Categories: information

E-Khata: ಕಚೇರಿ ಅಲೆದಾಟಕ್ಕೆ ಬ್ರೇಕ್; ಇನ್ಮುಂದೆ ಮನೆಯಲ್ಲೇ ಸಿಗುತ್ತೆ ‘ಇ-ಖಾತಾ’; ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!

ಇ-ಖಾತಾ ಸೇವೆಯೊಂದಿಗೆ ಕಚೇರಿ ಅಲೆದಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಇನ್ಮುಂದೆ ಆಸ್ತಿ ಖಾತಾ ದಾಖಲೆಗಳನ್ನು ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಬಹುದು. ಸರಳ ಪ್ರಕ್ರಿಯೆ, ಕಡಿಮೆ ಸಮಯ, ಹೆಚ್ಚಿನ ಪಾರದರ್ಶಕತೆ—ಇದೇ ಇ-ಖಾತಾದ ವಿಶೇಷತೆ.

Spread the love

ಆಸ್ತಿ ಮಾಲೀಕರೇ ಗಮನಿಸಿ, ಇನ್ಮುಂದೆ ಖಾತಾ ಬದಲಾವಣೆಗಾಗಿ ಅಥವಾ ಇ-ಖಾತಾ (E-Khata) ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹೊಸ ‘ಇ-ಆಸ್ತಿ’ (E-Aasthi) ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಮನೆಯಲ್ಲೇ ಕುಳಿತು 10 ನಿಮಿಷದಲ್ಲಿ ನಿಮ್ಮ ಆಸ್ತಿ ದಾಖಲೆ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್.

Thank you for reading this post, don't forget to subscribe!

ನಗರ ಪ್ರದೇಶದಲ್ಲಿ ಸೈಟ್ ಅಥವಾ ಮನೆ ಹೊಂದಿರುವವರಿಗೆ ಇದೊಂದು ಬಹುದೊಡ್ಡ ಸಿಹಿಸುದ್ದಿ. ಇ-ಖಾತಾ ಮಾಡಿಸಲು ಮಧ್ಯವರ್ತಿಗಳಿಗೆ ಹಣ ಕೊಟ್ಟು, ಪಾಲಿಕೆ ಕಚೇರಿಗಳ ಮುಂದೆ ಕ್ಯೂ ನಿಲ್ಲುವ ತಾಪತ್ರಯಕ್ಕೆ ಸರ್ಕಾರ ಶಾಶ್ವತ ಬ್ರೇಕ್ ಹಾಕಿದೆ. ಸುವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ‘ನಮ್ಮ ಸ್ವತ್ತು’ ಯೋಜನೆಯಡಿ ಆನ್‌ಲೈನ್ ಮೂಲಕ ಇ-ಖಾತಾ ವಿತರಣೆಗೆ ಚಾಲನೆ ನೀಡಿದ್ದಾರೆ.

ಏನಿದು ಹೊಸ ಬದಲಾವಣೆ?

ಇಷ್ಟು ದಿನ ಇ-ಖಾತಾ ಪಡೆಯಲು ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ಪೌರಾಡಳಿತ ಇಲಾಖೆಯು www.eaasthi.karnataka.gov.in ಎಂಬ ಹೊಸ ವೆಬ್‌ಸೈಟ್ ಅಭಿವೃದ್ಧಿಪಡಿಸಿದೆ. ಇದರಲ್ಲಿ ರಾಜ್ಯದ ನಗರ ವ್ಯಾಪ್ತಿಯ 45 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಕರಡು ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ. ನಿಮ್ಮ ಆಸ್ತಿ ವಿವರ ಸರಿಯಾಗಿದ್ದರೆ, ಆನ್‌ಲೈನ್‌ನಲ್ಲೇ ಶುಲ್ಕ ಕಟ್ಟಿ ಒರಿಜಿನಲ್ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಬಹುದು!

ಯಾಕೆ ಬೇಕು ಇ-ಖಾತಾ?

.ಆಸ್ತಿ ಮಾರಾಟ ಮಾಡಲು ಅಥವಾ ಖರೀದಿಸಲು.
.ಬ್ಯಾಂಕ್‌ನಲ್ಲಿ ಸಾಲ (Loan) ಪಡೆಯಲು.
.ಕಟ್ಟಡ ನಿರ್ಮಾಣ ಪರವಾನಗಿ ಪಡೆಯಲು.
.ವಂಚನೆ ರಹಿತ ಆಸ್ತಿ ನಿರ್ವಹಣೆಗೆ ಇದು ಅತ್ಯಗತ್ಯ.

📲 ಇ-ಖಾತಾ ಪಡೆಯುವುದು ಹೇಗೆ? (Step-by-Step)

👉 ಹಂತ 1: ಸರ್ಕಾರದ ಅಧಿಕೃತ /https://eaasthi.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
👉 ಹಂತ 2: ಅಲ್ಲಿ ‘Citizen Login’ ಮೇಲೆ ಕ್ಲಿಕ್ ಮಾಡಿ, ಮೊಬೈಲ್ ನಂಬರ್ ಹಾಕಿ OTP ನಮೂದಿಸಿ.
👉 ಹಂತ 3: ನಿಮ್ಮ ಆಸ್ತಿ ಇರುವ ಜಿಲ್ಲೆ ಮತ್ತು ನಗರಸಭೆಯನ್ನು ಆಯ್ಕೆ ಮಾಡಿ.
👉 ಹಂತ 4: ನಿಮ್ಮ ಆಸ್ತಿ ಸಂಖ್ಯೆ ಅಥವಾ ಹೆಸರನ್ನು ಸರ್ಚ್ ಮಾಡಿ.
👉 ಹಂತ 5: ಎಲ್ಲಾ ವಿವರ ಸರಿಯಿದ್ದರೆ, ಆನ್‌ಲೈನ್ ಮೂಲಕವೇ e-Khata Certificate ಡೌನ್‌ಲೋಡ್ ಮಾಡಿ

        ಸೂಚನೆ: ಏನಾದರೂ ತಪ್ಪುಗಳಿದ್ದರೆ ಆನ್‌ಲೈನ್‌ನಲ್ಲೇ ತಿದ್ದುಪಡಿಗೂ ಅರ್ಜಿ ಹಾಕಬಹುದು!

Citizen Login’ ಮೇಲೆ ಕ್ಲಿಕ್ ಮಾಡಿ, ಮೊಬೈಲ್ ನಂಬರ್ ಹಾಕಿ OTP ನಮೂದಿಸಿ.

ನಿಮ್ಮ ಆಸ್ತಿ ಇರುವ ಜಿಲ್ಲೆ ಮತ್ತು ನಗರಸಭೆಯನ್ನು ಆಯ್ಕೆ ಮಾಡಿ.

ಎಲ್ಲಾ ವಿವರ ಸರಿಯಿದ್ದರೆ, ಆನ್‌ಲೈನ್ ಮೂಲಕವೇ e-Khata Certificate ಡೌನ್‌ಲೋಡ್ ಮಾಡಿ

ಕೈಯಲ್ಲಿ ಇಟ್ಟುಕೊಳ್ಳಬೇಕಾದ ದಾಖಲೆಗಳು:

ಅರ್ಜಿ ಸಲ್ಲಿಸುವ ಮುನ್ನ ಅಥವಾ ಪರಿಶೀಲಿಸುವ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ:

1.ಮಾಲೀಕರ ಆಧಾರ್ ಕಾರ್ಡ್ & ಫೋಟೋ.
2.ಆಸ್ತಿ ನೋಂದಣಿ ಪತ್ರ (Sale Deed Number).
3.ವಿದ್ಯುತ್ ಬಿಲ್ (RR Number).
4.ಆಸ್ತಿ ತೆರಿಗೆ ಕಟ್ಟಿದ ರಸೀದಿ (SAS Number).
5.EC (Encumbrance Certificate – 15/16).

ಸಹಾಯವಾಣಿ ಸಂಖ್ಯೆ: ನಿಮಗೆ ಆನ್‌ಲೈನ್‌ನಲ್ಲಿ ಮಾಡಲು ಕಷ್ಟವಾದರೆ ಅಥವಾ ಯಾವುದೇ ಗೊಂದಲವಿದ್ದರೆ, ಸರ್ಕಾರವು ಸಹಾಯವಾಣಿಯನ್ನು ಆರಂಭಿಸಿದೆ. ಕರೆ ಮಾಡಿ ಮಾಹಿತಿ ಪಡೆಯಬಹುದು: 72595 85959.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode

Recent Posts

ಇಂದಿನಿಂದ ಏಳು ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಇಲ್ಲಿದೆ ಮಾಹಿತಿ

ಕರ್ನಾಟಕದಲ್ಲಿ ಇಂದಿನಿಂದ ಮುಂದಿನ ಏಳು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಹವಾಮಾನ ಇಲಾಖೆಯ ಮುನ್ಸೂಚನೆ,…

57 years ago

ಮಹಿಳೆಯರಿಗೆ ಗುಡ್ ನ್ಯೂಸ್ 33ನೇ ಕಂತಿನ ಗೃಹಲಕ್ಷ್ಮೀ ಹಣ ಬಿಡುಗಡೆ ಇಲ್ಲಿದೆ ಮಾಹಿತಿ

ಕರ್ನಾಟಕದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 33ನೇ ಕಂತಿನ ಹಣದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ. ಹಣ ಬಿಡುಗಡೆ ಆಗಿದೆಯೇ, ನಿಮ್ಮ…

57 years ago

*ಅಕ್ಟೋಬರ್ 15ರಿಂದ ಮಳೆ ಚುರುಕು*: ಬೆಳಗಾವಿ ಸೇರಿ ಉತ್ತರ ಕರ್ನಾಟಕದಲ್ಲೂ ವರ್ಷಧಾರೆ ಸಾಧ್ಯತೆ*

ಅಕ್ಟೋಬರ್ 15ರಿಂದ ಕರ್ನಾಟಕದಲ್ಲಿ ಮಳೆ ಚುರುಕಾಗುವ ಸಾಧ್ಯತೆ ಇದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.…

57 years ago

ನಿಮ್ಮ ಬೆಳೆ ವಿಮೆ ಜಮೆ ಆಗಲು ಏನು ಮಾಡಬೇಕು? ಇಲ್ಲಿವೆ ಕೆಲವು ಸರಳ ಉಪಾಯಗಳು!

ನಿಮ್ಮ ಬೆಳೆ ವಿಮೆ ಹಣ ಇನ್ನೂ ಜಮೆಯಾಗಿಲ್ಲವೇ? ಬೆಳೆ ವಿಮೆ ಪಡೆಯಲು ರೈತರು ಯಾವ ಕ್ರಮಗಳನ್ನು ಅನುಸರಿಸಬೇಕು, ಅರ್ಜಿಯ ಸ್ಥಿತಿಯನ್ನು…

57 years ago

Karnataka Rain: ವಾಯುಭಾರ ಕುಸಿತ, ಮುಂದಿನ 4 ದಿನ ಭಾರೀ ಮಳೆ ಎಚ್ಚರಿಕೆ! ಕೆಲವೆಡೆ ಒಣ ಹವೆ

Karnataka Rain Alert: ರಾಜ್ಯದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ 4 ದಿನಗಳ ಮಳೆಯ ಮುನ್ಸೂಚನೆ ಕುರಿತು ಹವಾಮಾನ ಇಲಾಖೆ…

57 years ago

ಶಾರುಖ್ ಖಾನ್ ಜೈಲು ಸೇರಿದ್ರು.. ನಾನಾ ಪಾಟೇಕರ್ ಬಿಡಿಸಿಕೊಂಡು ಬಂದಿದ್ರು; ಈ ಘಟನೆ ಹಲವರಿಗೆ ಗೊತ್ತಿಲ್ಲ! ಇಲ್ಲಿದೆ  ಸಂಪೂರ್ಣ ಮಾಹಿತಿ!

ಬಾಲಿವುಡ್ ನಟ ಶಾರುಖ್ ಖಾನ್ ಜೈಲು ಸೇರಿದ್ದರು, ಅವರನ್ನು ನಟ ನಾನಾ ಪಾಟೇಕರ್ ಬಿಡಿಸಿಕೊಂಡು ಬಂದಿದ್ದರು ಎಂಬ ಕುತೂಹಲಕಾರಿ ವಿಚಾರ…

57 years ago