Categories: information

ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ Mobile ನಲ್ಲೇ ಪಡೆಯಿರಿ ಜಾತಿ-ಆದಾಯ ಪ್ರಮಾಣಪತ್ರ

ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಸಮಯ, ಹಣ ಮತ್ತು ಶ್ರಮ ಉಳಿಸುವ ಕರ್ನಾಟಕ ಸರ್ಕಾರದ ಡಿಜಿಟಲ್ ಸೇವೆಗಳ ಸಂಪೂರ್ಣ ಮಾಹಿತಿ ಇಲ್ಲಿ.

Spread the love

ಹಲವು ಗಂಟೆಗಳ ಕಾಲ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಕೆಲಸ ಬಿಟ್ಟು ನಾಡಕಚೇರಿ ಅಥವಾ ಸೈಬರ್ ಸೆಂಟರ್‌ಗಳ ಮುಂದೆ ಅಲೆಯುತ್ತಿದ್ದೀರಾ? ಇನ್ಮೇಲೆ ಆ ಚಿಂತೆ ಬಿಡಿ! ನಿಮ್ಮ ಜೇಬಿನಲ್ಲಿರುವ ಸ್ಮಾರ್ಟ್‌ಫೋನ್ ಈಗ ಕೇವಲ ಚಾಟಿಂಗ್‌ಗೆ ಮಾತ್ರವಲ್ಲ, ನಿಮ್ಮ ಸರ್ಕಾರಿ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮುಗಿಸಿಕೊಡವ ಶಕ್ತಿಶಾಲೀ ಸಾಧನವೂ ಹೌದು.

Thank you for reading this post, don't forget to subscribe!

ಕರ್ನಾಟಕ ಸರ್ಕಾರದ ಈ ಡಿಜಿಟಲ್ ಕ್ರಾಂತಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ, ನಿಮ್ಮ ಹಣ ಮತ್ತು ಸಮಯ ಎರಡನ್ನೂ ಉಳಿಸಿ!

  • 1.ಲಂಚದ ಕಾಟವಿಲ್ಲ: ಮಧ್ಯವರ್ತಿಗಳಿಗೆ ಅಥವಾ ಏಜೆಂಟರಿಗೆ ನೂರಾರು ರೂಪಾಯಿ ಕೊಡುವ ಅಗತ್ಯವೇ ಇಲ್ಲ.
    2.ಅತಿ ಕಡಿಮೆ ಶುಲ್ಕ: ಕೇವಲ ₹40 ಸರ್ಕಾರಿ ಶುಲ್ಕ ಪಾವತಿಸಿದರೆ ಸಾಕು.
    3.ಅಪ್ಪಟ ಅಸಲಿ: ಇದು ಡಿಜಿಟಲ್ ಸಹಿ ಹೊಂದಿರುವ ಅಧಿಕೃತ ದಾಖಲೆ, ಎಲ್ಲೂ ರಿಜೆಕ್ಟ್ ಆಗಲ್ಲ.
    4.ಸಮಯ ಉಳಿತಾಯ: ಬಸ್ ಚಾರ್ಜ್ ಮತ್ತು ಒಂದು ದಿನದ ಕೂಲಿ ಎರಡೂ ಉಳಿಯುತ್ತದೆ.

ಕೆಲಸ ಶುರು ಮಾಡುವ ಮೊದಲು ಇವು ನಿಮ್ಮ ಬಳಿ ಇರಲಿ:

ಅರ್ಜಿ ಸಲ್ಲಿಸಲು ಕುಳಿತುಕೊಳ್ಳುವಾಗ ಈ 3 ವಸ್ತುಗಳು ಕೈಗೆಟುಕುವಂತೆ ಇರಲಿ:

ಆಧಾರ್ ಸಂಖ್ಯೆ: ನಿಮ್ಮ ಅಥವಾ ನಿಮ್ಮ ಮಗುವಿನ ಆಧಾರ್ ಕಾರ್ಡ್.
ಹಳೆಯ ಆರ್.ಡಿ (RD) ಸಂಖ್ಯೆ: (ಅತಿ ಮುಖ್ಯ!) ನಿಮ್ಮ ಬಳಿ ಹಳೆಯ ಜಾತಿ ಅಥವಾ ಆದಾಯ ಪ್ರಮಾಣಪತ್ರವಿದ್ದರೆ, ಅದರಲ್ಲಿರುವ RD ಸಂಖ್ಯೆ ನಿಮ್ಮ ಅರ್ಜಿಯನ್ನು ಅತಿ ವೇಗವಾಗಿ (Instant) ಅಪ್ರೂವ್ ಮಾಡಲು ಸಹಾಯ ಮಾಡುತ್ತದೆ.
ಸ್ಮಾರ್ಟ್‌ಫೋನ್: ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್.

ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸುವ ‘ಸಿಂಪಲ್’ ಹಂತಗಳು:

1.ವೆಬ್‌ಸೈಟ್‌ಗೆ ಎಂಟ್ರಿ ಕೊಡಿ:

https://nadakacheri.karnataka.gov.in/ajsk

2.ಲಾಗಿನ್ ಪ್ರಕ್ರಿಯೆ:

‘Online Applications’ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ ನೀಡಿ ಬರುವ OTP ಹಾಕಿ ಲಾಗಿನ್ ಆಗಿ. ಇದು ಸಂಪೂರ್ಣ ಸುರಕ್ಷಿತ.

3. ಯಾವ ಪ್ರಮಾಣಪತ್ರ ಬೇಕು?:

‘New Request’ ಮೆನುವಿನಲ್ಲಿ ನಿಮಗೆ ಬೇಕಾದ ‘Caste/Income’ ಸರ್ಟಿಫಿಕೇಟ್ ಆಯ್ಕೆ ಮಾಡಿ

4. ಮ್ಯಾಜಿಕ್ ಸ್ಟೆಪ್ (ಹಳೆಯ RD ನಂಬರ್):

ನಿಮ್ಮ ಬಳಿ ಹಳೆಯ ಪ್ರಮಾಣಪತ್ರವಿದ್ದರೆ, ಅದರ RD ಸಂಖ್ಯೆಯನ್ನು ನಮೂದಿಸಿ. ಹೀಗೆ ಮಾಡಿದರೆ ಸಾಕು, ನಿಮ್ಮ ಹೆಸರು, ವಿಳಾಸ, ಜಾತಿ ಎಲ್ಲವೂ ಆಟೋಮ್ಯಾಟಿಕ್ ಆಗಿ ಸ್ಕ್ರೀನ್ ಮೇಲೆ ಬರುತ್ತದೆ. ನೀವು ಮತ್ತೆ ಎಲ್ಲವನ್ನೂ ಟೈಪ್ ಮಾಡುವ ಅವಶ್ಯಕತೆ ಇಲ್ಲ!

5. ಹಣ ಪಾವತಿ:

ಎಲ್ಲಾ ಸರಿಯಿದೆಯೇ ಎಂದು ಒಮ್ಮೆ ಪರಿಶೀಲಿಸಿ ‘Save’ ಮಾಡಿ. ನಂತರ ₹40 ಶುಲ್ಕವನ್ನು ನಿಮ್ಮ PhonePe, Google Pay ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಿ.

6. ಡೌನ್‌ಲೋಡ್ ಮಾಡಿಕೊಳ್ಳಿ:

ಹಳೆಯ ದಾಖಲೆಗಳು ಸರಿಯಾಗಿದ್ದರೆ ಕೆಲವೇ ನಿಮಿಷದಲ್ಲಿ ಅಥವಾ 1-2 ದಿನದಲ್ಲಿ ನಿಮ್ಮ ಮೊಬೈಲ್‌ಗೆ ಮೆಸೇಜ್ ಬರುತ್ತದೆ. ಆಗ ಮತ್ತೆ ವೆಬ್‌ಸೈಟ್‌ಗೆ ಹೋಗಿ ‘Download’ ಬಟನ್ ಒತ್ತಿ ಪ್ರಮಾಣಪತ್ರವನ್ನು ಪಡೆದುಕೊಳ್ಳಿ.

ನಮ್ಮ ವಿಶೇಷ ಸಲಹೆ:


ನಾಡಕಚೇರಿ ವೆಬ್‌ಸೈಟ್ ಹಗಲು ಹೊತ್ತಿನಲ್ಲಿ ಹೆಚ್ಚು ಲೋಡ್ ಇರುತ್ತದೆ. ಆದ್ದರಿಂದ ನೀವು ಸುಲಭವಾಗಿ ಕೆಲಸ ಮುಗಿಸಬೇಕೆಂದರೆ ರಾತ್ರಿ 10 ಗಂಟೆಯ ನಂತರ ಅಥವಾ ಮುಂಜಾನೆ 6 ಗಂಟೆಯ ಸುಮಾರಿಗೆ ಪ್ರಯತ್ನಿಸಿ. ಆಗ ವೆಬ್‌ಸೈಟ್ ತುಂಬಾ ಫಾಸ್ಟ್ ಆಗಿ ಕೆಲಸ ಮಾಡುತ್ತದೆ.

ಗಮನಿಸಿ: ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ವಿಳಾಸ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಅದೇ ಮಾಹಿತಿ ನಿಮ್ಮ ಪ್ರಮಾಣಪತ್ರದಲ್ಲೂ ಬರುತ್ತದೆ.

ಓದುಗರಲ್ಲಿ ವಿನಂತಿ

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

Recent Posts

ಇಂದಿನಿಂದ ನಾಲ್ಕು ದಿನ 17 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಲ್ಲೆಲ್ಲಿ ಮಳೆ ಇಲ್ಲಿದೆ ಮಾಹಿತಿ!

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ತೇವಾಂಶ ಭರಿತ ಮೋಡದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಾರ್ಚ್ 22…

56 years ago

Heavy Rain: 4 ದಿನ ಭಾರೀ ಮಳೆ, ರಾಜ್ಯದ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ!

25 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ಮಲೆನಾಡು, ಕರಾವಳಿ, ಒಳನಾಡು, ಉತ್ತರ…

56 years ago

ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹಳೆಯ ಪಹಣಿಯನ್ನು ಸುಲಭವಾಗಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಹಿಂದಿನ ಅಂಕಣಗಳಲ್ಲಿ ನಾವು ಮೋಬೈಲ್ ನಲ್ಲಿಯೇ…

56 years ago

ಮಾರ್ಚ್ 15 ರಿಂದ ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಇಲ್ಲಿದೆ ಮಾಹಿತಿ

ಮಾರ್ಚ್ 15ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾವ ಯಾವ…

56 years ago

ನಿಮ್ಮ ಮೊಬೈಲ್ ನಲ್ಲಿ ಜಮೀನಿನ ಖಾತಾ ಬದಲಾವಣೆಗೆ ಅರ್ಜಿ ಹೀಗೆ ಸಲ್ಲಿಸಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮೊಬೈಲ್‌ನಲ್ಲೇ ಜಮೀನಿನ ಖಾತಾ ಬದಲಾವಣೆಗೆ ಈಗ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಮತ್ತು ಪ್ರಕ್ರಿಯೆಯ…

56 years ago

ಕುರಿ ಸಾಕಾಣಿಕೆ ಮಾಡುವವರಿಗೆ 1.75 ಲಕ್ಷ ಸಬ್ಸಿಡಿ ನೀಡಲಿದೆ ಸರ್ಕಾರ! ಈಗಲೇ ಅರ್ಜಿ ಸಲ್ಲಿಸಿ!

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ರಾಜ್ಯ ಸರ್ಕಾರವು ಇತ್ತೀಚೆಗೆ ಕಳೆದ…

56 years ago