ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಿಸಲು ಸರ್ಕಾರದಿಂದ ₹20,000 ವರೆಗೆ ಸಬ್ಸಿಡಿ ನೀಡಲಾಗುತ್ತಿದೆ. ಈ ಸಹಾಯಧನ ಪಡೆಯಲು ಅರ್ಜಿ ವಿಧಾನ, ಅರ್ಹತೆ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಈಗಲೇ ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಯ ಲಾಭ ಪಡೆಯಿರಿ. 🚽
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಿದರೆ 20 ಸಾವಿರ ರೂಪಾಯಿಯವರಿಗೆ ಸಬ್ಸಿಡಿ ಸಿಗುತ್ತದೆ. ಹೌದು, ಯಾವ ಜನಾಂಗದವರು ಎಷ್ಟು ಸಬ್ಸಿಡಿ ಪಡೆಯಬಹುದು ಸಬ್ಸಿಡಿ ಹೇಗೆ ನೀಡಲಾಗುವುದು. ಅರ್ಜಿ ಎಲ್ಲಿ ಸಲ್ಲಿಸಬೇಕು ಹೇಗೆ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Thank you for reading this post, don't forget to subscribe!ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಸಹಾಯಧನ ನೀಡಲಾಗುವುದು. ಹೌದು, ಅರ್ಹತಾ ಮಾನದಂಡಗಳ ಪ್ರಕಾರ ಸಬ್ಸಿಡಿ ನೀಡಲಾಗುವುದು. ಸಾಮಾನ್ಯ ವರ್ಗದವರಿಗೆ 12 ಸಾವಿರ ರೂಪಾಯಿ ಸಬ್ಸಿಡಿ ಸಿಗುತ್ತದೆ. ಇದರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 20 ಸಾವಿರ ರೂಪಾಯಿ ಸಹಾಯಧನ ಸಿಗುತ್ತದೆ. ಈ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಎರಡು ಕಂತುಗಳಲ್ಲಿ ನೇರವಾಗಿ ಜಮೆ ಮಾಡಲಾಗುವುದು.
ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿಯಾಗಿರಬೇಕು. ಆ ಕುಟುಂಬವು ಶೌಚಾಲಯವನ್ನು ಹೊಂದಿರಬಾರದು. ಬಡ, ಹಿಂದುಳಿದ ಅಥವಾ ಬಡತನ ರೇಖೆಗಿಂತ ಕೆಳಗಿನ ವರ್ಗಗಳಿಗೆ ಸೇರಿರಬೇಕು. (ವೃದ್ಧರು ಅಥವಾ ವಿಕಲಚೇತನರು ಇರುವ ಕುಟುಂಬಗಳಿಗೆ ಆದ್ಯತೆ ನೀಡಲಾಗುವುದು)
ಎಪಿಎಲ್ ಕಾರ್ಡ್ ಹೊಂದಿದವರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತೀ ಸಣ್ಣ ರೈತರು, ಭೂರಹಿತ ಕಾರ್ಮಿಕರು ಆಗಿರಬೇಕು. ಆಧಾರ್ ಕಾರ್ಡ್ ಮತ್ತು ಅದಕ್ಕೆ ಲಿಂಕ್ ಮಾಡಿರುವ ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು.
ಶೌಚಾಲಯ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವವಲಿಚ್ಚಿಸುವವರು ಸ್ಥಳೀಯ ಗ್ರಾಮ ಪಂಚಾಯತಿ ಅಥವಾ ಸ್ವಚ್ಛಾಗ್ರಹಿ (ಸ್ಥಳೀಯ ನೈರ್ಮಲ್ಯ ಸ್ವಯಂ ಸೇವಕರು) ಅವರನ್ನು ಸಂಪರ್ಕಿಸಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು.
ಶೌಚಾಲಯವನ್ನು ನಿರ್ಮಿಸಿದ ನಂತರ ಜಿಯೋ ಟ್ಯಾಗಿಂಗ್ ಮತ್ತು ಸ್ವಚ್ಛ ಭಾರತ ಮಿಷನ್ ಇಂಟಿಗ್ರೆಟೆಡ್ ಮ್ಯಾನೇಜ್ ಮೆಂಟ್ ಇನ್ಫರ್ಮೇಶನ್ ಸಿಸ್ಟಮ್ ಪೋರ್ಟಲ್ ಮೂಲಕ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ ಪರಿಶೀಲನೆ ಬಳಿಕೆ ಸಹಾಯಧನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.
ಗ್ರಾಮೀಣ ಭಾಗದವರು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಪೋರ್ಟಲ್ ನಲ್ಲಿ ನೋಂದಾಯಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರ ಲಾಗಿನ್ ಐಡಿಯನ್ನು ರಚಿಸಲು ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ವಿವರಗಳ್ನು ಸಲ್ಲಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಲಾಗಿನ್ ಆದ ಮೇಲೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
ನಗರ ಪ್ರದೇಶದವರು ಸ್ವಚ್ಛ ಭಾರತ ಮಿಷನ್ (ನಗರ) ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು
ಅರ್ಜಿಯನ್ನು ನಗರ ಸ್ಥಳೀಯ ಸಂಸ್ಥೆಯಿಂದ ಪರಿಶೀಲಿಸಲಾಗುತ್ತದೆ. ಅನುಮೋದನೆ ಮತ್ತು ನಿರ್ಮಾಣ ಪ್ರಗತಿಯ ಪರಿಶೀಲನೆ ಪೂರ್ಣಗೊಂಡ ಬಳಿಕ ಸಹಾಯಧನವನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಬೇಕು. ಇತ್ತೀಚಿನ ಫೋಟೋ ಇರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ನಿರ್ಮಾಣ ಹಂತದಲ್ಲಿರುವ ಶೌಚೌಲಯದ ಚಿತ್ರ ತೆಗೆಯಬೇಕು. ಇದರೊಂದಿಗೆ ಬ್ಯಾಂಕ್ ಖಾತೆ ಸಕ್ರೀಯವಾಗಿರಬೇಕು. ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಹೆಸರು ಒಂದೇ ರೀತಿಯಾಗಿರಬೇಕು.
ಅರ್ಜಿ ಸಲ್ಲಿಸಲಿಚ್ಚಿಸುವವರು ಈ ಹಿಂದೆ ಶೌಚಾಲಯ ನಿರ್ಮಾಣಕ್ಕೆ ಸಬ್ಸಿಡಿ ಪಡೆದಿರಬಾರದು
https://swachhbharatmission.ddws.gov.in/.
ಸ್ವಚ್ಛ ಭಾರತ ಮಿಷನ್ ಯೋಜನೆ ಯನ್ನು 2014ರ ಅಕ್ಟೋಬರ್ 2 ರಂದು ಜಾರಿಗೆ ತರಲಾಗಿದೆ. ಈ ಯೋಜನೆ ಜಾರಿಗೆ ಬಂದ ನಂತರ ಗ್ರಾಮೀಣ ಪ್ರದೇಶದಲ್ಲಿರುವ ಜನರು ಇದರ ಸೌಲಭ್ಯ ಪಡೆಯುತ್ತಿದ್ದಾರೆ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t
ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಸಮಯ,…
ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ ನಿಮ್ಮ ಖಾತೆಗೆ ಎಷ್ಟು…
ಕೃಷಿ ಜಮೀನಿನಲ್ಲಿ ವಿದ್ಯುತ್ ಕಂಬ ಇದ್ದರೆ ರೈತರಿಗೆ ₹10,000 ಪರಿಹಾರ ಹಾಗೂ ಮಾಸಿಕ ಬಾಡಿಗೆ ನೀಡುವ ಸರ್ಕಾರದ ಹೊಸ ನಿಯಮ…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ಕುಟುಂಬಗಳು ಭೂಪರಿವರ್ತನೆ ಆದೇಶಗಳಿಲ್ಲದೆ ಮನೆಗಳನ್ನು ನಿರ್ಮಿಸಿಕೊಂಡು ನೆಲೆಸಿವೆ.ಇಂತಹ ಅಕ್ರಮ ನಿವೇಶನಗಳು ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿದ್ದರೂ,…
ಆತ್ಮೀಯ ಓದುಗರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ನಮ್ಮ ಸಂವಿಧಾನದ 73 ನೇ ತಿದ್ದುಪಡಿಯ ಪ್ರಕಾರ…