ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆ ಒಂದು ವರ್ಷ ಚಿನ್ನವನ್ನು ಖರೀದಿಸುವ ಯೋಚನೆಯನ್ನು ಬಿಟ್ಟುಬಿಡಿ. ಸದ್ಯಕ್ಕೆ ಅನಗತ್ಯವಾಗಿ ಕೊಳ್ಳುವಿಕೆ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಂತೆ ಗೋಲ್ಡ್ ದರವು ಸತತವಾಗಿ ಕುಸಿಯಲು ಪ್ರಾರಂಭಿಸಿವೆ. ಕಳೆದ ಎರಡ್ಮೂರು ದಿನಗಳಿಂದ ಇಳಿಕೆಯಾಗುತ್ತಿರುವ ಬೆಲೆಯೂ ಇಂದೂ (ಮೇ.18) ಕುಸಿದಿದೆ. ಹಾಗಿದ್ದರೆ, ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಾಗಿದೆ ಎಂಬುದರ ವಿವರ ಹೀಗಿದೆ ಗಮನಿಸಿ.
Thank you for reading this post, don't forget to subscribe!ಮಂಗಳವಾರ (ಮೇ.19) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ 710 ರೂ. ಕುಸಿದರೆ, 22 ಕ್ಯಾರೆಟ್ ಬೆಲೆ 650 ರೂ. ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ದರ ಇಳಿದಿದೆ. ಒಂದು ಔನ್ಸ್ ಚಿನ್ನದ ಬೆಲೆ 12 ಕಡಿಮೆಯಾಗಿದೆ. ಅಲ್ಲಿಗೆ, ಪ್ರಸ್ತುತ ಒಂದು ಔನ್ಸ್ ದರ 4,535 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ಬೆಳ್ಳಿಯ ಬೆಲೆಯಲ್ಲಿಯೂ ಪ್ರಮುಖ ಬದಲಾವಣೆಗಳಾಗಿವೆ. ಕಳೆದ ಮೂರು ದಿನಗಳಿಂದ ಬೆಳ್ಳಿಯ ಬೆಲೆ ಇಳಿಕೆ ಕಂಡಿತ್ತು. ಆದರೆ, ಇಂದು ದಿಢೀರ್ ಕೆಜಿಗೆ 10 ಸಾವಿರ ರೂ. ಜಾಸ್ತಿಯಾಗಿದೆ. ಕಳೆದ ಮೂರು ದಿನಗಳಲ್ಲಿ, 30,000 ರೂ. ಇಳಿದಿದ್ದ ಬೆಳ್ಳಿ ಇಂದು ಒಂದೇ ದಿನ 10,000 ರೂ.ಗೆ ಏರಿಕೆ ಆಗಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ. ಇನ್ನು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆಗಳು ಎಷ್ಟಾಗಿದೆ ಎಂಬುದರ ಪಟ್ಟಿ ಹೀಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,56,370 ರೂ. ಆಗಿದ್ದರೆ, 22 ಕ್ಯಾರೆಟ್ 1,43,350 ರೂ. ಆಗಿದೆ. ಮುಂಬೈ, ಕೋಲ್ಕತ, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ, 24 ಕ್ಯಾರೆಟ್ನ 10 ಗ್ರಾಂ ಬೆಲೆ 1,56,220 ರೂ. ತಲುಪಿದ್ದರೆ, 22 ಕ್ಯಾರೆಟ್ 1,43,200 ರೂ. ಆಗಿದೆ. ಇನ್ನು ಹೈದರಾಬಾದ್, ತೆಲಂಗಾಣ ರಾಜ್ಯಗಳಲ್ಲಿ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,56,220 ರೂ.ಗೆ ತಲುಪಿದ್ದರೆ, ಅದೇ 22 ಕ್ಯಾರೆಟ್ 1,43,200 ರೂ.ನಲ್ಲಿ ವಹಿವಾಟು ನಡೆಸುತ್ತಿದೆ.
ಬೆಳ್ಳಿ 10,000 ರೂ.
ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ನವದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ದರ 2,90,000 ರೂ. ಆಗಿದೆ. ಚೆನ್ನೈ, ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಕೆಜಿ ಬೆಳ್ಳಿಯ ಬೆಲೆ 3,00,000 ರೂ.ಗೆ ತಲುಪಿರುವುದು ಅಲ್ಲಿನ ಗ್ರಾಹಕರ ಹುಬ್ಬೇರಿಸಿದೆ.
ಓದುಗರಲ್ಲಿ ವಿನಂತಿ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode