Categories: information

ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ? ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ! ಇಲ್ಲಿದೆ ಸಂಪೂರ್ಣ ಮಾಹಿತಿ.

ರೈತರಿಗೆ ದೊಡ್ಡ ಸಹಾಯವಾಗಿರುವ ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮೆಯಾಯಿತೇ ಎಂಬುದನ್ನು ಈಗ ಮೊಬೈಲ್‌ನಲ್ಲೇ ಸುಲಭವಾಗಿ ತಿಳಿದುಕೊಳ್ಳಬಹುದು. ಕಚೇರಿಗೆ ಓಡಾಡುವ ಅಗತ್ಯವಿಲ್ಲದೆ, ಕೇವಲ ಕೆಲವು ಕ್ಲಿಕ್‌ಗಳಲ್ಲಿ ನಿಮ್ಮ ಅರ್ಜಿ ಸ್ಥಿತಿ, ಪರಿಹಾರ ಮೊತ್ತ ಮತ್ತು ಜಮಾ ದಿನಾಂಕದ ಸಂಪೂರ್ಣ ವಿವರ ಲಭ್ಯ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ರಾಜ್ಯ ಬೆಳೆ ವಿಮೆ ಯೋಜನೆಯ ಫಲಾನುಭವಿಗಳಿಗೆ ಇದು ತುಂಬಾ ಉಪಯುಕ್ತ ಮಾಹಿತಿ. ನಿಮ್ಮ ಬೆಳೆ ವಿಮೆ ಹಣ ಇನ್ನೂ ಬರಲಿಲ್ಲವೇ, ಅಥವಾ ಎಷ್ಟು ಮೊತ್ತ ಬಂದಿದೆ ಎಂದು ತಿಳಿಯಲು ಈ ಸರಳ ವಿಧಾನ ಅನುಸರಿಸಿ ಮತ್ತು ಯಾವುದೇ ಗೊಂದಲವಿಲ್ಲದೆ ನಿಮ್ಮ ಸ್ಟೇಟಸ್ ಪರಿಶೀಲಿಸಿ.

Spread the love

ಬೆಳೆ ವಿಮೆ ಮಾಡಿಸಿದ ರೈತರು ತಮಗೆಷ್ಟು ಹಣ ಜಮೆಯಾಗಿದೆ ಅಥವಾ ಜಮೆಯಾಗುತ್ತದೆ ಎಂಬುದನ್ನು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಅರ್ಜಿಯ ಸ್ಥಿತಿ ಅಂದರೆ ಸ್ಟೇಟಸ್ ತಿಳಿದುಕೊಳ್ಳಬಹುದು. ಹೌದು,  ಇದರಿಂದಾಗಿ ರೈತರು ತಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗುತ್ತದೆ ಇದರೊಂದಿಗೆ ತಮಗೆಷ್ಟು ಹಮ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

Thank you for reading this post, don't forget to subscribe!

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ಪೇಜ್ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷ 2025-2025ರ ಕೆಳಗಡೆ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಕಳೆದ ವರ್ಷದ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಬೇಕಾದರೆ 2024-2025 ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂಗಾರು ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಬೇಕಾದರೆ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ಹಿಂಗಾರು ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಬೇಕಾದರೆ ರಾಬಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು  Check status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Captha ಕೋಡ್ ನಮೂದಿಸಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ಅದರ ಮುಂದೆ ನೀವು ಅರ್ಜಿ ಎಲ್ಲಿ ಸಲ್ಲಿಸಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಅದಾದನಂತರ ಅಲ್ಲಿ ಕಾಣುವ Select ಮೇಲೆ ಕ್ಲಿಕ್ ಮಾಡಬೇಕು.

ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡಿ

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು. ನಿಮ್ಮ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಅಥವಾ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬ ಮಾಹಿತಿ ಕಾಣಿಸುತ್ತದೆ.

View Details ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ನಿಮ್ಮ ಊರು ಕಾಣಿಸುತ್ತದೆ. ಅಲ್ಲಿ ಹೋಬಳಿ, ನಿಮ್ಮ ಊರು ಸರ್ವೆ ನಂಬರ್, ಹಿಸ್ಸಾ ನಬರ್ ಕಾಣುಸುತ್ತದೆ. ನೀವು ಯಾವ ಬೆಳೆ ಹಾಕಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದೆ ನಿಮಗೆ ಬೆಳೆ ವಿಮೆ ಹಣ ಎಷ್ಟು ಹಣ ಜಮೆಯಾಗುತ್ತದೆ ಎಂಬ ಮಾಹಿತಿ ಕಾಣಿಸುತ್ತದೆ. ನೀವು ಎಷ್ಟು ಎಕರೆಗೆ ಬೆಳೆ ವಿಮೆ ಮಾಡಿಸಿದ್ದೀರಿ ಎಂಬ ಮಾಹಿತಿಯೂ ಕಾಣಿಸುತ್ತದೆ.

ಪ್ರಸಕ್ತ ಸಾಲಿನಲ್ಲಿ ರೈತರು ಮುಂಗಾರು ಹಿಂಗಾರು ಹಂಗಾಮಿಗೆ ಬೆಳೆ ಮಾಡಿಸಿದವರು ಹಾಗೂ ಕಳೆದ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರೂ ಸಹ ತಮ್ಮ ಬೆಳೆ ವಿಮೆಯ ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಹೌದು, ಮಿತ್ರರೇ ಈ ಮಾಹಿತಿ ಚೆಕ್ ಮಾಡಲು ನಿಮ್ಮ ಬಳಿ ಮೊಬೈಲ್ ಇದ್ದರೆ ಸಾಕು, ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇https://chat.whatsapp.com/FM1qVgdNtJm5m1M9SL0BHc?mode=ac_t

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago