Categories: Science & Technology

ಪ್ರತಿಯೊಬ್ಬ Youtuber ಮೊಬೈಲ್ ನಲ್ಲಿ ಇರಲೇಬೇಕಾದ ಟಾಪ್ 5 Apps ಇಲ್ಲಿವೆ ನೋಡಿ!!

ಈ ಆರ್ಟಿಕಲ್ ನಲ್ಲಿ ನಾವು ಪ್ರತಿಯೊಬ್ಬ ಯುಟ್ಯೂಬರ್ಸ್ ಮೊಬೈಲ್ ನಲ್ಲಿ ಇರಲೇಬೇಕಾದ ಅವಶ್ಯಕ ಅಪ್ಲಿಕೇಶನ್ಸ್ (ಆಪ್ಸ್) ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ..!

Spread the love

ಸ್ನೇಹಿತರೇ ಇತ್ತೀಚಿಗೆ ಇಂಟರ್ನೆಟ್ ಬಂದ ಬಳಿಕ ಭಾರತದಲ್ಲಿ ಮೊಬೈಲ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ. ಇಂಟರ್ನೆಟ್ ಬಗ್ಗೆ ಅರಿವು ಹೆಚ್ಚಾದಂತೆ ಹಲವರು ಅದನ್ನೇ ತಮ್ಮ ಹೊಟ್ಟೆ ಪಾಡಿಗೆ ಸಾಧನ ಮಾಡಿಕೊಂಡವರಿದ್ದಾರೆ. ಅಂಥವರಲ್ಲಿ ಪ್ರಮುಖರು ಎಂದರೆ ಯುಟ್ಯೂಬರ್ಸ್. ಕಳೆದ ವರ್ಷ ಕೇವಲ ಯೂಟ್ಯೂಬ್ ಒಂದರಿಂದಲೇ ಭಾರತದ ಬೊಕ್ಕಸಕ್ಕೆ ಬರೋಬ್ಬರಿ 10,000 ಕೋಟಿ ರೂಪಾಯಿಯಷ್ಟು ತೆರಿಗೆ ಹರಿದು ಬಂದಿದೆ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದೆ.ಅದೇ ವರದಿಯ ಪ್ರಕಾರ ಬರೋಬ್ಬರಿ 7 ಲಕ್ಷ ಕುಟುಂಬಗಳು ತಮ್ಮ ಆದಾಯದ ಮೂಲವಾಗಿ ಯೂಟ್ಯೂಬ್ ಅನ್ನು ನೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದೆ.

Thank you for reading this post, don't forget to subscribe!

ಸ್ನೇಹಿತರೇ ಈ ವರದಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಯೂಟ್ಯೂಬ್ ನ ಮಹತ್ವ ಏನು ಎಂಬುದು ಗೊತ್ತಾಗುತ್ತದೆ. ಯುಟ್ಯೂಬರ್ಸ್ಗಳು ತಮ್ಮ ಒಂದು ವಿಡಿಯೋ ಮಾಡಲು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಸ್ಯೆಗಳಲ್ಲಿ ಪ್ರಮುಖವಾದವು ಎಂದರೆ ಯಾವ ಯಾವ ಆಪ್ಸ್ ಬಳಸಬೇಕು ಎಂಬುದು. ಹಾಗಾಗಿ ಈ ಆರ್ಟಿಕಲ್ ನಲ್ಲಿ ನಾವು ಪ್ರತಿಯೊಬ್ಬ ಯುಟ್ಯೂಬರ್ಸ್ ಮೊಬೈಲ್ ನಲ್ಲಿ ಇರಲೇಬೇಕಾದ ಅವಶ್ಯಕ ಅಪ್ಲಿಕೇಶನ್ಸ್ (ಆಪ್ಸ್) ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ..!

1. Kinemaster : ಯಾವುದೇ ಒಂದು ವಿಡಿಯೋ ಮಾಡಲು ನಿಮಗೆ ಮೂಲಭೂತವಾಗಿ ನಿಮಗೆ ಬೇಕಾದದ್ದು ನೀವು ರೆಕಾರ್ಡ್ ಮಾಡಿರುವ ವಿಡಿಯೋವನ್ನು ಎಡಿಟ್ ಮಾಡುವ ಆಪ್. ಯುಟ್ಯೂಬರ್ಸ್ಗಳಿಗೆಂದೇ ಹೇಳಿ ಮಾಡಿಸಿದಂತಿರುವ ಈ ಆಪ್ ಹಲವು ವಿವಿಧ ರೀತಿಯ ಫಿಚರ್ಸ್ ಹೊಂದಿದ್ದು ನಿಮ್ಮ ವಿಡಿಯೋವನ್ನ ಉನ್ನತ ಗುಣಮಟ್ಟಕ್ಕೆ ಹೆಚ್ಚಿಸುತ್ತದೆ. ಹಲವಾರು ಯುಟ್ಯೂಬರ್ಸ್ ಇಂದು ಈ ಆಪ್ ಮೂಲಕವೇ ಲಕ್ಷಾಂತರ subscribers ಗಳನ್ನು ಗಳಿಸಿದ್ದಾರೆ. ಅಷ್ಟರ ಮಟ್ಟಿಗೆ ಈ ಆಪ್ ಮಹತ್ವದ್ದಾಗಿದೆ.

2. Pixellab : ಸ್ನೇಹಿತರೇ ನಿಮ್ಮ ವಿಡಿಯೋವನ್ನು ಹೆಚ್ಚು ಜನ ನೋಡಬೇಕೆಂದರೆ ನಿಮ್ಮ ವಿಡಿಯೋದ thumbnail ಆಕರ್ಷಕವಾಗಿರಬೇಕು. ಅಂದಾಗ ಮಾತ್ರ ಅದಕ್ಕೆ ಹೆಚ್ಚು ವೀಕ್ಷಣೆ ಆಗುತ್ತವೆ. ಈ ಆಪ್ ನಿಮಗೆ ಅಂತಹ ಅದ್ಭುತ thumbnail ರಚಿಸುವಲ್ಲಿ ಸಹಾಯ ಮಾಡುತ್ತದೆ. ಹಲವಾರು ಪ್ರಸಿದ್ಧ ಯುಟ್ಯೂಬರ್ಸ್ಇಂದಿಗೂ ಈ ಆಪ್ ಮೂಲಕವೇ ತಮ್ಮ ವಿಡಿಯೋದ thumbnailತಯಾರಿಸುತ್ತಾರೆ.

3. Yt Studio : ಸ್ನೇಹಿತರೆ ಇದು ಯೂಟ್ಯೂಬ್ ಅವರದ್ದೇ ಆದ official ಆಪ್ ಆಗಿದ್ದು ಇದರ ಸಹಾಯದಿಂದ ನೀವು ನಿಮ್ಮ ಚಾನೆಲ್ನ ಬೆಳವಣಿಗೆಯನ್ನು ಗಮನಿಸಬಹುದಾಗಿದೆ. ಅಲ್ಲದೇ ನಿಮ್ಮ ವಿಡಿಯೋಗಳ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀವು ಇಲ್ಲಿ ಪಡೆದುಕೊಳ್ಳಬಹುದು. ಯಾವ ವಿಡಿಯೋದಿಂದ ನಿಮಗೆ ಎಷ್ಟು ಹಣ ಬಂತು, ಯಾವ ವಿಡಿಯೋ ನಿಮ್ಮ ಚಾನೆಲ್ ಗೆ ಹೆಚ್ಚು subscribers ಗಳನ್ನು ತಂದುಕೊಟ್ಟಿತು ಹೀಗೆ ವಿವಿಧ ರೀತಿಯ ಮಾಹಿತಿಯನ್ನು ನೀವು ಈ ಆಪ್ ಮೂಲಕ ಪಡೆಯಬಹುದು.

4.Tube buddy : ಈ ಆಪ್ ಮೂಲಕ ನೀವು ನಿಮ್ಮ ವಿಡಿಯೋ ವೈರಲ್ ಆಗಲು ಬೇಕಾದ keyword ಗಳ ಮಾಹಿತಿಯನ್ನು ಪಡೆಯಬಹುದು. ಮುಂದೆ ಯಾವ ರೀತಿಯ ವಿಡಿಯೋ ಮಾಡಿದರೆ ನಿಮ್ಮ ಚಾನೆಲ್ ಗೆ subscribers ಹೆಚ್ಚಾಗುತ್ತಾರೆ ಎಂಬ ಉಪಯುಕ್ತ ಮಾಹಿತಿಯನ್ನು ಇಲ್ಲಿ ಸಿಗುತ್ತದೆ.

5.Screen Recorder : ಸ್ನೇಹಿತರೇ ನೀವು ಯಾವುದಾದರೂ tech ಗೆ ಸಂಬಂಧಿಸಿದ ವಿಡಿಯೋ ಮಾಡುತ್ತಿದ್ದರೆ ಈ ನಿಮಗೆ ಬಹಳ ಮಹತ್ವದ್ದಾಗಿದೆ. ಹಲವು ರೀತಿಯ ಫಿಚರ್ಸ್ ಗಳ ಜೊತೆಗೆ high quality ವಿಡಿಯೋ ಮಾಡಲು ಈ ಆಪ್ ನ ಅವಶ್ಯಕತೆ ಬಹಳ ಇದೆ. ಈ ಆಪ್ ಸಹಾಯದಿಂದ ವಿಡಿಯೋದಲ್ಲಿ ನೀವು ಹೇಳಬೇಕೆಂದಿರುವ ಅಥವಾ ತೋರಿಸಬೇಕೆಂದಿರುವ ನಿರ್ದಿಷ್ಟ ವಿಷಯಗಳನ್ನು ನೀವು ನಿಮ್ಮ subscribers ಗಳಿಗೆ ತಲುಪಿಸಬಹುದು.

ಸ್ನೇಹಿತರೆ ಈ ಅರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago