ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ನಾಡಿನ ಸಮಸ್ತ ಜನತೆಗೆ ನಮಸ್ಕಾರ, ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೆಂದರೆ ,ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಒಳನಾಡಿನಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದೆ. ಇವತ್ತು ಸಹ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಅಕ್ಟೋಬರ್ 12ರವರೆಗೆ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಮಳೆ ಆರ್ಭಟಿಸಲಿದ್ದು, ಒಟ್ಟು 09 ಜಿಲ್ಲೆಗಳಿಗೆ “ಯೆಲ್ಲೋ ಅಲರ್ಟ್’ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರ ಸೋಮವಾರ ಮುನ್ಸೂಚನೆ ನೀಡಿದೆ.
Thank you for reading this post, don't forget to subscribe!ನಿರಂತರ ಸುರಿದ ಮಳೆಗೆ ಬೀದರ್, ಕಲಬುರಗಿ, ವಿಜಯಪುರ ಸೇರಿದಂತೆ ಹಲವೆಡೆ ಪ್ರವಾಹ ಉಂಟಾಗಿತ್ತು. ಇಂದು ಸೋಮವಾರ ಅಕ್ಟೋಬರ್ 06ರಂದು ಸಹ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಕನಿಷ್ಠ 65 ಮಿಲಿ ಮೀಟರ್‌ನಿಂದ ಗರಿಷ್ಠ 115 ಮಿಲಿ ಮೀಟರ್‌ವರೆಗೆ ಅಂದರೆ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, “ಯೆಲ್ಲೋ ಅಲರ್ಟ್’ ನೀಡಲಾಗಿದೆ.
https://mediachanakya.com/bele-vime-2025/ ಇದನ್ನೂ ಓದಿ;Bele Vime: ರಾಜ್ಯ ಸರ್ಕಾರದಿಂದ ನಾಡಿನ ಎಲ್ಲಾ ರೈತರಿಗೆ ಬಂಪರ್ ಗಿಫ್ಟ್!
ಸದ್ಯ ಕರಾವಳಿ ಭಾಗಕ್ಕೆ ಬ್ರೇಕ್ ನೀಡಿರುವ ಮಳೆ, ಒಳನಾಡು ಭಾಗಗಳಲ್ಲಿ ಬಿರುಸಾಗಿದೆ. ಮಲೆನಾಡಿನ ಭಾಗಗಳಲ್ಲಿ ಇದೇ ಅಕ್ಟೋಬರ್ 09ರಿಂದ ಮತ್ತೆ ಚುರಕಾಗಲಿದ್ದು, ಅಕ್ಟೋಬರ್ 12ರವರೆಗೆ ಧಾರಾಕಾರ ಮಳೆ ಆಗಲಿದೆ. ಹೀಗಾಗಿ ಆ ನಾಲ್ಕು ದಿನಗಳ ಅವಧಿಯಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಚಂಡಮಾರುತ “ಶಕ್ತಿ’ ತೀವ್ರತೆಯ ಪ್ರಭಾವ
ಒಟ್ಟಾರೆ ಮುಂದಿನ ಏಳು-ಎಂಟು ದಿನಗಳಲ್ಲಿ ಸುಮಾರು ಒಂಬತ್ತು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಎಚ್ಚರಿಕೆ ನೀಡಲಾಗಿದೆ. ಮುಂಗಾರು ಅವಧಿ ಜೂನ್ 01ರಿಂದ ಸೆಪ್ಟಂಬರ್ 30ರವರೆಗೆ ಉತ್ತಮ ಮಳೆ ಆಗಲಿದೆ. ಅವಧಿಗೂ ಮೊದಲೇ ಮುಂಗಾರು ಆರಂಭವಾಗಿದ್ದು, ಅವಧಿ ನಂತರವು ಹಿಂತೆಗೆದುಕೊಂಡಿಲ್ಲ. ಇದಕ್ಕೆ ಅರಬ್ಬಿ ಸಮುದ್ರ ಮಟ್ಟದಲ್ಲಿ ಸೃಷ್ಟಿಯಾಗಿರುವ “ಶಕ್ತಿ’ ಚಂಡಮಾರುತ ಪ್ರಭಾವವೇ ಕಾರಣ ಎನ್ನಲಾಗಿದೆ.
ಸದ್ಯ ಈ ಚಂಡಮಾರುತ ಗಾಳಿಯ ವೇಗ ಪ್ರತಿ ಗಂಟೆಗೆ 18 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ. ಇದರ ತೀವ್ರತೆ ಮತ್ತಷ್ಟು ತೀವ್ರಗೊಂಡರೆ, ಕರ್ನಾಟಕ ಕರಾವಳಿ ಸೇರಿ ರಾಜ್ಯವ್ಯಾಪಿ ಅತ್ಯಧಿಕ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode