WhatsApp Group                             Join Now            
   
                    Telegram Group                             Join Now            
Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಪ್ರಸಕ್ತ 2025ನೇ ಸಾಲಿನಲ್ಲಿ ಹಿಂದಿನ ವರ್ಷದ ವಾದಿಕೆಗಿಂತಲೂ ಈ ವರ್ಷ ಅತಿ ಹೆಚ್ಚು ಮಳೆ ಆಗುತ್ತಿದೆ ಹಾಗೂ ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಮಳೆಯ  ಪ್ರಮಾಣ ಜಾಸ್ತಿ ಆಗುತ್ತಿದೆ

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಮತ್ತು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ದಕ್ಷಿಣ ಕನ್ನಡ ಮಳೆಯ ಪ್ರಮಾಣ ಜಾಸ್ತಿಯಾಗುತ್ತಿದ್ದು ಇದೇ ಆಗಸ್ಟ್ ಎರಡನೇ ತಾರೀಕಂದು ಬಾರಿ ಮಳೆಯ ಮುನ್ಸೂಚನೆ ಮುಗಿಲಿದ್ದಿದೆ. ಗಾಳಿಯ ವೇಗ 35 ರಿಂದ 40 km ಇರುತ್ತದೆ ಎಂದು ಹವಮಾನ ಇಲಾಖೆ ತಿಳಿಸಿದೆ

ನಂತರ ಮಲೆನಾಡಿನ ಜಿಲ್ಲೆಗಳಾಗಿರುವ ಕೊಡಗು ಚಿಕ್ಕಮಂಗಳೂರು ಹಾಸನ ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕುಗ್ಗಿದ್ದು ಮುಂದೆ ಬರುವ ದಿನಗಳಲ್ಲಿ ಮಳೆಯ ಪ್ರಮಾಣ ಜಾಸ್ತಿ ಆಗುತ್ತದೆ ಎಂದು ಹವಮಾನ  ಇಲಾಖೆ ತಿಳಿಸಿದೆ

ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಹಾಸನ ಕೊಡಗು ಮೈಸೂರು ಬೆಳಗಾವಿ ಧಾರವಾಡ ಹಾವೇರಿ ಈ ಎಲ್ಲಾ ಜಿಲ್ಲೆಗಳಿಗೆ ಅಗಸ್ಟ್ ನಾಲ್ಕರವರೆಗೆ ಸಾಧಾರಣ ಮತ್ತು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಉತ್ತರ ಕನ್ನಡದಲ್ಲಿ 2 cm ಮಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2cm ಮಳೆ ಶಿವಮೊಗ್ಗದಲ್ಲಿ ಮೂರು ಬೆಳ್ತಂಗಡಿ ಚಿಕ್ಕಮಗಳೂರು ನಲ್ಲಿ ತಲಾ ಐದು ಸೆಂಟಿಮೀಟರ್ ಮಳೆಯ ದಾಖಲು ಮಾಡಲಾಗಿದೆ.

ಹಾಗೆಯೇ ಉತ್ತರ ಒಳನಾಡಿನ ಜಿಲ್ಲೆಗಳಾಗಿರುವ ಧಾರವಾಡ ಹಾವೇರಿ, ಬೆಳಗಾವಿ ಗದಗ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಆಗುವ ಸಂಭವವನ್ನು ತಿಳಿಸಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಮುನ್ಸೂಚನೆಯನ್ನು ನೀಡಲಾಗಿದೆ.

ಮಳೆ ಬರುವುದಕ್ಕೂ ಮುಂಚೆಯೇ ಮಾಹಿತಿ ನೀಡುವ ಆ್ಯಪ್ ಇಲ್ಲಿದೆ ನೋಡಿ! ನಿಮ್ಮ ಗ್ರಾಮದಲ್ಲಿ 5 ದಿನಕ್ಕೂ ಮೊದಲೇ ಮಳೆ ಮುನ್ಸೂಚನೆ ನೀಡುವ ಆ್ಯಪ್!

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿದೆ. ಇಂತಹ ಕೃಷಿಯ ಮೂಲ ಅನಿವಾರ್ಯತೆ ಎಂದರೆ ಅದು ಮಳೆ.

      
                    WhatsApp Group                             Join Now            
   
                    Telegram Group                             Join Now            

ಭಾರತದ ಕೃಷಿಯಂತೂ ಮುಂಗಾರು ಮಳೆಯನ್ನೇ ನೆಚ್ಚಿದ್ದು, ಇಡಿಯ ದೇಶದ ಕೃಷಿ ಚಟುವಟಿಕೆಗಳಲ್ಲ ಮಾನ್ಸೂನ್ ಮೇಲೆ ನಿರ್ಧರಿತವಾಗುತ್ತವೆ. ಇದು ಎಷ್ಟರ ಮಟ್ಟಿಗೆ ಎಂದರೆ ಬೆಳೆಯ ಇಳುವರಿ ಕೂಡ ಮಾನ್ಸೂನ್ ಮೇಲೆ ಅವಲಂಬಿತವಾಗಿದೆ.

ಹೀಗಿರುವಾಗ ರೈತರಿಗೆ ಮಳೆಯ ಕುರಿತು ಮಾಹಿತಿ ಇರುವುದು ಅವಶ್ಯಕವಾಗುತ್ತದೆ. ಮಳೆ ನೋಡಿಕೊಂಡು ತಮ್ಮ ಬಿತ್ತನೆ ಕಾರ್ಯ ಅಥವಾ ಇನ್ನಿತರ ಕೃಷಿ ಚಟುವಟಿಕೆಗಳನ್ನು ನಡೆಸಲು ಅವರಿಗೆ ಸಹಾಯವಾಗುತ್ತದೆ.

ಈ ಕಾರಣದಿಂದಲೆ ಕೇಂದ್ರ ಸರ್ಕಾರವು ‘ಮೇಘದೂತ ‘ ಎಂಬ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು ಅದರ ಮೂಲಕ ನೀವು ನಿಮ್ಮ ಗ್ರಾಮದಲ್ಲಿ ಮಳೆಯಾಗುವ 5 ದಿನಗಳ ಮುಂಚೆಯೇ ಮಳೆಯ ಮಾಹಿತಿಯನ್ನು ಪಡೆಯಬಹುದು.

ಈ ಆ್ಯಪ್ ಅನ್ನು ಬಳಸುವುದು ಹೇಗೆ ? ಇದರಿಂದ ಮಳೆಯ ಮಾಹಿತಿಯನ್ನು ಪಡೆಯುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿದುಕೊಳ್ಳೋಣ. ತಪ್ಪದೇ ಈ ಅಂಕಣವನ್ನು ಕೊನೆಯವರೆಗೂ ಓದಿರಿ.

ಮೊಬೈಲ್ ನಲ್ಲೇ ಮಳೆ ಮುನ್ಸೂಚನೆ ಚೆಕ್ ಮಾಡುವುದು ಹೇಗೆ?

ಹಂತ -1) ಮೊದಲು ನೀವು ಕೆಳಗೆ ನೀಡಲಾಗಿರುವ ಮೇಘದೂತ ಆ್ಯಪ್ ನ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ, ಪ್ಲೇಸ್ಟೊರಿನಿಂದ ಇನ್ಸ್ಟಾಲ್ ಮಾಡಿಕೊಳ್ಳಿ.

https://play.google.com/store/apps/details?id=com.aas.meghdoot&hl=en_IN&gl=US

ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಭಾಷೆಯನ್ನು ಕನ್ನಡ ಎಂದು ಆಯ್ಕೆ ಮಾಡಿ.

ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ಮುಂದೆ ಎಂದು ಕಾಣಿಸುವ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ಸೈನ್ ಅಫ್ ಮೇಲೆ ಕ್ಲಿಕ್ ಮಾಡಿ

ಹಂತ -5) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಎಲ್ಲಾ ವಿವರಗಳನ್ನು ಸಲ್ಲಿಸಿ.

ಹಂತ -6) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಮತ್ತು ಭಾಷೆಯನ್ನು ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.

ಹಂತ -7) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ ಅಲ್ಲಿ ನೀವು While Using the App ಮೇಲೆ ಕ್ಲಿಕ್ ಮಾಡಿ.

ಹಂತ -8) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನಿಮಗೆ ಕೆಳಗೆ ಮುನ್ಸೂಚನೆ ಎಂದು ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಹಂತ -9) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನಿಮಗೆ ನಿಮ್ಮ ಜಿಲ್ಲೆಯ ಸಂಪೂರ್ಣ ಹವಾಮಾನ ಮುನ್ಸೂಚನೆ ಸಿಗುತ್ತದೆ.

ಈ ರೀತಿಯಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಗ್ರಾಮದ ಸಂಪೂರ್ಣ ಹವಾಮಾನ ವರದಿಯನ್ನು ತಿಳಿದುಕೊಳ್ಳಬಹುದು. ಓದುಗರಲ್ಲಿ ವಿನಂತಿ

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

By

Leave a Reply

Your email address will not be published. Required fields are marked *