Categories: information

ನಿಮ್ಮ ಮೊಬೈಲ್ ನಲ್ಲಿ ಜಮೀನಿನ ಖಾತಾ ಬದಲಾವಣೆಗೆ ಅರ್ಜಿ ಹೀಗೆ ಸಲ್ಲಿಸಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮೊಬೈಲ್‌ನಲ್ಲೇ ಜಮೀನಿನ ಖಾತಾ ಬದಲಾವಣೆಗೆ ಈಗ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಮತ್ತು ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಮನೆಯಲ್ಲೇ ಕುಳಿತು ಸುಲಭವಾಗಿ ಖಾತಾ ವರ್ಗಾವಣೆ ಮಾಡಿ.

Spread the love

ಆಸ್ತಿ ಖರೀದಿ ಮಾಡುವವರಿಗೆ, ವರ್ಗಾವಣೆ ಮಾಡುವವರಿಗೆ ಕಾನೂನಾತ್ಮಕವಾಗಿ ಆಸ್ತಿ ಹೊಂದಿದವರಿಗೆ ಜಮೀನಿನ ಖಾತಾ ಬಗ್ಗೆ ಗೊತ್ತಿರಲೇಬೇಕು. ಸರ್ಕಾರವು ಸಹ ಇತ್ತೀಚೆಗೆ ಇ ಖಾತಾ ಬಗ್ಗೆ ಅಭಿಯಾನ ಕೊಂಡಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿಯಾಗಿದೆ. ಬಿ ಖಾತಾಗಳನ್ನು ಎ ಖಾತಾಗಳನ್ನಾಗಿ ವರ್ಗಾವಣೆ ಮಾಡಲಾಗುತ್ತಿದೆ. ಎ ಖಾತಾ ಎಂದರೇನು ಬಿ ಖಾತಾ ಎಂದರೇನು ಇ ಖಾತಾ ಎಂದರೇನು ಬಿ ಖಾತಾದಿಂದ ಎ ಖಾತಾ ವರ್ಗಾವಣೆ ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Thank you for reading this post, don't forget to subscribe!

ಎ ಖಾತಾ ಎಂದರೇನು?

ಆಸ್ತಿಯ ಕಾನೂನುಬದ್ದ ದಾಖಲೆಯನ್ನೇ ಎ ಖಾತಾ ಎನ್ನುವರು. ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ ನೋಂದಣಿಯಾಗಿರುವ ಆಸ್ತಿಗಳನ್ನು ಎ ಖಾತಾ ಎನ್ನುವರು. ನಿವೇಶನ, ಕಟ್ಟಡ, ಅಪಾರ್ಟ್ ಮೆಂಟ್ ಗಳು ಕಾನೂನುಬದ್ಧವಾಗಿದ್ದರೆ ಎ ಖಾತಾ ನೀಡಲಾಗುವುದು. ಇದು ಆಸ್ತಿ ಮಾಲಿಕರಿಗೆ ಮಾಲಿಕತ್ವದ ಪ್ರಮಾಣಪತ್ರವಾಗಿದೆ.

ಬಿ ಖಾತಾ ಎಂದರೇನು?

ಆಸ್ತಿ ಕಾನೂನುಬಾಹಿರವಾಗಿದ್ದರೆ ಅದನ್ನು ಬಿ ಖಾತಾ ಎನ್ನುವರು. ನಿಯಮಗಳನ್ನು ಉಲ್ಲಂಘಿಸಿ ಆಸ್ತಿ ಹೊಂದಿದ್ದರೆ ಅದು ಬಿ ಖಾತಾವಾಗಿರುತ್ತದೆ. ಸರ್ಕಾರದಿಂದ ಪೂರ್ಣ ಪ್ರಮಾಣವಲ್ಲದ ಅರೆ ಅನುಮತಿ ಪಡೆದುಕೊಂಡು ಆಸ್ತಿ ಪಡೆದಿರಬಹುದು. ಅನಧಿಕೃತ ವಿನ್ಯಾಸ, ಪೂರ್ಣಗೊಳ್ಳದ ಕಟ್ಟಡ ಮತ್ತು ನಿಮಯಬಾಹಿರ ನಿರ್ಮಾಣವು ಅಗಿರಬಹುದು. ಒಟ್ಟಿನಲ್ಲಿ ಆಸ್ತಿಯು ಕಾನೂನುಬದ್ದವಾಗಿಲ್ಲ ಎಂದರ್ಥ,. ಆಸ್ತಿಯು ಸಮಸ್ಯೆಯೊಂದಿದ್ದರೆ ಅದಕ್ಕೆ ಬಿ ಖಾತಾ ನೀಡಲಾಗುವುದು.

ಇ ಖಾತಾ ಎಂದರೇನು?

ಇ ಖಾತಾ ಎಂದರೆ ಎ ಖಾತಾದ ಡಿಜಿಟಲ್ ರೂಪ. ಇದು ಆಸ್ತಿ ಮಾಲಿಕತ್ವದ ದಾಖಲೆಯಾಗಿದೆ. ತೆರಿಗೆ ಪಾವತಿ ಮತ್ತು ದಾಖಲೆಗಳನ್ನು ಆನ್ಲೈನ್ ನಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ. ಕರ್ನಾಟಕ ಸರ್ಕಾರವು ಇದನ್ನು ಕಡ್ಡಾಯಗೊಳಿಸಿದೆ. ಇದು ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಒಂದು ದೊಡ್ಡ ಹೆಜ್ಜೆಯಾಗಿದೆ.

ಇದು ಆಸ್ತಿ ದಾಖಲೆಗಳ ಪಾರದರ್ಶಕತೆ ಹೆಚ್ಚಿಸುತ್ತದೆ. ಭ್ರಸ್ಟಾಚಾರ ತಡೆಗಟ್ಟುತ್ತದೆ. ನಾಗರಿಕರಿಗೆ ಮನೆ ಬಾಗಿಲಲಲ್ಲೇ ಸೇವೆಗಳನ್ನು ಒದಗಿಸುತ್ತದೆ. ಇ ಆಸ್ತಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಇ ಆಸ್ತಿಗೆ ಅರ್ಜಿ ಸಲ್ಲಿಸುವುದು ಹೇಗೆ

ಇ ಆಸ್ತಿಗೆ ಅರ್ಜಿ ಸಲ್ಲಿಸಲು ಈ

https://eaasthi.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ. ನಿಮ್ಮ ಮೊಬೈಲಿಗೆ ಓಟಿಪಿ ಬರುವುದು. ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.


ಬಿ ಖಾತಾದಿಂದ ಎ ಖಾತಾಗೆ ಜಮೀನು ವರ್ಗಾವಣೆ ಮಾಡುವುದು ಹೇಗೆ

ಒಂದು ವೇಳೆ ನೀವು ಬಿ ಖಾತಾ ಹೊಂದಿದ್ದರೆ ಅದನ್ನು ಎ ಖಾತಾ ಮಾಡಿಕೊಳ್ಳಲು ಅವಕಾಶವಿದೆ. ಒಂದು ವೇಳೆ ನಿಮ್ಮ ಬಳಿ ಬಿ ಖಾತಾ ಹೊಂದಿರುವ ಆಸ್ತಿ ಇದ್ದರೆ ಎಲ್ಲಾ ಆಸ್ತಿ ತೆರಿಗೆಯನ್ನು ಪಾವತಿ ಮಾಡಬೇಕು. ಆಸ್ತಿಗೆ ಸಂಬಂಧಿಸಿದ ಸ್ಥಳೀಯ ಆಡಳಿತ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು. ಅಂದರೆ ನಿಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ಬಿಬಿಎಂಪಿ ಹೀಗೆ ಆ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲಿಕರು ಖಾತಾ ಬದಲಾವಣೆಗೆ ಅರ್ಜಿ ಹಾಕಬೇಕು. ಆಸ್ತಿ ಪತ್ರದ ದಾಖಲೆ, ಆಸ್ತಿ ತೆರಿಗೆ ಪತ್ರ, ಕಟ್ಟಡ ನಿರ್ಮಾಣ ಯೋಜನೆ ನಕ್ಷೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಆಡಳಿತ ಸಂಸ್ಥೆಯು ಅರ್ಜಿಯನ್ನು ಪರಿಶೀಲನೆ ಮಾಡಿ ಎಲ್ಲಾ ಕಾನೂನು ಪ್ರಕಾರವಾಗಿದ್ದರೆ ವರ್ಗಾವಣೆ ಶುಲ್ಕ ಪಡೆದು ನಿವೇಶನ ಅಳತೆ ಆಧರಿಸಿ ಎ ಖಾತಾ ಬದಲಾವಣೆ ಮಾಡಿ ಪ್ರಮಾಣ ಪತ್ರ ನೀಡಲಾಗುವುದು. ಬಿ ಖಾತಾ ಆಸ್ತಿ ಹೊಂದಿರುವುದು ತಪ್ಪಲ್ಲ ಆಧರೆ ಅದನ್ನು ಎ ಖಾತಾಗೆ ಪರಿವರ್ತಿಸದೆ ಹೋದರೆ ಅದು ನಿಮ್ಮ ತಪ್ಪಾಗುತ್ತದೆ.

ಇತ್ತೀಚೆಗೆ ರಾಜ್ಯ ಸರ್ಕಾರವು ರೈತರಿಗೆ ಸಾಮಾನ್ಯ ಜನರಿಗೆ ಅಧಿಕೃತ ದಾಖಲೆಗಳಲ್ಲಿ ಒಂದಾದ ಖಾತಾ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಹಾಗೂ ಇ ಖಾತಾ ವರ್ಗಾವಣೆ ಮಾಡಿಕೊಳ್ಳುವುದರ ಬಗ್ಗೆ ಅಭಿಯಾನ ಹಮ್ಮಿಕೊಳ್ಳುವುದರ ಮೂಲಕ ಆನ್ಲೈನ್ ವ್ಯವಸ್ಥೆ ಮಾಡಿದೆ.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago