Categories: information

ಗ್ರಾಮೀಣ ಆಸ್ತಿಗಳಿಗೆ ಇ ಸ್ವತ್ತು ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಗ್ರಾಮೀಣ ಪ್ರದೇಶದ ಮನೆ ಹಾಗೂ ಜಮೀನಿಗೆ ಇ-ಸ್ವತ್ತು ದಾಖಲೆ ಪಡೆಯುವುದು ಕಡ್ಡಾಯವಾಗಿದೆ. ಗ್ರಾಮೀಣ ಆಸ್ತಿಗಳಿಗೆ ಇ-ಸ್ವತ್ತು ಪಡೆಯುವ ಸಂಪೂರ್ಣ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಅರ್ಜಿ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.

Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಗ್ರಾಪಂ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಇ ಖಾತಾ ಪಡೆಯುವುದು ಹೇಗೆ? ಮೊಬೈಲ್ ನಲ್ಲಿ 9ಎ ಮತ್ತು 11ಬಿ ದಾಖಲೆ ಹೀಗೆ ಪಡೆಯಿರಿ

ಗ್ರಾಪಂ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಸಾರ್ವಜನಿಕರು ಇ ಖಾತಾ ಪಡೆಯುವುದು ಹೇಗೆ? ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ 9ಎ ಮತ್ತು 11ಬಿ ದಾಖಲೆ ಪಡೆಯುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Thank you for reading this post, don't forget to subscribe!

ಇ ಸ್ವತ್ತು ಎಂದರೇನು?

ಗ್ರಾಮೀಣ ಭಾಗದ ಕೃಷಿಯೇತರ ಖಾಲಿ ಜಾಗಕ್ಕೆ ಮತ್ತು ಮನೆ ನಿರ್ಮಾಣ ಮಾಡಿಕೊಂಡಿರುವ ಜಾಗಕ್ಕೆ ಅಧಿಕೃತ ಮಾಲಿಕತ್ವ ಪ್ರಮಾಣ ಪತ್ರವನ್ನು ಡಿಜಿಟಲ್ ಮಾದರಿಯಲ್ಲಿ ಹೊಂದುವುದಕ್ಕೆ ಇ ಸ್ವತ್ತು ಎನ್ನವರು.

ಇ ಸ್ವತ್ತು ಪ್ರಮಾಣ ಪತ್ರದಲ್ಲಿ ಆ ಜಾಗದ ಜಿಪಿಎಸ್ ಫೋಟೋ, ಒಟ್ಟು ವಿಸ್ತೀರ್ಣ, ಮಾಲಿಕರ ವಿವರ ಸಂಪೂರ್ಣ ಮಾಹಿತಿ ಡಿಜಿಟಲ್ ಮಾದರಿಯಲ್ಲಿ ನೋಡಬಹುದು.

ಅಗತ್ಯ ದಾಖಲಾತಿಗಳ ಸಮೇತ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಭೇಟಿ ನೀಡಿ ಜಾಗದ ಅಳತೆಯನ್ನು ತೆಗೆದುಕೊಳ್ಳುತ್ತಾರೆ. ಬಳಿಕ ನಿಮ್ಮ ಅರ್ಜಿಯನ್ನು ಇ ಸ್ವತ್ತು ತಂತ್ರಾಂಶದಲ್ಲಿ ಅಫ್ಲೋಡ್ ಮಾಡಿ ಪುನಃ ಮಾಡಿ ಸ್ಥಳ ಭೇಟಿ ಮಾಡಿ ಜಿಪಿಎಸ್ ಫೋಟೋ ತೆಗೆದು ಇ ಸ್ವತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು.

ಆನ್ಲೈನ್ ನಲ್ಲಿ ಫಾರ್ಮ 9 ಮತ್ತು 11 ನೋಡುವುದು ಹೇಗೆ?

ಗ್ರಾಪಂ ವ್ಯಾಪ್ತಿಯಲ್ಲಿರುವ ಆಸ್ತಿಗಳ ಫಾರ್ಮ್ 9 ಮತ್ತು ಫಾರ್ಮ್ 11 ನೋಡಲು ಈ

https://eswathu.karnataka.gov.in/Issue0fForm9/Frm_PublicSearchForm9.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಇ ಸ್ವತ್ತು ವೆಬ್ಸೈಟ್ ಓಪನ್ ಆಗುತ್ತದೆ.

ಅಲ್ಲಿ ನೀವು ಫಾರ್ಮ್ 9 ದಾಖಲೆ ಬೇಕಾದರೆ ಅಲ್ಲಿ ಕಾಣುವ Farm 9 ಆಯ್ಕೆ ಮಾಡಬೇಕು

ನಂತರ ನಿಮ್ಮ ಲ್ಲೆ, ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಂಡು ನಂತರ ಗ್ರಾಮ ಪಂಚಾಯತ್ ಹಾಗೂ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ All ಆಯ್ಕೆ ಮಾಡಿಕೊಂಡು ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡಿ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು

ಈ ಪದ್ಧತಿಯ ಪ್ರಕಾರ 97 ಲಕ್ಷಕ್ಕೂ ಹೆಚ್ಚು ಗ್ರಾಮೀಣ  ಆಸ್ತಿಗಳನ್ನು ಸಕ್ರಮಗೊಳಿಸಿ ಅಧಿಕೃತ ತೆರಿಗೆ ವ್ಯಾಪ್ತಿಯಲ್ಲಿ ತರುವುದು ಇದರ ಗುರಿಯಾಗಿದೆ

ಇ ಸ್ವತ್ತು ಗ್ರಾಮೀಣ ಭಾಗದಲ್ಲಿರುವ ಕೃಷಿಯೇತರ ಖಾಲಿ ಜಾಗಗಳು ಮತ್ತು ಮನೆ ನಿರ್ಮಾಣ ಮಾಡಿರುವ ಜಾಗಗಳಿಗೆ ಅಧಿಕೃತ ಮಾಲಿಕತ್ವದ ಪ್ರಮಾಣ ಪತ್ರವನ್ನು ಡಿಜಿಟಲ್ ರೂಪದಲ್ಲಿ ಹೊಂದುವುದಾಗಿದೆ. ಈ ವ್ಯವಸ್ಥೆ ಮೂಲಕ ನಾಗರಿಕರು ಫಾರ್ಮ್ 9 ಮತ್ತು ಫಾರ್ಮ್ 11 ಪ್ರಮುಖ ಇ ಖಾತಾ ದಾಖಲೆಗಳನ್ನು ಪಡೆಯಬಹುದು

ಇ ಸ್ವತ್ತು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬಹುದು?

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಇ ಸ್ವತ್ತು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಹುದು

ಇ ಸ್ವತ್ತು ದಾಖಲೆ ಪಡೆಯಲು ಬೇಕಾಗುವ ದಾಖಲೆಗಳು?

ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ, ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ, ಅರ್ಜಿದಾರರ ಫೋಟೋ, ಮನೆ ಅಥವಾ ಖಾಲಿ ಜಾಗದ ಫೋಟೋ, ಕಂದಾಯ ರಸೀದಿ, ವಿದ್ಯುತ್ ಬಿಲ್ ನೊಂದಿಗೆ ಅರ್ಜಿ ಹಾಕಬೇಕು.

ಫಾರ್ಮ 9 ಎಂದರೇನು

ಗ್ರಾಮೀಣ ಕರ್ನಾಟಕದ ಕೃಷಿಯೇತರ ಆಸ್ತಿಗಳಿಗೆ ಅಗತ್ಯವಾದ ಒಂದು ಕಾನೂನು ದಾಖಲೆಯನ್ನೇ ಫಾರ್ಮ್ 9 ಎನ್ನುವರು. ಇ ಸ್ವತ್ತು ಪೋರ್ಟಲ್ ಅಡಿಯಲ್ಲಿ ಗ್ರಾಮ ಪಂಚಾಯತಿನಿಂದ ನೀಡಲಾದ ಈ ದಾಖಲೆಯು ಕೃಷಿಯೇತರ ಆಸ್ತಿಯ ಮಾಲಿಕತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಕೃಷಿಯೇತನ ಭೂಮಿಯನ್ನು ಖರೀದಿ ಮಾಡುವಾಗ ಅಥವಾ ಮಾರಾಟ ಮಾಡುವಾಗ ಈ ದಾಖಲೆ ಕಡ್ಡಾಯವಾಗಿದೆ. ಈ ಫಾರ್ಮ್ ಇಲ್ಲದೆ ಆಸ್ತಿ ವಹಿವಾಟು ಕಾನೂನುಬದ್ಧವಾಗಿ ಮಾನ್ಯವಾಗಿರುವುದಿಲ್ಲ

ಫಾರ್ಮ್ 11 ಬಿ ಎಂದರೇನು?

ಗ್ರಾಮ ಪಂಚಾಯತ್ ಪ್ರದೇಶದಲ್ಲಿರುವ ಆಸ್ತಿ ಮಾಲಿಕತ್ವದ ಕಾನೂನು ಪುರಾವೆ, ಗ್ರಾಮ ಪಂಚಾಯತ್ ಅಧಿಕಾರಿಗಳಿಂದ ನೀಡಲಾಗುವ ಇದು ಆಸ್ತಿಯ ಕಾನೂನುಬದ್ಧ ಮಾಲಿಕತ್ವವನ್ನು ಸಾಬೀತುಪಡಿಸುವ ಅಧಿಕೃತ ದಾಖಲೆಯನ್ನೇ ಫಾರ್ಮ 11 ಬಿ ಎನ್ನುವರು.

ಇದು ಮಾಲಿಕರ ಹೆಸರು, ಸರ್ವೆ ನಂಬರ್, ಭೂ ವರ್ಗೀಕರಣ ಮತ್ತು ವಹಿವಾಟಿನ ವಿವರಗಳನ್ನು ಒಳಗೊಂಡಿರುತ್ತದೆ. ಬ್ಯಾಂಕ್ ಸಾಲ ಪಡೆಯಲು, ಆಸ್ತಿ ಮಾರಾಟ ಮಾಡಲು ಇದು ಅಗತ್ಯವಾಗಿದೆ.

ಆಸ್ತಿಗೆ 11 ಬಿ ಖಾತಾ ಯಾವಾಗ ನೀಡಲಾಗವುದು

ಗ್ರಾಮೀಣ ಆಸ್ತಿಗಳಿಗೆ 11 ಬಿ ಖಾತ ಪಡೆಯಲು ನಿವೇಶನದಾರರಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ.

7-42025 ರ ದಿನಾಂಕಕ್ಕಿಂತ  ಹಿಂದೆ ನಿವೇಶನ ನೋಂದಣಿಯಾಗಿದ್ದರೆ ಅಥವಾ ಮನೆ ನಿರ್ಮಿಸಿದ್ದರೆ ಮಾತ್ರ ಇ ಸ್ವತ್ತು ತಂತ್ರಾಂಶದ ಮೂಲಕ 11ಬಿ ಖಾತೆ ಪಡೆಯಲು ಅರ್ಜಿ ಸಲ್ಲಿಸಬಹುದು

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t

Share

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago