ನಿರುದ್ಯೋಗಿಗಳಿಗೆ ಭರ್ಜರಿ ಅವಕಾಶ! ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ 56,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಯುತ್ತಿದೆ. ಯಾವ ಇಲಾಖೆಯಲ್ಲಿ ಎಷ್ಟು ಖಾಲಿ ಹುದ್ದೆಗಳಿವೆ, ಅರ್ಹತೆ, ವಯೋಮಿತಿ ಮತ್ತು ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೊಸ ವರ್ಷದ (2026) ಆರಂಭದಲ್ಲೇ ರಾಜ್ಯ ಸರ್ಕಾರ ನಿರುದ್ಯೋಗಿ ಯುವಕ-ಯುವತಿಯರಿಗೆ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ. ಹಣಕಾಸು ಇಲಾಖೆಯು ಬರೋಬ್ಬರಿ 24,300 ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ (Green Signal) ನೀಡಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ
Thank you for reading this post, don't forget to subscribe!
ಒಟ್ಟು ಟಾರ್ಗೆಟ್: 56,432 ಹುದ್ದೆಗಳ ಭರ್ತಿಗೆ ಸರ್ಕಾರದ ಪ್ಲಾನ್.
ಮೊದಲ ಹಂತ: 24,300 ಹುದ್ದೆಗಳಿಗೆ ಹಣಕಾಸು ಇಲಾಖೆ ಅನುಮೋದನೆ.
ವಿಶೇಷ: ಕಲ್ಯಾಣ ಕರ್ನಾಟಕ ಭಾಗಕ್ಕೆ 32,132 ಹುದ್ದೆ ಮೀಸಲು!
ಸದ್ಯದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಬರೋಬ್ಬರಿ 2.84 ಲಕ್ಷ ಹುದ್ದೆಗಳು ಖಾಲಿ ಇವೆ! ಅದರಲ್ಲಿ ತುರ್ತಾಗಿ ಭರ್ತಿ ಮಾಡಬೇಕಿರುವ ಇಲಾಖೆಗಳ ಪಟ್ಟಿ ಹೀಗಿದೆ:
ಶಿಕ್ಷಣ ಇಲಾಖೆ (Education): ಅತಿ ಹೆಚ್ಚು ಅಂದರೆ 79,694 ಹುದ್ದೆಗಳು ಖಾಲಿ ಇವೆ. ಶಿಕ್ಷಕರಾಗಲು ಬಯಸುವವರಿಗೆ ಇದು ದೊಡ್ಡ ಅವಕಾಶ.
ಆರೋಗ್ಯ ಇಲಾಖೆ (Health): ವೈದ್ಯರು ಮತ್ತು ಸಿಬ್ಬಂದಿ ಕೊರತೆ ನೀಗಿಸಲು 37,572 ಹುದ್ದೆಗಳು ಖಾಲಿ ಇವೆ.
ನಗರಾಭಿವೃದ್ಧಿ: 28,188 ಹುದ್ದೆಗಳು.
ಗ್ರಾಮೀಣಾಭಿವೃದ್ಧಿ (RDPR): 10,504 ಹುದ್ದೆಗಳು
ಆರೋಗ್ಯ ಇಲಾಖೆಯಲ್ಲಿ 3,000 ವೈದ್ಯರ ಹುದ್ದೆಗಳು ಖಾಲಿ ಇದ್ದು, ಈ ವರ್ಷವೇ 1,500 ವೈದ್ಯರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ 800 ವೈದ್ಯರ ನೇಮಕಾತಿ ಮುಗಿದಿದ್ದು, ಕೌನ್ಸೆಲಿಂಗ್ ಮೂಲಕ ಪೋಸ್ಟಿಂಗ್ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ನೀವು ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದವರಾಗಿದ್ದರೆ ನಿಮಗೆ ಜಾಕ್ ಪಾಟ್ ಹೊಡೆದಂತೆಯೇ ಸರಿ. ಸ್ಥಳೀಯ ವೃಂದದ ಅಡಿಯಲ್ಲಿ ಖಾಲಿ ಇರುವ 32,132 ಹುದ್ದೆಗಳನ್ನು ವಿಶೇಷವಾಗಿ ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.
ಉದ್ಯೋಗ ಆಕಾಂಕ್ಷಿಗಳೇ ಗಮನಿಸಿ: ಸರ್ಕಾರ ಹಣಕಾಸು ಇಲಾಖೆಯ ಅನುಮತಿ ಪಡೆದಿರುವುದರಿಂದ, ಯಾವುದೇ ಕ್ಷಣದಲ್ಲಿ ಅಧಿಸೂಚನೆ (Notification) ಪ್ರಕಟವಾಗಬಹುದು. ನಿಮ್ಮ ಜಾತಿ ಪ್ರಮಾಣ ಪತ್ರ (Caste Certificate) ಮತ್ತು ಶೈಕ್ಷಣಿಕ ದಾಖಲೆಗಳನ್ನು ಈಗಲೇ ಸಿದ್ಧಪಡಿಸಿಕೊಳ್ಳಿ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…