ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ನಮಸ್ಕಾರಗಳು. ಬೆಳೆ ಉತ್ಪಾದಕತೆ ವೃದ್ಧಿ, ಬೇಸಾಯದ ಶ್ರಮ ಹಾಗೂ ವೆಚ್ಚ ಕಡಿಮೆ ಮಾಡುವ ತಂತ್ರಜ್ಞಾನ- ಯಂತ್ರೋಪಕರಣಗಳಲ್ಲಿ ‘ಕೃಷಿ ಡ್ರೋನ್’ ಹೊಸ ಭರವಸೆ.
Thank you for reading this post, don't forget to subscribe!ಕಿಸಾನ್ ಡ್ರೋನ್ ಔಷಧ ಸಿಂಪಡಣೆಗೆ ಮಾತ್ರವಲ್ಲದೇ ಕೃಷಿಯ ನಾನಾ ಕಾರಗಳಿಗೂ ಪೂರಕ ಕೀಟನಾಶಕ, ಕಳೆನಾಶಕ ಸಿಂಪಡಣೆಗೆ ಡೋನ್ ಈಗಾಗಲೇ ಬಳಕೆಯಲ್ಲಿದ್ದು, ಮಣ್ಣು ಮತ್ತು ಪೋಷಕಾಂಶಗಳ ವಿಶ್ಲೇಷಣೆ, ಮಣ್ಣಿನ ತೇವಾಂಶ ಪತ್ತೆ, ಬೆಳೆಗಳ ಮೇಲ್ವಿಚಾರಣೆ ಹಾಗೂ ಜಿಯೋಫೆನ್ಸಿಂಗ್ ಕಾರ್ಯಕ್ಕೆ ಕಿಸಾನ್ ಡ್ರೋನ್ ಬಳಕೆಯಾಗುತ್ತಿದೆ.
Thank you for reading this post and do not forget to subscribe
ಇದ್ದನು ಓದಿ -ಆಧಾರ್ ಕಾರ್ಡ್ ನಂಬರ್ ಮೂಲಕ ಎಫ್ ಐ ಡಿ ನಂಬರ್ ತಿಳಿಯುವುದು ಹೇಗೆ?https://mediachanakya.com/find-your-fid-number-through-aadhar-number-in-your-mobile/
ವೆದರ್ ಡ್ರೋನ್ :
ಹವಾಮಾನ ಮೇಲ್ವಿಚಾ
ರಣೆಗೆ ಬಳಕೆ ಮಾಡುವ ವೆದರ್ ಡೋನ್ ವಾತಾವರಣದ ಉಷ್ಣಾಂಶದ ದತ್ತಾಂಶ ಸಂಗ್ರಹಿಸಲು ಸಂವೇದಕಗಳನ್ನು ಹೊಂದಿರುತ್ತದೆ. ರಿಮೋಟ್ ಸೆನ್ಸಾರ್ ಸಹಾಯದಿಂದ ಹೊಲಗಳಲ್ಲಿ ಸುತ್ತಮುತ್ತಲಿನ ಹವಾಮಾನದ ಮಾಹಿತಿ ಸಂಗ್ರಹಿಸುತ್ತದೆ. ತಾಪಮಾನ, ಮಳೆ ಮತ್ತು ಮಣ್ಣಿನ ಸವಕಳಿ ಮಾಹಿತಿ ಸಂಗ್ರಹಿಸಲು ವೆದರ್ ಡ್ರೋನ್ ಪೂರಕ.
- ಹೋಟೆಲ್ ಬಿಸಿನೆಸ್ ಶುರು ಮಾಡುವವರಿಗೆ ಸಿಗಲಿದೆ ಸಬ್ಸಿಡಿ ! ಈಗಲೇ ಅರ್ಜಿ ಸಲ್ಲಿಸಿ
- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ ! ಯಾರು ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
- ಹೊಸ ಭೂಮಿ ಖರೀದಿ ಮಾಡುವಾಗ ತಪ್ಪದೇ ಈ ದಾಖಲೆಗಳನ್ನು ಪರೀಕ್ಷಿಸಿ! ಆಮೇಲೆ ಪಶ್ಚಾತಾಪ ಪಡಬೇಡಿ !
ಬೆಳೆ ಕಣ್ಣಾವಲು:
ಬೀಜ ಬಿತ್ತುವ ಸಮಯದಿಂದ ಬೆಳೆ ಕೊಯ್ದು ಮಾಡುವವರೆಗೂ ಜಮೀನಿನಲ್ಲಿ ನಿರಂತರ ಮೇಲ್ವಿಚಾರಣೆ ಮಾಡಲು ಈ ಮಾದರಿಯ ಡೋನ್ ಪೂರಕ. ಸರಿಯಾದ ಸಮಯಕ್ಕೆ ರಸಗೊಬ್ಬರವನ್ನು ಒದಗಿಸುವುದು. ಕೀಟಗಳ ಹಾವಳಿ ಪರಿಶೀಲಿಸುವ ಕಾವ್ಯವನ್ನು ಇನ್ ಫ್ರಾರೆಡ್ (Infrared) ಕ್ಯಾಮೆರಾ ಮೂಲಕ ಮಾಡುತ್ತದೆ. ಇದರಿಂದ ಬೆಳೆಗಳ ಮೇಲೆ ಕಣ್ಗಾವಲು ಕಾರ್ಯವನ್ನು ಪರಿಣಾಮವಾಗಿ ನಿರ್ವಹಿಸಲು ಸಾಧ್ಯ.
ಜಿಯೋ ಫೆನ್ಸಿಂಗ್:
ಡ್ರೋನ್ ಮೇಲೆ ಅಳವಡಿಸಲಾಗಿರುವ ಥರ್ಮಲ್ ಕ್ಯಾಮೆರಾಗಳು ಪ್ರಾಣಿ ಅಥವಾ ಮನುಷ್ಯರನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಈ ತಂತ್ರಜ್ಞಾನದ ಮೂಲಕ ವಿಶೇಷವಾಗಿ ರಾತ್ರಿ ಅವಧಿಯಲ್ಲಿ ಪ್ರಾಣಿಗಳಿಂದ ಉಂಟಾಗುವ ಹಾನಿಗಳ ಬಗ್ಗೆ ಮಾಹಿತಿ ನೀಡುತ್ತವೆ.
ಮಣ್ಣು, ಕ್ಷೇತ್ರ ವಿಶ್ಲೇಷಣೆ:
ಮಣ್ಣು ಮತ್ತು ಕೃಷಿ ಕ್ಷೇತ್ರದ ವಿಶ್ಲೇಷಣೆ ಕಾರ್ಯ ಕೃಷಿ ಡ್ರೋನ್ಗಳಿಂದ ಮಾಡಲು ಸಾಧ್ಯ, ಮಣ್ಣಿನ ತೇವಾಂಶ, ಭೂಪ್ರದೇಶದ ಸ್ಥಿತಿ, ಮಣ್ಣು ಸವೆತ, ಪೋಷಕಾಂಶದ ಅಂಶ ಮತ್ತು ಮಣ್ಣಿನ ಫಲವತ್ತತೆಯ ಮೌಲ್ಯಮಾಪನ ಕಾಯವನ್ನು ಡ್ರೋನ್ ನಿಂದ ಮಾಡಲು ಸಾಧ್ಯ.
ಬೆಳೆ ಮೇಲ್ವಿಚಾರಣೆ:
ವಿಶೇಷವಾಗಿ ರೂಪಿಸಿದ ಕಿಸಾನ್ ಡ್ರೋನ್ ಬೆಳೆಗಳ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ನಿಖರವಾದ ಡೇಟಾ ಅಥವಾ ದತ್ತಾಂಶ ಸಂಗ್ರಹಿಸಿ ಒದಗಿಸುವ ಸಾಮರ್ಥ್ಯ ಹೊಂದಿರುತ್ತದೆ. ಬೆಳೆಗಳ ರೋಗ ಉಲ್ಬಣಗೊಳ್ಳುವ ಮೊದಲೇ ಪತ್ತೆ ಮಾಡಿ ಮುನ್ಸೂಚನೆ ನೀಡುತ್ತದೆ. ಡ್ರೋನ್ ಸೆರೆಹಿಡಿದ ಮಲಿಸೆಕಲ್ ಚಿತ್ರಗಳು ಆರೋಗ್ಯಕರ ಮತ್ತು ಅನಾರೋಗ್ಯಕರ ಬೆಳೆಗಳ ವ್ಯತ್ಯಾಸ ತಿಳಿಸುತ್ತದೆ.
ಜಾನುವಾರು ನಿರ್ವಹಣೆ:
- ಕಿಸಾನ್ ಡೋನ್ ಬಳಕೆಯಿಂದ ಜಾನುವಾರುಗಳ ವಿಭಿನ್ನ ವಿನ್ಯಾಸ, ಸಾಮರ್ಥ್ಯದ ಕೃಷಿ ಡ್ರೋನ್ ಕಿಸಾನ್ ಡೋನ್ ಗಳು ಕೃಷಿ ಕ್ಷೇತ್ರಗಳ ಮೇಲೆ ಹಾರಾಡಿ ಹೆಚ್ಚಿನ ರೆಸೆಲ್ಯೂಷನ್ ಚಿತ್ರಗಳನ್ನು ಸೆರೆಹಿಡಿಯುತ್ತವೆ. ಚಿತ್ರಗಳನ್ನು ತ್ವರಿತವಾಗಿ ವಿಶ್ಲೇಶಿಸಿ, ಮಾಹಿತಿಯನ್ನು ಸಂಗ್ರಹಿಸುತ್ತದೆ. ಬೆಳೆಗೆ ಎಷ್ಟು ಕೀಟನಾಶಕ ಅಗತ್ಯವಿದೆ ಎಂಬುದನ್ನು ನಿರ್ಧರಿಸಿ ತಿಳಿಸುತ್ತದೆ. ಇದರಿಂದ ಬೆಳೆಗೆ ಅಗತ್ಯವಾದಂತಹ ಕೀಟನಾಶಕದ ಪ್ರಮಾಣ ನಿರ್ಣಯಿಸಲು ಸುಲಭವಾಗುತ್ತದೆ.
- ಡ್ರೋನ್ ಗಳು ವಿಭಿನ್ನ ವಿನ್ಯಾಸ ಮತ್ತು ಪೇಲೋಡ್ ಗಳಲ್ಲಿ ಲಭ್ಯವಿದ್ದು, 50 ರಿಂದ 100 ಮೀಟರ್ ಎತ್ತರದಲ್ಲಿ ಹಾರಬಲ್ಲವು ಹಾಗೂ 1 ರಿಂದ 25 ಕೆಜಿ ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯವಿರುತ್ತದೆ. 6 ಗಂಟೆಗಳಲ್ಲಿ ಸರಾಸರಿ 8 ರಿಂದ 10 ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಪೋಷಕಾಂಶ, ರಾಸಾಯನಿಕ ಮತ್ತು ಕೀಟನಾಶಕ ಸಿಂಪಡಿಸುವ ಸಾಮರ್ಥ್ಯ ಹೊಂದಿರುತ್ತದೆ.
ಲೈಸೆನ್ಸ್ ಅಗತ್ಯ ಜೋನ್‌ಗಳಲ್ಲಿ ಡ್ರೋನ್ ಪ್ಲೇ, Pix AD. Precision Mapper, Agrosoft photoscan, 3DF Zephyr ಇತ್ಯಾದಿ ಸಾಫ್ಟ್‌ವೇರ್ ಬಳಕೆ ಮಾಡಲಾಗುತ್ತದೆ. ಡ್ರೋನ್ ಗಳ ಗಾತ್ರ ಹಾಗೂ ಭಾರ ಹೊರುವ ಸಾಮರ್ಥ್ಯ ಆಧರಿಸಿ ನ್ಯಾನೊ, ಮೈಕ್ರೋ ಮತ್ತು ಸಣ್ಣ ಡ್ರೋನ್ ಎಂದು ವಿಂಗಡಿಸಲಾಗುತ್ತದೆ. ನಮ್ಮ ದೇಶದಲ್ಲಿ ಒಟ್ಟು 22 ನೋಂದಾಯಿತ ಡೋನ್ ತಯಾರಿಸಿದ್ದು, ವಿಶೇಷವಾಗಿ ಅತ್ತೆ 01 (2ಕೆಜಿ) ಮತ್ತು ಅಗ್ರಿ ಬೋಟ್ ಯುಎವಿ (23 ಕೆಜಿ) ಮಾದರಿಗಳನ್ನು ಕೃಷಿ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಕೃಷಿ ಇಲಾಖೆಯ ಅಂದಾಜಿನ ಪ್ರಕಾರ 10 ಕೆಜಿ ಭಾರ ಹೊರುವ ಸಾಮರ್ಥ್ಯದ ಡೋನ್ ಸೇವೆಗೆ 1 ಎಕರೆಗೆ ಸುಮಾರು 450-500 ರೂ. ನಿರ್ವಹಣೆ ವೆಚ್ಚವಾಗುತ್ತದೆ. ಕೃಷಿ ಡೋನ್ ನಿರ್ವಹಿಸಲು ತರಬೇತಿ ಪಡೆಯುವುದು ಸೂಕ್ತ. ಹಾಗೆಯೇ ಡೋನ್ ಹಾರಾಟಕ್ಕೆ ಪರವಾನಗಿ ಪಡೆದಿರಬೇಕು.
ಮೇಲ್ವಿಚಾರಣೆ ಸಾಧ್ಯ. ಡ್ರೋನ್ ಸಂವೇದನಗಳು (Sensors) ಹೆಚ್ಚಿನ ರೆಸಲ್ಯೂಷನ್ ಕ್ಯಾಮರಾಗಳನ್ನು ಹೊಂದಿದ್ದು, ಇವು ಅನಾರೋಗ್ಯ ಪೀಡಿತ ಜಾನುವಾರು ಪತ್ತೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ಆತ್ಮೀಯ ರೈತರೆ ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ತಮಗೆ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M