Categories: information

ಹಳ್ಳಿ ಹಳ್ಳಿಗೂ ಬಂತು ಇ-ಸ್ವತ್ತು; ಸುಲಭವಾಗಿ ಇ-ಖಾತಾ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ,ಕರ್ನಾಟಕ ಸರ್ಕಾರವು ಗ್ರಾಮೀಣ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಇ-ಸ್ವತ್ತು 2.0 ಅನ್ನು ಪರಿಚಯಿಸಿದೆ. ಇದು 97 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತಾ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಈ ಆನ್‌ಲೈನ್ ಪೋರ್ಟಲ್ ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿ, ವಂಚನೆಗಳನ್ನು ತಡೆಯುಯಲಿದ್ದು, ಫಾರ್ಮ್ 9 ಮತ್ತು 11B ನಂತಹ ಪ್ರಮುಖ ಇ-ಖಾತಾ ದಾಖಲೆಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಇದು ಸಹಕಾರಿಯಾಗಲಿದೆ

Spread the love

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ,ಕರ್ನಾಟಕ ಸರ್ಕಾರವು ಗ್ರಾಮೀಣ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಇ-ಸ್ವತ್ತು 2.0 ಅನ್ನು ಪರಿಚಯಿಸಿದೆ. ಇದು 97 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತಾ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಈ ಆನ್‌ಲೈನ್ ಪೋರ್ಟಲ್ ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿ, ವಂಚನೆಗಳನ್ನು ತಡೆಯುಯಲಿದ್ದು, ಫಾರ್ಮ್ 9 ಮತ್ತು 11B ನಂತಹ ಪ್ರಮುಖ ಇ-ಖಾತಾ ದಾಖಲೆಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಇದು ಸಹಕಾರಿಯಾಗಲಿದೆ

Thank you for reading this post, don't forget to subscribe!

ಬೆಂಗಳೂರು, ಡಿಸೆಂಬರ್ 3: ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ (E-KHATA) ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ರಾಜ್ಯ ಸರ್ಕಾರ ಇ- ಸ್ವತ್ತು ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಗ್ರಾಮ ಪಂಚಾಯಿತಿಗಳಲ್ಲಿ 97 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಪರಿವರ್ತನೆಗೆ ಇದು ಸಹಾಯ ಮಾಡುತ್ತದೆ. ಸರ್ಕಾರ ಪಂಚತಂತ್ರ ಸಾಫ್ಟ್‌ವೇರ್ ಅನ್ನು ಅಪ್‌ಗ್ರೇಡ್ ಮಾಡಿ ಇ- ಸ್ವತ್ತು 2.0 ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಅಧಿಕೃತವಾಗಿ ಉದ್ಘಾಟಿಸಿದ್ದಾರೆ.

ಇ- ಸ್ವತ್ತು ಎಂದೇನು?

ಗ್ರಾಮೀಣ ಪ್ರದೇಶದ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ನಿರ್ವಹಿಸಲು ಕರ್ನಾಟಕ ಸರ್ಕಾರ ಇ- ಸ್ವತ್ತು ಎಂಬ ಆನ್‌ಲೈನ್ ಪೋರ್ಟಲ್ ಪ್ರಾರಂಭಿಸಿದ್ದು, ಇದರಿಂದಾಗಿ ಆಸ್ತಿ ವಹಿವಾಟುಗಳಲ್ಲಿ ಹೆಚ್ಚಿನ ಪಾರದರ್ಶಕತೆ ಬರುವುದಲ್ಲದೆ ವಂಚನೆ, ಅನಧಿಕೃತ ನಿವೇಶನಗಳ ನೋಂದಣಿಯನ್ನು ನಿಯಂತ್ರಿಸಲು ಸಹಾಯಕವಾಗಿದೆ.

ಇದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ವಹಿಸಲಿದ್ದು, ಇದರಲ್ಲಿ ಫಾರ್ಮ್-9 ಮತ್ತು ಫಾರ್ಮ್-11 ಎಂಬ ಎರಡು ಪ್ರಮುಖ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತಾದ್ಯಂತ 6.5 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಮೇಲೆ ಇಲಾಖೆ ಗಮನಹರಿಸುತ್ತಿದೆ

ಗ್ರಾಮ ಪಂಚಾಯತ್‌ನಲ್ಲಿ ಇ-ಖಾತಾ ಪಡೆಯಲು ಆನ್ಲೈನ್ ಅರ್ಜಿ ಸಲ್ಲಿದುವುದು ಹೇಗೆ?

ಇ-ಖಾತಾ ಅರ್ಜಿ ಪ್ರಕ್ರಿಯೆಯನ್ನು ಗ್ರಾಮ ಪಂಚಾಯತ್ ಕಚೇರಿಯ ಮೂಲಕ ನಿರ್ವಹಿಸಲಾಗುತ್ತದೆ. ಅಲ್ಲಿನ ಸಿಬ್ಬಂದಿ ತಮ್ಮ ಅಧಿಕೃತ ಲಾಗಿನ್ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಇ- ಸ್ವತ್ತು ಪೋರ್ಟಲ್‌ನಲ್ಲಿ

https://eswathu.karnataka.gov.in/

ಪ್ರಕ್ರಿಯೆ ನಡೆಸುತ್ತಾರೆ.

ನಿಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ

ಸೇಲ್ ಡೀಡ್ (Sale Deed), ಇತ್ತೀಚಿನ ಆಸ್ತಿ ತೆರಿಗೆ ರಶೀದಿಗಳು, ಎನ್‌ಕಂಬರೆನ್ಸ್ ಸರ್ಟಿಫಿಕೇಟ್ (EC), ಭೂ ಸರ್ವೇ ದಾಖಲೆಗಳು, ಗುರುತು/ವಿಳಾಸ ಪುರಾವೆಗಳು (ಆಧಾರ್, ವೋಟರ್ ಐಡಿ, PAN), ಮತ್ತು ಭಾವಚಿತ್ರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ

ಅರ್ಜಿ ಸಲ್ಲಿಸಿ:ನಿಮ್ಮ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ. ಜಿಪಿ ಸಿಬ್ಬಂದಿ ಇ- ಸ್ವತ್ತು ಪೋರ್ಟಲ್‌ನಲ್ಲಿ ಆಸ್ತಿ ಮತ್ತು ಮಾಲೀಕರ ವಿವರಗಳನ್ನು ಭರ್ತಿ ಮಾಡಬೇಕು. ಅಲ್ಲಿನ ಸಿಬ್ಬಂದಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುತ್ತಾರೆ

ಅರ್ಜಿ ಪರಿಶೀಲನೆ:ಅರ್ಜಿಯನ್ನು ಜಿಪಿ ಕಾರ್ಯದರ್ಶಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಪರಿಶೀಲಿಸುತ್ತಾರೆ. ಈ ಪ್ರಕ್ರಿಯೆಯು 45 ದಿನಗಳವರೆಗೂ ನಡೆಯುವ ಸಾಧ್ಯತೆಯಿದೆ.

ಇ-ಖಾತಾ ಡೌನ್‌ಲೋಡ್:ಒಮ್ಮೆ ಅನುಮೋದನೆಯಾದ ನಂತರ, PDO ಡಿಜಿಟಲ್ ಸಹಿ ಮಾಡುತ್ತಾರೆ. ನಂತರ ಇ- ಸ್ವತ್ತು ಪೋರ್ಟಲ್‌ನಲ್ಲಿ ನಿಮ್ಮ ಆಸ್ತಿ ವಿವರಗಳನ್ನು ಹುಡುಕಿ, ಫಾರ್ಮ್ 9 ಅಥವಾ ಫಾರ್ಮ್11B ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು

ಇ-ಖಾತಾ (Form 9/11B) ಪಡೆಯಲು ಯಾರು ಅರ್ಹರು?

ಇ-ಖಾತಾ, ನಿರ್ದಿಷ್ಟವಾಗಿ ಫಾರ್ಮ್ 9 ಮತ್ತುಫಾರ್ಮ್ 11B ಅನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೃಷಿಯೇತರ ಆಸ್ತಿಗಳಿಗೆ ನೀಡಲಾಗುತ್ತದೆ. ಆಸ್ತಿ ಗ್ರಾಮೀಣ ಪ್ರದೇಶದೊಳಗಿದ್ದು, ತಹಶೀಲ್ದಾರರಿಂದ ದೃಢೀಕರಿಸಿದ ನಕ್ಷೆಯನ್ನು ಹೊಂದಿರಬೇಕು. ಆಸ್ತಿಯು ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯಿದೆಯಡಿಯಲ್ಲಿ ಅನುಮೋದಿಸಲಾದ ನಕ್ಷೆಗಳೊಂದಿಗೆ ಅಧಿಕೃತ ಲೇಔಟ್‌ ಹೊಂದಿರಬೇಕು. ಬಸವ ವಸತಿ, ಅಂಬೇಡ್ಕರ್, ಅಥವಾ ಇಂದಿರಾ ಆವಾಸ್ ಯೋಜನೆಗಳಂತಹ ಸರ್ಕಾರದ ವಸತಿ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾದ

11B ಖಾತಾ (Form 11B) ಪಡೆಯುವುದು ಹೇಗೆ?

ಫಾರ್ಮ್ 11B ಕೃಷಿಯೇತರ ಬಳಕೆಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ನೀಡಲಾಗುವ ಒಂದು ದಾಖಲೆಯಾಗಿದೆ. ಈಗಾಗಲೇ ಇರುವ ಫಾರ್ಮ್11B ಅನ್ನು ಪಡೆಯಲು ನೀವು ಈ ಹಂತಗಳನ್ನು ಅನುಸರಿಸಬೇಕು.

1.ಅಧಿಕೃತ ಇ-ಸ್ವತ್ತು ಪೋರ್ಟಲ್‌ಗೆ ಭೇಟಿ ನೀಡಿ
ಮುಖಪುಟದಲ್ಲಿ ಕಾಣುವ “ನಿಮ್ಮ ಆಸ್ತಿಯ ಮಾಹಿತಿಯನ್ನು ಹುಡುಕಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ
2.ನಮೂನೆ ಪ್ರಕಾರವನ್ನು “Form 11B” ಎಂದು ಆಯ್ಕೆಮಾಡಿ
3.ಡ್ರಾಪ್‌ಡೌನ್ ಮೆನುಗಳಿಂದ ನಿಮ್ಮ ಜಿಲ್ಲೆ, ಬ್ಲಾಕ್ (ತಾಲೂಕು), ಗ್ರಾಮ ಪಂಚಾಯತ್, ಮತ್ತು ಗ್ರಾಮವನ್ನು ಆಯ್ಕೆಮಾಡಿ
4.ನಿಮ್ಮ ಆಸ್ತಿ ಐಡಿ ಅಥವಾ ಸರ್ವೇ ಸಂಖ್ಯೆಯನ್ನು ನಮೂದಿಸಿ ಮತ್ತು “ಹುಡುಕಿ” ಬಟನ್ ಮೇಲೆ ಕ್ಲಿಕ್ ಮಾಡಿ


ಆಸ್ತಿ ವಿವರಗಳು ಪರದೆಯ ಮೇಲೆ ಕಾಣಿಸಿದಾಗ ಡಾಕ್ಯುಮೆಂಟ್ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ Form 11B PDF ಡೌನ್‌ಲೋಡ್ ಮಾಡಬಹುದು. PDF ತೆರೆಯಲು ಪಾಸ್‌ವರ್ಡ್ ಸಾಮಾನ್ಯವಾಗಿ ನಿಮ್ಮ ಆಸ್ತಿ ಐಡಿಯೇ ಆಗಿರುತ್ತದೆ.

ಇ- ಸ್ವತ್ತು ಆನ್‌ಲೈನ್ ಸಹಾಯವಾಣಿ ಸಂಖ್ಯೆಗಳು

ಇ-ಸ್ವತ್ತು ಪೋರ್ಟಲ್ ಅಥವಾ ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದ ಸಹಾಯಕ್ಕಾಗಿ, ನೀವು ಈ ಅಧಿಕೃತ ಸಹಾಯವಾಣಿಗಳನ್ನು ಸಂಪರ್ಕಿಸಬಹುದು

ಸಹಾಯವಾಣಿ ಸಂಖ್ಯೆಗಳು: 080-22032754, 080-22370281, 080-22032130

ಇಮೇಲ್ ID: eswathuhelpdesk@gmail.com

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

Recent Posts

SSLC ವಿದ್ಯಾರ್ಥಿಗಳೇ ಗಮನಿಸಿ: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ

"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…

56 years ago

ರಾಜ್ಯದಲ್ಲಿ ನಡುಗುವ ಚಳಿ! ಈ 7 ಜಿಲ್ಲೆಗಳಲ್ಲಿ ‘ಶೀತ ಗಾಳಿ’ಯ ಅಲರ್ಟ್. ಜನವರಿ 10 ರವರೆಗೆ ಈ ಜಿಲ್ಲೆಯವರಿಗೆ ಎಚ್ಚರಿಕೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…

56 years ago

BBK 12 Finale: ಬಿಗ್‌ಬಾಸ್‌ ಘೋಷಣೆಗೂ ಮುನ್ನವೇ ವಿನ್ನರ್ ಹೆಸರು ಲೀಕ್ ಮಾಡಿದ ವಿಕಿಪೀಡಿಯಾ

BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…

56 years ago

ನೀವು ಖರೀದಿಸುವ ಜಮೀನಿನಹೆಸರು ಯಾರುದು? ಆ ಜಮೀನಿನ ಅಕ್ಕಪಕ್ಕ ಮಾಲಿಕರ ಹೆಸರು ಇಲ್ಲಿ ಚೆಕ್ ಮಾಡಿ.

ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…

56 years ago

ಗೃಹಲಕ್ಷ್ಮಿ ಯೋಜನೆಯ ಬಾಕಿ ₹4000 ಹಣ ಒಟ್ಟಿಗೆ ಜಮಾ? ಖಾತೆಗೆ ಹಣ ಬರುವುದು ಯಾವಾಗ?  ಸಂಕ್ರಾಂತಿಗೆ ಸರ್ಕಾರದಿಂದ ಸಿಕ್ತು ಸ್ಪಷ್ಟನೆ. ಇಲ್ಲಿದೆ ಡಿಟೇಲ್ಸ್!

ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…

56 years ago

ಶೇ. 90 ರಷ್ಚು ಸಬ್ಸಿಡಿಯಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳು ಇಲ್ಲಿದೆ ಮಾಹಿತಿ

ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…

56 years ago