Categories: information

ಜಗತ್ತಿಗೆ ಕನ್ನಡ ಪರಿಚಯಿಸಿದವನು ಕನ್ನಡಿಗನಲ್ಲ ! ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಸ್ನೇಹಿತರೇ.. ಕನ್ನಡ ನಮ್ಮ ಮಾತೃಭಾಷೆ ಆಗಿದ್ದರೂ ಮಾತನಾಡುವಾಗ ಅಲ್ಲಲ್ಲಿ ಇಂಗ್ಲಿಷ್ ಹಿಂದಿ.. ವಿದೇಶಿ ಭಾಷೆಗಳನ್ನು ಬಳಸುವುದುಂಟು ಆದರೆ ಅಲ್ಲೊಬ್ಬ ವಿದೇಶಿಗನಾಗಿದ್ದರು ಕನ್ನಡವನ್ನು ಅಷ್ಟೊಂದು ಅಚ್ಚುಕಟ್ಟಾಗಿ ಮಾತನಾಡುವಾಗ ಯಾವುದೇ ವಿದೇಶಿ ಪದ ನುಸುಳುತ್ತಿರಲಿಲ್ಲ, ಕೇವಲ ಮಾತನಾಡುವುದಲ್ಲದೆ, ಕನ್ನಡವನ್ನ ಓದಿದರು ಕನ್ನಡವನ್ನೇ ಬರೆದರು.

Spread the love

ಸ್ನೇಹಿತರೇ.. ಕನ್ನಡ ನಮ್ಮ ಮಾತೃಭಾಷೆ ಆಗಿದ್ದರೂ ಮಾತನಾಡುವಾಗ ಅಲ್ಲಲ್ಲಿ ಇಂಗ್ಲಿಷ್ ಹಿಂದಿ.. ವಿದೇಶಿ ಭಾಷೆಗಳನ್ನು ಬಳಸುವುದುಂಟು ಆದರೆ ಅಲ್ಲೊಬ್ಬ ವಿದೇಶಿಗನಾಗಿದ್ದರು ಕನ್ನಡವನ್ನು ಅಷ್ಟೊಂದು ಅಚ್ಚುಕಟ್ಟಾಗಿ ಮಾತನಾಡುವಾಗ ಯಾವುದೇ ವಿದೇಶಿ ಪದ ನುಸುಳುತ್ತಿರಲಿಲ್ಲ, ಕೇವಲ ಮಾತನಾಡುವುದಲ್ಲದೆ, ಕನ್ನಡವನ್ನ ಓದಿದರು ಕನ್ನಡವನ್ನೇ ಬರೆದರು. ಇದೇ ಅಲ್ಲವೇ ಕನ್ನಡದ ನಿಜವಾದ ಪ್ರೇಮ ಇದಕ್ಕಾಗಿಯೇ ನಮ್ಮ ವರಕವಿ ಇವರನ್ನ “ಕನ್ನಡಕ್ಕೆ ಕನ್ನಡಿಯ ಹಿಡಿದು ದುಡಿದವ ನೀನು” ಎಂದು ಹಾಡಿ ಹೊಗಳಿದ್ದಾರೆ.

Thank you for reading this post, don't forget to subscribe!

ಆ ಧೀಮಂತ ವ್ಯಕ್ತಿಯೇ ರೆವರೆಂಡ್ ಜಾರ್ಜ್ ಫರ್ಡಿನೆಂಡ್ ಕಿಟ್ಟೆಲ್.1832 ರಲ್ಲಿ ಜರ್ಮನಿಯ ರಾಸ್ಟರ್ ಹಾಫ್ ಎಂಬಲ್ಲಿ ಜನಿಸಿದ ಇವರ ತಂದೆ ಪ್ರೊಟೆಸ್ಟಂಟ್ ಚರ್ಚ್ ಪಾದ್ರಿ ಇವರು ಕ್ರೈಸ್ತ ಧರ್ಮ ಪ್ರಚಾರಕ್ಕೆಂದು 1853 ಮಂಗಳೂರಿಗೆ ಬಾಸೆಲ್ ಮಿಷನ್ ವತಿಯಿಂದ ಬಂದಿರುತ್ತಾರೆ. ಆಗ ಇವ್ರಿಗೆ 21 ವಯಸ್ಸು. ಇವರಿಗೆ ಬಹುಭಾಷಾ ಆಸಕ್ತಿ ಇರುವುದರಿಂದ ಮಂಗಳೂರಿಗೆ ಬರುವಷ್ಟರಲ್ಲಿ ಫ್ರೆಂಚ್,ಗ್ರೀಕ್,ಲ್ಯಾಟಿನ್, ಹೀಬ್ರೂ ಭಾಷೆಯಲ್ಲಿ ಹಿಡಿತ ಸಾಧಿಸಿದ್ದರು. ಮಂಗಳೂರಿನ ಬಾಸೆಲ್ ಮಿಷನ್ ನಲ್ಲಿ ಕೆಲಸ ಮಾಡುತ್ತಾ ಕನ್ನಡ
ಕಲಿಯಲಾರಂಭಿಸಿದರು. ನಂತರದ ದಿನಗಳಲ್ಲಿ ಧಾರವಾಡ ಬಾಸೆಲ್ ಮಿಷನ್ ಹೈಸ್ಕೂಲ್ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಆಗಿನ ಬ್ರಿಟಿಷ್ ಮುಖ್ಯಸ್ಥ ನಿಘಂಟನ್ನು ರಚಿಸಲು ಹೇಳಿದಾಗ. ಅವರು ಹೇಳುವ ಮುಂಚೆಯೇ “ಮಂಗರಾಜು” ಎಂಬ ನಿಘಂಟನ್ನು ರಚಿಸಿದ್ದರು. ನಂತರ ಕನ್ನಡವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಕಲಿಯಲೆಂದು ಮತ್ತೆ ಮಂಗಳೂರಿನ ಬಾಸೆಲ್ ಮಿಷನ್ ಗೆ
ತೆರಳಿದರು.

ಇವರು ಕನ್ನಡಕ್ಕೆ ನೀಡಿರುವ ಕೊಡುಗೆ ಶ್ಲಾಘನೀಯ “ಸಂಸಾರ ಕ್ರಮ” “ಉಭಯ ಮಾರ್ಗ” “ನಂಬಿ ಜೀವಿಸಿರಿ”
“ಡೆನಿಯಲನೂ ಅವನ ಜೊತೆಗಾರರು” ಎಂಬ ಪ್ರಬಂಧಗಳನ್ನು ಹಾಗೂ ವಿಚಿತ್ರ ವರ್ತಮಾನ ಸಂಗ್ರಹ, ಸಚಿತ್ರ ಕನ್ನಡ ಮಾಸ ಪತ್ರಿಕೆ, ಅರುಗೋದಯ ಪತ್ರಿಕೆಗಳ ಲೇಖಕರು ಸಹಸಂಪಾದಕರಾಗಿದ್ದರು.
ಎಲ್ಲಕಿಂತ ಮುಖ್ಯ ಸಂಗತಿ ಎಂದರೆ ಕಿಟ್ಟೆಲ್ ಅವ್ರು ಕರ್ನಾಟಕ ಗ್ರಾಮೀಣ ಜನತೆಯಿಂದ ಸಣ್ಣ ಸಣ್ಣ ಪದಗಳ ಕಲೆಹಾಕಿ ಮೊಟ್ಟ ಮೊದಲ ಕನ್ನಡ-ಇಂಗ್ಲಿಷ್ ಡಿಕ್ಷನರಿ ಸಿದ್ಧಪಡಿಸಿದರು. ಶಬ್ದಕೋಶವು ಗಾದೆಮಾತು, ಹಳೆಗನ್ನಡ, ಹೊಸಗನ್ನಡ ಅರ್ಥ ಸಂಗ್ರಹಿಸಿ ಪ್ರತಿಶಬ್ಧದ ಉಚ್ಚಾರಣೆಯನ್ನು ಬರೆಯುತ್ತಾರೆ. 25 ವರ್ಷಗಳ ಕಾಲ ಶ್ರಮವಹಿಸಿ 70 ಸಾವಿರ ಕನ್ನಡ ಪದಗಳನ್ನು ಸಂಗ್ರಹಿಸಿದರು. ಕೊನೆಗೆ 1894 ರಲ್ಲಿ ಮೊಟ್ಟಮೊದಲ ಕನ್ನಡ ಇಂಗ್ಲಿಷ್- ಡಿಕ್ಷನರಿ ಸಿದ್ಧಪಡಿಸಿದರು.
ಆ ಕಿಟ್ಟೆಲ್ ಡಿಕ್ಷನರಿ ಇವತ್ತಿಗೂ ಕನ್ನಡ ಇಂಗ್ಲಿಷ್ ಡಿಕ್ಷನರಿ ಆಗಿ ಕನ್ನಡಿಗರ ಮನೆಮನಗಳಲ್ಲಿ ರಾರಾಜಿಸುತ್ತಿದೆ. ಇವರ ಚಿರಸ್ಮರಣೀಯ ಕೃತಿಯಾದ ಕನ್ನಡ ಇಂಗ್ಲಿಷ್ ನಿಘಂಟನ್ನು ಗುರುತಿಸಿ ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ವಿಶೇಷವೆಂದರೆ ಇದು ಕನ್ನಡಕ್ಕೆ ಸ್ಕಂದ ಎರಡನೇ ಡಾಕ್ಟರೇಟ್
ಪದವಿಯಾಗಿದೆ…

ಕನ್ನಡಿಗರೇ.. ನಮ್ಮ ಮಾತೃ ಭಾಷೆಯನ್ನು ಪ್ರೀತಿಸೋಣ ಉಳಿಸೋಣ ಬೆಳೆಸೋಣ ಕನ್ನಡಿಗರಾಗಿ ಮಾತೃಭಾಷೆಯ ರಕ್ಷಣೆಯಾಗದಿದ್ದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತದೆ. ಹಾಗೆಯೇ ಬೇರೆ ಭಾಷೆಯನ್ನು ಗೌರವಿಸೋಣ.

~ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ~

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago