ಸಬ್ಸಿಡಿ ಸಾಲ: ರೈತರಿಗೆ ನೀಡುವ ಸಬ್ಸಿಡಿ ಹೆಚ್ಚಿಸಲು ಮುಂದಾದ ಸರ್ಕಾರ! ಅನುದಾನ ಕೂಡ ಏರಿಕೆ ಮಾಡುವ ಸುಳಿವು ನೀಡಿದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ!

ಆತ್ಮೀಯ ರೈತರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಇತ್ತೀಚೆಗೆ ರಾಜ್ಯ ಸರ್ಕಾರವು ಕಳೆದ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿದ್ದ ರೈತರಿಗೆ ಬರ ಪರಿಹಾರ ಎಂದು ಮೂರು ಕಂತುಗಳಲ್ಲಿ ನೇರವಾಗಿ ಹಣ ಜಮಾ ಮಾಡಿತ್ತು. ಅಲ್ಲದೆ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ಧನ ಸಹಾಯ ಮಾಡುವ ಉದ್ದೇಶದಿಂದ ಹೆಚ್ಚುವರಿ 3,000 ರೂಪಾಯಿ ಹಣವನ್ನು ಜಮಾ ಮಾಡಿದೆ.

Spread the love

ಆತ್ಮೀಯ ರೈತರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಇತ್ತೀಚೆಗೆ ರಾಜ್ಯ ಸರ್ಕಾರವು ಕಳೆದ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿದ್ದ ರೈತರಿಗೆ ಬರ ಪರಿಹಾರ ಎಂದು ಮೂರು ಕಂತುಗಳಲ್ಲಿ ನೇರವಾಗಿ ಹಣ ಜಮಾ ಮಾಡಿತ್ತು. ಅಲ್ಲದೆ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ಧನ ಸಹಾಯ ಮಾಡುವ ಉದ್ದೇಶದಿಂದ ಹೆಚ್ಚುವರಿ 3,000 ರೂಪಾಯಿ ಹಣವನ್ನು ಜಮಾ ಮಾಡಿದೆ.

Thank you for reading this post, don't forget to subscribe!

ಇದೀಗ ರಾಜ್ಯ ಸರ್ಕಾರ ರೈತರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಮುಂಬರುವ ದಿನಗಳಲ್ಲಿ ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿ ದರದಲ್ಲಿ ಏರಿಕೆ ಮಾಡುವ ಯೋಜನೆಯನ್ನು ಮಾನ್ಯ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರು ನಿನ್ನೆ ಬೆಳಗಾವಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಸಾಲಮನ್ನಾ: ರೈತರ 2 ಲಕ್ಷ ರೂಪಾಯಿ ಸಾಲ ಮನ್ನಾ ಮಾಡಲು ಮುಂದಾದ ಸರ್ಕಾರ| ಯಾವ ಯಾವ ರೈತರ ಸಾಲ ಮನ್ನಾ ಆಗಲಿದೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಹೌದು ರೈತ ಮಿತ್ರರೇ, ರಾಜ್ಯ ಸರ್ಕಾರ ಇತ್ತೀಚೆಗೆ ಪೆಟ್ರೋಲ್,ಡೀಸೆಲ್ ಹಾಗೂ ಹಾಲಿನ ದರಗಳನ್ನು ಹೆಚ್ಚಿಸಿ ವಿಪಕ್ಷಗಳಿಂದ ಭಾರಿ ಟೀಕೆಗೆ ಗುರಿಯಾಗಿತ್ತು. ಗ್ಯಾರಂಟೀ ಯೋಜನೆಗಳಿಗೆ ಸಾರ್ವಜನಿಕರಿಗೆ ತೆರಿಗೆ ದಂಡ ಹಾಕುತ್ತಿರುವ ಸರ್ಕಾರ ಎಂದು ಪ್ರತಿ ಪಕ್ಷಗಳು ರಾಜ್ಯ ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದವು.

ಇದನ್ನೂ ಓದಿ: ಬೆಳೆ ಪರಿಹಾರ: ಮುಂದಿನ ವಾರದಲ್ಲಿ ಎಲ್ಲಾ ರೈತರ ಖಾತೆಗೆ 3,000 ಹಣ ಜಮಾ: ಸಚಿವ ಕೃಷ್ಣ ಬೈರೇಗೌಡ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ “ರಾಜ್ಯದ ಅಭಿವೃದ್ಧಿಗೆ ಸರ್ಕಾರ ತೆರಿಗೆ ಹೆಚ್ಚಿಸುವುದು ಸಾಮಾನ್ಯ. ಯಾವುದೇ ಸರ್ಕಾರ ಬಂದರೂ ಅಭಿವೃದ್ಧಿಯ ಸಲುವಾಗಿ ತೆರಿಗೆ ಹೆಚ್ಚಿಸುತ್ತವೆ. ಅಂಥದರಲ್ಲಿ ಈ ಬಾರಿ ಕೇಂದ್ರ ಸರ್ಕಾರ ರಾಜಕ್ಕೆ ಅತಿ ಕಡಿಮೆ ಅನುದಾನವನ್ನು ಬಿಡುಗಡೆ ಮಾಡಿದ್ದು ಜನ ಕಲ್ಯಾಣ ಯೋಜನೆಗಳಿಗೆ ಭಾರಿ ಹೊಡೆತ ಬಿದ್ದಿದೆ. ಈ ಕಾರಣದಿಂದ ರಾಜ್ಯ ಸರಕಾರ ತೆರಿಗೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ” ಎಂದರು.

“ಅಲ್ಲದೇ ತೆರಿಗೆ ಹೆಚ್ಚಳದಿಂದ ರಾಜ್ಯದ ರೈತರಿಗೆ ಸಿಗುತ್ತಿರುವ ಸಬ್ಸಿಡಿ ದರಗಳು ಹೆಚ್ಚಾಗುತ್ತವೆ ಹಾಗೂ ಸರ್ಕಾರದಿಂದ ರೈತರಿಗೆ ಸಿಗುವ ಅನುದನದಲ್ಲಿಯೂ ಏರಿಕೆ ಉಂಟಾಗುತ್ತದೆ” ಎಂದು ಸೂಕ್ಷ್ಮವಾಗಿ ಬರಲಿರುವ ದಿನಗಳಲ್ಲಿ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿರುವ ಸಬ್ಸಿಡಿ ದರ ಹೆಚ್ಚಿಸುವ  ಯೋಜನೆಯ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: FID Number: ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲು FID ನಂಬರ್ ಕಡ್ಡಾಯ! ನಿಮ್ಮ FID ನಂಬರ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಇನ್ನು ರಾಜ್ಯ ಸರ್ಕಾರ ಇತ್ತಿಚೆಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚುವರಿ ಪರಿಹಾರವಾಗಿ ತಲಾ ₹3,000 ರೂಪಾಯಿಯನ್ನು ಅರ್ಹ ರೈತರ ಖಾತೆಗೆ ಜಮಾ ಮಾಡುತ್ತಿದ್ದು ,ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಎಂಬುದನ್ನು ಚೆಕ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ.

ಬರ ಪರಿಹಾರ ಹಣ ಜಮಾ ಆಗಿದೆಯಾ ಎಂದು ಚೆಕ್ ಮಾಡುವುದು ಹೇಗೆ?

ಹಂತ -1) ಮೊದಲಿಗೆ ನೀವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ.

https://parihara.karnataka.gov.in/service92/

ಹಂತ -2) ನಂತರ ನೀವು ಕೆಳಗೆ ತೋರಿಸಿದಂತೆ ಅದರಲ್ಲಿ ವರ್ಷ, ಋತು ಮತ್ತು ವಿಪತ್ತು ವಿಧ ಆಯ್ಕೆ ಮಾಡಿ Get Details ಮೇಲೆ ಕ್ಲಿಕ್ ಮಾಡಿ.

ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ 4 ಆಯ್ಕೆಗಳು ಕಾಣುತ್ತವೆ. ಅದರಲ್ಲಿ ನೀವು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ Fetch ಮೇಲೆ ಕ್ಲಿಕ್ ಮಾಡಿ.

ಹಂತ -5) ನಂತರ ನಿಮಗೆ ಮೇಲೆ ತೋರಿಸಿದಂತೆ ನಿಮ್ಮ ಖಾತೆಗೆ ಜಮಾ ಆಗಿರುವ ಬೆಳೆ ಪರಿಹಾರ ಹಣದ ವಿವರಗಳು ದೊರೆಯುತ್ತವೆ.

ವಿಶೇಷ ಸೂಚನೆ: ಸರ್ವರ್ ಡೌನ್ ಆಗಿರುವುದರಿಂದ ಲಿಂಕ್ ಲೋಡ್ ಆಗುತ್ತಿಲ್ಲ. ದಯವಿಟ್ಟು ಸ್ವಲ್ಪ ಕಾದು ನಂತರ ಪ್ರಯತ್ನಿಸಿ.

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M

Recent Posts

ಭುವನೇಶ್ವರ್ ಕುಮಾರ್ ಕಂಬ್ಯಾಕ್ ಅನ್ನು `ಧುರಂದರ್’ಅಕ್ಷಯ್ ಖನ್ನಾಗೆ ಹೋಲಿಕೆ; ರೋಹಿಶ್ ಶರ್ಮಾ ಹೃದಯಸ್ಪರ್ಶಿ ಸಂದೇಶ

ಭುವನೇಶ್ವರ್ ಕುಮಾರ್ ಅವರ ಕಂಬ್ಯಾಕ್‌ಗೆ ‘ಧುರಂಧರ್’ ಖ್ಯಾತಿಯ ಅಕ್ಷಯ್ ಖನ್ನಾ ಹೋಲಿಕೆ ಮಾಡಲಾಗಿದ್ದು, ರೋಹಿತ್ ಶರ್ಮಾ ಅವರ ಹೃದಯಸ್ಪರ್ಶಿ ಸಂದೇಶ…

57 years ago

PMkisan amount will be released next week ಪಿಎಂ ಕಿಸಾನ್ 24ನೇ ಕಂತಿನ ಹಣ ಅಕ್ಟೋಬರ್ 30 ರಂದು ಬಿಡುಗಡೆ

ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ ಅಕ್ಟೋಬರ್ 30ರಂದು ಬಿಡುಗಡೆಯಾಗಲಿದೆಯೇ? ರೈತರ ಖಾತೆಗೆ ₹2,000 ಜಮೆಯಾಗುವ ಮಾಹಿತಿ, ಪಿಎಂ…

57 years ago

ಇಂದಿನಿಂದ ಏಳು ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಇಲ್ಲಿದೆ ಮಾಹಿತಿ

ಕರ್ನಾಟಕದಲ್ಲಿ ಇಂದಿನಿಂದ ಮುಂದಿನ ಏಳು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಹವಾಮಾನ ಇಲಾಖೆಯ ಮುನ್ಸೂಚನೆ,…

57 years ago

ಮಹಿಳೆಯರಿಗೆ ಗುಡ್ ನ್ಯೂಸ್ 33ನೇ ಕಂತಿನ ಗೃಹಲಕ್ಷ್ಮೀ ಹಣ ಬಿಡುಗಡೆ ಇಲ್ಲಿದೆ ಮಾಹಿತಿ

ಕರ್ನಾಟಕದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 33ನೇ ಕಂತಿನ ಹಣದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ. ಹಣ ಬಿಡುಗಡೆ ಆಗಿದೆಯೇ, ನಿಮ್ಮ…

57 years ago

*ಅಕ್ಟೋಬರ್ 15ರಿಂದ ಮಳೆ ಚುರುಕು*: ಬೆಳಗಾವಿ ಸೇರಿ ಉತ್ತರ ಕರ್ನಾಟಕದಲ್ಲೂ ವರ್ಷಧಾರೆ ಸಾಧ್ಯತೆ*

ಅಕ್ಟೋಬರ್ 15ರಿಂದ ಕರ್ನಾಟಕದಲ್ಲಿ ಮಳೆ ಚುರುಕಾಗುವ ಸಾಧ್ಯತೆ ಇದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.…

57 years ago

ನಿಮ್ಮ ಬೆಳೆ ವಿಮೆ ಜಮೆ ಆಗಲು ಏನು ಮಾಡಬೇಕು? ಇಲ್ಲಿವೆ ಕೆಲವು ಸರಳ ಉಪಾಯಗಳು!

ನಿಮ್ಮ ಬೆಳೆ ವಿಮೆ ಹಣ ಇನ್ನೂ ಜಮೆಯಾಗಿಲ್ಲವೇ? ಬೆಳೆ ವಿಮೆ ಪಡೆಯಲು ರೈತರು ಯಾವ ಕ್ರಮಗಳನ್ನು ಅನುಸರಿಸಬೇಕು, ಅರ್ಜಿಯ ಸ್ಥಿತಿಯನ್ನು…

57 years ago