ಮಿನಿ ಟ್ರ್ಯಾಕ್ಟರ್ ಮತ್ತು ಪವರ್ ಟಿಲ್ಲರ್ ಖರೀದಿಗೆ ಶೇ.90 ರಷ್ಟು ಸಬ್ಸಿಡಿ ನೀಡಲಿದೆ ಸರ್ಕಾರ! ಈಗಲೇ ಅರ್ಜಿ ಸಲ್ಲಿಸಿ !

ಇದೀಗ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟವೇಟರ್ ಖರೀದಿಸಲು ಬಯಸುವ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ. ಇದರ ಅಡಿಯಲ್ಲಿ ರೈತರಿಗೆ ಶೇಕಡಾ 90 ರಷ್ಟು ಸಬ್ಸಿಡಿ ಆಧಾರದಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟವೇಟರ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಕಳೆದ ಅಂಕಣದಲ್ಲಿ ನಾವು ರಾಜ್ಯ ಸರ್ಕಾರದಿಂದ ಇತ್ತೀಚೆಗೆ ಕುರಿ ಸಾಕಾಣಿಕೆ ಮಾಡುವವರಿಗೆ ಇರುವ ಸಬ್ಸಿಡಿ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದ್ದೇವು.

Thank you for reading this post, don't forget to subscribe!

ಈ ಅಂಕಣದಲ್ಲಿ ನಾವು ತೋಟಗಾರಿಕಾ ಇಲಾಖೆ ವತಿಯಿಂದ ಸಿಗಲಿರುವ ಮಹತ್ವದ ಸಬ್ಸಿಡಿಗಳಾದ ಪವರ್ ಟಿಲ್ಲರ್,ರೋಟೋವೇಟರ್,ಮಿನಿ ಟ್ರ್ಯಾಕ್ಟರ್ ಸಬ್ಸಿಡಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಆದ್ದರಿಂದ ಈ ಅಂಕಣವನ್ನು ತಪ್ಪದೇ ಕೊನೆಯವರೆಗೂ ಓದಿರಿ.

ಇದನ್ನೂ ಓದಿ: ಬೆಳೆ ವಿಮೆ: ರಾಜ್ಯದ 17.61 ಲಕ್ಷ ರೈತರಿಗೆ 2021.75 ಕೋಟಿ ರೂ. ಬೆಳೆ ವಿಮೆ ಹಣ ಜಮಾ! ನಿಮಗೂ ಬಂತಾ ಚೆಕ್ ಮಾಡಿ!

ಆತ್ಮೀಯ ರೈತರೇ ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದೂ, ಇದು ಇತ್ತೀಚಿನ ಹಲವು ಯೋಜನೆಗಳಲ್ಲಿ ನಿಮ್ಮ ಗಮನಕ್ಕೆ ಬಂದಿರಬಹುದು.

ಇನ್ನು ಕೃಷಿ ವಿಚಾರದಲ್ಲಿ ಅದರಲ್ಲೂ ತೋಟಗಾರಿಕೆ ಬೆಳೆ ಮಾಡುವ ರೈತರಿಗೆ ತಂತ್ರಜ್ಞಾನ ನಿಜಕ್ಕೂ ಒಂದು ವರದಾನವಾಗಿದೆ ಎಂದರೆ ತಪ್ಪೇನಿಲ್ಲ. ಏಕೆಂದರೆ ಬದಲಾಗುತ್ತಿರುವ ಕೃಷಿ ಪದ್ಧತಿಯಲ್ಲಿ ಹಾಗೂ ಯುವಪೀಳಿಗೆಯ ಕೃಷಿ ಬಗ್ಗೆ ಆಸಕ್ತಿ ಇಲ್ಲದೇ ಇರುವ ಕಾರಣ ತೋಟಗಾರಿಕೆ ಬೆಳೆ ಅಷ್ಟೇ ಅಲ್ಲದೆ ಇತರೆ ಗದ್ದೆಗಳಲ್ಲೂ ಕೆಲಸ ಮಾಡಲು ಆಳುಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಈ ಸಮಸ್ಯೆಗೆ ಪರಿಹಾರವಾಗಿ ಕೃಷಿ ವಿಜ್ಞಾನಿಗಳು ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ರೈತರಿಗಾಗಿ ಹಲವು ಯಂತ್ರೋಪಕರಣಗಳನ್ನು ಕಂಡು ಹಿಡಿದಿದ್ದಾರೆ. ಇದರಲ್ಲಿ ಪ್ರಮುಖವಾದ ಯಂತ್ರೋಪಕರಣಗಳು ಎಂದರೆ ಅದು ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೊಟೊವೇಟರ್.

ಇದನ್ನೂ ಓದಿ: PM Kisan: ನಿಮ್ಮ ಪಿಎಂ ಕಿಸಾನ್ ಖಾತೆಗೆ ಹೊಸ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ?

ಹೌದು ರೈತ ಮಿತ್ರರೇ, ಈ ಯಂತ್ರೋಪಕರಣಗಳು ಬಂದ ನಂತರ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ರೈತರ ಆದಾಯ ಹೆಚ್ಚಿದ್ದು, ಅವರ ಇನ್ನಿತರ ಕೆಲಸದ ಆಳುಗಳ ಸಮಸ್ಯೆಗೂ ಪರಿಹಾರ ಸಿಕ್ಕಿದೆ. ಈ ಕಾರಣದಿಂದ ಸರ್ಕಾರವೂ ರೈತರಿಗೆ ಹೆಚ್ಚು ಹೆಚ್ಚು ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟವೇಟರ್ ಬಳಸುವಂತೆ ಪ್ರೇರೇಪಣೆ ನೀಡಲು ಸಬ್ಸಿಡಿ (Mini tractor subsidy) ನೀಡುತ್ತಿದೆ.

ಇದೀಗ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟವೇಟರ್ ಖರೀದಿಸಲು ಬಯಸುವ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ. ಇದರ ಅಡಿಯಲ್ಲಿ ರೈತರಿಗೆ ಶೇಕಡಾ 90 ರಷ್ಟು ಸಬ್ಸಿಡಿ ಆಧಾರದಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟವೇಟರ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಯಾವ ಯಂತ್ರೋಪಕರಣದ ಮೇಲೆ ಎಷ್ಟು ಸಬ್ಸಿಡಿ?

ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ನೀಡಿರುವ ಸೂಚನೆಯಂತೆ ರಾಜ್ಯ ಸರ್ಕಾರವು ಇದೀಗ ರೈತರಿಗೆ ಯಂತ್ರೋಪಕರಣಗಳನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತಿದೆ. ಅಂತೆಯೇ ಇದೀಗ ತೋಟಗಾರಿಕಾ ಇಲಾಖೆ ಯಂತ್ರೋಪಕರಣಗಳ ಮೇಲೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಿದೆ. ಸಬ್ಸಿಡಿಗಳ ಮಾಹಿತಿ ಇಲ್ಲಿದೆ ನೋಡಿ.

1.ಪವರ್ ಟಿಲ್ಲರ್ : ಇದರ ಮೇಲೆ ರಾಜ್ಯ ಸರ್ಕಾರವು ಶೇಕಡಾ 50 ರಷ್ಟು ಸಬ್ಸಿಡಿ ನೀಡುತ್ತಿದ್ದು, ರೈತರು 75,200 ರೂಪಾಯಿವರೆಗೆ ಸಹಾಯಧನವನ್ನು ಪಡೆಯಬಹುದು.

2. ಟ್ರಾಕ್ಟರ್ ಚಾಲಿತ ಎಂಬಿ ಪ್ಲೋ: ಸಾಮಾನ್ಯ ವರ್ಗದವರಿಗೆ 14,100 ರೂ, ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 25,800 ರೂ ಸಬ್ಸಿಡಿ ದೊರೆಯುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಂ.ಬಿ. ಫ್ಲೋ 25,830 ರೂ ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 51,300 ರೂ ಅರ್ಥಿಕ ನೆರವು ಪಡೆಯಬಹುದು.

3. ಮಿನಿ ಟ್ರಾಕ್ಟರ್: ಇದರ ಮೇಲೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 3 ಲಕ್ಷದವರೆಗೆ ಸಬ್ಸಿಡಿ ನೀಡುತ್ತಿದೆ. ಇನ್ನು ಸಾಮಾನ್ಯ ವರ್ಗದ ಜನರಿಗೆ 75,000 ರೂಪಾಯಿ ಸಹಾಯಧನ ನೀಡುತ್ತಿದೆ.

ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ?

  • ಅರ್ಜಿ ನಮೂನೆ
  • ಹೊಲದ ಉತಾರಿ
  • ಆಧಾರ್ ಕಾರ್ಡ್ ಝಾರಕ್ಸ್
  • ಪಾಸ್ ಬುಕ್ ಝೆರಾಕ್ಸ್
  • ಇತ್ತೀಚಿನ ಭಾವಚಿತ್ರ
  • ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾತ್ರ)
  • ರೇಷನ್ ಕಾರ್ಡ್
  • ಭೂ ಹಿಡುವಳಿ ಪತ್ರ

ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಅರ್ಜಿ ಸಲ್ಲಿಸಿ ಸಬ್ಸಿಡಿ ಪಡೆಯಿರಿ.

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M

Recent Posts

ಇಂದಿನಿಂದ ಏಳು ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಇಲ್ಲಿದೆ ಮಾಹಿತಿ

ಕರ್ನಾಟಕದಲ್ಲಿ ಇಂದಿನಿಂದ ಮುಂದಿನ ಏಳು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಹವಾಮಾನ ಇಲಾಖೆಯ ಮುನ್ಸೂಚನೆ,…

57 years ago

ಮಹಿಳೆಯರಿಗೆ ಗುಡ್ ನ್ಯೂಸ್ 33ನೇ ಕಂತಿನ ಗೃಹಲಕ್ಷ್ಮೀ ಹಣ ಬಿಡುಗಡೆ ಇಲ್ಲಿದೆ ಮಾಹಿತಿ

ಕರ್ನಾಟಕದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 33ನೇ ಕಂತಿನ ಹಣದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ. ಹಣ ಬಿಡುಗಡೆ ಆಗಿದೆಯೇ, ನಿಮ್ಮ…

57 years ago

*ಅಕ್ಟೋಬರ್ 15ರಿಂದ ಮಳೆ ಚುರುಕು*: ಬೆಳಗಾವಿ ಸೇರಿ ಉತ್ತರ ಕರ್ನಾಟಕದಲ್ಲೂ ವರ್ಷಧಾರೆ ಸಾಧ್ಯತೆ*

ಅಕ್ಟೋಬರ್ 15ರಿಂದ ಕರ್ನಾಟಕದಲ್ಲಿ ಮಳೆ ಚುರುಕಾಗುವ ಸಾಧ್ಯತೆ ಇದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.…

57 years ago

ನಿಮ್ಮ ಬೆಳೆ ವಿಮೆ ಜಮೆ ಆಗಲು ಏನು ಮಾಡಬೇಕು? ಇಲ್ಲಿವೆ ಕೆಲವು ಸರಳ ಉಪಾಯಗಳು!

ನಿಮ್ಮ ಬೆಳೆ ವಿಮೆ ಹಣ ಇನ್ನೂ ಜಮೆಯಾಗಿಲ್ಲವೇ? ಬೆಳೆ ವಿಮೆ ಪಡೆಯಲು ರೈತರು ಯಾವ ಕ್ರಮಗಳನ್ನು ಅನುಸರಿಸಬೇಕು, ಅರ್ಜಿಯ ಸ್ಥಿತಿಯನ್ನು…

57 years ago

Karnataka Rain: ವಾಯುಭಾರ ಕುಸಿತ, ಮುಂದಿನ 4 ದಿನ ಭಾರೀ ಮಳೆ ಎಚ್ಚರಿಕೆ! ಕೆಲವೆಡೆ ಒಣ ಹವೆ

Karnataka Rain Alert: ರಾಜ್ಯದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ 4 ದಿನಗಳ ಮಳೆಯ ಮುನ್ಸೂಚನೆ ಕುರಿತು ಹವಾಮಾನ ಇಲಾಖೆ…

57 years ago

ಶಾರುಖ್ ಖಾನ್ ಜೈಲು ಸೇರಿದ್ರು.. ನಾನಾ ಪಾಟೇಕರ್ ಬಿಡಿಸಿಕೊಂಡು ಬಂದಿದ್ರು; ಈ ಘಟನೆ ಹಲವರಿಗೆ ಗೊತ್ತಿಲ್ಲ! ಇಲ್ಲಿದೆ  ಸಂಪೂರ್ಣ ಮಾಹಿತಿ!

ಬಾಲಿವುಡ್ ನಟ ಶಾರುಖ್ ಖಾನ್ ಜೈಲು ಸೇರಿದ್ದರು, ಅವರನ್ನು ನಟ ನಾನಾ ಪಾಟೇಕರ್ ಬಿಡಿಸಿಕೊಂಡು ಬಂದಿದ್ದರು ಎಂಬ ಕುತೂಹಲಕಾರಿ ವಿಚಾರ…

57 years ago