ಇನ್ನು ಗ್ರಾಮ ಪಂಚಾಯತ್ ಆಸ್ತಿ ಮಾಹಿತಿಗಾಗಿ ಕಚೇರಿಗಳಿಗೆ ಸುತ್ತಾಡುವ ಅವಶ್ಯಕತೆ ಇಲ್ಲ! ನಿಮ್ಮ ಊರಿನ ಆಸ್ತಿ ವಿವರಗಳು, ಖಾತೆ ಸ್ಥಿತಿ, ದಾಖಲೆ ಮಾಹಿತಿ ಎಲ್ಲವೂ ಈಗ ವ್ಯಾಟ್ಸ್ ಆ್ಯಪ್‌ನಲ್ಲೇ ಸುಲಭವಾಗಿ ಪಡೆಯಬಹುದು. ಹೇಗೆ ಬಳಸುವುದು? ಯಾವ ಮಾಹಿತಿ ಲಭ್ಯ? ಇಲ್ಲಿದೆ ಸಂಪೂರ್ಣ ವಿವರ.
ಸಾರ್ವಜನಿಕರಿಗೆ ಗ್ರಾಮೀಣ ಪ್ರದೇಶದ ಜನರಿಗೆ, ರೈತರಿಗೆ, ಪ್ರಜೆಗಳಿಗೆ ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಗ್ರಾಮ ಪಂಚಾಯತಿಯ ಮಾಹಿತಿ ಸಿಗಲಿದೆ.
ಹೌದು, ಈಗ ನೀವು ನಿಮ್ಮ ಗ್ರಾಮ ಪಂಚಾಯತಿಯ ಮಾಹಿತಿ, ಯಾವ ಯಾವ ಕಾಮಗಾರಿಗಳಿಗೆ ನಿಮ್ಮ ಗ್ರಾಮ ಪಂಚಾಯತಿಯಲ್ಲಿರುವ ಅಧಿಕಾರಿಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು. ಹಾಗಾದರೆ ಇಲ್ಲಿ ನೀಡಲಾದ ವ್ಯಾಟ್ಸ್ ಆಪ್ ನಂಬರ್ ನಿಂದ ಹೇಗೆ ಹಾಗೂ ಏನೇನು ಮಾಹಿತಿ ಪಡೆಯಬಹುದು ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
ಕಾರ್ಮಿಕರಿಗೆ ಜಾಬ್ ಕಾರ್ಡ್, ಕಾರ್ಮಿಕರಿಗೆ ಉದ್ಯೋಗ ಹೊಸ ಹಾಗೂ ಮೂಲ ಸೌಕರ್ಯ, 11ಎ ಹಾಗೂ 11 ಬಿ ಮತ್ತು 9 ಸೇರಿದಂತೆ ಇನ್ನಿತರ ಸೇವೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲೇ ಸಿಗಲಿದೆ.
ಸಾರ್ವಜನಿಕರು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಪಂಚಮಿತ್ರದ ಇಲಾಖೆಯ ವ್ಯಾಟ್ಸ್ ಆಯಪ್ ಚಾಟ್ ನಂಬರ್ 8277506000 ಅನ್ನು ಸೇವ್ ಮಾಡಿಕೊಳ್ಳಬೇಕು ನಂತರ Hi ಎಂದು ಮೆಸೆಜ್ ಮಾಡಬೇಕು. ನಂತರ ನಿಮಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸುಸ್ವಾಗತ ಅದರ ಕೆಳಗಡೆ ಭಾಷೆ ಆಯ್ಕೆ ಮಾಡಿ ಸಂದೇಶ ಕಾಣಿಸುತ್ತದೆ.
ಕನ್ನಡ ಆಯ್ಕೆ ಮಾಡಿಕೊಂಡ ನಂತರ ಜಿಲ್ಲೆಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಜಿಲ್ಲೆಯ ನಂಬರ್ ನಮೂದಿಸಬೇಕು.ನಂತರ ತಾಲೂಕುಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ನಿಮ್ಮ ತಾಲೂಕಿನ ನಂಬರ್ ನಮೂದಿಸಬೇಕು.ನಂತರ ಅಲ್ಲಿ ಗ್ರಾಮ ಪಂಚಾಯತಿಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಗ್ರಾಮ ಪಂಚಾಯತಿ ನಂಬರ್ ನಮೂದಿಸಬೇಕು. ಇದಾದ ಮೇಲೆ ನಿಮ್ಮ ಊರಿನ ನಂಬರ್ ನಮೂದಿಸಬೇಕು. ನಂತರ ಹೌದು ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಜಿಪಿ ಬಗ್ಗೆ ಮಾಹಿತಿ, ಕುಂದುಕೊರತೆ, ಹಾಗೂ ಸೇವೆ ಆಯ್ಕೆಗಳು ಕಾಣಿಸುತ್ತವೆ.ಸೇವೆ ಮೇಲೆ ಕ್ಲಿಕ್ ಮಾಡಿದ ನಂತರ ಲಾಗಿನ್ ಮಾಡಿ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಬರ್ ಹಾಕಬೇಕು.ನಂತರ ಹೌದು ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು ಆಗ ನೀವು ಯಾವ ಯಾವ ಮಾಹಿತಿಗಳನ್ನು ವೀಕ್ಷಿಸಬಹುದು ಎಂಬ ಪಟ್ಟಿ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ ಸೆಂಡ್ ಮೇಲೆ ಕ್ಲಿಕ್ ಮಾಡಬೇಕು.
ನೀವು ಯಾವ ಮಾಹಿತಿ ಪಡೆಯಬೇಕೆಂದುಕೊಂಡಿದ್ದೀರೋ ಅದನ್ನು ಸರಿಯಾಗಿ ನಮೂದಿಸಬೇಕು. ಒಂದು ನೀವು ತಪ್ಪಾಗಿ ನಮೂದಿಸಿದರೆ ಹಿಂದೆ ಹೋಗುವ ಆಯ್ಕೆ ಸಹ ಇರುತ್ತದೆ. ಇಲ್ಲಿ ಹಿಂದಿನ ಮೆನುವಿಗೆ ಹೋಗಿ ನೀವು ಬೇರೆ ಆಯ್ಕೆ ಮಾಡಿಕೊಳ್ಳಬಹುದು.
ಗ್ರಾಪಂ ವ್ಯಾಪ್ತಿಯಲ್ಲಿರುವ ದಾಖಲೆಯ ಇ ಸ್ವತ್ತು ಪಡೆಯಬೇಕಾದರೆ ಈ
ಲಿಂಕ್ ಮೇಲೆ ಕ್ಲಿಕ್ ಮಾಬೇಕು. ನಂತರ ಇ ಸ್ವತ್ತು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಸರ್ಚ್ ಯುವರ್ ಪ್ರಾಪರ್ಟ್ (Search your Property) ಆಸ್ತಿಗಳ ಶೋಧನೆ ವಿಭಾಗಕ್ಕೆ ಮೇಲೆ ಕ್ಲಿಕ್ ಮಾಡಬೇಕು.ನ ತರ ನಿಮ್ಮ ಜಿಲ್ಲೆ, ಗ್ರಾಮ ಪಂಚಾಯತ್ ಗ್ರಾಮ ಮತ್ತು ಫಾರ್ಮ್ ಪ್ರಕಾರ ಫಾರ್ಮ 9 ಫಾರ್ಮ್ 11 ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಸ್ತಿ ಸಂಖ್ಯೆ ನಮೂದಿಸಬೇಕು. ಇದಾದನಂತರ ಡಾಕುಮೆಂಟ್ ನ್ನು ವೀಕ್ಷಿಸಿ (View Document) ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಡೌನ್ಲೋಡ್ ಮಾಡಿಕೊಳ್ಳಬಹುದು.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…