ಬೋರ್ ವೆಲ್ ಕೊರೆಸಲು 3.5 ಲಕ್ಷ ಸಹಾಯಧನ ಸಿಗಲಿದೆ! ಮತ್ತೇಕೆ ತಡ ಈಗಲೇ ಅರ್ಜಿ ಸಲ್ಲಿಸಿ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನಿಮಗೆಲ್ಲ ತಿಳಿದಿರುವಂತೆ ಭಾರತದ ಕೃಷಿ ಕ್ಷೇತ್ರವು ಮುಂಗಾರು ಮಳೆ ಮೇಲೆ ಅತಿಯಾಗಿ ಅವಲಂಬನೆ ಆಗಿದೆ. ಹಾಗಾಗಿ ಬೆಳೆಗಳು ನೀರಾವರಿಗಾಗಿ ನೇರವಾಗಿ ಮುಂಗಾರು ಮಳೆಯನ್ನು ಅಶ್ರಯಿಸಿವೆ.

Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನಿಮಗೆಲ್ಲ ತಿಳಿದಿರುವಂತೆ ಭಾರತದ ಕೃಷಿ ಕ್ಷೇತ್ರವು ಮುಂಗಾರು ಮಳೆ ಮೇಲೆ ಅತಿಯಾಗಿ ಅವಲಂಬನೆ ಆಗಿದೆ. ಹಾಗಾಗಿ ಬೆಳೆಗಳು ನೀರಾವರಿಗಾಗಿ ನೇರವಾಗಿ ಮುಂಗಾರು ಮಳೆಯನ್ನು ಅಶ್ರಯಿಸಿವೆ.

Thank you for reading this post, don't forget to subscribe!

ಈ ಕಾರಣದಿಂದ ಮುಂಗಾರು ವೈಪಲ್ಯವಾದ ವರ್ಷವೆಲ್ಲ ರೈತರು ಬೆಳೆ ಹಾನಿಯಾಗಿ ಆರ್ಥಿಕವಾಗಿ ಬಹಳ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಪಿಎಂ ಆವಾಸ್ ಯೋಜನೆ: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಹಾಗಾಗಿ ರೈತರು ಅನಿವಾರ್ಯವಾಗಿ ಕೃತಕ ನೀರಾವರಿಗೆ ಮೊರೆ ಹೋಗುತ್ತಾರೆ. ಇಂತಹ ಕೃತಕ ನೀರಾವರಿಯ ಪ್ರಮುಖ ಸಾಧನವೆಂದರೆ ಬೋರ್ ವೆಲ್.

ಹೌದು ಸ್ನೇಹಿತರೆ ರೈತರಿಗೆ ಮಳೆ ಕೊರತೆಯಾದ ವರ್ಷ ಅವರಿಗೆ ತಮ್ಮ ಬೆಳೆಯ ಇಳುವರಿಗೆ ಭರವಸೆಯ ಆಶಾಕಿರಣವಾಗಿದ್ದು ಇದೇ ಬೋರ್ ವೆಲ್ಗಳು.

ಇದನ್ನೂ ಓದಿ: ಪಿಎಂ ಕಿಸಾನ್: ಇಕೆವೈಸಿ ಆಗದ ರೈತರ ಪಟ್ಟಿ ಬಿಡುಗಡೆ | ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

ಇನ್ನು ಈ ಬೋರ್ ವೆಲ್ ಕೊರೆಸಲು ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಹಾಗಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮದೇ ಆದ ಸ್ವಂತ ಬೋರ್ ವೆಲ್ ಕೋರೆಸಲು ಆಗುವುದಿಲ್ಲ. ಎಷ್ಟೋ ಸಲ ಅಂತಹ ರೈತರು ತಮ್ಮ ನೆರೆಯ ರೈತರ ಹೊಂಡ ಅಥವಾ ಬೋರ್ ವೆಲ್ ನಿಂದ ನೀರನ್ನು ಬಳಸುತ್ತಾರೆ.

ಇದೀಗ ಇಂತಹ ಸಣ್ಣ ಮತ್ತು ಅತಿ ಸಣ್ಣ ಲಿಂಗಾಯತ ಸಮುದಾಯದ ಅರ್ಹ ರೈತರಿಗೆ ಜೀವಜಲ ಯೋಜನೆ ಅಡಿಯಲ್ಲಿ ಬೋರ್ ವೆಲ್ ಕೊರೆಸಲು 3.5 ಲಕ್ಷದವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ರೈತರು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಲು ವಿನಂತಿಸಲಾಗಿದೆ.

ಯಾವ ರೈತರು ಅರ್ಹರು?

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರಬೇಕು. ಅಲ್ಲದೇ ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಾಗಿದ್ದರೆ 98,000 ರೂಪಾಯಿ ಒಳಗೆ ಇರಬೇಕು, ನಗರ ಪ್ರದೇಶದವರಾದರೆ 1,10,000 ರೂಪಾಯಿಯ ಒಳಗೆ ಇರಬೇಕು. ಇಂತಹ ರೈತರು ಸಣ್ಣ ಮತ್ತು ಅತಿ ಸಣ್ಣ ರೈತರ ವರ್ಗಕ್ಕೆ ಸೇರಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಅರ್ಜಿ ಎಲ್ಲಿ ಸಲ್ಲಿಸಬೇಕು?

ಇನ್ನು ಜೀವಜಲ ಯೋಜನೆ ಅಡಿಯಲ್ಲಿ ನೀಡುತ್ತಿರುವ ಈ ಸಹಾಯಧನವನ್ನು ಪಡೆಯಲು ರೈತರು ಇದೇ ಆಗಸ್ಟ್ ತಿಂಗಳ 31 ನೇ ತಾರೀಖಿನವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನ ಅರ್ಹ ರೈತರು ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ?

ಅರ್ಜಿ ಸಲ್ಲಿಸಲು ಬಯಸುವ ಅರ್ಹ ರೈತರು ಶಿವಮೊಗ್ಗ, ಉಡುಪಿ,ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯವರಗಿದ್ದಾರೆ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಇತರೆ ಉಳಿದ  ಜಿಲ್ಲೆಯವರಾಗಿದ್ದರೆ ಕನಿಷ್ಠ 2 ಎಕರೆ ಮತ್ತು ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಫಾರ್ಮರ್ಸ್ ಫ್ರೂಟ್ಸ್ ಐಡಿ ಕಡ್ಡಾಯವಾಗಿ ಹೊಂದಿರಬೇಕು. ಜೊತೆಗೆ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು.

ಜೀವಜಲ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://kvldcl.karnataka.gov.in/2/jeevajala/kn

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago