ಸ್ನೇಹಿತರೆ ಇದೊಂದು ಅತ್ಯಾಧುನಿಕ ತಂತ್ರಜ್ಞಾನ ವಾಗಿದ್ದು, ಈ ತಂತ್ರಜ್ಞಾನದ ಮೂಲಕ ಕೃತಕವಾಗಿ ಮಳೆಯನ್ನ ತರಬಹುದು. ಅಂದರೆ ನಾವು ಪ್ರತಿ ವರ್ಷ ಮಳೆಗಾಲದಲ್ಲಿ ಮಳೆಯನ್ನು ಕಾಣುವುದು ಸಹಜ. ಆದರೆ ಈ ಕೃತಕ ಮೋಡ ಬಿತ್ತನೆಯ ತಂತ್ರಜ್ಞಾನದಿಂದ ನಾವು ಮಳೆಗಾಲದ ಹೊರತಾಗಿ ಬೇರೆ ಸೀಸನ್ ನಲ್ಲಿಯೂ ಮಳೆಯನ್ನು ಪಡೆಯಬಹುದಾಗಿದೆ.
ಸ್ನೇಹಿತರೆ ಇತ್ತೀಚಿಗೆ ವರದಿಯೊಂದರ ಪ್ರಕಾರ ಜಗತ್ತಿನ ಟಾಪ್ 50 ಮಾಲಿನ್ಯ ನಗರಗಳಲ್ಲಿ 39 ನಗರಗಳು ಭಾರತದ ನಗರಗಳಾಗಿವೆ. ಅದರಲ್ಲೂ ದೇಶದ ರಾಜಧಾನಿಯಾದ ದೆಹಲಿಯಲ್ಲಿ ಇದರ ಪ್ರಮಾಣವಂತು ಮಿತಿಮೀರಿದೆ. ಹೀಗಾಗಿ ಈ ಮಾಲಿನ್ಯವನ್ನು ತಡೆಗಟ್ಟಲು ದೆಹಲಿ ಸರ್ಕಾರವು ಇದೀಗ IIT ಕಾನ್ಪುರ ಸಹಾಯದಿಂದ ಕೃತಕ ಮೋಡ ಬಿತ್ತನೆ ಮಾಡಲು ಮುಂದಾಗಿದೆ. ಹಾಗಾದರೆ ಏನಿದು ಮೋಡ ಬಿತ್ತನೆ? ಇದರಿಂದಾಗುವ ಲಾಭಗಳೇನು? ಇದನ್ನು ಹೇಗೆ ಬಿತ್ತಲಾಗುತ್ತದೆ ಎಂಬಂತಹ ಪ್ರಶ್ನೆಗಳಿಗೆ ಈ ಆರ್ಟಿಕಲ್ ನಲ್ಲಿ ಉತ್ತರ ತಿಳಿದುಕೊಳ್ಳೋಣ ಬನ್ನಿ.
ಕೃತಕ ಮೋಡ ಬಿತ್ತನೆ ಎಂದರೇನು?
ಸ್ನೇಹಿತರೆ ಇದೊಂದು ಅತ್ಯಾಧುನಿಕ ತಂತ್ರಜ್ಞಾನ ವಾಗಿದ್ದು, ಈ ತಂತ್ರಜ್ಞಾನದ ಮೂಲಕ ಕೃತಕವಾಗಿ ಮಳೆಯನ್ನ ತರಬಹುದು. ಅಂದರೆ ನಾವು ಪ್ರತಿ ವರ್ಷ ಮಳೆಗಾಲದಲ್ಲಿ ಮಳೆಯನ್ನು ಕಾಣುವುದು ಸಹಜ. ಆದರೆ ಈ ಕೃತಕ ಮೋಡ ಬಿತ್ತನೆಯ ತಂತ್ರಜ್ಞಾನದಿಂದ ನಾವು ಮಳೆಗಾಲದ ಹೊರತಾಗಿ ಬೇರೆ ಸೀಸನ್ ನಲ್ಲಿಯೂ ಮಳೆಯನ್ನು ಪಡೆಯಬಹುದಾಗಿದೆ.
ಹೇಗೆ ಕೃತಕ ಮೋಡ ಬಿತ್ತನೆ ಮಾಡಲಾಗುತ್ತದೆ?
ಈ ತಂತ್ರಜ್ಞಾನದಲ್ಲಿ ವಿಮಾನದ ಮೂಲಕ ವಾತಾವರಣದಲ್ಲಿ ಕಂಡುಬರುವ ಅಧಿಕ ಮೋಡಗಳು ಇರುವಂತಹ ಜಾಗವನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲದೆ ಈ ಮೋಡಗಳು ಮಳೆಯನ್ನು ತರುತ್ತವೆಯೋ ಇಲ್ಲವೋ ಎಂಬುದನ್ನು ಮುಂಚಿತವಾಗಿ ಅಧ್ಯಯನ ಮಾಡಲಾಗುತ್ತದೆ. ಹಾಗೆ ಇವು ಮಳೆಯನ್ನು ತರಬಲ್ಲ ಸಾಮರ್ಥ್ಯವನ್ನು ಹೊಂದಿದ್ದರೆ ಮಾತ್ರ ಇಂತಹ ಮೋಡಗಳು ಇರುವಂತಹ ಜಾಗದಲ್ಲಿ ಮೋಡಬಿತ್ತನಿಗೆ ಚಾಲನೆ ನೀಡಲಾಗುತ್ತದೆ. ಹೀಗೆ ಆಯ್ಕೆ ಮಾಡಲಾದ ಮೋಡಗಳಲ್ಲಿ ವಿಮಾನದ ಸಹಾಯದಿಂದ ಕ್ಯಾಲ್ಸಿಯಂ ಕ್ಲೋರೈಡ್ ಎಂಬ ರಾಸಾಯನಿಕವನ್ನು ಬಿಡಲಾಗುತ್ತದೆ. ಈ ರಾಸಾಯನಿಕ ಲವಣವು ಮೋಡಗಳನ್ನು ತಂಪಾಗಿಸಿ ಘನಿಕರಣವಾಗಲು (condensation) ಸಹಾಯ ಮಾಡುತ್ತದೆ. ಹೀಗೆ ಘಣಿಕರಣಗೊಂಡ ಮೋಡವು ಮಳೆಯಾಗಿ ಸುರಿಯುತ್ತದೆ. ಇದನ್ನು 2018ರಲ್ಲಿ ಮಹಾರಾಷ್ಟ್ರದ ಸೋಲಾಪುರದಲ್ಲಿ ಯಶಸ್ವಿಯಾಗಿ ಮಾಡಲಾಗಿದ್ದು, ಸಾಮಾನ್ಯ ಪ್ರಮಾಣಕ್ಕಿಂತ 18% ನಷ್ಟು ಮಳೆ ಹೆಚ್ಚಾಗಿ ಕಂಡುಬಂದಿದೆ.
ಕೃತಕ ಮೋಡ ಬಿತ್ತನೆಯಿಂದ ಆಗುವ ಪ್ರಯೋಜನಗಳೇನು?
ಈ ತಂತ್ರಜ್ಞಾನದ ಸಹಾಯದಿಂದ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಕೃತಕ ಮಳೆಯನ್ನು ಸುರಿಸಿ ಅಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸಬಹುದು. ಅಲ್ಲದೆ ಈ ಕೃತಕ ಮಳೆಯ ಸಹಾಯದಿಂದ ದೆಹಲಿ ಅಂತಹ ಮಾಲಿನ್ಯ ಭರಿತವಾದ ನಗರಗಳಲ್ಲಿ ವಾಯುಮಾಲಿನ್ಯವನ್ನು ಕಡಿಮೆಗೊಳಿಸಬಹುದಾಗಿದೆ. ಮುಂಗಾರು ಮಳೆಯು ತಡವಾಗಿ ಆಗಮನವಾದಾಗ ರೈತರಿಗೆ ಬೀಜ ಬಿತ್ತನೆಗೆ ಉಂಟಾಗುವ ತೊಂದರೆಗಳನ್ನು ಈ ತಂತ್ರಜ್ಞಾನದ ಮೂಲಕ ಹೋಗಲಾಡಿಸಬಹುದು.
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…