Categories: information

ನಿಮ್ಮ ಬೆಳೆ ವಿಮೆ ಜಮೆ ಆಗಲು ಏನು ಮಾಡಬೇಕು? ಇಲ್ಲಿವೆ ಕೆಲವು ಸರಳ ಉಪಾಯಗಳು!

ನಿಮ್ಮ ಬೆಳೆ ವಿಮೆ ಹಣ ಇನ್ನೂ ಜಮೆಯಾಗಿಲ್ಲವೇ? ಬೆಳೆ ವಿಮೆ ಪಡೆಯಲು ರೈತರು ಯಾವ ಕ್ರಮಗಳನ್ನು ಅನುಸರಿಸಬೇಕು, ಅರ್ಜಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸಬೇಕು ಮತ್ತು ಅಗತ್ಯ ದಾಖಲೆಗಳೇನು ಎಂಬುದನ್ನು ಇಲ್ಲಿ ತಿಳಿಯಿರಿ. ಬೆಳೆ ವಿಮೆ ಸಂಬಂಧಿತ ಮಾಹಿತಿ ಹಾಗೂ ಹಣದ ಸ್ಥಿತಿಯನ್ನು ಪರಿಶೀಲಿಸುವ ಸರಳ ವಿಧಾನಗಳ ಸಂಪೂರ್ಣ ವಿವರ ಇಲ್ಲಿದೆ.

Spread the love

ರೈತರು ಬೆಳೆ ವಿಮೆ ಮಾಡಿಸಿದ್ರೂ ಕೆಲವೊಮ್ಮೆ ಹಣ ಖಾತೆಗೆ ಬರೋದು ತಡ ಆಗುತ್ತೆ. ಇನ್ನು ಕೆಲವರಿಗೆ ವಿಮೆ ಅರ್ಜಿ ಹಾಕಿದ್ರೂ ಹಣ ಯಾಕೆ ಬಂದಿಲ್ಲ ಅನ್ನೋದೇ ಗೊತ್ತಾಗೋದಿಲ್ಲ. ಇಂಥ ಸಂದರ್ಭದಲ್ಲಿ ಗಾಬರಿ ಆಗೋ ಬದಲು ಕೆಲವು ವಿಷಯಗಳನ್ನು ಮೊದಲು ಚೆಕ್ ಮಾಡಿಕೊಳ್ಳಬೇಕು.

Thank you for reading this post, don't forget to subscribe!

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ

ಮೊದಲು ನಿಮ್ಮ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ ಅಂತ ಚೆಕ್ ಮಾಡಿಕೊಳ್ಳಿ. ಅರ್ಜಿ ನಂಬರ್ ಅಥವಾ ಪಾಲಿಸಿ ವಿವರಗಳ ಸಹಾಯದಿಂದ ಅಧಿಕೃತ ಪೋರ್ಟಲ್‌ನಲ್ಲಿ ಮಾಹಿತಿ ಪಡೆಯಬಹುದು.

https://pmfby.gov.in/

ಬ್ಯಾಂಕ್ ಖಾತೆ ವಿವರ ಸರಿಯಾಗಿದೆಯಾ ನೋಡಿ

ನೀವು ಬೆಳೆ ವಿಮೆ ಮಾಡಿಸುವಾಗ ಕೊಟ್ಟ ಬ್ಯಾಂಕ್ ಖಾತೆ ವಿವರಗಳು ಸರಿಯಾಗಿವೆಯಾ ಅಂತ ಪರಿಶೀಲಿಸಿ. ಖಾತೆ ಚಾಲ್ತಿಯಲ್ಲಿದೆಯಾ, IFSC ಕೋಡ್ ಮತ್ತು ಇತರ ವಿವರಗಳಲ್ಲಿ ತಪ್ಪಿದೆಯಾ ಅಂತ ಬ್ಯಾಂಕ್‌ನಲ್ಲಿ ವಿಚಾರಿಸಿ.

ಅರ್ಜಿ ವಿವರಗಳಲ್ಲಿ ತಪ್ಪಿದ್ದರೆ ಸರಿಪಡಿಸಿ

ಹೆಸರು, ಜಮೀನಿನ ವಿವರ, ಬೆಳೆ ಮಾಹಿತಿ ಅಥವಾ ಬ್ಯಾಂಕ್ ಖಾತೆ ವಿವರಗಳಲ್ಲಿ ವ್ಯತ್ಯಾಸ ಇದೆಯಾ ಅಂತ ಪರಿಶೀಲಿಸಿ. ಸಮಸ್ಯೆ ಕಂಡುಬಂದರೆ ಸಂಬಂಧಪಟ್ಟ ಬ್ಯಾಂಕ್, ವಿಮಾ ಕಂಪನಿ ಅಥವಾ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.

ಬೆಳೆ ಹಾನಿಯಾಗಿದ್ರೆ ದೂರು ಕೊಡಿ

ಮಳೆ, ಪ್ರವಾಹ ಅಥವಾ ಇತರ ವಿಮಾ ನಿಯಮಗಳಿಗೆ ಒಳಪಡುವ ಕಾರಣಗಳಿಂದ ಬೆಳೆ ಹಾನಿಯಾಗಿದ್ದರೆ, ನಿಗದಿತ ಅವಧಿಯೊಳಗೆ ಹಾನಿ ವರದಿ ಮಾಡುವುದು ಮುಖ್ಯ. ನಿಮ್ಮ ಪ್ರಕರಣಕ್ಕೆ ಅನ್ವಯಿಸುವ ನಿಯಮಗಳ ಬಗ್ಗೆ ವಿಮಾ ಕಂಪನಿ ಅಥವಾ ಕೃಷಿ ಇಲಾಖೆಯಿಂದ ಮಾಹಿತಿ ಪಡೆಯಿರಿ.

ಬೆಳೆ ವಿಮೆ ಸಂಬಂಧಿಸಿದ ದೂರು ಅಥವಾ ಮಾಹಿತಿ ಬೇಕಿದ್ದರೆ 14447 ಎಂಬ ಅಧಿಕೃತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.

ನಿಮ್ಮ fid ( farmer registration number ) ಸರಿಯಾಗಿ ಇದೆಯಾ ಅಂತಾ ಒಂದು ಸಾಲ check ಮಾಡ್ಕೊಳಿ, ಯಾಕಂದ್ರೆ ರೈತರ fid ಇಲ್ಲ ಅಂದ್ರು ಸಹ ನಿಮ್ಮ ಬೆಳೆ ವಿಮಾ ಹಣ ಬರಂಗಿಲ್ಲ.

ಹಣ ಬರದಿದ್ದರೆ ಏನು ಮಾಡಬೇಕು?

ಎಲ್ಲಾ ವಿವರ ಸರಿಯಾಗಿದ್ದರೂ ಹಣ ಜಮೆ ಆಗದಿದ್ದರೆ, ನಿಮ್ಮ ಅರ್ಜಿ ಅಥವಾ ಕ್ಲೇಮ್‌ನ ಸ್ಥಿತಿ ಏನಿದೆ ಅಂತ ವಿಚಾರಿಸಿ. ಅರ್ಜಿ ಸಂಖ್ಯೆ, ವಿಮೆ ರಸೀದಿ ಮತ್ತು ಬ್ಯಾಂಕ್ ವಿವರಗಳನ್ನು ಕೈಯಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ.

ರೈತರಿಗೆ ಸಲಹೆ ಏನಂದ್ರೆ

ರೈತರೇ, ಬೆಳೆ ವಿಮೆ ಹಣ ಬರಬೇಕಾದರೆ ಮೊದಲು ನಿಮ್ಮ ಅರ್ಜಿ ಮತ್ತು ಕ್ಲೇಮ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ. ಸಮಸ್ಯೆ ಇದ್ರೆ ಸಂಬಂಧಪಟ್ಟ ಕಚೇರಿಯಲ್ಲಿ ವಿಚಾರಿಸಿ. ಕೇವಲ ಸ್ಟೇಟಸ್ ಚೆಕ್ ಮಾಡಿದ್ದರಿಂದ ಹಣ ಖಚಿತವಾಗಿ ಜಮೆ ಆಗುತ್ತೆ ಅಂತ ಹೇಳಲಾಗುವುದಿಲ್ಲ; ಹಣ ಬಿಡುಗಡೆಯಾಗುವುದು ನಿಮ್ಮ ಅರ್ಹತೆ, ಬೆಳೆ ಹಾನಿ ಮೌಲ್ಯಮಾಪನ ಮತ್ತು ವಿಮಾ ಕ್ಲೇಮ್ ಅನುಮೋದನೆಗೆ ಅನುಗುಣವಾಗಿರುತ್ತೆ.

ರೈತರು ಏನೇ ತೊಂದರೆ ಇದ್ರೆ ಸರ್ಕಾರಿ ಕಚೇರಿ ಮತ್ತು ಸಂಬಂಧಪಟ್ಟ ಕೃಷಿ ಇಲಾಖೆನೆ ಭೇಟಿ ಮಾಡ್ರಿ, ಯಾವ್ದೆ ದಲ್ಲಾಳಿ ಮತ್ತ ಅನಧಿಕೃತ ಇಲಾಖೆಗಳನ್ನ ಭೇಟಿ ಮಾಡ್ಬೇಡಿ.

ಓದುಗರಲ್ಲಿ ವಿನಂತಿ

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇https://chat.whatsapp.com/FM1qVgdNtJm5m1M9SL0BHc?mode

Share

Recent Posts

Karnataka Rain: ವಾಯುಭಾರ ಕುಸಿತ, ಮುಂದಿನ 4 ದಿನ ಭಾರೀ ಮಳೆ ಎಚ್ಚರಿಕೆ! ಕೆಲವೆಡೆ ಒಣ ಹವೆ

Karnataka Rain Alert: ರಾಜ್ಯದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ 4 ದಿನಗಳ ಮಳೆಯ ಮುನ್ಸೂಚನೆ ಕುರಿತು ಹವಾಮಾನ ಇಲಾಖೆ…

57 years ago

ಶಾರುಖ್ ಖಾನ್ ಜೈಲು ಸೇರಿದ್ರು.. ನಾನಾ ಪಾಟೇಕರ್ ಬಿಡಿಸಿಕೊಂಡು ಬಂದಿದ್ರು; ಈ ಘಟನೆ ಹಲವರಿಗೆ ಗೊತ್ತಿಲ್ಲ! ಇಲ್ಲಿದೆ  ಸಂಪೂರ್ಣ ಮಾಹಿತಿ!

ಬಾಲಿವುಡ್ ನಟ ಶಾರುಖ್ ಖಾನ್ ಜೈಲು ಸೇರಿದ್ದರು, ಅವರನ್ನು ನಟ ನಾನಾ ಪಾಟೇಕರ್ ಬಿಡಿಸಿಕೊಂಡು ಬಂದಿದ್ದರು ಎಂಬ ಕುತೂಹಲಕಾರಿ ವಿಚಾರ…

57 years ago

RRB Recruitment 2026: ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌; 3,548 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ

RRB Recruitment 2026: ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶ! ರೈಲ್ವೆ ನೇಮಕಾತಿ ಮಂಡಳಿಯು 3,548 ಹುದ್ದೆಗಳ…

57 years ago

ಪಿಎಂ ಕಿಸಾನ್: ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ  ನಿಮ್ಮ ಖಾತೆಗೆ ಎಷ್ಟು…

57 years ago

ರೈತ ಬಾಂದವರೇ ಕೂಡಲೇ ಈ ಕೆಲಸ ಮಾಡಿ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ

PM Kisan Yojana: ರೈತ ಬಾಂಧವರೇ, ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಈ ಪ್ರಮುಖ ಕೆಲಸಗಳನ್ನು ಪರಿಶೀಲಿಸಿ. ನಿಮ್ಮ…

57 years ago

ರಾಜ್ಯದ 31 ಜಿಲ್ಲಾ, 239 ತಾಲೂಕು ಪಂಚಾಯಿತಿಗಳ ಚುನಾವಣೆಗೆ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ ಪ್ರಕಟ! ಸಂಪೂರ್ಣ ವಿವರ ಇಲ್ಲಿದೆ !

ಕರ್ನಾಟಕದ 31 ಜಿಲ್ಲಾ ಪಂಚಾಯಿತಿ ಹಾಗೂ 239 ತಾಲೂಕು ಪಂಚಾಯಿತಿಗಳ ಚುನಾವಣೆಗೆ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಯಾವ…

57 years ago