WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ಶ್ರೀಗಂಧ  ಅರಣ್ಯ ಬೆಳೆಗಳಲ್ಲಿ ಒಂದಾಗಿದ್ದು. ಕಡಿಮೆ ಜಾಗದಲ್ಲಿ ಅದ್ಭುತ ಲಾಭವನ್ನು ಕೊಡುವುದರಲ್ಲಿ ಯಶಸ್ವಿಯಾಗಿದೆ. ಹಿಂದೆ ಶ್ರೀಗಂಧ ಬೆಳೆ ಬೆಳೆಯಬೇಕಾದರೆ ರೈತರು ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಇದು ಸರ್ಕಾರಕ್ಕೆ ಸೇರಿತ್ತು. 1782 ರಲ್ಲಿ  ಶ್ರೀಗಂಧದ ಬೆಳೆ ರಾಜ್ಯಕ್ಕೆ ಸೇರಿದ್ದು ಎಂದು ಕಾನೂನು ಜಾರಿ ಮಾಡಲಾಗಿದ್ದು, ಇದನ್ನು 2001ರಲ್ಲಿ ತಿದ್ದುಪಡಿ ಮಾಡಲಾಗಿ ಶ್ರೀಗಂಧದ ಬೆಳೆಯನ್ನು ಯಾರು ಬೇಕಾದರೂ ಬೆಳೆಯಬಹುದು ಎಂಬ ಕಾನೂನು ಜಾರಿಗೆ ಬಂತು.ಈಗ ಶ್ರೀಗಂಧ ಬೆಳೆಗಾರರ ಬಲ ಸಂವರ್ಧನೆಗೆ ಸರ್ಕಾರ ಸಹಾಯ ಮಾಡುತ್ತಿದ್ದು ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿದೆ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿ..! ಯಾವೆಲ್ಲ ದಾಖಲೆಗಳು ಬೇಕು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ನಿರಂತರ ಆದಾಯದ ಜೊತೆ ಶ್ರೀಗಂಧ!!!!!

ಸ್ನೇಹಿತರೆ ಶ್ರೀಗಂಧ ಒಂದು ಅರಣ್ಯ ಬೆಳೆಯಾಗಿದ್ದು ಇದಕ್ಕೆ ಅರಣ್ಯದಂತಹ ವಾತಾವರಣವನ್ನು ಕಲ್ಪಿಸಿ ಕೊಡುವುದು ರೈತರ ಕರ್ತವ್ಯವಾಗಿದೆ ಹಾಗೂ ಇದೊಂದು ಪರಾವಲಂಬಿ ಸಸ್ಯವಾಗಿದ್ದು ಪಕ್ಕದಲ್ಲಿರುವ ಸಸಿಗೆ ನೀಡಿದ ಪೋಶಕಾಂಶಗಳನ್ನು ಹೀರಿ ಬೆಳೆಯುತ್ತದೆ. ಪಕ್ಕದ host (ಮಾತೃ ಬೆಳೆ) ಬೆಳೆ ಯಾವ ರೀತಿ ಬೆಳೆಸುತ್ತಿರೋ ಅದರ ಮೇಲೆ ಇದರ ಬೆಳವಣಿಗೆ ಅವಲಂಬಿತವಾಗಿರುತ್ತದೆ. ಶ್ರೀಗಂಧದ ಬೆಳೆಯ ಜೊತೆಗೆ ಹಣ್ಣಿನ ಬೆಳೆಗಳಾದ ಪೇರಲ, ಮಾವು, ಬಾಳೆ ಹೀಗೆ ಹಣ್ಣಿನ ಬೆಳೆಗಳನ್ನು ಬೆಳೆಯುವುದರಿಂದ ನಿರಂತರ ಆದಾಯ ಬರುತ್ತದೆ ಮತ್ತು ಅದಕ್ಕೆ ನೀಡಿದ ಪೋಷಕಾಂಶಗಳ ಮುಖಾಂತರ ಶ್ರೀಗಂಧದ ಬೆಳೆ ದಷ್ಟಪುಷ್ಟವಾಗಿ ಬೆಳೆಯುತ್ತದೆ. ಒಂದು ವೇಳೆ ಶ್ರೀಗಂಧದ ಜೊತೆಗೆ ಬೆಳೆದ ಬೆಳೆಗಳಿಗೆ ಪೋಷಕಾಂಶಗಳ ಕೊರತೆಯಾದರೆ ಆಟೋಮೆಟಿಕ್ ಇದರ ಬೆಳವಣಿಗೆ ಕುಂಠಿತವಾಗುತ್ತದೆ. ಏಕೆಂದರೆ ಶ್ರೀಗಂಧ ಒಂದು ಪರಾವಲಂಬಿ ಬೆಳೆ. ಶ್ರೀಗಂಧ ಅರಣ್ಯ ಬೆಳೆ  ಆಗಿರುವುದರಿಂದ ಅರಣ್ಯದಲ್ಲಿ ಅದಕ್ಕೆ ಯಾರು ರಾಸಾಯನಿಕ ಗೊಬ್ಬರಗಳನ್ನು ಹಾಕಿ ಅತಿ ಸುವ್ಯವಸ್ಥಿತವಾಗಿ ಬೆಳೆಸಿರುವುದಿಲ್ಲ. ಹಾಗೆ ರೈತರು ಕೂಡ ಹೊಲದಲ್ಲಿ ಇದಕ್ಕೆ ಅರಣ್ಯದ ವಾತಾವರಣದ ನಿರ್ಮಿಸಿ ಸಾವಯವ ಪೋಷಕಾಂಶಗಳ ಮುಖಾಂತರ ಗಿಡಗಳನ್ನು ಬೆಳೆಸಬೇಕು. ಪೋಷಕಾಂಶಗಳು ಒದಗಿಸುವ ರೀತಿ ಹೇಗೆಂದರೆ ಶ್ರೀಗಂಧದ ಮರದ ಪಕ್ಕದಲ್ಲಿರುವ ಸೀಬೆಹಣ್ಣು ಅಥವಾ ಇತರೆ ಹಣ್ಣಿನ ಗಿಡಗಳ ಎಲೆಗಳ ಉದುರುವಿಕೆಯಿಂದ ಮಲ್ಚಿಂಗ್ (ಎಲೆಗಳನ್ನು ಮಣ್ಣಿನಲ್ಲಿ ಗೊಬ್ಬರ ವಾಗಲು ಬಿಡಬೇಕು) ಮಾಡಬೇಕು. ಇದರಿಂದ ಭೂಮಿಯ ತೇವಾಂಶ ಮತ್ತು ನೀರು ಹೆಚ್ಚು ಪೋಲಾಗುವುದನ್ನು ತಡೆಗಟ್ಟಬಹುದು ಮತ್ತು ಪೋಷಕಾಂಶಗಳು ಯಥೇಚ್ಛವಾಗಿ ಸುಲಭವಾಗಿ ದೊರೆಯುತ್ತವೆ ಆಗ ರಾಸಾಯನಿಕಗಳ ಅವಶ್ಯಕತೆ ಇರುವುದಿಲ್ಲ.ಮತ್ತು ಇವುಗಳ ಪೋಷಕಾಂಶದಿಂದ ಮರ ಸೊಗಸಾಗಿ ಬೆಳೆಯುತ್ತದೆ.

ಇದನ್ನೂ ಓದಿ: ಮೊಬೈಲ್ ನಲ್ಲಿ ನೀವು ನಿಂತಿರುವ ಜಮೀನಿನ ವಿವರಗಳನ್ನು ತಿಳಿದುಕೊಳ್ಳಿ.

ಶ್ರೀಗಂಧದ ಕೇವಲ ಒಂದು ಗಿಡಕ್ಕೆ 64 ಲಕ್ಷ ಅಂದರೆ ನಮಗೆಲ್ಲರಿಗೂ ಆಶ್ಚರ್ಯ ಏಕೆಂದರೆ ಆ ಒಂದು ಗಿಡ ತನ್ನ ಒಡಲಲ್ಲಿ ಅಷ್ಟು ಗಂಧವನ್ನು ತುಂಬಿಕೊಂಡಿರುತ್ತದೆ.  ಬೇರೆ ಹಣ್ಣುಗಳನ್ನು ನಾವು ಕೇವಲ ಒಂದು ವಾರ ಇಡಬಹುದು ನಂತರ ಅದು ಕೆಟ್ಟು ಹೋಗುತ್ತದೆ ಆದರೆ ಶ್ರೀಗಂಧದ heartwood  ಎಷ್ಟು ವರ್ಷಗಳವರೆಗೆ ಬಿಡುತ್ತೇವೆಯೋ ಅಷ್ಟು ವರ್ಷ ಬೆಳೆಯುತ್ತಾ ಹೋಗುತ್ತದೆ ಅದರ ಮೌಲ್ಯ ಹೆಚ್ಚುತಾನೆ ಹೋಗುತ್ತದೆ.

ಶ್ರೀಗಂಧದ ಸಸಿ ಪ್ಲಾಂಟೇಶನ್ !

ಶ್ರೀಗಂಧ ಪ್ಲಾಂಟೇಶನ್ ಮಾಡುವ ಸಂದರ್ಭದಲ್ಲಿ ಮೊದಲು ಮಣ್ಣಿನ ಪರೀಕ್ಷೆ ಮಾಡಿಸಬೇಕು. ಈ ಬೆಳೆಗೆ PH ಮಟ್ಟ 6.5-7 ಇದ್ದರೆ ಸೂಕ್ತ. ನಂತರ  ಮಣ್ಣು ಹದ ಮಾಡಿಸಬೇಕು. ಲ್ಯಾಂಡ್ ಪ್ರಿಪರೇಷನ್ ಸಂದರ್ಭದಲ್ಲಿ ಹೊಲದಲ್ಲಿ ನೀರು ನಿಲ್ಲದಿರುವ ಹಾಗೆ ನೋಡಿಕೊಳ್ಳಬೇಕು ಅಂದರೆ 2% ಇಳಿಜಾರು ಇರುವ ಹಾಗೆ ನೋಡಿಕೊಳ್ಳಬೇಕು. ಫಾರೆಸ್ಟ್ ಡಿಪಾರ್ಟ್ಮೆಂಟ್ನಲ್ಲಿ ಅಪ್ಲಿಕೇಶನ್ ಹಾಕಿದರೆ ಸಸಿಗಳನ್ನು ಸಬ್ಸಿಡಿ ದರದಲ್ಲಿ ನೀಡುತ್ತಾರೆ. ಸಸಿಗಳನ್ನು ಜೂನ್ ಜುಲೈ ತಿಂಗಳಲ್ಲಿ ನಾಟಿ ಮಾಡಬೇಕು ಏಕೆಂದರೆ ಇದು ಮಾನ್ಸೂನ್ ಪ್ರಾರಂಭವಾಗುವ ತಿಂಗಳ.

      
                    WhatsApp Group                             Join Now            
   
                    Telegram Group                             Join Now            

ಇದನ್ನೂ ಓದಿ: ರೈತರೇ ಗಮನಿಸಿ: ನಿಮ್ಮ ದನ-ಕರುಗಳು ವಿಷ ಪದಾರ್ಥ ಸೇವಿಸಿದರೆ ತಕ್ಷಣವೇ ಈ ಕೆಲಸ ಮಾಡಿ..!

ಫಿಟ್ಟಿಂಗ್ :

ಮಣ್ಣು ಹದ ಮಾಡಿದ ನಂತರ ಮಾಡುವ ಹಂತವೆಂದರೆ ಪಿಟ್ಟಿಂಗ್, ಫಿಟಿಂಗ್ ಎಂದರೆ ಸಸಿ ನೆಡಲು 5 ಮೀಟರ್ ಅಂತರದ ಜೊತೆಗೆ ಒಂದೂವರೆ ಅಡಿ ಗುಂಡಿ ತೋಡಬೇಕು. ಗುಂಡಿ ತೋಡುವುದು  ಜನವರಿ ತಿಂಗಳಲ್ಲಿಸೂಕ್ತ ಏಕೆಂದರೆ ಫೆಬ್ರವರಿ ಮಾರ್ಚ್ ನಿಂದ ಬಿಸಿಲು ಜಾಸ್ತಿ ಆಗುತ್ತದೆ. ಸೂರ್ಯನ ಕಿರಣಗಳು ಮಣ್ಣಿನ ಮೇಲೆ ಬಿದ್ದಾಗ  ಯಾವುದೇ ಹುಳುಗಳ ಗೂಡು ಅಥವಾ ಹುಳುಗಳು ಸತ್ತು ಹೋಗುತ್ತವೆ ಗುಂಡಿ ತೋಡುವ ಸಂದರ್ಭದಲ್ಲಿ ಮೇಲ್ಪದರಿನ 15cm ವರೆಗಿನ ಮಣ್ಣು ಫಲವತ್ತತೆಯಿಂದ ಕೂಡಿರುತ್ತದೆ. ಆ ಮಣ್ಣನ್ನು ತೆಗೆದು ಬೇರೆ ಕಡೆ ಪ್ರತ್ಯೇಕ ಇಡಬೇಕು. ನಂತರದಲ್ಲಿ ಕೆಳಗೆ ಬರುವ ಮಣ್ಣನ್ನು ಒಂದು ಕಡೆ ಇಟ್ಟಿರಬೇಕು. ಎರಡು ಮೂರು ತಿಂಗಳ ನಂತರ ಮಣ್ಣು ಚೆನ್ನಾಗಿ ಒಣಗಿರುತ್ತದೆ. ಸಸಿ ನೆಡುವ ಸಂದರ್ಭದಲ್ಲಿ ನರ್ಸರಿಯಿಂದ ತಂದ ಸಸ್ಯ ಮೇಲ್ಭಾಗದ ಪ್ಲಾಸ್ಟಿಕ್ ಅನ್ನು ತೆಗೆದು ಇಡಬೇಕು. ಕೆಳಭಾಗದಲ್ಲಿ ಆ ಫಲವತ್ತತೆಯ ಮೇಲ್ಪದರನ ಫಲವತ್ತತೆಯ ಮಣ್ಣನ್ನು ಹಾಕಿ ಅದರ ಜೊತೆ 2 kg ತಿಪ್ಪೆ ಗೊಬ್ಬರ (farm yard manure) ಹಾಕಬೇಕು. ತಿಪ್ಪೆ ಗೊಬ್ಬರ ತೇವಾಂಶ ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಶ್ರೀಗಂಧದ ಬೆಳೆ ಬೆಳೆಯುವ ಸಂದರ್ಭದಲ್ಲಿ ಅದರ ಉಸ್ತುವಾರಿ ತುಂಬಾ ಚಾಲೆಂಜ್ ಆಗಿರುತ್ತದೆ. ಶ್ರೀಗಂಧ ಬೆಳೆಗೆ ಕಪ್ಪು ಮಣ್ಣಿನ ಗಿಂತ ಕೆಂಪು ಮಣ್ಣು ಸೂಕ್ತವಾಗಿರುತ್ತದೆ. ಪ್ರಾರಂಭದ ದಿನಗಳಲ್ಲಿ ಶ್ರೀಗಂಧದ ಮರಕ್ಕೆ ಡ್ರಿಪ್ ಮುಖಾಂತರ ನೀರನ್ನು ಒದಗಿಸಬೇಕು. ಪ್ರಾರಂಭದ ದಿನಗಳಲ್ಲಿ ಶ್ರೀಗಂಧದ ಜೊತೆಗೆ  ಪ್ರೈಮರಿ ಹೋಸ್ಟ್ (ಸಹ ಬೆಳೆ ) ಆಗಿ ತೊಗರಿ ಅಥವಾ ಹೊನ್ನೆಗೊನ್ನೆ ಸೊಪ್ಪು ಬೆಳೆಯಬೇಕು. ತೊಗರಿಯ ರಾಶಿಗೆ ಬರುವ ಸಂದರ್ಭದಲ್ಲಿ ಸೆಕೆಂಡರಿ ಬೆಳೆ (2ನ್ ಸಹ ಬೆಳೆ)  ಹಾಗೆ ನೆಟ್ಟಿರಬೇಕು. ಔಡಲ, ಸಸ್ಬೇನಿಯ ವನ್ನು ಸೆಕೆಂಡರಿ ಬೆಳೆಯಾಗಿ ಬೆಳೆಯಲಾಗುತ್ತದೆ. ಐದು-ಆರು ವರ್ಷಗಳ ನಂತರ ಹಣ್ಣಿನ ಗಿಡಗಳನ್ನು ಹೋಸ್ಟ್ ಆಗಿ ಬೆಳೆಯಬೇಕು. ಅರಣ್ಯದ ಬೆಳೆಗಳನ್ನು ಹೋಸ್ಟ್  ಆಗಿ ಬೆಳೆದರೆ ಶ್ರೀಗಂಧ ಮತ್ತು ಅರಣ್ಯದ ಗಿಡಗಳ ನಡುವೆ ಪೋಷಕಾಂಶಗಳ ಸ್ಪರ್ಧೆ ನಡೆಯುತ್ತದೆ. ಆದ್ದರಿಂದ ಶ್ರೀಗಂಧ ಸೊಗಸಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಶ್ರೀಗಂಧದ ಪಕ್ಕದಲ್ಲಿರುವ ಬೆಳೆ ಶ್ರೀಗಂಧಕ್ಕೆ ನೆರಳನ್ನು ಒಡ್ಡುವಂತಾಗಿರಬಾರದು ಮತ್ತು ನೆರಳು ಬಿದ್ದಾಗ ಮರವನ್ನು ಕಡಿಯುವ ಸಂದರ್ಭದಲ್ಲಿ ಆ ಮರದ ಟೊಂಗೆ ಏನಾದರೂ ಶ್ರೀಗಂಧದ ಮರದ ಮೇಲೆ ಬಿದ್ದಾಗ ಗಾಯಗಳಾದಾಗ ಅಥವಾ ಕೀಟಾನುಗಳು ಸೇರಿ ಅಥವಾ ಮಳೆ ನೀರಿನ ಹನಿಗಳು ಗಿಡದಲ್ಲಿ ಸೇರಿ ಗಿಡ ಪೊಳ್ಳಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ: ನಿಮ್ಮ ಆದಾಯ ಹೆಚ್ಚಿಸಲು ಬಂತು ಕೃಷಿ ಡ್ರೋನ್… ಏನಿದರ ಮಹತ್ವ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಶ್ರೀಗಂಧದ ಗಿಡಕ್ಕೆ ಯಾವುದೇ ರೀತಿಯ ಗಾಯಗಳು ಆಗದಂತೆ ನೋಡಿಕೊಳ್ಳುವುದು ಚಾಲೆಂಜಿಂಗ್ ಆಗಿದೆ !

ಶ್ರೀಗಂಧದ ಗಿಡ ಹಚ್ಚಿದ 5 ರಿಂದ 6 ವರ್ಷಗಳಲ್ಲಿ heartwood (ಶ್ರೀಗಂಧದ ಹೃದಯ ಭಾಗ) ಬೆಳೆಯಲು ಪ್ರಾರಂಭವಾಗುತ್ತದೆ. ಇದನ್ನು ಶ್ರೀಗಂಧದ ಗಿಡದ ತೊಗಟೆ ಬಿರುಕು  ಮುಖಾಂತರ  ತಿಳಿದುಕೊಳ್ಳಬಹುದು. ಶ್ರೀಗಂಧದ ತೊಗಟೆ ಸಂಪೂರ್ಣ ಬಿರುಕು ಬಿಟ್ಟರೆ heartwood ಸಂಪೂರ್ಣವಾಗಿ ಬೆಳೆದಿದೆ ಎಂದರ್ಥ. ಶ್ರೀಗಂಧದ ಹಾರ್ವೆಸ್ಟ್ (ಕತ್ತರಿಸುವ ಸಮಯ) ಮಾಡಲು ಹದಿನೈದು ವರ್ಷದವರೆಗೆ  ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಹಾರ್ಟ್ ವುಡ್ ನ ಬೆಳವಣಿಗೆಯನ್ನು ERT machine ನಿಂದ ಚೆಕ್ ಮಾಡಬಹುದು. 15 ವರ್ಷ ಕಾಪಾಡಿಕೊಂಡರೆ 1 ಗಿಡಕ್ಕೆ10 ರಿಂದ 15 kg heartwood ಪಡೆಯಬಹುದು. ಒಂದು ಕೆಜಿ ಶ್ರೀಗಂಧ ಬೆಲೆ 10,000 ದಿಂದ 12000 ರೂಪಾಯಿ ಆಗಿರುತ್ತದೆ. ಹೀಗೆ ಸಾಮಾನ್ಯ ರೈತನು ಶ್ರೀಗಂಧವನ್ನು ಬೆಳೆದು ಕೋಟ್ಯಾಧಿಪತಿ ಆಗುವುದರ ಜೊತೆಗೆ ದೇಶದ ಅಭಿವೃದ್ಧಿಗೆ ಎಂಜಿನ್ ಆಗಬಹುದು.

ಅಧಿಕೃತ ವೆಬ್ಸೈಟ್ ಆದ ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು ಹೆಚ್ಚಿನ ಮಾಹಿತಿಗಾಗಿ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ಒಂದು ವಾಟ್ಸಾಪ್ ಚಾನೆಲ್ ಗೆ ಸೇರಬಹುದು.

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇👇👇 https://whatsapp.com/channel/0029VaDOwCTKQuJKSwo7D63M

By

Leave a Reply

Your email address will not be published. Required fields are marked *