ಆತ್ಮೀಯ ಓದುಗರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ( gruhalakshmi scheme) 15 ನೇ ಕಂತಿನ ಹಣ ಬಿಡುಗಡೆ ಆಗಿದ್ದು, ಇದೀಗ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ 16 ನೇ ಕಂತಿನ ಹಣ ನೇರವಾಗಿ ಜಮಾ ಮಾಡಲು ರಾಜ್ಯ ಸರ್ಕಾರ ದಿನಾಂಕ ನಿಗದಿ ಮಾಡಿದೆ.
Thank you for reading this post, don't forget to subscribe!ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000 ರೂಪಾಯಿಯನ್ನು ಇಲ್ಲಿಯವರೆಗೆ ಜಮಾ ಮಾಡಿದೆ. ಇದೀಗ 16 ನೇ ಕಂತಿನ ಹಣ ಬಿಡುಗಡೆ ಮಾಡಲು ದಿನಾಂಕ ನಿರ್ಧರಿಸಿದ್ದು, ಹಂತ ಹಂತವಾಗಿ ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ.
ಇದನ್ನೂ ಓದಿ: ಕುರಿ ಮತ್ತು ಮೇಕೆ ಸಾಕಾಣಿಕೆಗೆ 59,400 ರೂ. ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ
ರಾಜ್ಯ ಸರ್ಕಾರದ ಬಳಿ ಬಜೆಟ್ ಕೊರತೆಯ ಹಿನ್ನೆಲೆಯಲ್ಲಿ 16 ನೇ ಕಂತಿನ ಹಣ ಬಿಡುಗಡೆ ಆಗುವುದು ತಡವಾಗಿದ್ದು ಇದೀಗ ಹಂತ ಹಂತವಾಗಿ ಹಣ ಜಮಾ ಮಾಡಲು ನಿರ್ಧರಿಸಲಾಗಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ನಿರೀಕ್ಷೆಗಿಂತ ಕಳಪೆ ಪ್ರದರ್ಶನ ನೀಡಿದ್ದರಿಂದ 5 ಗ್ಯಾರಂಟೀ ಯೋಜನೆಗಳು ಮುಂದುವರಿಯುವುದಿಲ್ಲ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು.
ಇದಕ್ಕೆ ಸ್ಪಷ್ಟನೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ 5 ಗ್ಯಾರಂಟೀ ಯೋಜನೆಗಳು ನಿಲ್ಲುವುದಿಲ್ಲ. ಅವು ಬಡವರ ಪಾಲಿಗೆ ಆರ್ಥಿಕ ಬೆನ್ನೆಲುಬಾಗಿದ್ದು, ಕೇವಲ ಚುನಾವಣಾ ಪ್ರಚಾರಕ್ಕಾಗಿ ಅವುಗಳನ್ನು ಜಾರಿಗೆ ತಂದಿಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ: ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!
ಸಿಎಂ ಸಿದ್ದರಾಮಯ್ಯ ಅವರ ಮಾತಿನಂತೆ ಇದೀಗ ರಾಜ್ಯ ಸರ್ಕಾರದ ಗ್ಯಾರಂಟೀ ಯೋಜನೆಗಳು ಮುಂದುವರೆದಿದ್ದು, ಬಜೆಟ್ ಕೊರತೆಯಿಂದಾಗಿ ವಿಳಂಬವಾಗುತ್ತಿವೆ.
ಇಲ್ಲಿಯವರೆಗೆ 15 ಕಂತುಗಳಲ್ಲಿ ಹಣ ಜಮಾ ಆಗಿದ್ದು, 16 ನೇ ಕಂತಿನ ಹಣ ಇದೇ ಜನವರಿ ತಿಂಗಳ 12 ನೇ ತಾರೀಖಿನಿಂದ 16 ನೇ ತಾರೀಖಿನವರೆಗೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಹಂತ ಹಂತವಾಗಿ ಹಣ ಜಮಾ ಆಗಲಿದೆ ಎಂದು ಸರ್ಕಾರ ತಿಳಿಸಿದೆ.I
ಇಲ್ಲಿಯವರೆಗೆ ನಿಮಗೆ ಗೃಹಲಕ್ಷ್ಮಿ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದನ್ನು ಕೆಳಗೆ ನೀಡಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಗೃಹಲಕ್ಷ್ಮಿ ಹಣ ಚೆಕ್ ಮಾಡುವುದು ಹೇಗೆ?
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ ಸರ್ಕಾರದ ಆ್ಯಪ್ ಅದ DBT Karnataka ಅನ್ನು ಗೂಗಲ್ ಪ್ಲೇಸ್ಟೋರ್ ನಿಂದ ಇನ್ಸ್ಟಾಲ್ ಮಾಡಿಕೊಳ್ಳಿ.
https://play.google.com/store/apps/details?id=com.dbtkarnataka
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಆ್ಯಪ್ ಅನ್ನು ಓಪನ್ ಮಾಡಿ.

ಹಂತ -3) ನಂತರ ನಿಮ್ಮ ಹೆಸರು ಹಾಕಿ 4 ಅಂಕಿಯ MPIN ರಚಿಸಿಕೊಳ್ಳಿ. MPIN ರಚಿಸಿದ ಮೇಲೆ ಲಾಗಿನ್ ಆಗಿ. ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು Payment Status ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ಗ್ರಹಲಕ್ಷ್ಮಿ ಮೇಲೆ ಕ್ಲಿಕ್ ಮಾಡಿ.

ಹಂತ -5) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ.ಅಲ್ಲಿ ನಿಮಗೆ ನಿಮ್ಮ ಖಾತೆಗೆ ಹಣ ಜಮಾ ಆಗಿರುವ ದಿನಾಂಕ, ಎಷ್ಟು ಹಣ ಜಮಾ ಆಗಿದೆ ಎಂಬ ಮಾಹಿತಿ ಸಿಗುತ್ತದೆ.

ಈ ರೀತಿಯಾಗಿ ನೀವು ನಿಮ್ಮ ಮೊಬೈಲ್ ನಲ್ಲಿಯೇ ನಿಮ್ಮ ಖಾತೆಗೆ ಜಮಾ ಆಗಿರುವ ಹಣವನ್ನು ಸುಲಭವಾಗಿ ಚೆಕ್ ಮಾಡಬಹುದು.
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
- ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಸಿಗುವ ಎಲ್ಲಾ ಸೇವೆಗಳ ಮಾಹಿತಿಯನ್ನು ಪಡೆಯುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!ಆತ್ಮೀಯ ಓದುಗರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ನಮ್ಮ ಸಂವಿಧಾನದ 73 ನೇ ತಿದ್ದುಪಡಿಯ ಪ್ರಕಾರ ನಮ್ಮ ದೇಶದಲ್ಲಿ ಪಂಚಾಯತಿಗಳು ಅಧಿಕೃತವಾಗಿ ಜಾರಿಗೆ ಬಂದವು. ಇವು ಗ್ರಾಮೀಣ ಭಾಗದ ಸರ್ಕಾರ ಎಂದೇ ಜನಜನಿತವಾಗಿವೆ. ಕಾರಣ ಗ್ರಾಮೀಣ ಭಾರತದ ಅಭಿವೃದ್ಧಿಯ ಜವಾಬ್ದಾರಿ ಈ ಪಂಚಾಯತಿಗಳ ಮೇಲೆಯೇ ನಿಂತಿದೆ.
- Krushi honda subsidy: ರೈತರಿಗೆ ಸರ್ಕಾರದ ಸಬ್ಸಿಡಿ ಹಣದಲ್ಲಿ ಕೃಷಿ ಹೊಂಡ ನಿರ್ಮಾಣ! ಇಲ್ಲಿದೆ ಸಂಪೂರ್ಣ ಮಾಹಿತಿರೈತರಿಗೆ ಸರ್ಕಾರದ ಸಬ್ಸಿಡಿ ಹಣದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡುವ ಅವಕಾಶ. ಕೃಷಿ ಭಾಗ್ಯ ಯೋಜನೆಯಡಿ ಮಳೆ ನೀರು ಸಂಗ್ರಹಣೆಗಾಗಿ ಕೃಷಿ ಹೊಂಡಕ್ಕೆ ಎಷ್ಟು ಸಬ್ಸಿಡಿ ಸಿಗುತ್ತದೆ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆ ವಿವರಗಳು ಇಲ್ಲಿವೆ.
- LIC HFL FD ಯೋಜನೆ: ಪ್ರತಿ ತಿಂಗಳಿಗೆ ₹9,750 ವರೆಗೆ ಬಡ್ಡಿ ಆದಾಯ!ಈ ಯೋಜನೆಯ ಮೂಲಕ, ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಬಹುದು ಮತ್ತು ಪ್ರತಿ ತಿಂಗಳ ಬಡ್ಡಿ ರೂಪದಲ್ಲಿ ಸ್ಥಿರ ಆದಾಯವನ್ನು ಪಡೆಯಬಹುದು. ವಿಶೇಷವಾಗಿ ಪದವೀ ವಿರಾಮ ಮಾಡಿದವರು, ಪಿಂಚಣಿದಾರರು ಅಥವಾ ಸ್ಥಿರವಾದ ಆದಾಯವನ್ನು ಬಯಸಿದವರಿಗೆ ಇದು ತುಂಬಾ ಉಪಯುಕ್ತ ಯೋಜನೆಯಾಗಿ ಪರಿಗಣಿಸಲ್ಪಡುತ್ತದೆ.
- ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ನಿಮ್ಮ ಹೊಲದ ಮ್ಯಾಪ್ ಚೆಕ್ ಮಾಡಿ! ಕಾಲುದಾರಿ, ಹಳ್ಳ ಎಲ್ಲವೂ ಈ ಮ್ಯಾಪ್ ನಲ್ಲಿ ಕಾಣುತ್ತದೆ !ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಈಗಿನ ಕಾಲದಲ್ಲಿ ರೈತರು ತಮ್ಮ ಹೊಲದ ವಿವರಗಳನ್ನು ಪರಿಶೀಲಿಸಿ ಅದರ ಸೂಕ್ತ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಬಹಳ ಅವಶ್ಯಕವಾಗಿದೆ. ಏಕೆಂದರೆ ಸರ್ಕಾರದಿಂದ ಬರುವ ಏನೇ ಸೌಲಭ್ಯಗಳಿದ್ದರೂ ಅವು ಈ ದಾಖಲೆ ನೋಡಿಯೇ ನೀಡಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಸಂಪೂರ್ಣ ದಾಖಲೆ ಮತ್ತು ವಿವರಗಳನ್ನು ಕಡ್ಡಾಯವಾಗಿ ಮಾಡಿಸಿ ಇಡಬೇಕು.
- ಯಾವ ಸರ್ವೇ ನಂಬರ್ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಿಂದ ಸಾಲ ಪಡೆದಿದ್ದೀರಾ? ನಿಮಗೆ ಅದರ ಸ್ಟೇಟಸ್ ಚೆಕ್ ಮಾಡಬೇಕೆ? ನೀವು ಸಾಲವನ್ನು ತೀರಿಸಿದ್ದರೂ ನಿಮ್ಮ ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ ಏನು ಮಾಡಬೇಕು?
- Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ ಚಟುವಟಿಕೆಗೆ ಬೇಕಾದ ಪ್ರಮುಖ ಉಪಕರಣವಾದ ಕೃಷಿ ಸ್ಪ್ರಿಂಕ್ಲರ್ ಸೆಟ್ (sprinkler set subsidy) ಮೇಲೆ ಇದೀಗ ರಾಜ್ಯ ಸರ್ಕಾರ ಶೇಕಡಾ 90 ರಷ್ಟು ಸಬ್ಸಿಡಿ ನೀಡುತ್ತಿದೆ.
- ಕರ್ನಾಟಕದಲ್ಲಿ 2.43 ಲಕ್ಷ ರೇಷನ್ ಕಾರ್ಡ್ಗಳ ದಿಢೀರ್ ರದ್ದು: ನಿಮ್ಮ ಕಾರ್ಡ್ ಸಕ್ರಿಯವೇ? ತಕ್ಷಣ ಚೆಕ್ ಮಾಡಿ, ಅಕ್ಕಿ ಸಹಾಯ ಕಳೆದುಕೊಳ್ಳಬೇಡಿ!ಕರ್ನಾಟಕದಲ್ಲಿ 2.43 ಲಕ್ಷ ರೇಷನ್ ಕಾರ್ಡ್ಗಳನ್ನು ಸರ್ಕಾರ ದಿಢೀರ್ ರದ್ದುಗೊಳಿಸಿದೆ! ನಿಮ್ಮ ರೇಷನ್ ಕಾರ್ಡ್ ಇನ್ನೂ ಸಕ್ರಿಯವಾಗಿದೆಯೇ? ತಕ್ಷಣವೇ ಮೊಬೈಲಿನಲ್ಲಿ ಆನ್ಲೈನ್ ಮೂಲಕ ಚೆಕ್ ಮಾಡಿ. ಯಾರಿಗೆ ರದ್ದು, ಏಕೆ ರದ್ದು, ಮತ್ತೆ ಸಕ್ರಿಯಗೊಳಿಸುವ ವಿಧಾನ—ಎಲ್ಲಾ ಮಾಹಿತಿ ಇಲ್ಲಿ ಓದಿ!
- ಕೃಷಿ ಪಂಪ್ ಸೆಟ್ ಹೊಂದಿರುವ ರೈತರಿಗೆ ಮಹತ್ವದ ಮಾಹಿತಿ! ತಪ್ಪದೇ ಓದಿ !ಇಂಧನ ಸಚಿವ ಕೆ. ಜೆ.ಜಾರ್ಜ್ ಮಾತನಾಡಿ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವುದರಿಂದ ರಾಜ್ಯದಲ್ಲಿ ಎಷ್ಟು ಜನ ರೈತರು ಕೃಷಿ ಪಂಪ್ ಸೆಟ್ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆಯುತ್ತಿದ್ದಾರೆ ಎಂಬುದುರ ಬಗ್ಗೆ ಮಾಹಿತಿ ಸಿಗುತ್ತದೆ.
- RTC : ರೈತರೇ ನಿಮ್ಮ ಉತಾರಿಯಲ್ಲಿ ವಕ್ಫ್ ಬೋರ್ಡ್ ಎಂದು ಇದೆಯಾ ಎಂದು ಈಗಲೇ ಚೆಕ್ ಮಾಡಿಕೊಳ್ಳಿ !ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು ಸಾವಿರಾರು ರೈತರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ. ಇನ್ನು ಹಲವು ವರ್ಷಗಳಿಂದ ಬಿತ್ತಿ ಬೆಳೆದ ಜಮೀನಿನ ಮೇಲೆ ಹೀಗೆ ಏಕಾಏಕಿ ಹಕ್ಕು ಚಲಾಯಿಸುತ್ತಿರುವ ವಕ್ಫ್ ಬೋರ್ಡ್ ವಿರೋಧಿಸಿ ಹಲವಾರು ರೈತರು ಪ್ರತಿಭಟನೆಗೆ ಇಳಿದಿದ್ದಾರೆ.
- ಗ್ರಾಮೀಣ ಆಸ್ತಿಗಳ ಫಾರ್ಮ 9, 11ಬಿ ಮೊಬೈಲ್ ನಲ್ಲೇ ಹೀಗೆ ಡೌನ್ಲೋಡ್ ಮಾಡಿ! ಇಲ್ಲಿದೆ ಸಂಪೂರ್ಣ ಮಾಹಿತಿ.ಗ್ರಾಮೀಣ ಆಸ್ತಿಗಳ ಫಾರ್ಮ್ 9 ಹಾಗೂ 11ಬಿ ದಾಖಲೆಗಳನ್ನು ಈಗ ಮೊಬೈಲ್ನಲ್ಲೇ ಸುಲಭವಾಗಿ ಡೌನ್ಲೋಡ್ ಮಾಡಬಹುದು. ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಸ್ಟೆಪ್–ಬೈ–ಸ್ಟೆಪ್ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
- ನಿಮ್ಮ ಜಮೀನನ್ನು ನಿಮ್ಮ ನೆರೆಯವರು ಒತ್ತುವರಿ ಮಾಡಿದ್ದಾರೆಯೇ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನಿಮಗೆ ನಿಮ್ಮ ಜಮೀನಿನ ನಕ್ಷೆ ಬೇಕಾಗಿದೆಯೇ ? ಅಥವಾ ನಿಮ್ಮ ಜಮೀನಿನಲ್ಲಿ ಕಾಲುದಾರಿ ಹಾದು ಹೋಗಿದೆ ಎಂದು ಚೆಕ್ ಮಾಡಬೇಕೆ? ಅಥವಾ ನಿಮ್ಮ ಪಕ್ಕದ ಜಮೀನಿನವರು ನಿಮ್ಮ ಜಮೀನಲ್ಲಿ ಒತ್ತುವರಿ ಮಾಡಿದ್ದಾರೆಂದು ತಿಳಿಯಬೇಕೇ?










