ರೈತರಿಗೆ ಮತ್ತೊಂದು ಗುಡ್ ನ್ಯೂಸ್! ಈಗ ನಿಮ್ಮ ಜಮೀನಿನ ಇ-ಸ್ಕೇಚ್ (E-Sketch) ಅನ್ನು ಕಚೇರಿ ಸುತ್ತಾಡದೇ, ನೇರವಾಗಿ ಮೊಬೈಲ್ ಮೂಲಕವೇ ಪಡೆಯಬಹುದು. ಭೂಮಿ ದಾಖಲೆಗಳಿಗೆ ಸಂಬಂಧಿಸಿದ ಈ ಡಿಜಿಟಲ್ ಸೌಲಭ್ಯದಿಂದ ಜಮೀನಿನ ಗಡಿ, ಅಳತೆ ಹಾಗೂ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದು. ಕೆಲವೇ ನಿಮಿಷಗಳಲ್ಲಿ ಆನ್‌ಲೈನ್ ಮೂಲಕ ಇ-ಸ್ಕೇಚ್ ಡೌನ್‌ಲೋಡ್ ಮಾಡುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಉಪಯೋಗದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ರೈತಬಾಂಧವರಿಗೆ ಗುಡ್ ನ್ಯೂಸ್ ಇಲ್ಲಿದೆ. ರೈತರು ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ತಮ್ಮ ಜಮೀನಿನ ಇ ಸ್ಕೆಚ್ ನ್ನು ಪಡೆದುಕೊಳ್ಳಬಹುದು. ಹೌದು, ರೈತ ಮಿತ್ರರೇ ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಸರ್ವೆ ನಂಬರ್ ನಮೂದಿಸಿ ಇ ಸ್ಕೆಚ್ ಹಾಗೂ ಜಮೀನಿನ ಸ್ಕೆಚ್ ಮ್ಯಾಪನ್ನು ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
Thank you for reading this post, don't forget to subscribe!ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಜಮೀನಿನ ಇ ಸ್ಕೆಚ್ ಪಡೆಯಲು ಈ
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Bhoomi Online Land Records View ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ current Year, Old year, Mr, Mutation status, Khata Extract, Survey Document, Akarband, RTCwith Skecth, E chawadi ಹಾಗೂ Survey Sketch ಕಾಣಿಸುತ್ತದೆ. ಅಲ್ಲಿ ನೀವು Survey Sketch ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ಪೇಜ್ ತೆರೆದುಕೊಳ್ಳತ್ತದೆ. ಡಿಜಿಟೈಸ್ಡ್ ಸಮೀಕ್ಷೆ ನಕ್ಷೆ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಗ್ರಾಮ ಹುಡುಕಾಟ Village Search ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಊರನ್ನು ಟೈಪ್ ಮಾಡಬೇಕು. ಆಗ ಅದರ ಕೆಳಗಡೆ ನಿಮಗೆ ನಿಮ್ಮ ಊರು, ಹೋಬಳಿ, ತಾಲೂಕು ಹಾಗೂ ಜಿಲ್ಲೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ನಾಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು.
ಇದಾದ ನಂತರ ಹಿಸ್ಸಾ ನಂಬರ್ ನಮೂದಿಸಬೇಕು. ನಂತರ ಹುಡುಕು Search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾರ ಯಾರ ಹೆಸರಿದೆ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಕೆಳಗಡೆ ನಿಮಗೆ ಜಮೀನಿನ ಸ್ಕೆಚ್ ಕಾಣಿಸುತ್ತದೆ. ನಿಮ್ಮ ಜಮೀನಿನ ಆಕಾರ ಕಾಣಿಸುತ್ತದೆ. ಇದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ನಿಮ್ಮ ಜಮೀನನ ಸ್ಕೆಚ್ ಮ್ಯಾಪ್ ಬೇಕಾದರೆ ನೀವು ಅಲ್ಲಿ ಕಾಣುವ View Sketch on Map ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೊಲ ಅಂದರೆ ಜಮೀನು ಕಾಣಿಸುತ್ತದೆ. ಜಮೀನಿನ ಆಕಾರ ಸಂಪೂರ್ಣವಾಗಿ ಕಲರ್ ನಲ್ಲಿ ಕಾಣಿಸುತ್ತದೆ. ಇದನ್ನು ನೀವು ಡೌನ್ಲೋಡ್ ಮಾಡಿಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಜಮೀನು ಸ್ಪಷ್ಟವಾಗಿ ಕಾಣಿಸುತ್ತದೆ. ಒಮ್ಮೆ ಇದನ್ನು ಚೆಕ್ ಮಾಡಿ ನೋಡಿ ಖುಷಿ ಎನಿಸುತ್ತದೆ.
ಇದೇ ರೀತಿ ನಿಮಗೆ ಜಮೀನಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀವು ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು. ಸರ್ಕಾರವು ಸಹ ರೈತರಿಗೆ ಸುಲಭವಾಗಿ ಜಮೀನಿನ ಮಾಹಿತಿ ಸಿಗಲೆಂದು ಆನ್ಲೈನ್ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಇತ್ತೀಚೆಗೆ ರೈತರು ಕೇವಲ ಮೊಬೈಲ್ ಬಳಸುವ ಜ್ಞಾನವಿದ್ದರೆ ಸಾಕು ಮನೆಯಲ್ಲಿಯೇ ಕುಳಿತು ಯಾರ ಸಹಾಯವೂ ಇಲ್ಲದೆ ತಮ್ಮ ಜಮೀನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಪಡೆದುಕೊಳ್ಳಬಹುದು.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇https://chat.whatsapp.com/FM1qVgdNtJm5m1M9SL0BHc?mode=ac_t
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…