Categories: information

ನಿಮ್ಮೂರಿನ ಗ್ರಾಪಂ ಆಸ್ತಿ ಮಾಹಿತಿ ಈಗ ವ್ಯಾಟ್ಸ್ ಆ್ಯಪ್ ನಲ್ಲಿ ಹೀಗೆ ಪಡೆಯಿರಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಇನ್ನು ಗ್ರಾಮ ಪಂಚಾಯತ್ ಆಸ್ತಿ ಮಾಹಿತಿಗಾಗಿ ಕಚೇರಿಗಳಿಗೆ ಸುತ್ತಾಡುವ ಅವಶ್ಯಕತೆ ಇಲ್ಲ! ನಿಮ್ಮ ಊರಿನ ಆಸ್ತಿ ವಿವರಗಳು, ಖಾತೆ ಸ್ಥಿತಿ, ದಾಖಲೆ ಮಾಹಿತಿ ಎಲ್ಲವೂ ಈಗ ವ್ಯಾಟ್ಸ್ ಆ್ಯಪ್‌ನಲ್ಲೇ ಸುಲಭವಾಗಿ ಪಡೆಯಬಹುದು. ಹೇಗೆ ಬಳಸುವುದು? ಯಾವ ಮಾಹಿತಿ ಲಭ್ಯ? ಇಲ್ಲಿದೆ ಸಂಪೂರ್ಣ ವಿವರ.

Spread the love

ಸಾರ್ವಜನಿಕರಿಗೆ ಗ್ರಾಮೀಣ ಪ್ರದೇಶದ ಜನರಿಗೆ, ರೈತರಿಗೆ, ಪ್ರಜೆಗಳಿಗೆ ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಗ್ರಾಮ ಪಂಚಾಯತಿಯ ಮಾಹಿತಿ ಸಿಗಲಿದೆ.

ಹೌದು, ಈಗ ನೀವು ನಿಮ್ಮ ಗ್ರಾಮ ಪಂಚಾಯತಿಯ ಮಾಹಿತಿ, ಯಾವ ಯಾವ ಕಾಮಗಾರಿಗಳಿಗೆ ನಿಮ್ಮ ಗ್ರಾಮ ಪಂಚಾಯತಿಯಲ್ಲಿರುವ ಅಧಿಕಾರಿಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು.  ಹಾಗಾದರೆ ಇಲ್ಲಿ ನೀಡಲಾದ ವ್ಯಾಟ್ಸ್ ಆಪ್ ನಂಬರ್ ನಿಂದ ಹೇಗೆ ಹಾಗೂ ಏನೇನು ಮಾಹಿತಿ ಪಡೆಯಬಹುದು ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

Thank you for reading this post, don't forget to subscribe!

ವ್ಯಾಟ್ಸ್ ಆಯಪ್ ನಲ್ಲಿ ಯಾವ ಯಾವ ಮಾಹಿತಿ ಸಿಗಲಿದೆ?

ಕಾರ್ಮಿಕರಿಗೆ ಜಾಬ್ ಕಾರ್ಡ್, ಕಾರ್ಮಿಕರಿಗೆ ಉದ್ಯೋಗ ಹೊಸ ಹಾಗೂ ಮೂಲ ಸೌಕರ್ಯ, 11ಎ ಹಾಗೂ 11 ಬಿ ಮತ್ತು 9 ಸೇರಿದಂತೆ ಇನ್ನಿತರ ಸೇವೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲೇ ಸಿಗಲಿದೆ.

ವ್ಯಾಟ್ಸ್ ಆಪ್ ನಲ್ಲಿ ಚಾಟ್ ಮಾಡುವುದು ಹೇಗೆ

ಸಾರ್ವಜನಿಕರು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಪಂಚಮಿತ್ರದ ಇಲಾಖೆಯ ವ್ಯಾಟ್ಸ್ ಆಯಪ್ ಚಾಟ್ ನಂಬರ್ 8277506000 ಅನ್ನು ಸೇವ್ ಮಾಡಿಕೊಳ್ಳಬೇಕು ನಂತರ Hi ಎಂದು ಮೆಸೆಜ್ ಮಾಡಬೇಕು. ನಂತರ ನಿಮಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸುಸ್ವಾಗತ ಅದರ ಕೆಳಗಡೆ ಭಾಷೆ ಆಯ್ಕೆ ಮಾಡಿ ಸಂದೇಶ ಕಾಣಿಸುತ್ತದೆ.

ಕನ್ನಡ ಆಯ್ಕೆ ಮಾಡಿಕೊಂಡ ನಂತರ ಜಿಲ್ಲೆಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಜಿಲ್ಲೆಯ ನಂಬರ್ ನಮೂದಿಸಬೇಕು.ನಂತರ ತಾಲೂಕುಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ನಿಮ್ಮ ತಾಲೂಕಿನ ನಂಬರ್ ನಮೂದಿಸಬೇಕು.ನಂತರ ಅಲ್ಲಿ ಗ್ರಾಮ ಪಂಚಾಯತಿಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಗ್ರಾಮ ಪಂಚಾಯತಿ ನಂಬರ್ ನಮೂದಿಸಬೇಕು. ಇದಾದ ಮೇಲೆ ನಿಮ್ಮ ಊರಿನ ನಂಬರ್ ನಮೂದಿಸಬೇಕು.  ನಂತರ ಹೌದು ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ನಿಮಗೆ ಜಿಪಿ ಬಗ್ಗೆ ಮಾಹಿತಿ, ಕುಂದುಕೊರತೆ, ಹಾಗೂ ಸೇವೆ ಆಯ್ಕೆಗಳು ಕಾಣಿಸುತ್ತವೆ.ಸೇವೆ ಮೇಲೆ ಕ್ಲಿಕ್ ಮಾಡಿದ ನಂತರ ಲಾಗಿನ್ ಮಾಡಿ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಬರ್ ಹಾಕಬೇಕು.ನಂತರ ಹೌದು ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು ಆಗ ನೀವು ಯಾವ ಯಾವ ಮಾಹಿತಿಗಳನ್ನು ವೀಕ್ಷಿಸಬಹುದು ಎಂಬ ಪಟ್ಟಿ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ ಸೆಂಡ್ ಮೇಲೆ ಕ್ಲಿಕ್ ಮಾಡಬೇಕು.

ನೀವು ಯಾವ ಮಾಹಿತಿ ಪಡೆಯಬೇಕೆಂದುಕೊಂಡಿದ್ದೀರೋ ಅದನ್ನು ಸರಿಯಾಗಿ ನಮೂದಿಸಬೇಕು. ಒಂದು ನೀವು ತಪ್ಪಾಗಿ ನಮೂದಿಸಿದರೆ ಹಿಂದೆ ಹೋಗುವ ಆಯ್ಕೆ ಸಹ ಇರುತ್ತದೆ. ಇಲ್ಲಿ ಹಿಂದಿನ ಮೆನುವಿಗೆ ಹೋಗಿ ನೀವು ಬೇರೆ ಆಯ್ಕೆ ಮಾಡಿಕೊಳ್ಳಬಹುದು.

ಇ ಸ್ವತ್ತು ದಾಖಲೆ ಪಡೆಯುವುದು ಹೇಗೆ?

ಗ್ರಾಪಂ ವ್ಯಾಪ್ತಿಯಲ್ಲಿರುವ ದಾಖಲೆಯ ಇ ಸ್ವತ್ತು ಪಡೆಯಬೇಕಾದರೆ ಈ

https://eswathu.karnataka.gov.in/Issue0fForm9/Frm_PublicSearchForm9.aspx

ಲಿಂಕ್ ಮೇಲೆ ಕ್ಲಿಕ್ ಮಾಬೇಕು. ನಂತರ ಇ ಸ್ವತ್ತು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಸರ್ಚ್ ಯುವರ್ ಪ್ರಾಪರ್ಟ್ (Search your Property) ಆಸ್ತಿಗಳ ಶೋಧನೆ ವಿಭಾಗಕ್ಕೆ ಮೇಲೆ ಕ್ಲಿಕ್ ಮಾಡಬೇಕು.ನ ತರ ನಿಮ್ಮ ಜಿಲ್ಲೆ, ಗ್ರಾಮ ಪಂಚಾಯತ್ ಗ್ರಾಮ ಮತ್ತು ಫಾರ್ಮ್ ಪ್ರಕಾರ ಫಾರ್ಮ 9 ಫಾರ್ಮ್ 11 ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಸ್ತಿ ಸಂಖ್ಯೆ ನಮೂದಿಸಬೇಕು.  ಇದಾದನಂತರ ಡಾಕುಮೆಂಟ್ ನ್ನು ವೀಕ್ಷಿಸಿ (View Document) ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಡೌನ್ಲೋಡ್ ಮಾಡಿಕೊಳ್ಳಬಹುದು.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago