ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಕಳೆದ ಸಾಲಿನಲ್ಲಿ ಮುಂಗಾರು ಕೊರತೆಯಾಗಿ ಹಲವು ರೈತರ ಬೆಳೆ ಹಾನಿಯಾಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದರು. ಅಂತಹ ರೈತರಿಗೆ ರಾಜ್ಯ ಸರಕಾರವು ಈಗಾಗಲೇ 3 ಕಂತುಗಳಲ್ಲಿ ಬರ ಪರಿಹಾರ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಿದೆ.
Thank you for reading this post, don't forget to subscribe!ಅಲ್ಲದೇ ಹೆಚ್ಚುವರಿಯಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 3,000 ರೂಪಾಯಿ ಜೀವನೋಪಾಯ ಹಣವೆಂದು ಕೂಡ ಅವರ ಖಾತೆಗೆ ಜಮಾ ಮಾಡಿದೆ. ಆದರೆ ಹಲವು ರೈತರ ಖಾತೆಗೆ ಹೆಚ್ಚುವರಿ ಹಣ ಬಿಡಿ, ಮೊದಲೆರಡು ಕಂತಿನ ಹಣ ಕೂಡ ಜಮಾ ಆಗಿಲ್ಲ.
ಇದನ್ನೂ ಓದಿ: ಪಿಎಂ ಕಿಸಾನ್: ಇಕೆವೈಸಿ ಆಗದ ರೈತರ ಪಟ್ಟಿ ಬಿಡುಗಡೆ | ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ
ಇದಕ್ಕೆ ಪ್ರಮುಖ ಕಾರಣವೆಂದರೆ ಅಂತಹ ರೈತರ ಬ್ಯಾಂಕ್ ಖಾತೆಗೆ ಆಧಾರ ಸೀಡ್ ಆಗದೇ ಇರುವುದು. ಹೌದು ರೈತ ಮಿತ್ರರೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡ್ ಆಗದಿದ್ದರೆ ನಿಮಗೆ ಸರ್ಕಾರದಿಂದ ಬರುವ ಯಾವ ಹಣವೂ ಜಮಾ ಆಗುವುದಿಲ್ಲ.
ಹಾಗಾದರೆ ನಿಮಗೆ ಇಲ್ಲಿಯವರೆಗೆ ಎಷ್ಟು ಬರ ಪರಿಹಾರ ಹಣ ಜಮಾ ಆಗಿದೆ ಮತ್ತು ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಅಥವಾ ಜಮಾ ಆಗದೇ ಇದ್ದಲ್ಲಿ ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ, ತಪ್ಪದೇ ಕೊನೆಯವರೆಗೂ ಓದಿರಿ.
ಆಧಾರ್ ಸೀಡಿಂಗ್ ಆಗಿದೆಯಾ ಎಂದು ಚೆಕ್ ಮಾಡುವುದು ಹೇಗೆ?
ಹಂತ -1) ಮೊದಲು ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://parihara.karnataka.gov.in/service92/
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ಕೆಳಗೆ ತೋರಿಸಿದಂತೆ ವರ್ಷ, ಋತು ಮತ್ತು ವಿಪತ್ತಿನ ವಿಧವನ್ನು ಆಯ್ಕೆ ಮಾಡಿ.

ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ 4 ಆಯ್ಕೆಗಳು ಕಾಣುತ್ತವೆ. ಅಲ್ಲಿ ನೀವು ಸರ್ವೇ ನಂಬರ್ ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ, ಕೆಳಗಡೆ ನಿಮ್ಮ ಜಮೀನಿನ ವಿವರಗಳಾದ ಸರ್ವೇ ನಂಬರ್, ಸರ್ನಾಕ್ ಇದ್ದಲ್ಲಿ ಸ್ಟಾರ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಹಿಸ್ಸಾ ನಂಬರ್ ಹಾಕಿ Fetch ಮೇಲೆ ಕ್ಲಿಕ್ ಮಾಡಿ.

ಹಂತ -5) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನಿಮಗೆ ಇಲ್ಲಿಯವರೆಗೆ ಬರ ಪರಿಹಾರ ಹಣ ಎಷ್ಟು ಜಮಾ ಆಗಿದೆ ,ಯಾವಾಗ ಜಮಾ ಆಗಿದೆ ಮತ್ತು ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂಬ ಮಾಹಿತಿ ಸಿಗುತ್ತದೆ.
ಇದನ್ನೂ ಓದಿ: ಪಿಎಂ ಕಿಸಾನ್: ಹಣ ಜಮಾ ಆಗಿರುವ ಮೆಸೇಜ್ ಬರುತ್ತಿಲ್ಲವೇ? ಈಗಲೇ ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ ! ಲಿಂಕ್ ಇಲ್ಲಿದೆ ನೋಡಿ
ಹಾಗೆಯೇ ಕೆಳಗೆ ಬಲ ಮೂಲೆಯಲ್ಲಿ ನೋಡಿ, ಅಲ್ಲಿ ನಿಮ್ಮ ಆಧಾರ್ ಸೀಡಿಂಗ್ ಸ್ಟೇಟಸ್ ಎಂದು ಕಾಣಿಸುತ್ತದೆ. ಅದು ಖಾಲಿಯಿದ್ದರೆ ನಿಮ್ಮ ಆಧಾರ ಸೀಡಿಂಗ್ ಆಗಿದೆ ಎಂದರ್ಥ. ಇಂದು ವೇಳೆ ಅಲ್ಲಿ Not Seeded ಎಂದು ಇದ್ದರೆ ನಿಮ್ಮ ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಸೀಡ್ ಆಗಿಲ್ಲ ಎಂದರ್ಥ. ನೀವು ಕೂಡಲೇ ನಿಮ್ಮ ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಗೆ ಆಧಾರ್ ಸೀಡ್ ಮಾಡಿಸಿ.

ಈ ರೀತಿಯಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಬರ ಪರಿಹಾರ ಹಣ ಎಷ್ಟು ಜಮಾ ಆಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗೆಯೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode