರಕಾರ ನಮ್ಮ ದೇಶದಲ್ಲಿ ಪಂಚಾಯತಿಗಳು ಅಧಿಕೃತವಾಗಿ ಜಾರಿಗೆ ಬಂದವು. ಇವು ಗ್ರಾಮೀಣ ಭಾಗದ ಸರ್ಕಾರ ಎಂದೇ ಜನಜನಿತವಾಗಿವೆ. ಕಾರಣ ಗ್ರಾಮೀಣ ಭಾರತದ ಅಭಿವೃದ್ಧಿಯ ಜವಾಬ್ದಾರಿ ಈ ಪಂಚಾಯತಿಗಳ ಮೇಲೆಯೇ ನಿಂತಿದೆ.
- Krushi honda subsidy: ರೈತರಿಗೆ ಸರ್ಕಾರದ ಸಬ್ಸಿಡಿ ಹಣದಲ್ಲಿ ಕೃಷಿ ಹೊಂಡ ನಿರ್ಮಾಣ! ಇಲ್ಲಿದೆ ಸಂಪೂರ್ಣ ಮಾಹಿತಿರೈತರಿಗೆ ಸರ್ಕಾರದ ಸಬ್ಸಿಡಿ ಹಣದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡುವ ಅವಕಾಶ. ಕೃಷಿ ಭಾಗ್ಯ ಯೋಜನೆಯಡಿ ಮಳೆ ನೀರು ಸಂಗ್ರಹಣೆಗಾಗಿ ಕೃಷಿ ಹೊಂಡಕ್ಕೆ ಎಷ್ಟು ಸಬ್ಸಿಡಿ ಸಿಗುತ್ತದೆ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆ ವಿವರಗಳು ಇಲ್ಲಿವೆ.
- LIC HFL FD ಯೋಜನೆ: ಪ್ರತಿ ತಿಂಗಳಿಗೆ ₹9,750 ವರೆಗೆ ಬಡ್ಡಿ ಆದಾಯ!ಈ ಯೋಜನೆಯ ಮೂಲಕ, ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಬಹುದು ಮತ್ತು ಪ್ರತಿ ತಿಂಗಳ ಬಡ್ಡಿ ರೂಪದಲ್ಲಿ ಸ್ಥಿರ ಆದಾಯವನ್ನು ಪಡೆಯಬಹುದು. ವಿಶೇಷವಾಗಿ ಪದವೀ ವಿರಾಮ ಮಾಡಿದವರು, ಪಿಂಚಣಿದಾರರು ಅಥವಾ ಸ್ಥಿರವಾದ ಆದಾಯವನ್ನು ಬಯಸಿದವರಿಗೆ ಇದು ತುಂಬಾ ಉಪಯುಕ್ತ ಯೋಜನೆಯಾಗಿ ಪರಿಗಣಿಸಲ್ಪಡುತ್ತದೆ.
- ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ನಿಮ್ಮ ಹೊಲದ ಮ್ಯಾಪ್ ಚೆಕ್ ಮಾಡಿ! ಕಾಲುದಾರಿ, ಹಳ್ಳ ಎಲ್ಲವೂ ಈ ಮ್ಯಾಪ್ ನಲ್ಲಿ ಕಾಣುತ್ತದೆ !ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಈಗಿನ ಕಾಲದಲ್ಲಿ ರೈತರು ತಮ್ಮ ಹೊಲದ ವಿವರಗಳನ್ನು ಪರಿಶೀಲಿಸಿ ಅದರ ಸೂಕ್ತ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಬಹಳ ಅವಶ್ಯಕವಾಗಿದೆ. ಏಕೆಂದರೆ ಸರ್ಕಾರದಿಂದ ಬರುವ ಏನೇ ಸೌಲಭ್ಯಗಳಿದ್ದರೂ ಅವು ಈ ದಾಖಲೆ ನೋಡಿಯೇ ನೀಡಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಸಂಪೂರ್ಣ ದಾಖಲೆ ಮತ್ತು ವಿವರಗಳನ್ನು ಕಡ್ಡಾಯವಾಗಿ ಮಾಡಿಸಿ ಇಡಬೇಕು.
- ಯಾವ ಸರ್ವೇ ನಂಬರ್ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಿಂದ ಸಾಲ ಪಡೆದಿದ್ದೀರಾ? ನಿಮಗೆ ಅದರ ಸ್ಟೇಟಸ್ ಚೆಕ್ ಮಾಡಬೇಕೆ? ನೀವು ಸಾಲವನ್ನು ತೀರಿಸಿದ್ದರೂ ನಿಮ್ಮ ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ ಏನು ಮಾಡಬೇಕು?
- Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ ಚಟುವಟಿಕೆಗೆ ಬೇಕಾದ ಪ್ರಮುಖ ಉಪಕರಣವಾದ ಕೃಷಿ ಸ್ಪ್ರಿಂಕ್ಲರ್ ಸೆಟ್ (sprinkler set subsidy) ಮೇಲೆ ಇದೀಗ ರಾಜ್ಯ ಸರ್ಕಾರ ಶೇಕಡಾ 90 ರಷ್ಟು ಸಬ್ಸಿಡಿ ನೀಡುತ್ತಿದೆ.
- ಕರ್ನಾಟಕದಲ್ಲಿ 2.43 ಲಕ್ಷ ರೇಷನ್ ಕಾರ್ಡ್ಗಳ ದಿಢೀರ್ ರದ್ದು: ನಿಮ್ಮ ಕಾರ್ಡ್ ಸಕ್ರಿಯವೇ? ತಕ್ಷಣ ಚೆಕ್ ಮಾಡಿ, ಅಕ್ಕಿ ಸಹಾಯ ಕಳೆದುಕೊಳ್ಳಬೇಡಿ!ಕರ್ನಾಟಕದಲ್ಲಿ 2.43 ಲಕ್ಷ ರೇಷನ್ ಕಾರ್ಡ್ಗಳನ್ನು ಸರ್ಕಾರ ದಿಢೀರ್ ರದ್ದುಗೊಳಿಸಿದೆ! ನಿಮ್ಮ ರೇಷನ್ ಕಾರ್ಡ್ ಇನ್ನೂ ಸಕ್ರಿಯವಾಗಿದೆಯೇ? ತಕ್ಷಣವೇ ಮೊಬೈಲಿನಲ್ಲಿ ಆನ್ಲೈನ್ ಮೂಲಕ ಚೆಕ್ ಮಾಡಿ. ಯಾರಿಗೆ ರದ್ದು, ಏಕೆ ರದ್ದು, ಮತ್ತೆ ಸಕ್ರಿಯಗೊಳಿಸುವ ವಿಧಾನ—ಎಲ್ಲಾ ಮಾಹಿತಿ ಇಲ್ಲಿ ಓದಿ!














