ಇನ್ನೂ ಎರಡು ದಿನ ಭಾರಿ ಮಳೆಯ ಮುನ್ಸೂಚನೆ! ಎಲ್ಲೆಲ್ಲಿ ರೆಡ್ ಅಲರ್ಟ್ ಇದೆ ಚೆಕ್ ಮಾಡಿ

ಹಾಗಾದರೆ ಚಂಡಮಾರುತದಿಂದ ಉಂಟಾಗಿರುವ ವಾಯುಭಾರ ಕುಸಿತದಿಂದ ಉಂಟಾಗುತ್ತಿರುವ ಈ ಮಳೆಯಿಂದಾಗಿ ಎಲ್ಲೆಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ.ತಪ್ಪದೇ ಕೊನೆಯವರೆಗೂ ಓದಿರಿ.

Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷದ ಮುಂಗಾರು ಮಳೆಯಿಂದ ಬೇಸತ್ತಿದ್ದ ರೈತಾಪಿ ಜನರಿಗೆ  ಇನ್ನೇನು ಮಳೆಗಾಲ ಮುಗಿದೆ ಬಿಟ್ಟಿತು ಎನ್ನುವಷ್ಟರಲ್ಲಿ ಬಂಗಾಳ ಕೊಲ್ಲಿಯಲ್ಲಿ ಇದೀಗ ಚಂಡ ಮಾರುತ ಎದ್ದಿದೆ.

Thank you for reading this post, don't forget to subscribe!

ಇದರಿಂದಾಗಿ ವಾಯುಭಾರ ಕುಸಿತವಾಗಿರುವ ಕಾರಣ ಕರ್ನಾಟಕದ ಕರಾವಳಿ ಸೇರಿದಂತೆ ಉತ್ತರ ಒಳನಾಡಿನಲ್ಲಿ ಅಕ್ಟೋಬರ್ 19 ರವರೆಗೆ ಮಿಂಚು ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ: ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇದರಲ್ಲಿ ನಿಮ್ಮ ಮನೆಯವರ ಹೆಸರು ಇದೆಯಾ ಚೆಕ್ ಮಾಡಿ

ಹಾಗಾದರೆ ಚಂಡಮಾರುತದಿಂದ ಉಂಟಾಗಿರುವ ವಾಯುಭಾರ ಕುಸಿತದಿಂದ ಉಂಟಾಗುತ್ತಿರುವ ಈ ಮಳೆಯಿಂದಾಗಿ ಎಲ್ಲೆಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ.ತಪ್ಪದೇ ಕೊನೆಯವರೆಗೂ ಓದಿರಿ.

ಯಾವ ಜಿಲ್ಲೆಯಲ್ಲಿ ಯಾವ ಅಲರ್ಟ್ ಘೋಷಿಸಲಾಗಿದೆ ?

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದಿಂದ ಕರ್ನಾಟಕ ರಾಜ್ಯದ ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಈ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಇನ್ನು ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: ಕೃಷಿ ಪಂಪ್ ಸೆಟ್ ಹೊಂದಿರುವ ರೈತರಿಗೆ ಮಹತ್ವದ ಮಾಹಿತಿ! ತಪ್ಪದೇ ಓದಿ !

ಅದೇ ರೀತಿಯಾಗಿ ಉತ್ತರ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ ಜಿಲ್ಲೆಯಲ್ಲಿ ಜೋರು ಮಳೆಯಾಗಲಿದ್ದು, ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರು ಜಿಲ್ಲೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯೂ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಬರುವುದಕ್ಕೂ ಮುಂಚೆಯೇ ಮಾಹಿತಿ ನೀಡುವ ಆ್ಯಪ್ ಇಲ್ಲಿದೆ ನೋಡಿ! ನಿಮ್ಮ ಗ್ರಾಮದಲ್ಲಿ 5 ದಿನಕ್ಕೂ ಮೊದಲೇ ಮಳೆ ಮುನ್ಸೂಚನೆ ನೀಡುವ ಆ್ಯಪ್!

ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿದೆ. ಇಂತಹ ಕೃಷಿಯ ಮೂಲ ಅನಿವಾರ್ಯತೆ ಎಂದರೆ ಅದು ಮಳೆ.

ಭಾರತದ ಕೃಷಿಯಂತೂ ಮುಂಗಾರು ಮಳೆಯನ್ನೇ ನೆಚ್ಚಿದ್ದು, ಇಡಿಯ ದೇಶದ ಕೃಷಿ ಚಟುವಟಿಕೆಗಳಲ್ಲ ಮಾನ್ಸೂನ್ ಮೇಲೆ ನಿರ್ಧರಿತವಾಗುತ್ತವೆ. ಇದು ಎಷ್ಟರ ಮಟ್ಟಿಗೆ ಎಂದರೆ ಬೆಳೆಯ ಇಳುವರಿ ಕೂಡ ಮಾನ್ಸೂನ್ ಮೇಲೆ ಅವಲಂಬಿತವಾಗಿದೆ.

ಹೀಗಿರುವಾಗ ರೈತರಿಗೆ ಮಳೆಯ ಕುರಿತು ಮಾಹಿತಿ ಇರುವುದು ಅವಶ್ಯಕವಾಗುತ್ತದೆ. ಮಳೆ ನೋಡಿಕೊಂಡು ತಮ್ಮ ಬಿತ್ತನೆ ಕಾರ್ಯ ಅಥವಾ ಇನ್ನಿತರ ಕೃಷಿ ಚಟುವಟಿಕೆಗಳನ್ನು ನಡೆಸಲು ಅವರಿಗೆ ಸಹಾಯವಾಗುತ್ತದೆ.

ಈ ಕಾರಣದಿಂದಲೆ ಕೇಂದ್ರ ಸರ್ಕಾರವು ‘ಮೇಘದೂತ ‘ ಎಂಬ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು ಅದರ ಮೂಲಕ ನೀವು ನಿಮ್ಮ ಗ್ರಾಮದಲ್ಲಿ ಮಳೆಯಾಗುವ 5 ದಿನಗಳ ಮುಂಚೆಯೇ ಮಳೆಯ ಮಾಹಿತಿಯನ್ನು ಪಡೆಯಬಹುದು.

ಈ ಆ್ಯಪ್ ಅನ್ನು ಬಳಸುವುದು ಹೇಗೆ ? ಇದರಿಂದ ಮಳೆಯ ಮಾಹಿತಿಯನ್ನು ಪಡೆಯುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿದುಕೊಳ್ಳೋಣ. ತಪ್ಪದೇ ಈ ಅಂಕಣವನ್ನು ಕೊನೆಯವರೆಗೂ ಓದಿರಿ.

ಮೊಬೈಲ್ ನಲ್ಲೇ ಮಳೆಯ ಮುನ್ಸೂಚನೆ ಚೆಕ್ ಮಾಡುವುದು ಹೇಗೆ?

ಹಂತ -1) ಮೊದಲು ನೀವು ಕೆಳಗೆ ನೀಡಲಾಗಿರುವ ಮೇಘದೂತ ಆ್ಯಪ್ ನ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ, ಪ್ಲೇಸ್ಟೊರಿನಿಂದ ಇನ್ಸ್ಟಾಲ್ ಮಾಡಿಕೊಳ್ಳಿ.

https://play.google.com/store/apps/details?id=com.aas.meghdoot&hl=en_IN&gl=US

ಹಂತ -2) ನಂತರ ಅಲ್ಲಿ ನೀವು ನಿಮ್ಮ ಭಾಷೆಯನ್ನು ಕನ್ನಡ ಎಂದು ಆಯ್ಕೆ ಮಾಡಿ.

ಹಂತ -3) ನಂತರ ಅಲ್ಲಿ ನೀವು ಮುಂದೆ ಎಂದು ಕಾಣಿಸುವ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ಅಲ್ಲಿ ನೀವು ಸೈನ್ ಅಫ್ ಮೇಲೆ ಕ್ಲಿಕ್ ಮಾಡಿ.

ಹಂತ -5) ನಂತರ ಅಲ್ಲಿ ನೀವು ನಿಮ್ಮ ಎಲ್ಲಾ ವಿವರಗಳನ್ನು ಸಲ್ಲಿಸಿ.

ಹಂತ -6) ನಂತರ ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಮತ್ತು ಭಾಷೆಯನ್ನು ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.

ಹಂತ -7) ನಂತರ ಅಲ್ಲಿ ನೀವು While Using the App ಮೇಲೆ ಕ್ಲಿಕ್ ಮಾಡಿ.

ಹಂತ -8) ನಂತರ ಅಲ್ಲಿ ನಿಮಗೆ ಕೆಳಗೆ ಮುನ್ಸೂಚನೆ ಎಂದು ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಹಂತ -9) ನಂತರ ಅಲ್ಲಿ ನಿಮಗೆ ನಿಮ್ಮ ಜಿಲ್ಲೆಯ ಸಂಪೂರ್ಣ ಹವಾಮಾನ ಮುನ್ಸೂಚನೆ ಸಿಗುತ್ತದೆ.

ಈ ರೀತಿಯಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಗ್ರಾಮದ ಸಂಪೂರ್ಣ ಹವಾಮಾನ ವರದಿಯನ್ನು ತಿಳಿದುಕೊಳ್ಳಬಹುದು.

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago