ರೈತರಿಗೆ ಪಹಣಿಯ ನಂಬರ್ ಗೊತ್ತಿರುತ್ತದೆ. ಆದರೆ ಖಾತಾ ಸಂಖ್ಯೆ ಬಹುತೇಕ ರೈತರಿಗೆ ಗೊತ್ತಿರುವುದಿಲ್ಲ. ಖಾತಾ ಅಥವಾ ಪಟ್ಟಾ ಎಂದು ಕರೆಯಲ್ಪಡುವ ಖಾತೆಯ ದಾಖಲಾತಿ ಬಹಳಷ್ಟು ರೈತರಲ್ಲಿ ಇರುವುದಿಲ್ಲ. ಹಾಗಾಗಿ ರೈತರು ಈಗ ಖಾತೆಯ ಪ್ರತಿ ಪಡೆಯಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು. ಖಾತೆಯ ನಂಬರ್ ಸಹ ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ
Land Khata Download ಪಹಣಿ, ಆಧಾರ್ ಕಾರ್ಡ್, ವೋಟರ್ ಕಾರ್ಡ್ ನಂತೆ ಈಗ ರೈತರು ಜಮೀನಿನ ಖಾತಾ (land Khata) ಸಹ ಮೊಬೈಲ್ ನಲ್ಲೆ ಡೌನ್ಲೋಡ್ ಮಾಡಿಕೊಳ್ಳಬಹುದು.
Thank you for reading this post, don't forget to subscribe!ರೈತರಿಗೆ ಪಹಣಿಯ ನಂಬರ್ ಗೊತ್ತಿರುತ್ತದೆ. ಆದರೆ ಖಾತಾ ಸಂಖ್ಯೆ ಬಹುತೇಕ ರೈತರಿಗೆ ಗೊತ್ತಿರುವುದಿಲ್ಲ. ಖಾತಾ ಅಥವಾ ಪಟ್ಟಾ ಎಂದು ಕರೆಯಲ್ಪಡುವ ಖಾತೆಯ ದಾಖಲಾತಿ ಬಹಳಷ್ಟು ರೈತರಲ್ಲಿ ಇರುವುದಿಲ್ಲ. ಹಾಗಾಗಿ ರೈತರು ಈಗ ಖಾತೆಯ ಪ್ರತಿ ಪಡೆಯಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು. ಖಾತೆಯ ನಂಬರ್ ಸಹ ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ.
ಪಹಣಿಯಂತೆ ಖಾತೆಯಲ್ಲಿಯೂ ಸಹ ಸರ್ವೆ ನಂಬರ್, ರೈತರ ಹೆಸರು, ಜಮೀನಿನ ವಿಸ್ತೀರ್ಣ, ಆಕಾರ, ಕರ ಅಂದರೆ ಟ್ಯಾಕ್ಸ್ ಎಷ್ಟು ಕಟ್ಟಬೇಕೆಂಬ ಸಂಪೂರ್ಣ ಮಾಹಿತಿ ಇರುತ್ತದೆ. ನಿಮ್ಮ ಜಮೀನಿನ ಖಾತೆ ಅಥವಾ ಪಟ್ಟಾ ಪುಸ್ತಕದ ಪ್ರತಿ ನೋಡಲು ಈ
ಲಿಂಕ್ ಮೇಲೆ ಲಾಂಗ್ ಪ್ರೆಸ್ ಮಾಡಿ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆದ ಒಂದು ಪೇಜ್ ಓಪನ್ ಆಗುತ್ತದೆ. ಮೇಲ್ಗಡೆ Khata Extract ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಖಾತಾ ನಂಬರ್ ಗೊತ್ತಿದ್ದರೆ search by kahta number ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಖಾತಾ ನಂಬರ್ ಬರೆದು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಖಾತಾ ಪ್ರತಿ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಹೆಸರು, ಸರ್ವೆ ನಂಬರ್, ಹಿಸ್ಸಾನ ನಂಬರ್, ಜಮೀನಿನ ವಿಸ್ತೀರ್ಣ, ಆಕಾರ, ಟ್ಯಾಕ್ಸ್ ಮಾಹಿತಿ ಕಾಣುತ್ತದೆ.
ಒಂದು ವೇಳೆ ನಿಮಗೆ ಖಾತಾ ಸಂಖ್ಯೆ ಗೊತ್ತಿಲ್ಲದಿದ್ದರೆ search by survey number ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ select sumoc ನಲ್ಲಿ * ಸೆಲೆಕ್ಟ್ ಮಾಡಿದ ನಂತರ ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಿಕೊಳ್ಳಬೇಕು.
ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದಾಗ ರೈತರ ಜಮೀನಿನ ಸರ್ವೆ ನಂಬರ್, ರೈತರ ಹೆಸರು, ವಿಸ್ತೀರ್ಣ ಹಾಗೂ ಖಾತೆ ನಂಬರ್ ಕಾಣಿಸುತ್ತದೆ. ಈ ಖಾತೆ ನಂಬರ್ ನೀವು ನೆನಪಿಟ್ಟುಕೊಳ್ಳಬೇಕು. ಅಥವಾ ಬರೆದಿಟ್ಟುಕೊಂಡ ನಂತರ ಈ
ಲಿಂಕ್ ಮೇಲೆ ಲಾಂಗ್ಕ್ ಪ್ರೆಸ್ ಅಂದರೆ ಒತ್ತಿ ಇಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಆಗುವ ಪೇಜ್ ನಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಖಾತಾ ನಂಬರ್ ನಮೂದಿಸಿದ ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಜಮೀನಿನ ಖಾತಾ ಪ್ರತಿ ಓಪನ್ ಆಗುತ್ತದೆ. ಅಲ್ಲಿ ಪ್ರಿವಿವ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಸರ್ವೆ ನಂಬರ್, ರೈತರ ಹೆಸರು, ಒಟ್ಟು ಜಮೀನಿನ ವಿಸ್ತೀರ್ಣ, ಆಕಾರ, ಒಟ್ಟು ಕರ ಎಂಬ ಮಾಹಿತಿ ಕಾಣುತ್ತದೆ. 15 ರೂಪಾಯಿ ಪಾವತಿಸಿ ಪ್ರಿಂಟ್ ತೆಗೆದಕೊಳ್ಳಬಹುದು.
“ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode=ac_t
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ತೇವಾಂಶ ಭರಿತ ಮೋಡದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಾರ್ಚ್ 22…
25 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ಮಲೆನಾಡು, ಕರಾವಳಿ, ಒಳನಾಡು, ಉತ್ತರ…
ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಸಮಯ,…
ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಹಿಂದಿನ ಅಂಕಣಗಳಲ್ಲಿ ನಾವು ಮೋಬೈಲ್ ನಲ್ಲಿಯೇ…
ಮಾರ್ಚ್ 15ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾವ ಯಾವ…
ಮೊಬೈಲ್‌ನಲ್ಲೇ ಜಮೀನಿನ ಖಾತಾ ಬದಲಾವಣೆಗೆ ಈಗ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಮತ್ತು ಪ್ರಕ್ರಿಯೆಯ…