WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ಪ್ರಸ್ತುತ ಟ್ರೆಂಡಿಂಗ್ ನಲ್ಲಿರುವ ವಿಷಯವೆಂದರೆ ಅದು 75 ಹಾರ್ಡ್ ಚಾಲೆಂಜ್. ವಿವಿಧ ರೀತಿಯ ಟಾಸ್ಕ್ ಮೂಲಕ ಇನ್ನೊಬ್ಬರಲ್ಲಿ ಬದಲಾವಣೆ ತರಬಲ್ಲ ಟಾಸ್ಕ್ ಇದಾಗಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

75 ಹಾರ್ಡ್ ಚಾಲೆಂಜ್ ಎಂದರೆ ಏನು?
ಸುದ್ದಿಯಲ್ಲಿರುವ 75 ಹಾರ್ಡ್ ಚಾಲೆಂಜ್ ಇದು ಒಂದು ಮನುಷ್ಯನ ಜೀವನವನ್ನೇ ಬದಲಿಸಬಹುದಾದ ವಿಭಿನ್ನ ರೀತಿಯ ಚಾಲೆಂಜ್ ಆಗಿದೆ. ಈ 75 ಹಾರ್ಡ್ ಚಾಲೆಂಜ್ ಬಗ್ಗೆ ಹಲವಾರು ರೀತಿಯ ಅಭಿಪ್ರಾಯಗಳಿವೆ, ಇದು ಒಂದು ಕಷ್ಟಕರವಾದ ಚಾಲೆಂಜ್ ಎನ್ನಬಹುದಾಗಿದೆ. ಈ ಚಾಲೆಂಜ್ ಅನ್ನು ಕೇವಲ ಬೆರಳಣಿಕೆಯಷ್ಟು ಜನ ಸಾಧಿಸಿದ್ದಾರೆ. ಮನುಷ್ಯನ ಜೀವನ ಶೈಲಿಯನ್ನೇ ಬದಲಿಸಬಲ್ಲ 75 ಹಾರ್ಡ್ ಚಾಲೆಂಜ್ ಬಗ್ಗೆ ಬನ್ನಿ ತಿಳಿಯೋಣ.

ಈ 75 ದಿನಗಳ ಹಾರ್ಡ್ ಚಾಲೆಂಜ್ ಎಂದರೆ ಒಬ್ಬ ವ್ಯಕ್ತಿಯೊಬ್ಬ ಒಂದು ದಿನವೂ ತಪ್ಪಿಸದೆ ಮಾಡಬೇಕಾದ ಕೆಲ ಕೆಲಸಗಳಾಗಿವೆ. ಅವುಗಳೆಂದರೆ-

1) ತಾಲೀಮು:
ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ 45 ನಿಮಿಷದಂತೆ 2 ಬಾರಿ ವ್ಯಾಯಾಮ ಮಾಡ್ಬೇಕು. ದೇಹಕ್ಕೆ ದಣಿವು ತರಬಲ್ಲ ಯಾವ ವ್ಯಾಯಾಮವಾದರೂ ಸರಿಯೇ. ಇದನ್ನ ಪ್ರತಿನಿತ್ಯ ಮಾಡಬೇಕು.

2) ನೀರು :
75 ಹಾರ್ಡ್ ಚಾಲೆಂಜ್ ಸ್ವೀಕರಿಸಿದ ವ್ಯಕ್ತಿಯೂ ದಿನಕ್ಕೆ 4 ಲೀಟರ್ ನೀರನ್ನು ಕುಡಿಯಬೇಕು. ಇದನ್ನು ಪ್ರತಿದಿನ ತಪ್ಪದೇ ಪಾಲಿಸಬೇಕು.

3)ಆಹಾರ:
ವ್ಯಕ್ತಿಯೂ ಮನೆಯ ಪೋಷಕಾಂಶ ಸಹಿತ ಆಹಾರವನ್ನು ಸ್ವೀಕರಿಸಬೇಕು. ಫ್ಯಾಟ್ ಇರುವ ಮತ್ತು ಬೇಕರಿ ಉತ್ಪನ್ನಗಳನ್ನು ತಿನ್ನಬಾರದು (ಕಡಿಮೆ ಪೋಷಕಾಂಶವುಳ್ಳ ಆಹಾರ).

4) ಪುಸ್ತಕ ಓದುವುದು:
75 ಹಾರ್ಡ್ ಚಾಲೆಂಜ್ ಸ್ವೀಕರಿಸಿದ ವ್ಯಕ್ತಿಯೂ ದಿನಕ್ಕೆ 10 ಪುಟಗಳ ಸ್ಪೂರ್ತಿದಾಯಕ ಪುಸ್ತಕ ಓದಬೇಕು
ಉದಾಹರಣೆ:
– ಭಗವದ್ಗೀತಾ.
-ರಿಚ್ ಡ್ಯಾಡ್ ಮತ್ತು ಪೂರ್ ಡ್ಯಾಡ್.

      
                    WhatsApp Group                             Join Now            
   
                    Telegram Group                             Join Now            

5) ಸೆಲ್ಫಿ:
ಪ್ರತಿದಿನ ಒಂದು ಸೆಲ್ಫಿ ತೆಗೆದುಕೊಳ್ಳಬೇಕು. ಏಕೆಂದರೆ ವ್ಯಕ್ತಿಯಲ್ಲಿ ಬದಲಾವಣೆಯನ್ನು ನೋಡಲು 75 ದಿನಗಳ ಮೊದಲು ಮತ್ತು 75 ದಿನಗಳ ನಂತರ.

ಸ್ನೇಹಿತರೇ ಒಟ್ಟಿನಲ್ಲಿ ನೀವೂ ಈ ಚಾಲೆಂಜ್ ಸ್ವೀಕರಿಸಿದ್ದೇ ಆದಲ್ಲಿ ಪ್ರತಿನಿತ್ಯ ಈ ಮೇಲೆ ಸೂಚಿಸಿದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ನೀವು ಹೀಗೆ 75 ದಿನಗಳ ಕಾಲ ಈ ನಿಯಮಗಳನ್ನು ಪಾಲಿಸಿದ್ದೇ ನಿಜವಾದರೆ ನೀವು ನಿಮ್ಮಲ್ಲಿ ಹುದುಗಿರುವ ಅದಮ್ಯ ಚೇತನವನ್ನು ಕಾಣಬಹುದು. ಹಾಗೆಯೇ ನಿಮ್ಮ ಕ್ಷೇತ್ರದಲ್ಲಿ ನೀವು ಉನ್ನತ ಮಟ್ಟಕ್ಕೆ ಏರಬಹುದು.

ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನೀವು ನಮ್ಮ ವೆಬ್ಸೈಟ್ ಗೆ ಹೊಸಬರಾಗಿದ್ದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ಗಳನ್ನು ‘allow ‘ ಮಾಡಿಕೊಳ್ಳಿ. ಹಾಗೆ ಈ ಆರ್ಟಿಕಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

By

Leave a Reply

Your email address will not be published. Required fields are marked *