ಆತ್ಮೀಯ ಓದುಗರೆ, ತಮಗೆಲ್ಲ ಮೀಡಿಯಾ ಚಾಣಕ್ಯ ಅಧೀಕೃತ ಮಾಹಿತಿ ತಾಣಕ್ಕೆ ಸ್ವಾಗತ. ಇತ್ತೀಚೆಗೆ ಕೇಂದ್ರ ಸರ್ಕಾರವು ಮನೆಯಲ್ಲಿಯೇ ವಿದ್ಯುತ್ ಉತ್ಪಾದನಾ ಮಾಡಿ ಸರ್ಕಾರಕ್ಕೆ ಮಾರಾಟ ಮಾಡಿ ಹಣ ಗಳಿಸುವ ಅದ್ಭುತ ಯೋಜನೆಯೊಂದನ್ನು ಘೋಷಿಸಿದೆ. ಹಾಗಾದರೆ ಯಾವುದು ಈ ಯೋಜನೆ, ಅದಕ್ಕೆ ಯಾರೆಲ್ಲ ಅರ್ಹರು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ: 9 ನೇ ಕಂತಿನ ಹಣ ಬಿಡುಗಡೆಗೆ! ನಿಮ್ಮ ಜಿಲ್ಲೆಗೆ ಬಿಡುಗಡೆ ಆಗಿದೆಯಾ ಚೆಕ್ ಮಾಡಿ ನೋಡಿ !!
ಏನಿದು ಸೂರ್ಯ ಘರ್ ಯೋಜನೆ?
ಇದೊಂದು ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆಯ ಮೂಲಕ ಪ್ರತಿಯೊಬ್ಬರೂ ತಮ್ಮ ಮನೆಗೆ ಬೇಕಾಗುವ ವಿದ್ಯುತ್ ಅನ್ನು ಉತ್ಪಾದನೆ ಮಾಡಬಹುದಾಗಿದೆ. ಅಲ್ಲದೇ ಹೆಚ್ಚುವರಿ ಉತ್ಪಾದನೆಯಾದ ವಿದ್ಯುತ್ ಅನ್ನು ಸರ್ಕಾರವೇ ಹಣ ಕೊಟ್ಟು ಕೊಂಡು ಕೊಳ್ಳಲಿದೆ. ಈ ಮೂಲಕ ಪ್ರತಿಯೊಬ್ಬರೂ ವರ್ಷಕ್ಕೆ 1 ಲಕ್ಷ ರೂಪಾಯಿ ಹಣ ಗಳಿಸಬಹುದಾಗಿದೆ.
ಯಾರು ಅರ್ಹರು? ಹೇಗೆ ಕೆಲಸ ಮಾಡುತ್ತದೆ?
ಈ ಯೋಜನೆಗೆ ಪ್ರತಿಯೊಬ್ಬರೂ ಅರ್ಹರಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವ ಮೂಲಕ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಸೋಲಾರ್ ಪ್ಯಾನೆಲ್ ಅಳವಡಿಸುವುದಕ್ಕೆ ಕೇಂದ್ರ ಸರ್ಕಾರವೇ ಸಬ್ಸಿಡಿ ನೀಡುತ್ತಿದ್ದು, ಉಳಿದ ಹಣವನ್ನು ಸ್ವತಃ ಗ್ರಹಸ್ಥರೆ ಭರಿಸಬೇಕು.
ಇದನ್ನೂ ಓದಿ: Voter’s List ನಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಅಂತ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ!
ಒಟ್ಟಾರೆ ಸೋಲಾರ್ ಪ್ಯಾನೆಲ್ ವ್ಯವಸ್ಥೆಯನ್ನು ಅಳವಡಿಸಲು ಸುಮಾರು 1 ಲಕ್ಷದಷ್ಟು ಹಣ ಖರ್ಚಾಗುತ್ತದೆ. ಇದನ್ನ ಅಳವಡಿಸಲು, ಕೇಂದ್ರ ಸರ್ಕಾರ 2 ರೀತಿಯ ಸಬ್ಸಿಡಿ ಘೋಷಿಸಿದೆ. ಮೊದಲನೆಯದಾಗಿ 2 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಅಳವಡಿಸುವುದಾದರೆ ಕೇಂದ್ರ ಸರ್ಕಾರವು ಅದಕ್ಕೆ 60,000 ರುಪಾಯಿ ಸಬ್ಸಿಡಿ ನೀಡುತ್ತದೆ. ಎರಡನೆಯದಾಗಿ 3 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಅಳವಡಿಸುವದಾದರೆ ಅದಕ್ಕೆ ಕೇಂದ್ರ ಸರ್ಕಾರವು 78,000 ರೂಪಾಯಿಯ ಸಬ್ಸಿಡಿ ನೀಡುತ್ತದೆ.
ಏನೆಲ್ಲಾ ಲಾಭಗಳು ಸಿಗುತ್ತವೆ?
ಈ ಯೋಜನೆಯು ಬಡ ಕುಟುಂಬದ ಪಾಲಿಗೆ ಒಂದು ರೀತಿಯ ವರದಾನ ಅಂತಲೇ ಹೇಳಬಹುದು. ಯಾಕೆಂದರೆ ಈ ಯೋಜನೆಯ ಮೂಲಕ ತಮ್ಮ ಮನೆಯ ವಿದ್ಯುತ್ ಬೇಡಿಕೆಯನ್ನು ಪೂರೈಸುವುದರೊಂದಿಗೆ ಹೆಚ್ಚುವರಿ ಉತ್ಪಾದನೆಯಾದ ವಿದ್ಯುತ್ ಅನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ. ಇದರಿಂದ ಅನಾಯಾಸವಾಗಿ ಹಣ ಗಳಿಸಬಹುದಾಗಿದೆ. ಇದಕ್ಕಾಗಿ ನಿಮ್ಮ ವಿದ್ಯುತ್ ಪೂರೈಕೆದಾರರು (ಉದಾಹರಣೆ: ಹೆಸ್ಕಾಂ, ಬೆಸ್ಕಾಂ) ಸಿಬ್ಬಂದಿಗಳೇ ಬಂದು ಇದಕ್ಕಾಗಿ ಹೊಸ ಮೀಟರ್ ಅನ್ನು ಅಳವಡಿಸಿ ಹೋಗುತ್ತಾರೆ. ಇನ್ನು ಈ ಸೋಲಾರ್ ಪ್ಯಾನೆಲ್ ವ್ಯವಸ್ಥೆಯನ್ನು ಸರ್ಕಾರ ಸೂಚಿಸಿದ ಕಂಪನಿಯ ಸಿಬ್ಬಂದಿಗಳೇ ಬಂದು ಇದನ್ನ ಅಳವಡಿಸಿ ಕೊಡುತ್ತಾರೆ.
ಇದನ್ನೂ ಓದಿ: PMAY- ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಉಚಿತ ಮನೆ
ಒಟ್ಟಾರೆಯಾಗಿ ಹೇಳುವುದಾದರೆ ಈ ಯೋಜನೆ ಕೇಂದ್ರ ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದ್ದು, ಪರಿಸರ ಮಾಲಿನ್ಯ ನಿಯಂತ್ರಣದ ಜೊತೆಗೆ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ನಾಂದಿಯಾಗಲಿದೆ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M