ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯಲ್ಲಿ ಹೆಸರು ತಿದ್ದುಪಡಿ ಮಾಡುವಂತೆ ಪಹಣಿಯಲ್ಲಿ ಹೆಸರು ತಪ್ಪಾಗಿರುವುದನ್ನು ಸಹ ರೈತರು ಸರಿಪಡಿಸಬಹುದುರೈತರು ತಮ್ಮ ಪಹಣಿಗಳಲ್ಲಿ ಹೆಸರು ತಂದೆಯ ಹೆಸರನ್ನು ಸರಿಯಾಗಿ ಗಮನಿಸಿರುವುದಿಲ್ಲ. ಸ್ಪೆಲಿಂಗ್ ಮಿಸ್ಟೇಕ್ ಇದ್ದರೂ ನೀವು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೀರಿ. ಹಾಗಾಗಿ ನಿಮ್ಮ ಪಹಣಿಯನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯಲ್ಲಿ ಹೆಸರು ತಿದ್ದುಪಡಿ ಮಾಡುವಂತೆ ಪಹಣಿಯಲ್ಲಿ ಹೆಸರು ತಪ್ಪಾಗಿರುವುದನ್ನು ಸಹ ರೈತರು ಸರಿಪಡಿಸಬಹುದು.
Thank you for reading this post, don't forget to subscribe!ರೈತರು ತಮ್ಮ ಪಹಣಿಗಳಲ್ಲಿ ಹೆಸರು ತಂದೆಯ ಹೆಸರನ್ನು ಸರಿಯಾಗಿ ಗಮನಿಸಿರುವುದಿಲ್ಲ. ಸ್ಪೆಲಿಂಗ್ ಮಿಸ್ಟೇಕ್ ಇದ್ದರೂ ನೀವು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೀರಿ. ಹಾಗಾಗಿ ನಿಮ್ಮ ಪಹಣಿಯನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.
ಪಹಣಿಯಲ್ಲಿ ಹೆಸರು ತಿದುಪಡಿ ಮಾಡಬೇಕಾದರೆ ರೈತರು 1964 ರಿಂದ ಪಹಣಿಗಳನ್ನು ಪಡೆಯಬೇಕು. ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು 20 ರೂಪಾಯಿಯ ಇ ಸ್ಟ್ಯಾಂಪ್ ಪೇಪರ್ ಪಡೆದುಕೊಳ್ಳಬೇಕು. ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವ ಕುರಿತು ಮಾದರಿ ಅರ್ಜಿ ಪಡೆದುಕೊಳ್ಳಬೇಕು ಹೌದು ರೈತರು ಆಯಾ ತಾಲೂಕಿನ ವ್ಯಾಪ್ತಿಯಲ್ಲಿರುವ ತಹಶೀಲ್ದಾರ್ ಕಚೇರಿಯ ಎದುರುಗಡೆ ಮಾದರಿ ಅರ್ಜಿ ಸಿಗುತ್ತದೆ.. ಅರ್ಜಿಯಲ್ಲಿ ಯಾವ ಯಾವ ಮಾಹಿತಿ ಭರ್ತಿ ಮಾಡಬೇಕು ಎಂಬುದನ್ನು ಅರ್ಜಿಯಲ್ಲಿ ತಿಳಿಸಲಾಗಿರುತ್ತದೆ. ಆ ಪ್ರಕಾರ ನೀವು ಮಾಹಿತಿಯನ್ನು ಭರ್ತಿ ಮಾಡಬೇಕು. ಇದರೊಂದಿಗೆ ರೈತನ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಬೇಕು. ಆಧಾರ್ ಕಾರ್ಡ್ ನಲ್ಲಿ ಹೆಸರು ತಂದೆಯ ಹೆಸರು ಇರುವಂತೆ ಪಹಣಿಯಲ್ಲಿಯೂ ಬದಲಾವಣೆಯಾಗುತ್ತದೆ.
ಪಹಣಿಯಲ್ಲಿ ಹಸೆರು ತಿದ್ದುಪಡಿ ಮಾಡಲು 1964 ರಿಂದ ಪಹಣಿಗಳು, 20 ರೂಪಾಯಿಯ ಇ-ಸ್ಟ್ಯಾಂಪ್ ಪೇಪರ್, ಅರ್ಜಿ ಹಾಗೂ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ತಾಲೂಕು ಕಚೇರಿಯಲ್ಲಿರುವ ಭೂಮಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಭೂಮಿ ಕೇಂದ್ರದವರು ಗ್ರಾಮಕ್ಕೆಸಂಬಂಧಿಸಿದ ಗ್ರಾಮ ಲೆಕ್ಕಿಗರು ಬಳಿ ಸದರಿ ದಾಖಲೆಗಳು ಕಳಿಸುತ್ತಾರೆ. ಆಗ ಗ್ರಾಮ ಲೆಕ್ಕಿಗರು ದಾಖಲೆಗಳನ್ನು ಪರಿಶೀಲಿಸುತ್ತಾರೆ. ದಾಖಲೆಗಳು ತಪ್ಪಾಗಿದ್ದರೆ ಗ್ರಾಮ ಲೆಕ್ಕಿಗರು ಅರ್ಜಿಯನ್ನು ತಿರಸ್ಕರಿಸಬಹುದು.
ಅರ್ಜಿಯೊಂದಿಗೆ ಸಲ್ಲಿಸಿದ ಎಲ್ಲಾ ದಾಖಲಾತಿಗಳು ಸರಿಯಿದ್ದರೆ ಪರಿಶೀಲಿಸಿ ಹೆಸರು ತಿದ್ದುಪಡಿ ಮಾಡಲು ಗ್ರಾಮ ಲೇಖಪಾಲಕರು ಭೂಮಿ ಕೇಂದ್ರಕ್ಕೆ ಕಳುಹಿಸುತ್ತಾರೆ.. ಆಗ ಭೂಮಿ ಕೇಂದ್ರದವರು ಅರ್ಜಿಯಲ್ಲಿ ನಮೂದಿಸಿರುಂತೆ ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುತ್ತಾರೆ. ಈ ರೀತಿಯಲ್ಲಿ ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಬಹುದು.
ರೈತರಿಗೆ ಅತ್ಯಂತ ಅಮೂಲ್ಯವಾದ ದಾಖಲೆ ಪಹಣಿಯಾಗಿರುತ್ತದೆ. ಪಹಣಿಯಲ್ಲಿ ಹೆಸರು, ತಂದೆಯ ಹೆಸರು, ಸರ್ವೆ ನಂಬರ್, ಮುಟೇಷನ್, ಖಾತಾ ಇದ್ದರೆ ಯಾವುದೇ ತೊಂದರೆಯಾಗುವುದಿಲ್ಲ. ಜಮೀನನ್ನು ಮಾರುವಾಗ, ಕೊಳ್ಳುವಾಗ ಜಮೀನು ನೋಂದಣಿಯಾಗುತ್ತದೆ.
ಆಗ ಖರೀದಿ ಮತ್ತು ಮಾರಲು ತಕರಾರು ಆಗುವುದಿಲ್ಲ. ಜಮೀನಿನಲ್ಲಿ ಹೆಸರು ಸರಿಯಿದ್ದರೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ಸಿಗುವುದು. ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆಯಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲ, ಬೆಳೆ ಬೆಳೆ ಸಾಲ ಪಡೆದುಕೊಳ್ಳುವಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ಒಂದು ವೇಳೆ ಪಹಣಿಯಲ್ಲಿ ರೈತನ ಮತ್ತು ತಂದೆಯ ಹೆಸರು ಆಧಾರ್ ಕಾರ್ಡ್ ನಂತೆ ಇರದಿದ್ದರೆ ಸಾಲ ಸಿಗುವ ಸಾಧ್ಯತೆಯೂ ಕಡಿಮೆಯಿರುತ್ತದೆ. ಹಾಗಾಗಿ ಸರಿಪಡಿಸಿಕೊಳ್ಳಬೇಕುು.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…