Categories: information

ಪ್ರತಿಯೊಬ್ಬ ಕನ್ನಡಿಗನು ತಿಳಿದುಕೊಳ್ಳಬೇಕಾದ ಕನ್ನಡ ಭಾಷೆಯ ಅದ್ಭುತ ಸಂಗತಿಗಳು!

ಕನ್ನಡ ಭಾಷೆಯು ವಿಶ್ವದಲ್ಲಿಯೇ ಶ್ರೇಷ್ಠ ಭಾಷೆ ಎಂಬ ಮಾನ್ಯತೆಯನ್ನು ಹೊಂದಿದೆ. ಸ್ವತಹ ಮರಾಠಿಗರಾದ ವಿನೋಬಾ ಭಾವೆ ಅವರು ಕೂಡ ಕನ್ನಡವನ್ನ 'ಲಿಪಿಗಳ ರಾಣಿ' ಎಂದು ಕರೆದಿದ್ದಾರೆ. ಜಗತ್ತಿನಲ್ಲಿರುವ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಮತ್ತು ಅತ್ಯಂತ ವೈಜ್ಞಾನಿಕವಾಗಿರುವ ಭಾಷೆಗಳಲ್ಲಿ ಕನ್ನಡವೂ ಕೂಡ ಒಂದು.

Spread the love

ಸ್ನೇಹಿತರೆ ನವೆಂಬರ್ 1,1973 ರಂದು ಸ್ವಾತಂತ್ರ್ಯ ಭಾರತದ ಮೈಸೂರು ರಾಜ್ಯವು ಕರ್ನಾಟಕವೆಂದು ಮರು ನಾಮಕರಣಗೊಂಡ ವಿಷೇಶ ದಿನ. ಹೀಗಾಗಿ ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ. ಇಡೀ ದೇಶದಾದ್ಯಂತ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಿದ ದಿನ ಇದು. ಈ ದಿನ ಕೇವಲ ಸಾಮಾನ್ಯ ದಿನವಾಗಿರದೆ ಇದು ಇತಿಹಾಸದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಕನ್ನಡಿಗರಲ್ಲಿ ಕನ್ನಡ ಭಾಷೆ ಕನ್ನಡ ನಾಡಿನ ಅಸ್ಮಿತೆಯ ಕುರಿತಂತೆ ಜಾಗೃತಿಯನ್ನು ಎಚ್ಚರಿಸಿದ ಬಹುಮುಖ್ಯ ದಿನ ಇದು. ಈ ದಿನ ಕನ್ನಡಿಗರಿಗೆ ಸದಾ ಅಭಿಮಾನದ ದಿನವಾಗಿ ಮುಂದುವರಿಯಲಿದೆ.

Thank you for reading this post, don't forget to subscribe!

ಕನ್ನಡ ಭಾಷೆಯು ವಿಶ್ವದಲ್ಲಿಯೇ ಶ್ರೇಷ್ಠ ಭಾಷೆ ಎಂಬ ಮಾನ್ಯತೆಯನ್ನು ಹೊಂದಿದೆ. ಸ್ವತಹ ಮರಾಠಿಗರಾದ ವಿನೋಬಾ ಭಾವೆ ಅವರು ಕೂಡ ಕನ್ನಡವನ್ನ ‘ಲಿಪಿಗಳ ರಾಣಿ’ ಎಂದು ಕರೆದಿದ್ದಾರೆ. ಜಗತ್ತಿನಲ್ಲಿರುವ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಮತ್ತು ಅತ್ಯಂತ ವೈಜ್ಞಾನಿಕವಾಗಿರುವ ಭಾಷೆಗಳಲ್ಲಿ ಕನ್ನಡವೂ ಕೂಡ ಒಂದು. ಹಾಗಾದ್ರೆ ಬನ್ನಿ ಸ್ನೇಹಿತರೆ ಈ ಆರ್ಟಿಕಲ್ ನಲ್ಲಿ ಕನ್ನಡ ಭಾಷೆಯ ಕುರಿತಂತೆ ಇರುವ ಅದ್ಭುತ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ.

1. ಪ್ರತಿಯೊಂದು ಶಬ್ದವು ಸ್ವರದಿಂದ ಅಂತ್ಯಗೊಳ್ಳುತ್ತದೆ : ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿದ್ದು ಅದರಲ್ಲಿ 15 ಸ್ವರಗಳು 34 ವ್ಯಂಜನಗಳಾಗಿವೆ. ಅಷ್ಟೇ ಅಲ್ಲದೆ ಕನ್ನಡವು ಸಂಸ್ಕೃತ, ಪ್ರಾಕೃತ, ಪರ್ಷಿಯನ್, ಅರೇಬಿಕ್, ಇಂಗ್ಲೀಷ್ ಹೀಗೆ ಮುಂತಾದ ಭಾಷೆಗಳಿಂದ ಹಲವು ಶಬ್ದಗಳನ್ನು ಎರವಲು ತೆಗೆದುಕೊಂಡಿದೆ. ಹೀಗಿದ್ದರೂ ಕನ್ನಡದ ಪ್ರತಿಯೊಂದು ಶಬ್ದವು ಸ್ವರದಿಂದ ಅಂತ್ಯಗೊಳ್ಳುತ್ತದೆ. ಇದು ಕನ್ನಡ ಭಾಷೆಯ ವೈಶಿಷ್ಟ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

2. ಜಗತ್ತಿನ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು : ಜಗತ್ತಿನಲ್ಲಿ ಪ್ರಚಲಿತವಾಗಿರುವ ಹಲವು ಭಾಷೆಗಳಲ್ಲಿ ಇತ್ತೀಚೆಗೆ ಹುಟ್ಟಿಕೊಂಡಂತಹ ಭಾಷೆಗಳು ಹೆಚ್ಚಿನವು. ಆದರೆ ಜಗತ್ತಿನಲ್ಲಿರುವ ಕೆಲವೇ ಕೆಲವು ಅತಿ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಕೂಡ ಒಂದಾಗಿದೆ. ಹಲ್ಮಿಡಿ ಶಾಸನದಲ್ಲಿ ಕನ್ನಡ ಭಾಷೆಯ ಅಕ್ಷರಗಳ ಮೊದಲ ಉಲ್ಲೇಖ ಇದೆ. ಇನ್ನು ನೃಪತುಂಗ ರಚಿಸಿರುವ ‘ಕವಿರಾಜಮಾರ್ಗ’ ಕೃತಿಯು ಕನ್ನಡದಲ್ಲಿ ದೊರಕಿದ ಮೊಟ್ಟಮೊದಲ ಕಾವ್ಯವಾಗಿದೆ. ಅಲ್ಲದೇ ಮಹಾಭಾರತದ ಸಭಾ ಪರ್ವದಲ್ಲಿ ಕನ್ನಡ ನಾಡನ್ನು ‘ಕರ್ಣಾಟ’ ಎಂದು ಹೆಸರಿಸಲಾಗಿದೆ. ಹಾಗೆಯೇ ಭೀಷ್ಮ ಪರ್ವದಲ್ಲಿ ‘ಕರ್ಣಾಟಿಕಾ’ ಎಂದು ಉಲ್ಲೇಖಿಸಲಾಗಿದೆ.

3. ಕನ್ನಡ ಭಾಷೆಯ ಮೊಟ್ಟ ಮೊದಲ ಹಸ್ತ ಪ್ರತಿ: ಮೂಡುಬಿದಿರೆಯ ಜೈನ ಬಸದಿಯಲ್ಲಿ ಧವಳ ಜೈನರಿಂದ ರಚಿತವಾಗಿರುವ ಹಸ್ತ ಪ್ರತಿಗಳು ಕನ್ನಡ ಭಾಷೆಯಲ್ಲಿ ದೊರೆತ ಮೊಟ್ಟಮೊದಲ ಹಸ್ತ ಪ್ರತಿಗಳಾಗಿವೆ. ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯ ಉಲ್ಲೇಖ ಕ್ರಿಸ್ತ ಶಕಕ್ಕಿಂತಲೂ ಹಿಂದಿನದು (ಅಂದರೆ ಕ್ರಿಸ್ತ ಪೂರ್ವ) ಎಂದೂ ಇತಿಹಾಸಕಾರರು ವಾದಿಸುತ್ತಾರೆ.

4. ಗ್ರೀಕ್ ನಾಟಕದಲ್ಲಿ ಕನ್ನಡ ಪದಗಳ ಉಲ್ಲೇಖ : ಪ್ರಾಚೀನ ಗ್ರೀಕ್ ನ ಪ್ರಸಿದ್ಧ ನಾಟಕವಾದ ಚಾರೀಶನ ಮೈಮ್ (Charition Mime) ಎಂಬ ನಾಟಕದಲ್ಲಿ ಕನ್ನಡ ಪದಗಳ ಉಲ್ಲೇಖ ಮಾಡಲಾಗಿದೆ. ಈ ನಾಟಕದ ಹಸ್ತ ಪ್ರತಿಗಳು ಈಜಿಪ್ಟ್ ನಲ್ಲಿ ದೊರಕಿವೆ.

5. ವಿದೇಶಿಗರಿಂದ ರಚಿಸಲಾದ ಅತಿ ಪ್ರಾಚೀನ ಶಬ್ದಕೋಶ : ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಶಬ್ದಕೋಶವನ್ನು ರಚಿಸಿದ್ದು ರನ್ನ (ರನ್ನಕಾಂಡ) ಎಂದು ತಿಳಿದುಬಂದಿದೆ. ಆದರೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ಕುರಿತಂತೆ ಮೊಟ್ಟಮೊದಲ ಬಾರಿಗೆ ಶಬ್ದಕೋಶವನ್ನು ರಚಿಸಿದವರು ಜಾರ್ಜ್ ಫರ್ಡಿನಾಂಡ್ ಕಿಟೆಲ್. 1894 ರಲ್ಲಿ ರಚಿಸಲಾದ ಈ ಶಬ್ದಕೋಶವು ಒಟ್ಟು 70,000 ಶಬ್ದಗಳನ್ನು ಹೊಂದಿದೆ.

6. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಎರಡನೇ ಭಾಷೆ : ಭಾರತೀಯ ಸಾಹಿತ್ಯಕ್ಕೆ ಅಮೋಘವಾದ ಕೊಡುಗೆ ನೀಡಿದ್ದಕ್ಕೆ ನೀಡಲಾಗುವ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠವನ್ನು ಹಿಂದಿ ಭಾಷೆಯ ನಂತರ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ಎಂಬ ಕೀರ್ತಿ ಕನ್ನಡಕ್ಕೆ ಸಲ್ಲುತ್ತದೆ. ಕನ್ನಡಕ್ಕೆ ಇಲ್ಲಿಯವರೆಗೆ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ.

7. ವೈಜ್ಞಾನಿಕವಾದ ಭಾಷೆ : ಕನ್ನಡ ಭಾಷೆಯ ಪ್ರತಿಯೊಂದು ಅಕ್ಷರವು ವೈಜ್ಞಾನಿಕದಿಂದ ಕೂಡಿದೆ. ಅಂದರೆ ಕನ್ನಡ ಭಾಷೆಯ ಪ್ರತಿಯೊಂದು ಸ್ವರಕ್ಕೆ ಒಂದೊಂದು syllabal ಉತ್ಪತ್ತಿಯಾಗುತ್ತದೆ. ಹಾಗಾಗಿ ಇದನ್ನು ವೈಜ್ಞಾನಿಕ ಭಾಷೆ ಎಂದು ಗುರುತಿಸಲಾಗಿದೆ.

8. ಹಲವು ಉಪಭಾಷೆಗಳು : ಕನ್ನಡ ಭಾಷೆಯು ಕರ್ನಾಟಕದ ಅಧಿಕೃತ ಭಾಷೆ ಆಗಿದ್ದರೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನ್ನಡದ ವಿವಿಧ ಬಗೆಯ ಭಾಷೆಗಳನ್ನ ಜನ ಮಾತನಾಡುತ್ತಾರೆ. ಇದು ಕನ್ನಡ ಭಾಷೆಯ ವೈವಿಧ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಮಾತನಾಡುವ ಭಾಷೆಯಲ್ಲಿ ಹಲವು ವಿಭಿನ್ನತೆ ಇದ್ದರೂ ಬರೆಯುವ ಬರವಣಿಗೆಯಲ್ಲಿ ಅಥವಾ ಲಿಪಿಯಲ್ಲಿ ಯಾವುದೇ ವಿಭಿನ್ನತೆ ಇಲ್ಲ. ಇದು ಕೂಡ ಕನ್ನಡ ಭಾಷೆಯ ಮತ್ತೊಂದು ವಿಶೇಷತೆ ಆಗಿದೆ.

ಸ್ನೇಹಿತರೆ ಇದು ಕನ್ನಡ ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡಬೇಕಾದಂತಹ ಸಂಗತಿಗಳು. ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Recent Posts

Rain Update: ಇಂದಿನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ! ನಿಮ್ಮ ಜಿಲ್ಲೆಯಲ್ಲಿಯೂ ಆಗಲಿದೆಯಾ ಚೆಕ್ ಮಾಡಿ!

. ರೈತರೇ ಪ್ರಸಕ್ತ 2025ನೇ ಸಾಲಿನಲ್ಲಿ ಹಿಂದಿನ ವರ್ಷದ ವಾದಿಕೆಗಿಂತಲೂ ಈ ವರ್ಷ ಅತಿ ಹೆಚ್ಚು ಮಳೆ ಆಗುತ್ತಿದೆ ಹಾಗೂ…

56 years ago

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago