WhatsApp Group                             Join Now            
   
                    Telegram Group                             Join Now            
Spread the love

ಆತ್ಮೀಯ ರೈತರೆ ಪ್ರಾಣಿಗಳು ಮೇವನ್ನು ತಿನ್ನುವಾಗ ಅಥವಾ ಕೆರೆಗಳಲ್ಲಿ ನೀರನ್ನು ಕುಡಿಯುವಾಗ ವಿಷ ಪದಾರ್ಥಗಳನ್ನು ಸೇವಿಸುವ ಸಂಭವ ಇರುತ್ತದೆ. ವಿಷಬಾಧೆ ತುರ್ತುಸ್ಥಿತಿಯಾಗಿದ್ದು ಇದಕ್ಕೆ ತಕ್ಷಣದ ಉಪಚಾರ ಅತ್ಯಗತ್ಯ. ವಿಷವನ್ನು ದೇಹದಿಂದ ಹೊರ ಹಾಕುವುದು ಅಥವಾ ವಿಷದ ಪ್ರಮಾಣ ಕಡಿಮೆ ಮಾಡುವುದು ದೇಹವನ್ನು ನಿರ್ವಿಷಗೊಳಿಸುವುದರಿಂದ ದೇಹದ ಮುಖ್ಯ ಅಂಗಗಳಾದ ಶ್ವಾಸಕೋಶ, ಮೆದುಳು, ಹೃದಯ, ಮೂತ್ರಜನಕಾಂಗ ಇವುಗಳ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ತಡೆಗಟ್ಟಬಹುದು ಇದರಿಂದ ಪಶು ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ವಿಷ ಬಾಧೆಯ ತೀವ್ರತೆಯು ಸೇವಿಸಿದ ವಿಷದ ಪ್ರಮಾಣ, ದೇಹದಲ್ಲಿ ಆಗುವ ಜೀವರಸಾಯನ ಕ್ರಿಯೆಗಳ ಜೊತೆಗೆ ವಿಷದ ವರ್ತನೆ ಮೇಲೆ ಅವಲಂಬಿತವಾಗಿರುತ್ತದೆ. ವಿಷಬಾಧೆ ದುಷ್ಪರಿಣಾಮಗಳನ್ನು  ಸಣ್ಣಪುಟ್ಟ ಪ್ರಥಮ ಚಿಕಿತ್ಸೆಗಳಿಂದ ತಡೆಗಟ್ಟಬಹುದು. ವಿಷವು ದೇಹವನ್ನು ತಲುಪಿದ ನಂತರ ವಿಷ ಪ್ರಾಣಿಯ ಹೊಟ್ಟೆ ಅಥವಾ ಕರುಳಿನ ಭಾಗದಿಂದ ಹೀರಲ್ಪಡುತ್ತದೆ. ಇದನ್ನು ಪ್ರಥಮ ಚಿಕಿತ್ಸೆಯಿಂದ ತಡೆಗಟ್ಟಬಹುದು. ನಾಯಿ ಅಥವಾ ಬೆಕ್ಕಿನಂತಹ ವಾಂತಿ ಮಾಡುವ ಪ್ರಾಣಿಗಳಿಗೆ ಒಂದರಿಂದ ಮೂರು ಚಮಚದಷ್ಟು ಉಪ್ಪನ್ನು ಬಿಸಿನೀರಿನಲ್ಲಿ ಸೇರಿಸಿ ದ್ರಾವಣವಾಗಿ ಕೊಟ್ಟರೆ ವಿಷ ವಾಂತಿಯ ಮುಖಾಂತರ ಹೊರಬರುತ್ತದೆ. ಆದರೆ ಮೆಲುಕು ಹಾಕುವ ಪ್ರಾಣಿಗಳಿಗೆ ಉಪಚಾರ ಬೇರೆ ರೀತಿ ಆಗಿರುತ್ತದೆ. ಇವುಗಳ ಮೆಲುಕು ಚೀಲಗಳ ಶಸ್ತ್ರಚಿಕಿತ್ಸೆಯಿಂದ ವಿಷವನ್ನು ಹೊರ ಹಾಕುವುದರಿಂದ ದುಷ್ಪರಿಣಾಮವನ್ನು ತಡೆಗಟ್ಟಬಹುದು. ಪಶುವಿನ ದೇಹದಲ್ಲಿ ನೀರಿನ ಅಂಶ ಜಾಸ್ತಿ ಇದ್ದಾಗ ಭೇದಿಕಾರಕಗಳು ವಿಷವನ್ನು ಕರುಳಿನಿಂದ ಹೊರಹಾಕಲು ಸಹಕಾರಿಯಾಗುತ್ತದೆ. ಭೇದಿಯಾಗಲು 100 ರಿಂದ 150 ಗ್ರಾಂ ಉಪ್ಪನ್ನು ಸಾಕಷ್ಟು ನೀರಿನ ಜೊತೆಗೆ ಸೇರಿಸಿ ಕುಡಿಸುವುದು ಉತ್ತಮ ವಿಧಾನ.

ಇದನ್ನೂ ಓದಿ: gruhalakshmi: ಈ ಕೆಲಸ ಮಾಡಿದವರಿಗೆ ಮಾತ್ರ ಗೃಹ ಲಕ್ಷ್ಮಿ 8 ನೆ ಕಂತಿನ ಹಣ ಬರುವ ಸಾದ್ಯತೆ!!!!

ವಿಷ ನಿಷ್ಕ್ರಿಯಗೊಳಿಸುವ ವಿಧಾನ:

ಕರುಳಿನಿಂದ ವಿಷವಸ್ತುವಿನ ಹೀರಿಕೆ ತಡೆಗಟ್ಟಿದರೆ ದೇಹದಲ್ಲಿ ವಿಷದ ಪ್ರಮಾಣ ಕಡಿಮೆಯಾಗುತ್ತದೆ. ಪಶುವೈದ್ಯರ ಸಲಹೆ ಪ್ರಕಾರ ಆಕ್ಟಿವೇಟೆಡ್ ಚಾರ್ಕೋಲ್ ಅನ್ನು ಪುಡಿ ಮಾಡಿ ನಿಧಾನವಾಗಿ ಕುಡಿಸಬೇಕು. ಮನೆಯಲ್ಲಿನ ಇದ್ದಿಲನ್ನು ಪುಡಿ ಮಾಡಿ ಕುಡಿಸಬಾರದು. ಅದರಲ್ಲಿ ಚೂಪಾದ ಹರಳುಗಳು ಕರುಳನ್ನು ಗಾಯಗೊಳಿಸಿ ಇನ್ನಷ್ಟು ಭೇದಿಯಾಗುವಂತೆ ಮಾಡುತ್ತದೆ.

ವಿಷ ವಿಸರ್ಜನೆಯ ಹೆಚ್ಚಿಸುವಿಕೆ:

ಇದನ್ನು ಜಲ ಚಿಕಿತ್ಸೆಯ ಮೂಲಕ ವಿಷವನ್ನು ದೇಹದಿಂದ ಹೊರಹಾಕಬಹುದು. ಪಶುಪಾಲಕರು ಜಲ ಚಿಕಿತ್ಸೆಯ ಮೂಲಕ ನೀರು ದೇಹ ಸೇರುವಂತೆ ಮಾಡಿ ಮೂತ್ರ ವಿಸರ್ಜನೆ ಜಾಸ್ತಿ ಮಾಡಿ  ವಿಷ ಬಾಧೆಯ ಪ್ರಮಾಣ ಕಡಿಮೆ ಮಾಡಬಹುದು. ಪಶುಗಳು ವಿಷ ಸೇವಿಸಿದ ಸಂದರ್ಭದಲ್ಲಿ ನೀರನ್ನು ಕುಡಿಯುವುದಿಲ್ಲ. ಬಲವಂತವಾಗಿ ಕುಡಿಸಿದರೆ ಶ್ವಾಸಕೋಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೊಳಾಯಿಗೆ ಪೈಪನ್ನು ಜೋಡಿಸಿ ಇನ್ನೊಂದು ತುದಿಯನ್ನು ಪಶುವಿನ ಬಾಯಿಯಲ್ಲಿಟ್ಟು ತಲೆಯನ್ನು ಭೂಮಿಗೆ ಸಮಾನಾಂತರವಾಗಿಟ್ಟು ನೀರು ಗುಟುಕರಿಸುವುದನ್ನು ಖಚಿತಪಡಿಸಿಕೊಂಡು ನೀರು ಕುಡಿಸುವುದು ಮುಂದುವರಿಸಬೇಕು. ನೀರು ಚೆಲ್ಲಿದರು ಪರವಾಗಿಲ್ಲ ಸಮಾಧಾನವಾಗಿ ಕುಡಿಸಬೇಕು. ಒತ್ತಾಯಪೂರ್ವಕವಾಗಿ ನೀರು ಕುಡಿಸಿದರೆ ಶ್ವಾಸಕೋಶಕ್ಕೆ ತಲುಪಿ ಮಾಡಿದ ಚಿಕಿತ್ಸೆ ವ್ಯರ್ಥವಾಗುತ್ತದೆ. ಅರ್ಧ ಗಂಟೆ ಒಮ್ಮೆ ಈ ರೀತಿ ಜಲ ಚಿಕಿತ್ಸೆ ಮಾಡುವುದರಿಂದ ಜಾನುವಾರುಗಳ ಅನೇಕ ಕಾಯಿಲೆಗಳು ಮಾಯವಾಗುತ್ತದೆ.

      
                    WhatsApp Group                             Join Now            
   
                    Telegram Group                             Join Now            

ಇದನ್ನೂ ಓದಿ: ರೈತರೇ ಗುಡ್ ನ್ಯೂಸ್: ನಿಮ್ಮ ಮೊಬೈಲ್ ನಲ್ಲಿಯೇ ನಿಮ್ಮ ಹೊಲದ ದಾಖಲೆಗಳನ್ನು ಚೆಕ್ ಮಾಡಿ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ವಿಷ ಮರು ಹೀರಿಕೆಯ ಪ್ರಮಾಣ ಕಡಿಮೆ ಮಾಡುವುದು ಹೇಗೆ ?

ಬಹಳಷ್ಟು ವಿಷಗಳು ಮೂತ್ರ ಜನಕಾಂಗದಿಂದ ವಿಸರ್ಜನೆಗೊಳ್ಳುವಾಗ ಮರುಹೀರಲ್ಪಡುತ್ತವೆ. ಮೂತ್ರವನ್ನು  ಆಮ್ಲತೆಯೆಡೆಗೆ ಅಥವಾ ಕ್ಷಾರತೆಯೆಡೆಗೆ ಬದಲಾಯಿಸಿದರೆ ಬೇಗ ಹೀರಲ್ಪಟ್ಟು ಮರು ಹೀರಿಕೆಯ ಪ್ರಮಾಣ ಕಡಿಮೆಯಾಗುತ್ತದೆ. ಪಶುಪಾಲಕರು ಯೂರಿಯ ವಿಷ ಪೀಡಿತ ಪಶುವಿನ ಮೂತ್ರದ ಆಮ್ಲತೆಯನ್ನು ಹೆಚ್ಚಿಸಲು ಹುಳಿ ಮಜ್ಜಿಗೆ ಅಥವಾ ಹುಣಸೆಹಣ್ಣಿನ ರಸ ಒಂದು ಬೊಗಸೆಯಷ್ಟು ನೀಡಬಹುದು.

ಅಧಿಕೃತ ವೆಬ್ಸೈಟ್ ಆದ ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು ಹೆಚ್ಚಿನ ಮಾಹಿತಿಗಾಗಿ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ಒಂದು ವಾಟ್ಸಾಪ್ ಚಾನೆಲ್ ಗೆ ಸೇರಬಹುದು.

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇 https://whatsapp.com/channel/0029VaDOwCTKQuJKSwo7D63M

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ: ನಿಮ್ಮ ಆದಾಯ ಹೆಚ್ಚಿಸಲು ಬಂತು ಕೃಷಿ ಡ್ರೋನ್… ಏನಿದರ ಮಹತ್ವ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಇದನ್ನೂ ಓದಿ: ಆಧಾರ್ ಕಾರ್ಡ್ ನಂಬರ್ ಮೂಲಕ ಎಫ್ ಐ ಡಿ ನಂಬರ್ ತಿಳಿಯುವುದು ಹೇಗೆ?

ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ಸಮ್ಮಾನ್ 17 ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಲು ಇಲ್ಲಿದೆ ನೋಡಿ ಲಿಂಕ್..

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಬಿಡುಗಡೆ ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಇದನ್ನೂ ಓದಿ: ರೈತರೆ ನಿಮ್ಮ  ಮೊಬೈಲಿನಲ್ಲಿ ಸೋಲಾರ್ ಪಂಪ್ ಸೆಟ್ಟಿಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ

By

Leave a Reply

Your email address will not be published. Required fields are marked *