ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಗೆ ಇಕೆವೈಸಿ ಆಗದೇ ಇರುವ ರೈತರ ಪಟ್ಟಿ ಬಿಡುಗಡೆ ಮಾಡಲಾಗಿದೆ.
Thank you for reading this post, don't forget to subscribe!ಹೌದು ರೈತರೇ, ರಾಜ್ಯ ಸರ್ಕಾರ ಇಲ್ಲಿಯವರೆಗೆ ಪಿಎಂ ಕಿಸಾನ್ ಫ್ರೂಟ್ಸ್ ಐಡಿಗೆ ಇಕೆವೈಸಿ ಆಗದೇ ಇರುವ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇಂತಹ ರೈತರಿಗೆ ಬೆಳೆ ಪರಿಹಾರ ಹಣ, ಬೆಳೆ ವಿಮೆ ಹಣ, ಬರಗಾಲ ಪರಿಹಾರ ಹಣ ಅಥವಾ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ ಹಣ ಜಮಾ ಆಗುವುದಿಲ್ಲ.
ಇದನ್ನೂ ಓದಿ: ಪಿಎಂ ಕಿಸಾನ್: ಹಣ ಜಮಾ ಆಗಿರುವ ಮೆಸೇಜ್ ಬರುತ್ತಿಲ್ಲವೇ? ಈಗಲೇ ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ ! ಲಿಂಕ್ ಇಲ್ಲಿದೆ ನೋಡಿ
ಹಾಗಾದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಎಂದು ಚೆಕ್ ಮಾಡುವುದು ಹೇಗೆ ? ಒಂದು ವೇಳೆ ನಿಮ್ಮ ಇಕೆವೈಸಿ ಆಗದೇ ಇದ್ದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಪಡೆಯಲು ಈ ಅಂಕಣವನ್ನು ತಪ್ಪದೇ ಕೊನೆಯವರೆಗೂ ಓದಿರಿ.
ಇಕೆವೈಸಿ ಆಗದೇ ಇರುವ ರೈತರ ಪಟ್ಟಿ ಚೆಕ್ ಮಾಡುವುದು ಹೇಗೆ?
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://fruitspmk.karnataka.gov.in/MISReport/EKYCPendingList.aspx
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯ ಮುಂದೆ ನೀಡಿರುವ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಹಂತ-3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನಿಮಗೆ ಒಂದು pdf ಪೈಲ್ ಡೌನ್ಲೋಡ್ ಆಗುತ್ತದೆ. ಅದು ಡೌನ್ಲೋಡ್ ಆದಮೇಲೆ ಅದನ್ನು ಓಪನ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವ ಯಾವ ರೈತರದ್ದು ಇಕೆವೈಸಿ ಆಗಿಲ್ಲವೋ ಅಂತಹ ರೈತರ ಪಟ್ಟಿ ಕಾಣಿಸುತ್ತದೆ. (PM Kisan EKYC)

ಹಂತ -5) ಇದರಲ್ಲಿ ನಿಮ್ಮ ಹೆಸರು ಇದೆಯಾ ಅಂತ ಚೆಕ್ ಮಾಡಿ. ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದರೆ ನಿಮ್ಮ ಇಕೆವೈಸಿ ಆಗಿದೆ ಅಂತ ಅರ್ಥ.
ಹಾಗೆಯೇ ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಇಕೆವೈಸಿ ಆಗಿಲ್ಲವೆಂದು ಅರ್ಥ. ನೀವು ಈ ಕೂಡಲೇ ನಿಮ್ಮ ಇಕೆವೈಸಿ ಮಾಡಿಸಬೇಕು, ಇಲ್ಲದಿದ್ದರೆ ನಿಮಗೆ ಯಾವ ಹಣವೂ ಸಿಗುವುದಿಲ್ಲ. ನೀವು ನಿಮ್ಮ ಇಕೆವೈಸಿ ನಿಮ್ಮ ಮೊಬೈಲ್ ನಲ್ಲಿ ಮಾಡಬಹುದು.
ಹಾಗಾದರೆ ಮೊಬೈಲ್ ನಲ್ಲಿಯೇ ನಿಮ್ಮ ಇಕೆವೈಸಿ ಮಾಡಿಸುವುದು ಹೇಗೆ ಎಂಬುದನ್ನು ಕೆಳಗೆ ನೀಡಲಾಗಿದೆ. ತಪ್ಪದೇ ಕೊನೆಯವರೆಗೂ ಓದಿರಿ.
ಮೊಬೈಲ್ ನಲ್ಲೇ ಇಕೆವೈಸಿ ಮಾಡಿಸುವುದು ಹೇಗೆ?
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://pmkisan.gov.in/aadharekyc.aspx
ಹಂತ -2) ನಂತರ ನಿಮಗೆ ಒಂದು ಹೊಸ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಆಧಾರ ಕಾರ್ಡ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ.

ಹಂತ -3) ಒಂದು ವೇಳೆ ನಿಮ್ಮ ಇಕೆವೈಸಿ ಆಗಿದ್ದರೆ, Your ekyc completed alredy ಅಂತ ತೋರಿಸುತ್ತದೆ. ಒಂದು ವೇಳೆ ಆಗಿರದಿದ್ದರೆ, ನಿಮ್ಮ ಮೊಬೈಲ್ ನಂಬರ್ ಹಾಕಿ ಇಕೆವೈಸಿ ಮಾಡಿ.

ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode=ac_t