ಮೈಸೂರು, ನವೆಂಬರ್24: ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಎದೆ ಬಡಿದುಕೊಂಡು ಹೇಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು. ಇದು ರೆಬೆಲಿಯನ್ ಸಿದ್ದರಾಮಯ್ಯ ವರ್ಸಸ್ ಕಾಂಪ್ರಮೈಸ್ ಸಿದ್ದರಾಮಯ್ಯ ನಡುವಿನ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೈಸೂರು, ನವೆಂಬರ್26: ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಎದೆ ಬಡಿದುಕೊಂಡು ಹೇಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು. ಇದು ರೆಬೆಲಿಯನ್ ಸಿದ್ದರಾಮಯ್ಯ ವರ್ಸಸ್ ಕಾಂಪ್ರಮೈಸ್ ಸಿದ್ದರಾಮಯ್ಯ ನಡುವಿನ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Thank you for reading this post, don't forget to subscribe!ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲಿನಂತೆ ರೆಬೆಲಿಯನ್ ಸಿದ್ದರಾಮಯ್ಯ ಆದರೆ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡುವುದಿಲ್ಲ. ಕಾಂಪ್ರಮೈಸ್ ಸಿದ್ದರಾಮಯ್ಯ ಆದರೆ ಬಿಟ್ಟುಕೊಡುತ್ತಾರೆ. ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ತಮ್ಮ ಗಟ್ಟಿತನ ಉಳಿಸಿಕೊಂಡಿದ್ದಾರೆ ಎಂಬುದು ಈ ತಿಂಗಳಿನಲ್ಲಿ ಗೊತ್ತಾಗಲಿದೆ. ನಾವು ನೋಡಿದ ಸಿದ್ದರಾಮಯ್ಯ ಮೊದಲಿನಿಂದಲೂ ರೆಬೆಲಿಯನ್. ಅವರದ್ದು ಯಾವಗಲೂ ಗಟ್ಟಿ ಗಡಸುತನದ ರಾಜಕಾರಣ. ಅದೇ ಮೂಲ ಸಿದ್ದರಾಮಯ್ಯ ಈಗ ಅಧಿಕಾರದ ಆಸೆಗಾಗಿ ಬದಲಾಗಿದ್ದಾರಾ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ವಿರುದ್ದ ಕಮಿಷನ್ ಆರೋಪ ಮಾಡಿದ್ದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡಿದ್ದು ಸುಳ್ಳು ಎಂಬುದು ತನಿಖಾ ವರದಿಯಿಂದ ಸಾಬೀತಾಗಿದೆ. ಈಗ ಅವರ ಸರ್ಕಾರದದಲ್ಲಿ ಎಲ್ಲಾ ಇಲಾಖೆಯಲ್ಲಿ ಎಷ್ಟೆಷ್ಟು ಕಮಿಷನ್ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ದಿನವೇ ಕಾಂಗ್ರೆಸ್ ಮನೆಯಲ್ಲಿ ಬಿರುಕು ಶುರುವಾಯಿತು. ಈಗ ಆ ಬಿರುಕು ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಒಳ ಜಗಳದ ವಿಚಾರದ ಕುರಿತು ಕೆಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷ ನಮ್ಮ ವಿರೋಧಿ ಅವರ ಸಿದ್ಧಾಂತವನ್ನು ಬಿಜೆಪಿ ವಿರೋಧಿಸುತ್ತಾ ಬಂದಿದೆ. ದೇಶದಲ್ಲಿ ಕಾಂಗ್ರೇಸ್ಸೇತರ ಸರ್ಕಾರ ಇರಬೇಕು ಎಂಬುದು ನಮ್ಮ ನಿಲುವು ರಾಜ್ಯ ಕಾಂಗ್ರೆಸ್ ಸದ್ಯದ ಪರಿಸ್ಥಿತಿ ಲಾಭ ಪಡೆಯುವ ವಿಚಾರ ಸಮಯ ಬಂದಾಗಲೆಲ್ಲ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇವತ್ತು ಸಮಾಜದಲ್ಲಿ ಬಹಳಷ್ಟು ಗೊಂದಲ ಸೃಷ್ಟಿಯಾಗಿದೆ. ಇಡೀ ಜಗತ್ತಿನಲ್ಲಿ ಗೊಂದಲ ಸೃಷ್ಟಿಯಾಗಿದೆ ಮಾನವನ ಮನಸ್ಸು ಬಹಳ ಕಲುಷಿತವಾಗಿದೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಧರ್ಮ ಎಲ್ಲರನ್ನು ಕೂಡಿಸಬೇಕು. ಆದರೆ, ಧರ್ಮ ಎಲ್ಲರನ್ನು ಬೇರ್ಪಡಿಸುತ್ತಿದೆ. ಸ್ವಾಮಿವಿವೇಕಾನಂದರು ಧರ್ಮದ ಬಗ್ಗೆ ಸಷ್ಟವಾಗಿ ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ನೀನು ಬದುಕಿರುವ ಭೂಮಿಯನ್ನು ಪ್ರೀತಿಸು ಅಂತ ಹೇಳಿದ್ದಾರೆ. ಧರ್ಮ ಮತ್ತು ದೇಶದ ಬಗ್ಗೆ ಸಂಬಂಧ ಅಲ್ಲಿಂದ ಶುರುವಾಗುತ್ತದೆ.
ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೆ ನಮ್ಮ ಭಾರತ ದೇಶದ ಪರಿಸ್ಥಿತಿ ನೋಡಿದಾಗ ವಯಕ್ತಿಕವಾಗಿ ಎಲ್ಲರೂ ಬುದ್ದಿವಂತರಿದ್ದೇವೆ. ನಮಗೆ ಬಹಳ ಗೊಂದಲದ ಚರಿತ್ರೆ ಇದೆ. ಬೇರೆ ದೇಶದಲ್ಲಿ ದೊಡ್ಡ ಯುದ್ಧಗಳಾದರೂ ಯಾವುದೇ ಸಂಸ್ಕೃತಿ, ಧರ್ಮ ಬದಲಾಗಲಿಲ್ಲ. ಆದರೆ, ಇಲ್ಲಿ ಕೇವಲ ಭೂಮಿಗಾಗಿ, ಸಂಪತ್ತಿಗಾಗಿ ದಾಳಿ ನಡೆಯಲಿಲ್ಲ. ಇಲ್ಲಿ ಸಂಸ್ಕೃತಿ ಮೇಲೆ ದಾಳಿ ಮಾಡಿದರು. ಏಕೆಂದರೆ ಈ ಧರ್ಮದ ಬೇರುಗಳು ಅಷ್ಟು ಆಳವಾಗಿರುವುದರಿಂದ ಎಲ್ಲೆಡೆ ಪಸರಿಸುತ್ತವೆ ಎಂದು ದಾಳಿ ಮಾಡಿದರು. ಆದರೆ, ಸ್ವಾಮಿ ವಿವೇಕಾನಂದನಂತಹ ನೂರಾರು ಸಂತರು ಈ ದೇಶವನು ಉಳಿಸಿದ್ದಾರೆ. ಆ ಅಸ್ತಿತ್ವ ಉಳಿಸುವ ಕೆಲಸ ಸ್ವಾಮೀಜಿಗಳು ಮಾಡುತ್ತಿದ್ದಾರೆ.
ಸಾವಿರಾರು ಮತ್ತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಚರಿತ್ರೆ ಕೊಟ್ಟಿದ್ದಾರೆ. ಅದನ್ನು ಪರಿಪೂರ್ಣವಾಗಲು ಈ ಮಠ ಕೊಟ್ಟಿದೆ. ದೇಶ ಕಟ್ಟುವ ಕೆಲಸ ಏನೆಂದು ತೋರಿಸಿದ್ದೀರಿ ನಿಮಗೆ ಕೋಟಿ ಕೋಟಿ ನಮನ, ಇದು ಭದ್ರ ಬುನಾದಿಯಾಗಲಿ ನಮ್ಮ ಪಧಾನಿ ನರೇಂದ್ರ ಮೋದಿಯವರು 2047 ಕ್ಕೆ ವಿಕಸಿತ ಭಾರತದ ಕನಸು ಕಂಡಿದ್ದಾರೆ. ಅದರ ಕನಸು ನನಸು ಮಾಡುವ ವಿದ್ಯಾಶಾಲೆ. ನರೇಂದ್ರ ಮೋದಿಯವರ ಹೆಸರಿನಲ್ಲಿಯೂ ನರೇಂದ್ರ ಇದೆ. ಅವರ ದೂರದೃಷ್ಟಿಯಲ್ಲಿ ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸ ಅವರ ಆದರ್ಶ ಇದೆ. 2047 ರಲ್ಲಿ ಮೋದಿ ಇರುತ್ತಾರಾ ಎಂದು ಕೆಲವರು ಕೇಳಿದ್ದಾರೆ. ಆದರೆ, ಮೊದಿಯವರು ಇರುತ್ತಾರೊ ಇಲ್ಲವೊ ಗೊತ್ತಿಲ್ಲ. ಆದರೆ, ಈ ದೇಶ ಇರುತ್ತದೆ ಅದಕ್ಕಾಗಿ ಈ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…