Categories: information

ರೈತ ಬಾಂದವರೇ ಕೂಡಲೇ ಈ ಕೆಲಸ ಮಾಡಿ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ

PM Kisan Yojana: ರೈತ ಬಾಂಧವರೇ, ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಈ ಪ್ರಮುಖ ಕೆಲಸಗಳನ್ನು ಪರಿಶೀಲಿಸಿ. ನಿಮ್ಮ e-KYC, ಆಧಾರ್ ಲಿಂಕಿಂಗ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಹಣದ ಸ್ಥಿತಿ, ಫಲಾನುಭವಿಗಳ ಪಟ್ಟಿ ಮತ್ತು ಇತ್ತೀಚಿನ ಅಪ್‌ಡೇಟ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Spread the love

ಪಿಎಂ ಕಿಸಾನ್ ಫಲಾನುಭವಿಗಳು ಕೂಡಲೇ ಇಲ್ಲಿ ನೀಡಿದ ಮಾಹಿತಿಯಂತೆ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಕಂತು ಅಂದರೆ 24ನೇ ಕಂತಿನ ಹಣ ನಿಮಗೆ ಜಮೆ ಮಾಡಲ್ಲ, ಇಕೆವೈಸಿ ಮಾಡಿಸಿದರೆ ಮಾತ್ರ ನಿಮಗೆ ಹಣ ಜಮೆ ಮಾಡಲಾಗುವುದು. ಹಾಗಾದರೆ ಪಿಎಂ ಕಿಸಾನ್ ಇಕೆವೈಸಿ ಎಲ್ಲಿ ಮಾಡಿಸಬೇಕು. ಅದಕ್ಕೆ ಬೇಕಾಗುವ ದಾಖಲೆಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ

Thank you for reading this post, don't forget to subscribe!

ಏನಿದು ಇಕೆವೈಸಿ ಪ್ರಕ್ರಿಯೆ ?

ಇಕೆವೈಸಿ ಎಂದರೆ ಎಲೆಕ್ಟ್ರಾನಿಕ್ ನೋ ಯುವರ್ ಕನ್ಸುಮರ್ ಅಥವಾ ಎಲೆಕ್ಟ್ರಾನಿಕ್ ಮೂಲಕ ಗ್ರಾಹಕರನ್ನು ಗುರುತಿಸುವ ಪ್ರಕ್ರಿಯೆಯಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಹೊಸ ಸಿಮ್ ಕಾರ್ ಪಡೆಯಲು ಅಥವಾ ಯಾವುದು ಹಣಕಾಸು ಸೇವೆಗಳನ್ನು ಬಳಸಲು ನಿಮ್ಮ ಗುರುತು ಮತ್ತು ವಿಳಾಸವನ್ನು ಡಿಜಿಟಲ್ ರೂಪದಲ್ಲಿ ದೃಢೀಕರಿಸುವ ಸುಲಭ ವಿಧಾನ ಇದಾಗಿದೆ.

PM kisan ekyc proecess ಇಕೆವೈಸಿ ಹೇಗೆ ಕೆಲಸ ಮಾಡುತ್ತದೆ ?

ಇಕೆವೈಸಿ ಭಾರತದಲ್ಲಿ ಸಾಮಾನ್ಯವಾಗಿ ಆಧಾರ್ ಕಾರ್ಡ್ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಅಥವು ನಿಮ್ಮ ಹೆಬ್ಬರಳಿರುವ ಗುರುತು ಬಳಸಿ ಇದನ್ನು ಮಾಡಲಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಇಕೆವೈಸಿ ಮಾಡಿಸಬೇಕು

ಹೌದು, ಪಿಎಂ ಕಿಸಾನ್ ಮುಂದಿನ ಕಂತು ಜಮೆಯಾಗಬೇಕಾದರೆ ಇಕೆವೈಸಿ ಮಾಡಿಸಲೇ ಬೇಕು. ಇಲ್ಲದಿದ್ದರೆ ನೀವು ಎಲ್ಲಾ ಅರ್ಹತೆ ಪಡೆದಿದ್ದರೂ ಸಹ ನಿಮಗೆ ಮುಂದಿನ ಕಂತು ಜಮೆಯಾಗುವುದಿಲ್ಲ.

ಇಕೆವೈಸಿ ಎಲ್ಲಿ ಮಾಡಿಸಬೇಕು ?

ಪಿಎಂ ಕಿಸಾನ್ ಇಕೆವೈಸಿಯನ್ನು ರೈತರು ತಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಸಿಎಸ್.ಸಿ ಕೇಂದ್ರಗಳಲ್ಲಿ ಮಾಡಿಸಬೇಕು

ಇದಕ್ಕೆ ನಿಮ್ಮ ಆಧಾರ್ ಕಾರ್ಡ್ ಬೇಕಾಗುತ್ತದೆ. ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ

ಇಕೆವೈಸಿ ಆಗಿದೆಯೋ ಇಲ್ಲವೋ ?

ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ನಿಮ್ಮ ರೈತ ಸಂಪರ್ಕ ಕೇಂದ್ರದಲ್ಲಿ ಗೊತ್ತಾಗುತ್ತದೆ. ಹೌದು, ಅಲ್ಲಿ ಯಾರ ಯಾರ ಇಕೆವೈಸಿ ಆಗಿಲ್ಲವೋ ಅಲ್ಲಿ ಸೂಚನಾ ಫಲಕದಲ್ಲಿ  ಪಟ್ಟಿ ಅಂಟಿಸಲಾಗಿರುತ್ತದೆ. ಅದನ್ನು ನೋಡಿ ನೀವು ನಿಮ್ಮ ಹೆಸರು ಚೆಕ್ ಮಾಡಬಹುದು. ನಂತರ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಪಿಎಂ ಕಿಸಾನ್ ಹಣ ಯಾವಾಗ ಜಮೆಯಾಗುತ್ತದೆ ?

ಪಿಎಂ ಕಿಸಾನ್ ಹಣ ಅಂದರೆ ಮುಂದಿನ ಕಂತು ಯಾವಾಗ ಜಮೆಯಾಗುತ್ತದೆ ಎಂಬ ಮಾಹಿತಿ ತಿಳಿಯಲು ಈ

https://pmkisan.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮುಂದಿನ ಕಂತು ಅಂದರೆ ಪಿಎಂ ಕಿಸಾನ್ 24ನೇ ಕಂತು ಯಾವಾಗ ಜಮೆಯಾಗುತ್ತದೆ ಎಂಬ ಸಂದೇಶ ಕಾಣಿಸುತ್ತದೆ. ಇಲ್ಲದಿದ್ದರೆ ಹಿಂದಿನ ಕಂತು ಅಂದರೆ 23ನೇ ಕಂತು ಯಾವಾಗ ಜಮೆಯಾಗಿತ್ತು ಎಂಬ ಸಂದೇಶ ಅಲ್ಲಿ ಕಾಣಿಸುತ್ತದೆ.

ಪಿಎಂ ಕಿಸಾನ್ ಯೋಜನೆ ಮುಂದಿನ ಕಂತು ಯಾವಾಗ ಜಮೆಯಾಗುತ್ತದೆ ?

ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಇದೇ ತಿಂಗಳಲ್ಲಿ ಜಮೆಯಾಗುವ ಸಾಧ್ಯತೆಯಿದೆ. ಹಾಗಾಗಿ ರೈತರು ಕೂಡಲೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಇಕೆವೈಸಿ ಯನ್ನು ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಕಂತಿನಿಂದ ನೀವು ವಂಚಿತರಾಗುವ ಸಾಧ್ಯತೆಯಿದೆ. ಈ ಕುರಿತು ಕೃಷಿ ಇಲಾಖೆಯು ರೈತರಿಗೆ ಇಕೆವೈಸಿ ಮಾಡಿಸಿಕೊಳ್ಳಲು ತಿಳಿಸುತ್ತಿದೆ. ಆದರೆ ಸಹಿತ ಬಹಳಷ್ಟು ರೈತರು ಇನ್ನೂ ಇಕೆವೈಸಿ ಮಾಡಿಸಿಲ್ಲ. ರೈತರು ಯೋಜನೆಯಿಂದ ವಂಚಿರಾಗಬಾರದೆಂದು ಉದ್ದೇಶದಿಂದ ಮತ್ತೆ ಮತ್ತೇ ಪ್ರಕಟಣೆಗಳ ಮೂಲಕ ರೈತರಲ್ಲಿ ಮನವಿ ಮಾಡುತ್ತಿದೆ. ಇನ್ನೂ ತಡ ಮಾಡದೆ ಕೂಡಲೇ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬಹುದು.

Recent Posts

ರಾಜ್ಯದ 31 ಜಿಲ್ಲಾ, 239 ತಾಲೂಕು ಪಂಚಾಯಿತಿಗಳ ಚುನಾವಣೆಗೆ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ ಪ್ರಕಟ! ಸಂಪೂರ್ಣ ವಿವರ ಇಲ್ಲಿದೆ !

ಕರ್ನಾಟಕದ 31 ಜಿಲ್ಲಾ ಪಂಚಾಯಿತಿ ಹಾಗೂ 239 ತಾಲೂಕು ಪಂಚಾಯಿತಿಗಳ ಚುನಾವಣೆಗೆ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಯಾವ…

57 years ago

ಪ್ರೇಮದ ಊರಲಿ’ ಯಶಸ್ಸಿನ ಹಿಂದಿನ 10 ಮುಖ್ಯ ಅಂಶಗಳು: ಮಿಸ್ ಮಾಡದೇ ಈ ವಿಚಾರ ತಿಳ್ಕೊಳ್ಳಿ!

ಪ್ರೇಮದ ಊರಲಿ ಸಿನಿಮಾ ಯಶಸ್ಸಿನ ಹಿಂದಿನ 10 ಮುಖ್ಯ ಅಂಶಗಳು ಯಾವುವು? ಕಥೆ, ಕಲಾವಿದರ ಅಭಿನಯ, ನಿರ್ದೇಶನ, ಸಂಗೀತ ಸೇರಿದಂತೆ…

57 years ago

ಉಪಚುನಾವಣೆ ಮತ ಎಣಿಕೆ ಆರಂಭ ; ನಂದಿಗ್ರಾಮದಲ್ಲಿ ಬಿಜೆಪಿ, ಮದುರಾಂತಕಂನಲ್ಲಿ ವಿಜಯ್ ಪಕ್ಷ ಮುನ್ನಡೆ!

ಉಪಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ನಂದಿಗ್ರಾಮದಲ್ಲಿ ಬಿಜೆಪಿ ಹಾಗೂ ಮದುರಾಂತಕಂನಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ಮುನ್ನಡೆ ಸಾಧಿಸಿದೆ ಎಂಬ…

57 years ago

ರೈತರಿಗೆ ಕೇಂದ್ರದಿಂದ ಭರ್ಜರಿ ಗುಡ್‌ನ್ಯೂಸ್; ₹5 ಲಕ್ಷದವರೆಗೆ ಕೃಷಿ ಸಾಲ, ಈ ಅರ್ಹತೆಗಳು ಕಡ್ಡಾಯ!

ರೈತರಿಗೆ ₹5 ಲಕ್ಷದವರೆಗೆ ಕೃಷಿ ಸಾಲ ಸಿಗುತ್ತದೆಯೇ? ಕೃಷಿ ಸಾಲ ಪಡೆಯಲು ಬೇಕಾದ ಅರ್ಹತೆಗಳು, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ…

57 years ago

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

57 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

57 years ago