ಸ್ನೇಹಿತರೆ ಭಾರತದ ಹಲವು ನದಿಗಳು ಕಾರ್ಖಾನೆಯ ತ್ಯಾಜ್ಯದಿಂದ ದೊಡ್ಡ ದೊಡ್ಡ ನಗರಗಳ ತ್ಯಾಜ್ಯ ವಸ್ತು ವಿನಿಂದ ಕೂಡಿ ಮಲಿನವಾಗಿವೆ. ಆದರೆ ಅದೊಂದು ನದಿ ಮಾತ್ರ ಸಂಪೂರ್ಣ ತಿಳಿಯಾಗಿದ್ದು ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಈ ಕಾರಣದಿಂದಲೇ ಅಲ್ಲಿಗೆ ವರ್ಷದುದ್ದಕ್ಕೂ ಸಾವಿರಾರು ಪ್ರವಾಸಿಗರು ಬರುತ್ತಾರೆ.
ಸ್ನೇಹಿತರೆ ಭಾರತದ ಹಲವು ನದಿಗಳು ಕಾರ್ಖಾನೆಯ ರಾಸಾಯನಿಕದಿಂದ, ದೊಡ್ಡ ದೊಡ್ಡ ನಗರಗಳ ತ್ಯಾಜ್ಯ ವಸ್ತು ವಿನಿಂದ ಕೂಡಿ ಮಲಿನವಾಗಿವೆ. ಆದರೆ ಅದೊಂದು ನದಿ ಮಾತ್ರ ಸಂಪೂರ್ಣ ತಿಳಿಯಾಗಿದ್ದು ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಈ ಕಾರಣದಿಂದಲೇ ಅಲ್ಲಿಗೆ ವರ್ಷದುದ್ದಕ್ಕೂ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹಾಗಾದರೆ ಯಾವುದು ಆ ನದಿ ಮತ್ತು ಅದು ಎಲ್ಲಿದೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಸ್ನೇಹಿತರೆ ಆ ನದಿಯ ಹೆಸರು ಡವ್ಕಿ ನದಿ. ವಾಹ್ ಉಮ್ಗೋಟ್ ಎಂದೂ ಕರೆಯಲ್ಪಡುವ ಉಮ್ಗೋಟ್/ಡವ್ಕಿ ನದಿಯು ಭಾರತದ ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಜೈನ್ತಿಯಾ ಬೆಟ್ಟಗಳ ಕೆಳಭಾಗದಲ್ಲಿರುವ ಒಂದು ಪುಟ್ಟ ಪಟ್ಟಣವಾದ ಡಾವ್ಕಿಯ ಮೂಲಕ ಹರಿಯುವ ನದಿಯಾಗಿದೆ . ಈ ಪಟ್ಟಣವು ವ್ಯವಹಾರಿಕ ಮತ್ತು ದೇಶದ ಭದ್ರತೆ ದೃಷ್ಟಿಯಿಂದ ಪ್ರಮುಖ ಸ್ಥಳವಾಗಿದೆ. ಅಲ್ಲದೇ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯಾಪಾರ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ .
ಉಮ್ಗೋಟ್, ಭಾರತದ ಸ್ವಚ್ಛ ನದಿಗಳಲ್ಲಿ ಒಂದಾಗಿದ್ದು, ಇದು ಸ್ಥಳೀಯ ಮೀನುಗಾರರಿಗೆ ಪ್ರಮುಖ ಮೀನುಗಾರಿಕೆ ಸ್ಥಳವಾಗಿದೆ . ಅವರ ಜೀವನೋಪಾಯಕ್ಕೆ ಬೆನ್ನೆಲುಬಾಗಿದೆ. ಈ ನದಿಯು ಭಾರತ-ಬಾಂಗ್ಲಾದೇಶದ ಗಡಿಯಲ್ಲಿದ್ದು, ಪ್ರವಾಹದ ಏರಿಕೆಯಿಂದ ಉಂಟಾಗುವ ನದಿಯ ಬಿಳಿ ಭಾಗವು ಎರಡು ದೇಶಗಳ ನಡುವಿನ ಅನಧಿಕೃತ ( unofficial) ಗಡಿಯನ್ನು ಗುರುತಿಸುತ್ತದೆ. ಈ ನದಿಯ ವಿಶೇಷ ಏನೆಂದರೆ ಇಲ್ಲಿನ ನೀರು ಸಂಪೂರ್ಣ ತಿಳಿಯಾಗಿದ್ದು, ನಿಮ್ಮ ಪ್ರತಿಬಿಂಬ ನೀರಿನ ಮೇಲೆ ಬೀಳದೆ ನೀರಿನ ಕೆಳಗೆ ಕಾಣಿಸುತ್ತದೆ. ಅಷ್ಟು ಸ್ವಚ್ಛ ನದಿ ಇದಾಗಿದೆ. ಈ ಕಾರಣಕ್ಕಾಗಿ ಇಲ್ಲಿಗೆ ವರ್ಷದುದ್ದಕ್ಕೂ ಹಲವಾರು ಪ್ರವಾಸಿಗರು ಬಂದು ಈ ನದಿಯ ಸೌಂದರ್ಯವನ್ನು ಆಸ್ವಾದಿಸುತ್ತಾರೆ .
ಉಮ್ಗೋಟ್ ನದಿಯ ಮೇಲೆ ಒಂದು ತೂಗು ಸೇತುವೆ (ಡವ್ಕಿ ಸೇತುವೆ) ತೂಗುಹಾಕಲಾಗಿದೆ. ಇದನ್ನು 1932 ರಲ್ಲಿ ನಿರ್ಮಿಸಲಾಯಿತು.ಇಲ್ಲಿಂದ ದಾವ್ಕಿ ಅಥವಾ ಉಮ್ಗೊಟ್ ನದಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು. ಏಪ್ರಿಲ್ 2021 ರಲ್ಲಿ, ಮೇಘಾಲಯ ಸರ್ಕಾರವು ವಿದ್ಯುತ್ ಕೊರತೆಯ ದೃಷ್ಟಿಯಿಂದ ನದಿಗೆ ಅಣೆಕಟ್ಟು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಈ ಯೋಜನೆಯು ಉದ್ದೇಶಿತ 210 MW ಉಮ್ಗೋಟ್ ಜಲವಿದ್ಯುತ್ ಯೋಜನೆಯಾಗಿದ್ದು, ಇದು ಸ್ಥಳೀಯ ಗ್ರಾಮಸ್ಥರಿಂದ ಸಾಕಷ್ಟು ಹಿನ್ನಡೆ ಮತ್ತು ವಿರೋಧವನ್ನು ಎದುರಿಸಿದ್ದರಿಂದ ಅದು ಕೊನೆಗೆ ಅದು ರದ್ದಾಗಿತು.
ಈ ಮೇಲೆ ಕಾಣುವ ಚಿತ್ರ ನೋಡಿದರೆ ನಮಗೆ ಕಂಡು ಬರುತ್ತದೆ. ಮೇಘಾಲಯದ ದಾವ್ಕಿ ನದಿ, ಅದರ ಸ್ಪಷ್ಟ, ಪಾರದರ್ಶಕ ನೀರು ಮತ್ತು ದೈವಿಕತೆ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ ಎಂಬುದು. ಸಾಧ್ಯವಾದರೆ ಒಮ್ಮೆ ನೋಡಿ ಬನ್ನಿ..
ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನೀವು ನಮ್ಮ ವೆಬ್ ಸೈಟಿಗೆ ಮೊದಲ ಬಾರಿ ಬಂದಿದ್ದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ಗಳನ್ನು ‘allow’ ಮಾಡಿಕೊಳ್ಳಿ.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…