WhatsApp Group                             Join Now            
   
                    Telegram Group                             Join Now            
Spread the love

ಆತ್ಮೀಯ ಓದುಗರೇ,ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಆರ್ಥಿಕವಾಗಿ ಧನ ಸಹಾಯ ಮಾಡಲು ಮುಂದಾಗಿದ್ದು ಈ ಕುರಿತು ಸಿಎಂ 1 ಲಕ್ಷ ವಸತಿ ಯೋಜನೆಯನ್ನು ಜಾರಿಗೆ ತಂದಿದೆ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಹೌದು ಸ್ನೇಹಿತರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ರಾಜ್ಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ 1 ಲಕ್ಷ ಮನೆಯನ್ನು ಕಟ್ಟಿಕೊಡಲು ಸಿಎಂ ವಸತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರವೇ ಆರಂಭದಲ್ಲಿ ವೆಚ್ಚವಾಗುವ 1 ಲಕ್ಷ ರೂಪಾಯಿ ಸಹಾಯಧನ ನೀಡಲಿದೆ. ಈ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ 151.56 ಕೋಟಿ ರೂಪಾಯಿಯನ್ನು ಮೀಸಲಿರಿಸಿದೆ ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್: ಇಕೆವೈಸಿ ಆಗದ ರೈತರ ಪಟ್ಟಿ ಬಿಡುಗಡೆ | ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

ಮುಂಚೆ ಈ ಯೋಜನೆ ಅಡಿಯಲ್ಲಿ ಆಯ್ಕೆಯಾದ ರೈತರಿಗೆ ಒಟ್ಟಾರೆ ಮನೆ ಕಟ್ಟಲು 5 ಲಕ್ಷ ರೂಪಾಯಿ ಸಹಾಯಧನವನ್ನು ನೀಡಲಾಗುತ್ತಿತ್ತು.ಆದರೆ ಆರಂಭದಲ್ಲಿ ವೆಚ್ಛವಾಗುವ 1 ಲಕ್ಷ ರೂಪಾಯಿಯನ್ನು ಫಲಾನುಭವಿಗಳು  ತಾವೇ ಸ್ವಂತ ಭರಿಸಬೇಕಾಗಿತ್ತು. ಆದರೆ ಇದೀಗ ಆ ಹಣವನ್ನು ಕೂಡ ರಾಜ್ಯ ಸರಕಾರವೇ ಭರಿಸಲು ಮುಂದಾಗಿದ್ದು,ಒಟ್ಟಾರೆ ಈ ಯೋಜನೆ ಅಡಿಯಲ್ಲಿ ಇದೀಗ 6 ಲಕ್ಷ ರೂಪಾಯಿ ಸಹಾಯಧನ ಸಿಕ್ಕಿದಂತಾಗಿದೆ. ಇದಕ್ಕೆ ಈಗ ಅರ್ಜಿ ಸಲ್ಲಿಸಲು ಕರೆಯಲಾಗಿದೆ.

ರಾಜ್ಯದಲ್ಲಿ ಲಕ್ಷಾಂತರ ಬಡ ಕುಟುಂಬಗಳು ಇಂದಿಗೂ ಒಂದು ಅಧಿಕೃತ ಸೂರು ಇಲ್ಲದೆ ಮೂಲಭೂತ ಅವಶ್ಯಕತೆಗಳಲ್ಲಿ ಪ್ರಮುಖವಾದ ವಸತಿ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಅಂತಹ ಕುಟುಂಬಗಳಿಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ರಾಜ್ಯ ಸರಕಾರದ ಈ ಯೋಜನೆ ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದನದ ಶೆಡ್ ನಿರ್ಮಾಣ ಮಾಡಲು ಸರ್ಕಾರದಿಂದ 57,000 ರೂ. ಸಹಾಯ ಧನ| ಈಗಲೇ ಅರ್ಜಿ ಸಲ್ಲಿಸಿ  !

ಇನ್ನು ಈ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 1BHK ಮತ್ತು 2BHK ಮನೆಗಳನ್ನು ಕಟ್ಟಿಕೊಳ್ಳಲು ರಾಜ್ಯ ಸರ್ಕಾರ ಧನ ಸಹಾಯ ನೀಡಲಿದೆ. ಇದಕ್ಕೆ ಈಗಾಗಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ಲಿಂಕ್ ಕೆಳಗಡೆ ನೀಡಲಾಗಿದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.

https://ashraya.karnataka.gov.in/cm_selection_flat/index.html

ಯಾರು ಯಾರು ಅರ್ಹರು ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು. ಅದರ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರೆ, ಕನಿಷ್ಠ 5 ವರ್ಷದಿಂದ ಬೆಂಗಳೂರಿನಲ್ಲಿರಬೇಕು. ಅರ್ಜಿದಾರರು ಬಿಪಿಎಲ್ ಕಾರ್ಡ್ ಹೊಂದಿರಬೇಕು ಮತ್ತು ಅವರ ವಾರ್ಷಿಕ ಆದಾಯ 87,000 ರೂ.ಗಿಂತ ಕಡಿಮೆ ಇರಬೇಕು. ಅಲ್ಲದೇ ಅರ್ಜಿದಾರರಿಗೆ ಸ್ವಂತ ಮನೆ ಇರಬಾರದು ಹಾಗೂ ಅವನು ಇತರೆ ಯಾವುದೇ ವಸತಿ ಯೋಜನೆಯ ಫಲಾನುಭವಿ ಆಗಿರಬಾರದು.

ಯಾವ ಯಾವ ದಾಖಲೆಗಳು ಬೇಕಾಗುತ್ತವೆ?

      
                    WhatsApp Group                             Join Now            
   
                    Telegram Group                             Join Now            

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಹೊಂದಿರಬೇಕು. ಅದರ ಜೊತೆಗೆ ವಾಸಸ್ಥಳದ ಪ್ರಮಾಣ ಪತ್ರವನ್ನು ಮತ್ತು ತಮ್ಮ ವಾರ್ಷಿಕ ಆದಾಯ ಪ್ರಮಾಣಪತ್ರವನ್ನೂ ಹೊಂದಿರಬೇಕು.

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M

By

Leave a Reply

Your email address will not be published. Required fields are marked *