ಪಿಎಂ ಕಿಸಾನ್ ಮಾನಧನ್ ಯೋಜನೆಯಡಿ ಸಣ್ಣ ಮತ್ತು ಅಂಚಿನ ರೈತರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಮಹತ್ವದ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಅರ್ಹ ರೈತರು ನಿಗದಿತ ವಯಸ್ಸಿನ ನಂತರ ತಿಂಗಳಿಗೆ ₹3,000 ಪಿಂಚಣಿ ಪಡೆಯಬಹುದು. ಅರ್ಹತೆ, ಕೊಡುಗೆ ಮೊತ್ತ ಮತ್ತು ಅರ್ಜಿ ವಿಧಾನವನ್ನು ಇಲ್ಲಿ ವಿವರವಾಗಿ ತಿಳಿದುಕೊಳ್ಳಿ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಪಿಎಂ ಕಿಸಾನ್ ಮಾನಧನ್ ಯೋಜನೆಯಡಿ ರೈತರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ಅಂದರೆ ವರ್ಷಕ್ಕೆ 36 ಸಾವಿರ ರೂಪಾಯಿ ಪಡೆಯಬಹುದು. ಈ ಪಿಂಚಣಿಗಾಗಿ ರೈತರು ತಮ್ಮ ವಯಸ್ಸಿನ ಪ್ರಕಾರ ಪ್ರತಿ ತಿಂಗಳು ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಬೇಕು. ಹೌದು, ಕೇಂದ್ರ ಸರ್ಕಾರವು ಜಾರಿಗೆ ತಂದ ಈ ಯೋಜನೆಯಿಂದರೈತರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪೆನ್ಶನ್ ದೊರೆಯಲಿದೆ. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
Thank you for reading this post, don't forget to subscribe!ಪಿಎಂ ಕಿಸಾನ್ ಮಾನಧನ್ ಯೋಜನೆ ಅಡಿಯಲ್ಲಿ ಎರಡು ಹೆಕ್ಟೇರ್ ವರೆಗೆ ಜಮೀನು ಹೊಂದಿರುವ ರೈತರು 18 ರಿಂದ 40 ವಯೋಮಾನದೊಳಗಿರನವರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ
ಅರ್ಹ ರೈತರು ಪ್ರತಿ ತಿಂಗಳು 55 ರಿಂದ 200 ರೂಪಾಯಿಯವರೆಗೆ ಹಣ ತುಂಬಬೇಕು. ಉಳಿದ ಹಣವನ್ನು ಕೇಂದ್ರ ಸರ್ಕಾರ ಕೂಡ ಇಸ್ಟೇ ಹಣವನ್ನು ತುಂಬುತ್ತದೆ ಒಂದು ವೇಳೆ 18 ವಯಸ್ಸಿನಿಂದ ಈ ಯೋಜನೆ ಆರಂಭಿಸಿದರೆ ತಿಂಗಳಿಗೆ ಕನಿಷ್ಟ 55 ರೂಪಾಯಿಯಂತೆ ಕಟ್ಟಬೇಕು. ಒಂದು ವೇಳೆ 40ನೇ ವಯಸ್ಸಿನಲ್ಲಿ ಯೋಜನೆ ಪಡೆದರೆ ತಿಂಗಳಿಗೆ 200 ರೂಪಾಯಿ ಕಟ್ಟಬೇಕು.
60 ವರ್ಷದವರೆಗೆ ಪ್ರತಿ ತಿಂಗಳು ಪಿಂಚಣಿ ನಿಧಿಗೆ ಕಟ್ಟಬೇಕು. ಅದಾದ ಬಳಿಕ ತಿಂಗಳಿಗೆ 3 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪಿಂಚಣಿಯನ್ನು ರೈತರು ಪಡೆಯಬಹುದು.
ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ ನೀಡಬೇಕು. ರೈತರು ವಯಸ್ಸಿಗೆ ಅನುಗುಣವಾಗಿ ಅವರು ಕನಿಷ್ಟ ಎಷ್ಟು ಹಣ ಕಟ್ಟಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಯೋಜನೆಯಲ್ಲಿ ನೋಂದಣಿ ಮಾಡಿಕೊಂಡ ನಂತರ ರೈತರಿಗೆ ವಿಶೇಷ ಕಿಸಾನ್ ಪೆನ್ಶನ್ ಅಕೌಂಟ್ ನಂಬರ್ ನೀಡಲಾಗುವುದು. ಬಳಿಕ ಕಿಸಾನ್ ಕಾರ್ಡ್ನೀಡಲಾಗುವುದು.
ನಿಮ್ಮ ವಯಸ್ಸಿನ ಪ್ರಕಾರ ಎಷ್ಟು ಪೆನ್ಶನ್ ಹಣ ಕಟ್ಟಬೇಕು ಎಂಬುದನ್ನು ಚೆಕ್ ಮಾಡಲು ಈ
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮಗೆ ಪಿಎಂ ಕಿಸಾನ್ ಮಾನ್ಧನ್ ಕ್ಯಾಲ್ಕುಲೇಶನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ವಯಸ್ಸು ಹಾಗೂ ಅದರ ಮುಂದೆ ಪೆನ್ಶನ್ ಹಣ ಇರುತ್ತದೆ.
10 ರಿಂದ 40 ವಯೋಮಾನದವರಿಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ತುಂಬಿದ ನಂತರ ರೈತರು ಮಾಸಿಕವಾಗಿ 3 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಾರೆ.
ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಪಾಸ್ ಬುಕ್, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಗಾತ್ರದ ಫೋಟೋ ಇರಬೇಕು.
ಪಿಎಂ ಕಿಸಾನ್ ಮಾನಧನ್ ಯೋಜನೆಯಂತೆ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಿಎಂ ಕಿಸಾನ್ ಯೋಜನೆ, ಪಿಎಂ ಕಿಸಾನ್ ಶ್ರಮಯೋಗಿ ಯೋಜನೆ, ಪಿಎಂ ಕಿಸಾನ್ ಮಾನಧನ್ ಯೋಜನೆ,ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…