ಆದರೆ ಇತ್ತೀಚೆಗೆ ರೈತ ಸಂಘಟನೆಯ ಪ್ರತಿನಿಧಿಗಳೊಂದಿಗೆ ಕೇಂದ್ರ ಸರಕಾರ ಮುಂಬರುವ ಬಜೆಟ್ ನಲ್ಲಿ ಕೃಷಿ ಸಂಬಂಧಿತ ಯೋಜನೆಗಳ ಬಜೆಟ್ ಕುರಿತು ಹಾಗೂ ಕೃಷಿ ಸಾಲದ ಮೇಲಿನ ಬಡ್ಡಿ ಕಡಿಮೆ ಮಾಡಲು ಸಭೆಯನ್ನು ಆಯೋಜಿಸಿ ಪ್ರಮುಖ ರೈತ ಮುಖಂಡರನ್ನು ಆಹ್ವಾನಿಸಿತ್ತು.
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಗೆ ಇದೀಗ 5 ವರ್ಷ ತುಂಬುತ್ತಾ ಬಂತು.
Thank you for reading this post, don't forget to subscribe!ಈ ಸಂದರ್ಭದಲ್ಲಿ ದೇಶದ ರೈತರಿಗೆ ಕೇಂದ್ರ ಸರಕಾರದಿಂದ ಸಿಹಿಸುದ್ದಿಯ ಸುಳಿವು ಸಿಕ್ಕಿದೆ. ಆ ಸಿಹಿಸುದ್ದಿ ಯಾವುದು ? ಇದರಿಂದ ರೈತರಿಗೆ ಏನು ಲಾಭ ಆಗಲಿದೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿ.
ಪ್ರಧಾನಿ ಮೋದಿಯವರ ಇಂತಹ ಮಹತ್ವಾಕಾಂಕ್ಷಿ ಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದ ರೈತ ವರ್ಗದ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರಕಾರವು ವರ್ಷಕ್ಕೆ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ 6,000 ರೂಪಾಯಿ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿತ್ತು.
ಈ ಹಣವನ್ನು ಕಳೆದ ಬಜೆಟ್ ನಲ್ಲಿ ವರ್ಷಕ್ಕೆ 3 ಕಂತುಗಳ ಬದಲಾಗಿ 4 ಕಂತುಗಳ ಮೂಲಕ 8,000 ರೂಪಾಯಿ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲು ಕೇಂದ್ರ ಸರಕಾರ ನಿರ್ಧರಿಸಿತ್ತು.
ಆದರೆ ಇತ್ತೀಚೆಗೆ ರೈತ ಸಂಘಟನೆಯ ಪ್ರತಿನಿಧಿಗಳೊಂದಿಗೆ ಕೇಂದ್ರ ಸರಕಾರ ಮುಂಬರುವ ಬಜೆಟ್ ನಲ್ಲಿ ಕೃಷಿ ಸಂಬಂಧಿತ ಯೋಜನೆಗಳ ಬಜೆಟ್ ಕುರಿತು ಹಾಗೂ ಕೃಷಿ ಸಾಲದ ಮೇಲಿನ ಬಡ್ಡಿ ಕಡಿಮೆ ಮಾಡಲು ಸಭೆಯನ್ನು ಆಯೋಜಿಸಿ ಪ್ರಮುಖ ರೈತ ಮುಖಂಡರನ್ನು ಆಹ್ವಾನಿಸಿತ್ತು.
ಈ ಸಭೆಯಲ್ಲಿ ರೈತ ಮುಖಂಡರು ದೇಶದ ರೈತರಿಗೆ ನೀಡಲಾಗುತ್ತಿರುವ ಪಿಎಂ ಕಿಸಾನ್ ಸಮ್ಮಾನ ಯೋಜನೆಯ 6,000 ರೂಪಾಯಿ ಹಣವನ್ನು ಡಬಲ್ ಮಾಡಲು ಮನವಿ ಮಾಡಿಕೊಂಡರು.
ಅಂದರೆ ಇಲ್ಲಿಯವರೆಗೂ ಕಿಸಾನ್ ಸಮ್ಮಾನ ನಿಧಿ ಯೋಜನೆಯಿಂದ ವರ್ಷಕ್ಕೆ 6,000 ರೂಪಾಯಿ ಹಣ ಜಮಾ ಆಗುತಿತ್ತು. ಆದರೆ ಈ ಸಹಾಯಧನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಾಕಾಗುತ್ತಿಲ್ಲ. ಹಾಗಾಗಿ ಈ ಹಣವನ್ನು ಮುಂದಿನ ಬಜೆಟ್ ನಲ್ಲಿ 6,000 ರೂ. ಬದಲಾಗಿ ವರ್ಷಕ್ಕೆ 12,000 ರೂ. ಜಮಾ ಮಾಡಲು ಮನವಿ ಮಾಡಿಕೊಂಡರು.
ಅಷ್ಟೇ ಅಲ್ಲದೇ ಕೃಷಿ ಭೂಮಿ ಹೊಂದಿರುವ ರೈತರಿಗೆ ನೀಡಲಾಗುವ ದೀರ್ಘ ಕಾಲ ಸಾಲದ ಬಡ್ಡಿಯನ್ನು ಶೇಕಡಾ 1 ಕ್ಕೆ ಇಳಿಸುವಂತೆಯೂ ರೈತ ಮುಖಂಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ರೈತ ಮುಖಂಡರ ಈ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರ್ಕಾರ ಈ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೈತ ಪ್ರತಿನಿಧಿಗಳಿಗೆ ತಿಳಿಸಿದರು.
ಒಂದು ವೇಳೆ ಕೇಂದ್ರ ಸರ್ಕಾರ ಮುಂಬರುವ ಬಜೆಟ್ ನಲ್ಲಿ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದೇ ಆದಲ್ಲಿ, ಇನ್ನು ಮುಂದೆ ರೈತರಿಗೆ ವರ್ಷಕ್ಕೆ ಪಿಎಂ ಕಿಸಾನ್ ಯೋಜನೆಯಿಂದ 12,000 ರೂಪಾಯಿ ಹಣ ಜಮಾ ಆಗಲಿದೆ ದೀರ್ಘ ಕಾಲದ ಸಾಲಗಳ ಮೇಲಿನ ಬಡ್ಡಿ ದರ ಶೇಕಡಾ 1 ಆಗಲಿದೆ.
ಅಂತೆಯೇ ಇಲ್ಲಿಯವರೆಗೆ ಪಿಎಂ ಕಿಸಾನ್ ಯೋಜನೆಯಿಂದ 18 ಕಂತುಗಳಲ್ಲಿ ಒಟ್ಟು 36,000 ರೂಪಾಯಿ ಹಣ ಪ್ರತಿಯೊಬ್ಬ ಅರ್ಹ ರೈತರ ಖಾತೆಗೆ ನೇರವಾಗಿ ಜಮಾ ಆಗಿವೆ.
ಇದೀಗ ಕೇಂದ್ರ ಸರಕಾರ ಫೆಬ್ರುವರಿ 2025 ರ ಮೊದಲ ವಾರದಲ್ಲಿ ಬಿಡುಗಡೆ ಮಾಡಲಿರುವ 19 ನೇ ಕಂತಿನ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವುದು ಹೇಗೆ ಎಂಬುದನ್ನು ಕೆಳಗೆ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಮುಖವಾದ ಯೋಜನೆ ಎಂದರೆ ಅದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ.
ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ ಜಮಾ ಆಗಿದೆ. ಇದೀಗ ಕೇಂದ್ರ ಸರಕಾರ 19 ನೇ ಕಂತಿಗೆ ಅರ್ಹ ರೈತರ ಪಟ್ಟಿ ಬಿಡುಗಡೆ ಮಾಡಿದೆ.
ಹಾಗಾದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಎಂದು ಚೆಕ್ ಮಾಡುವುದು ಹೇಗೆ ? ಒಂದು ವೇಳೆ ನಿಮ್ಮ ಹೆಸರು ಇಲ್ಲದೆ ಇದ್ದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಪಡೆಯಲು ಈ ಅಂಕಣವನ್ನು ತಪ್ಪದೇ ಕೊನೆಯವರೆಗೂ ಓದಿರಿ.
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ಕೇಂದ್ರ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು Beneficiary List ಮೇಲೆ ಕ್ಲಿಕ್ ಮಾಡಿ.
ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮದ ಹೆಸರನ್ನು ನಮೂದಿಸಿ, Get Report ಮೇಲೆ ಕ್ಲಿಕ್ ಮಾಡಿ.
ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನಿಮ್ಮ ಗ್ರಾಮದಲ್ಲಿ ಪಿಎಂ ಕಿಸಾನ್ ಯೋಜನೆಯ 19 ನೇ ಕಂತಿಗೆ ಅರ್ಹರಾಗಿರುವ ರೈತರ ಪಟ್ಟಿ ಕಾಣಿಸುತ್ತದೆ. ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.
ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನೀವು ನಿಮ್ಮ ಹತ್ತಿರದ ಗ್ರಾಮ್ ಒನ್ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ.
ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇರಲು ಪ್ರಮುಖ ಕಾರಣವೆಂದರೆ ನಿಮ್ಮ ಪಿಎಂ ಕಿಸಾನ್ ಖಾತೆ ಇಕೆವೈಸಿ ಆಗದೇ ಇರುವುದು.
ಮೊಬೈಲ್ ನಲ್ಲೇ ಸುಲಭವಾಗಿ ನಿಮ್ಮ ಪಿಎಂ ಕಿಸಾನ್ ಇಕೆವೈಸಿ ಮಾಡುವುದು ಹೇಗೆ ಎಂಬುದನ್ನು ಕೆಳಗೆ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ರೈತರೇ, ರಾಜ್ಯ ಸರ್ಕಾರ ಇಲ್ಲಿಯವರೆಗೆ ಪಿಎಂ ಕಿಸಾನ್ ಫ್ರೂಟ್ಸ್ ಐಡಿಗೆ ಇಕೆವೈಸಿ ಆಗದೇ ಇರುವ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇಂತಹ ರೈತರಿಗೆ ಬೆಳೆ ಪರಿಹಾರ ಹಣ, ಬೆಳೆ ವಿಮೆ ಹಣ, ಬರಗಾಲ ಪರಿಹಾರ ಹಣ ಅಥವಾ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ ಹಣ ಜಮಾ ಆಗುವುದಿಲ್ಲ.
ಹಾಗಾದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಎಂದು ಚೆಕ್ ಮಾಡುವುದು ಹೇಗೆ ? ಒಂದು ವೇಳೆ ನಿಮ್ಮ ಇಕೆವೈಸಿ ಆಗದೇ ಇದ್ದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಪಡೆಯಲು ಈ ಅಂಕಣವನ್ನು ತಪ್ಪದೇ ಕೊನೆಯವರೆಗೂ ಓದಿರಿ.
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2) ನಂತರ ನಿಮಗೆ ಒಂದು ಹೊಸ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಆಧಾರ ಕಾರ್ಡ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ.
ಹಂತ -3) ಒಂದು ವೇಳೆ ನಿಮ್ಮ ಇಕೆವೈಸಿ ಆಗಿದ್ದರೆ, Your ekyc completed alredy ಅಂತ ತೋರಿಸುತ್ತದೆ. ಒಂದು ವೇಳೆ ಆಗಿರದಿದ್ದರೆ, ನಿಮ್ಮ ಮೊಬೈಲ್ ನಂಬರ್ ಹಾಕಿ ಇಕೆವೈಸಿ ಮಾಡಿ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಜಮೀನಿನ ಆಕಾರಬಂದ್…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ದಸರಾ ಹಬ್ಬದ ನಿಮಿತ್ತವಾಗಿ ಇತ್ತೀಚೆಗಷ್ಟೇ…
ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ ನಿಮ್ಮ ಖಾತೆಗೆ ಎಷ್ಟು…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯವಾಗಿದೆ. ಈ ಹೊಸ ನಿಯಮದ ಉದ್ದೇಶ, ಹೇಗೆ ಕೆಲಸ ಮಾಡುತ್ತದೆ, ರೈತರಿಗೆ ಲಾಭ-ನಷ್ಟಗಳು ಏನು…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಿಂದ…