ಸ್ನೇಹಿತರೆ ನೂರು ವರ್ಷಗಳ ಪ್ರಯತ್ನದ ಫಲವಾಗಿ ಹಿಂದುಗಳ ಪವಿತ್ರ ಭೂಮಿಯಲ್ಲಿ ರಾಮ ಮಂದಿರ ಮಂದಿರ ನಿರ್ಮಾಣವಾಯಿತು ಇದು ಹಿಂದುಗಳಿಗೆ ಅತ್ಯಂತ ಖುಷಿ ಕೊಡುವ ವಿಚಾರವಾದರೆ, ಅದಕ್ಕಿಂತ ವಿಶೇಷವೆಂದರೆ ಕಟ್ಟರ್ ಇಸ್ಲಾಂ ಅನ್ನು ಪಾಲಿಸುವ ದೇಶದಲ್ಲಿ ಅಂದರೆ ಅರಬ್ನ ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇವಾಲಯ ನಿರ್ಮಾಣವಾಗಿದ್ದು ಮತ್ತು ಅದರ ಉದ್ಘಾಟನೆಯನ್ನು ನಮ್ಮ ಪ್ರಧಾನಿ ಅವರೇ ಮಾಡಿದ್ದು ಹಿಂದೂಗಳಿಗೆ ಅತ್ಯಂತ ಸಂತೋಷ ಮತ್ತು ಆಶ್ಚರ್ಯಕರ ವಿಷಯ ಎಂದು ಹೇಳಬಹುದು.
ಸ್ನೇಹಿತರೆ ನೂರು ವರ್ಷಗಳ ಪ್ರಯತ್ನದ ಫಲವಾಗಿ ಹಿಂದುಗಳ ಪವಿತ್ರ ಭೂಮಿಯಲ್ಲಿ ರಾಮ ಮಂದಿರ ಮಂದಿರ ನಿರ್ಮಾಣವಾಯಿತು ಇದು ಹಿಂದುಗಳಿಗೆ ಅತ್ಯಂತ ಖುಷಿ ಕೊಡುವ ವಿಚಾರವಾದರೆ, ಅದಕ್ಕಿಂತ ವಿಶೇಷವೆಂದರೆ ಕಟ್ಟರ್ ಇಸ್ಲಾಂ ಅನ್ನು ಪಾಲಿಸುವ ದೇಶದಲ್ಲಿ ಅಂದರೆ ಅರಬ್ನ ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇವಾಲಯ ನಿರ್ಮಾಣವಾಗಿದ್ದು ಮತ್ತು ಅದರ ಉದ್ಘಾಟನೆಯನ್ನು ನಮ್ಮ ಪ್ರಧಾನಿ ಅವರೇ ಮಾಡಿದ್ದು ಹಿಂದೂಗಳಿಗೆ ಅತ್ಯಂತ ಸಂತೋಷ ಮತ್ತು ಆಶ್ಚರ್ಯಕರ ವಿಷಯ ಎಂದು ಹೇಳಬಹುದು.
Thank you for reading this post, don't forget to subscribe!ಈ ಮಂದಿರವನ್ನು ನಿರ್ಮಾಣ ಮಾಡುತ್ತಿರುವುದು BAPS. ಅಂದರೆ ಭೂಚಸನವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ. ಮತ್ತು ಈ ಮಂದಿರದ ನಿರ್ಮಾಣಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಸುಮಾರು 27 ಎಕರೆ ಜಮೀನನ್ನು ಕೊಟ್ಟಿದೆ. ಅಬುದಾಬಿಯಲ್ಲಿ ತಲೆಯೆತ್ತಿ ನಿಂತಿರುವ ಈ ಹಿಂದೂ ದೇವಾಲಯ ಸುಮಾರು 108 ಅಡಿ ಎತ್ತರ 262 ಅಡಿ ಉದ್ದ ಮತ್ತು 180 ಅಡಿ ಅಗಲ ಹೊಂದಿದೆ. ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಬೃಹತ್ ಅಧ್ಯಯನ ಕೇಂದ್ರವನ್ನು ಒಳಗೊಂಡಿದೆ ಸನಾತನ ಧರ್ಮಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಒಳಗೊಂಡ ಬೃಹತ್ ಗ್ರಂಥಾಲಯವನ್ನು ಒಳಗೊಂಡಿದ್ದು ಕ್ರೀಡಾಂಗಣ, ಫುಡ್ ಕೋರ್ಟ್ ಬುಕ್ಸ್ ಮತ್ತು ಗಿಫ್ಟ್ಸ್ ಸೆಂಟರ್ ಹೀಗೆ ಸಾಕಷ್ಟು ವ್ಯವಸ್ಥೆಗಳನ್ನು ಒಳಗೊಂಡಿದೆ. ಧರ್ಮದ ಜೊತೆ ಜೊತೆಗೆ ಒಂದು ಅತ್ಯುತ್ತಮ ಪ್ರವಾಸಿ ಕೇಂದ್ರ ಎನಿಸಿಕೊಳ್ಳಲಿದೆ. ಎಲ್ಲ ಧರ್ಮೀಯರಿಗೆ ಪ್ರವೇಶದ ಅವಕಾಶ ನೀಡಲಾಗಿದ್ದು ಇಲ್ಲಿ ಹಿಂದೂ ಧರ್ಮದ ಪರಿಚಯ ಮಾಡಿಕೊಡಲಾಗುತ್ತದೆ.
ಅಂದ ಹಾಗೆ ಸ್ವಾಮಿ ನಾರಾಯಣ ಸಂಸ್ಥೆಯು 1997ರಲ್ಲಿ ಈ ದೇವಾಲಯವನ್ನು ಕಟ್ಟಲು ಮುಂದಾಯಿತು, 2015ರಲ್ಲಿ ಎಮಿರೇಟ್ಸ್ ಅರಬ್ ಸರ್ಕಾರ ಅಬುಧಬಿಯಲ್ಲಿ ದೇವಾಲಯ ನಿರ್ಮಿಸಲು ಅನುಮತಿ ಕೊಟ್ಟಿತು. 2018ರಲ್ಲಿ ನರೇಂದ್ರ ಮೋದಿಯವರು ಅರಬ್ ಕಂಟ್ರಿಗೆ ಭೇಟಿ ನೀಡಿದಾಗ ಅಂದಿನ ದೊರೆ ಶೇಕ್ ಮಹಮ್ಮದ್ ಬಿನ್ ಹಿಜಾಯತ್ ಅಲ್ ನಹ್ಯನ್ ಮತ್ತು ನರೇಂದ್ರ ಮೋದಿ ಅವರನ್ನು ಮಹಾಂತ ಮಹಾರಾಜರು ಭೇಟಿ ಮಾಡ್ತಾರೆ. ಅದೇ 2018 ಫೆಬ್ರವರಿ 11ರಂದು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗುತ್ತದೆ ಕೊರೊನಾದ ನಡುವೆ ಕೂಡ ಮಂದಿರ ನಿರ್ಮಾಣದ ಕಾರ್ಯ ನಡೆಯಿತು. ಹೇಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆಯೋ ಅದೇ ರೀತಿಯಲ್ಲಿ ಯಾವುದೇ ಕಬ್ಬಿಣದ ತುಂಡನ್ನು ಬಳಸದೆ ಸಿಮೆಂಟ್ ನ ಪ್ರಮಾಣ ಕಡಿಮೆ ಮಾಡಿ ಹಾರುವ ಬೂದಿಯನ್ನು ಉಪಯೋಗಿಸಿ ನಿರ್ಮಾಣ ಮಾಡಲಾಗಿದೆ. ಮಂದಿರ ನಿರ್ಮಾಣಕ್ಕೆ ಭಾರತದಿಂದ ಅಮೃತ ಶಿಲೆಗಳನ್ನು ಸುಮಾರು 700 ಕಂಟೇನರಗಳಲ್ಲಿ ಸಮುದ್ರ ಮಾರ್ಗದ ಮೂಲಕ ಕಳುಹಿಸಲಾಗಿದೆ. ಇನ್ನು ಈ ಮಂದಿರವನ್ನು ನಿರ್ಮಿಸಲು ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚವಾಗಿದೆ. ಕೊನೆಗೂ ನಿರ್ಮಾಣವಾದ ಈ ಸ್ವಾಮಿನಾರಾಯಣ ಮಂದಿರವನ್ನು ಫೆಬ್ರವರಿ 14ರಂದು ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ.
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…