ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ ದಾಂಡಿಗ, ಕ್ರಿಕೆಟ್ ಎಂದರೆ ವಿರಾಟ್, ವಿರಾಟ್ ಎಂದರೆ ಕ್ರಿಕೆಟ್ ಎಂದರೆ ತಪ್ಪಾಗಲಾರದು. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಮೂರನೇ ವ್ಯಕ್ತಿ ಕೊಹ್ಲಿ ಆಗಿದ್ದು, ಏಷ್ಯಾದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದವರಾಗಿದ್ದಾರೆ. ಕ್ರಿಕೆಟ್ ಲೋಕದ ಮಟ್ಟಿಗೆ ‘ಕಿಂಗ್ ಕೊಹ್ಲಿ’ ಎಂದು ಹೆಸರುವಾಸಿಯಾಗಿರುವ ಅವರು,ತಮ್ಮ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಹೊಂದಿದ್ದಾರೆ. ಈ ಆರ್ಟಿಕಲ್ ನಲ್ಲಿ ಅವರ ಹೆಸರಿನಲ್ಲಿರುವ ಮಹತ್ವದ ದಾಖಲೆಗಳನ್ನು ನೋಡೋಣ ಬನ್ನಿ.
Thank you for reading this post, don't forget to subscribe!
ವಿರಾಟ್ ಕೊಹ್ಲಿ ದಾಖಲೆಗಳು ಒಂದೆರಡಲ್ಲ ಬಹಳಷ್ಟಿವೆ.
ನಾಯಕನಾಗಿ u19 ವಿಶ್ವಕಪ್ ಗೆಲ್ಲಿಸಿಕೊಟ್ಟ ಖ್ಯಾತಿ ಇವರಿಗೆ ಸಲ್ಲುತ್ತದೆ.
-ODI ಗಳಲ್ಲಿ ಸತತ ಮೂರು ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ.
-T20I ನಲ್ಲಿ ವೇಗವಾಗಿ 1000 ಪೂರೈಸಿದ 2 ನೆ ಕ್ರಿಕೆಟಿಗ.
– ODI ನಲ್ಲಿ ವೇಗವಾಗಿ 1000, 5000,6000,7000,8000,9000,
10000, ತಲುಪಿದ ಮೊದಲ ಭಾರತೀಯ ಆಟಗಾರ. ಇನ್ನು ಹಲವಾರು ದಾಖಲೆಗಳಿವೆ.
ವಿರಾಟ್ ಕೊಹ್ಲಿಗೆ ಸಂದ ಪ್ರಶಸ್ತಿಗಳ ಪಟ್ಟಿ –
ಅರ್ಜುನ ಪ್ರಶಸ್ತಿ-2013,
ಪದ್ಮಶ್ರೀ-2017,
ಮೇಜರ್ ಧ್ಯಾನ್ ಚೆಂದ್ ಖೇಲ್ ರತ್ನ ಪ್ರಶಸ್ತಿ-2018,
ಸರ್ ಗಾರ್ಫಿಲ್ಡ್ ಸೊಬರ್ಸ್ ಪ್ರಶಸ್ತಿ-2017-18,
ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ(ದಶಕದ ಆಟಗಾರ)-2010-2020.
ವಿರಾಟ್ ಕೊಹ್ಲಿ ಯವರು ಐಪಿಎಲ್ ನ ಒಂದೇ ಸೀಸನ್ ನಲ್ಲಿ ಅತಿ ಹೆಚ್ಚು ರನ್(973) ಬಾರಿಸಿ ಒಂದೇ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರೆಂಬ ದಾಖಲೆ ಮಾಡಿದ್ದಾರೆ. ಐಪಿಎಲ್ ನಲ್ಲಿ ಅತಿ ಹೆಚ್ಚು ಸೆಂಚುರಿ (7) ಬಾರಿಸಿದವರಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಐಪಿಎಲ್ ನಲ್ಲಿ ಅತಿ ಹೆಚ್ಚು ವಯಕ್ತಿಕ ಅತಿ ಹೆಚ್ಚು ರನ್(7263) ಬಾರಿಸಿದವರಲ್ಲಿಯೂ ಕೂಡಾ ವಿರಾಟ್ ಅಗ್ರಸ್ಥಾನದಲ್ಲಿದ್ದಾರೆ.
ಸ್ನೇಹಿತರೆ ಕೊಹ್ಲಿ ಎಂದರೆ ಯಾಕೆ ಎಲ್ಲರಿಗೂ ಇಷ್ಟ ಎಂದು ನಿಮಗೆ ಈಗ ಮನವರಿಕೆ ಆಗಿರಬಹುದು.ಇಂತಹ ಶ್ರೇಷ್ಠ ದಾಖಲೆ ಮಾಡಿರುವ ಅವರು ಒಬ್ಬ ಭಾರತೀಯ ಆಟಗಾರ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.