“ಈ ಗಣರಾಜ್ಯೋತ್ಸವ ಭಾಷಣ–2026ರಲ್ಲಿ ಭಾರತದ ಸಂವಿಧಾನದ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಮತ್ತು ಯುವಜನರ ರಾಷ್ಟ್ರ ನಿರ್ಮಾಣದಲ್ಲಿನ ಪಾತ್ರವನ್ನು ಸರಳ ಹಾಗೂ ಪ್ರೇರಣಾದಾಯಕವಾಗಿ ವಿವರಿಸಲಾಗಿದೆ. ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೂಕ್ತವಾದ ಕನ್ನಡ ಭಾಷಣ.”
ಎಲ್ಲರಿಗೂ ಮುಂಜಾನೆಯ ಶುಭೋದಯ ಹಾಗೂ 77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಇಂದು ಜನವರಿ 26, 2026. ನಾವೆಲ್ಲರೂ ತ್ರಿವರ್ಣ ಧ್ವಜದ ಅಡಿಯಲ್ಲಿ ಹೆಮ್ಮೆಯಿಂದ ನಿಂತಿದ್ದೇವೆ. ಆಗಸ್ಟ್ 15, 1947 ರಂದು ಬ್ರಿಟಿಷರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ, ನಮಗೆ ನಿಜವಾದ ಆಡಳಿತಾತ್ಮಕ ಶಕ್ತಿ ಮತ್ತು ಹಕ್ಕುಗಳು ಸಿಕ್ಕಿದ್ದು ಜನವರಿ 26, 1950 ರಂದು. ಅಂದು ನಮ್ಮ ಭಾರತದ ಸಂವಿಧಾನ ಜಾರಿಗೆ ಬಂತು ಮತ್ತು ನಮ್ಮ ದೇಶವು ಅಧಿಕೃತವಾಗಿ ‘ಗಣರಾಜ್ಯ’ವಾಯಿತು.
ಸಂವಿಧಾನದ ಮಹತ್ವ: ನಮ್ಮ ಸಂವಿಧಾನವು ವಿಶ್ವದ ಅತ್ಯಂತ ದೊಡ್ಡ ಲಿಖಿತ ಸಂವಿಧಾನವಾಗಿದೆ. ಇದರ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನಾವು ಇಂದು ಭಕ್ತಿಯಿಂದ ಸ್ಮರಿಸಬೇಕು. ಜಾತಿ, ಮತ, ಭಾಷೆ ಎಂಬ ಭೇದವಿಲ್ಲದೆ ನಾವೆಲ್ಲರೂ ಸಮಾನರು ಎಂಬ ಹಕ್ಕನ್ನು ನೀಡಿದ್ದು ಈ ಸಂವಿಧಾನ. ಪ್ರಜೆಗಳೇ ಪ್ರಭುಗಳು ಎಂದು ಸಾರಿದ ದಿನವಿದು.
ನವ ಭಾರತ – 2026: ಸ್ನೇಹಿತರೇ, ಇಂದು ನಾವು 2026 ರಲ್ಲಿದ್ದೇವೆ. ನಮ್ಮ ಭಾರತವು ಕೇವಲ ಹಾವಾಡಿಗರ ದೇಶವಾಗಿ ಉಳಿದಿಲ್ಲ. ಇಂದು ನಾವು ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಂತಿದ್ದೇವೆ.
ವಿದ್ಯಾರ್ಥಿಗಳ ಜವಾಬ್ದಾರಿ: ಆದರೆ, ಕೇವಲ ಸಂವಿಧಾನದ ಹಕ್ಕುಗಳನ್ನು ಕೇಳಿದರೆ ಸಾಲದು, ನಮ್ಮ ಕರ್ತವ್ಯಗಳನ್ನೂ ನಾವು ಪಾಲಿಸಬೇಕು. ವಿದ್ಯಾರ್ಥಿಗಳಾದ ನಾವು ಇಂದಿನ ದಿನ ಒಂದು ಪ್ರತಿಜ್ಞೆ ಮಾಡಬೇಕಿದೆ
ಆದರೆ, ಕೇವಲ ಸಂವಿಧಾನದ ಹಕ್ಕುಗಳನ್ನು ಕೇಳಿದರೆ ಸಾಲದು, ನಮ್ಮ ಕರ್ತವ್ಯಗಳನ್ನೂ ನಾವು ಪಾಲಿಸಬೇಕು. ವಿದ್ಯಾರ್ಥಿಗಳಾದ ನಾವು ಇಂದಿನ ದಿನ ಒಂದು ಪ್ರತಿಜ್ಞೆ ಮಾಡಬೇಕಿದೆ.
ದೇಶಭಕ್ತಿ ಎಂದರೆ ಕೇವಲ ಗಡಿಯಲ್ಲಿ ನಿಂತು ಹೋರಾಡುವುದಲ್ಲ; ಒಬ್ಬ ವಿದ್ಯಾರ್ಥಿ ಶ್ರದ್ಧೆಯಿಂದ ಓದುವುದು, ಒಬ್ಬ ಪ್ರಜೆ ಕಸವನ್ನು ಕಸದ ಬುಟ್ಟಿಗೆ ಹಾಕುವುದು, ಟ್ರಾಫಿಕ್ ನಿಯಮ ಪಾಲಿಸುವುದು ಕೂಡ ದೇಶಭಕ್ತಿಯೇ.
ನಾವೇ ಈ ದೇಶದ ಭವಿಷ್ಯ. 2047ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತುಂಬುವಾಗ, ನಮ್ಮ ದೇಶವನ್ನು “ವಿಶ್ವಗುರು”ವನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.
ಬನ್ನಿ, ನಾವೆಲ್ಲರೂ ಸೇರಿ ಸುಂದರ, ಸ್ವಚ್ಛ ಮತ್ತು ಬಲಿಷ್ಠ ಭಾರತವನ್ನು ಕಟ್ಟೋಣ. ನನಗೆ ಮಾತನಾಡಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳು.
ಜೈ ಹಿಂದ್! ಜೈ ಕರ್ನಾಟಕ! ವಂದೇ ಮಾತರಂ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode
ಮೊಬೈಲ್ ಬಳಸಿ ನಿಮ್ಮ ಜಮೀನಿನ ಅಳತೆಯನ್ನು ಒಂದೇ ನಿಮಿಷದಲ್ಲಿ ಹೇಗೆ ಮಾಡಬಹುದು ಎಂಬುದನ್ನು ಈ ವಿಡಿಯೋದಲ್ಲಿ ಸರಳವಾಗಿ ತಿಳಿಸಲಾಗಿದೆ. ರೈತರಿಗೆ…
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…