ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತOnline Apply for a pouti khate ಪೌತಿ ಖಾತೆ ಮೂಲಕ ಜಮೀನು ಅಥವಾ ಆಸ್ತಿಯನ್ನು ವರ್ಗಾವಣೆ ಮಾಡಲು ಈಗ ನಾಡ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತOnline Apply for a pouti khate ಪೌತಿ ಖಾತೆ ಮೂಲಕ ಜಮೀನು ಅಥವಾ ಆಸ್ತಿಯನ್ನು ವರ್ಗಾವಣೆ ಮಾಡಲು ಈಗ ನಾಡ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.
ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ ನಂತರ ಅವರ ಹೆಸರಿನಲ್ಲಿರುವ ಜಮೀನನ್ನು ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನುತ್ತಾರೆ. ಈ ಪೌತಿ ಖಾತೆಯನ್ನು ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು.
ಪೌತಿ ಖಾತೆಯಡಿ ಜಮೀನು ಅಥವಾ ಆಸ್ತಿ ವರ್ಗಾವಣೆ ಮಾಡಿಕೊಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೌದು. ಈ
https://landrecords.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪೌತಿ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸುವ ಕಂದಾಯ ಇಲಾಖೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಕೆಳಗಡೆ ನೀಡಿರುವ ಕ್ಯಾಪ್ಚ್ಯಾ ಕೋಡ್ ಟೈಪ್ ಮಾಡಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ. ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ಟೈಪ್ ಮಾಡಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು.
ಲ್ಯಾಂಡ್ ರಿಕಾರ್ಡ್ ಪೇಜ್ ಓಪನ್ ಆಗುತ್ತದೆ. ಬಲಗಡೆ ಡ್ಯಾಷಬೋರ್ಡ್ ಕೆಳಗಡೆ ನ್ಯೂ ರೆಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿದ ನಂತರ ಅದರ ಕೆಳಗಡೆಯಿರುವ ಇನ್ ಹೆರಿಟೆನ್ಸ್ ಮೇಲೆ ಕ್ಲಿಕ್ ಮಾಡಬೇಕು.ನಂತರ ಡಿಜಿಲಾಕರ್ಸ್ ಸೇವೆ ಬಯಸಿದರೆ ಯಸ್ ಮೇಲೆ ಕ್ಲಿಕ್ ಮಾಡಿ ಇಲ್ಲದಿದ್ದರೆ ನೋ ಮೇಲೆ ಕ್ಲಿಕ್ ಮಾಡಿ. ಡಿಜಿಲಾಕರ್ ಬೇಕಾಗಿಲ್ಲ ಹಾಗಾಗಿ ನೋ ಮೇಲೆ ಕ್ಲಿಕ್ ಮಾಡಬೇಕು.
ಪೌತಿ ಖಾತೆಯ ಅರ್ಜಿ ಓಪನ್ ಆಗುತ್ತದೆ. ಅಲ್ಲಿ ಅರ್ಜಿದಾರನ ಹೆಸರು, ವಿಳಾಸ, ಈಮೇಲ್ ಐಡಿ ಹಾಕಬೇಕು. ಪೌತಿ,, ಡಾಕುಮೆಂಟ್ ದಿನಾಂಕ, ದೃಢೀಕರಣ ಪ್ರಮಾಣ ಪತ್ರ, , ಕೋರ್ಟ್ ಟೈಪ್ ನಲ್ಲಿ ವೈಯಕ್ತಿಕ ಪತ್ರ, ಮರಣಪ್ರಮಾಣ ಪತ್ರದ ಸಂಖ್ಯೆ ನಮೂದಿಸಬೇಕು. ನಂತರ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಬೇಕು. ಐಡಿ ಪ್ರೂಫ್ ನಲ್ಲಿ ಆಧಾರ್ ಕಾರ್ಡ್, ಡಾಕುಮೆಂಟ್ ಅಪ್ಲೋಡ್ ಮಾಡಬೇಕು. ಪಿಡಿಎಫ್ ಫೈಲ್ ನಲ್ಲಿರಬೇಕು. ಎಲ್ಲಾ ದಾಖಲಾತಿ ಅಪ್ಲೋಡ್ ಮಾಡಿದ ನಂತರ Next ಮೇಲೆ ಕ್ಲಿಕ್ ಮಾಡಬೇಕು. ಆಗ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು. ಸರ್ವೆ ನಂಬರ್ ನಮೂದಿಸಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಸ್ಟಾರ್ ಸೆಲೆಕ್ಟ್ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಿದ ನಂತರ ಫೆಟ್ಜ್ ಮೇಲೆ ಕ್ಲಿಕ್ ಮಾಡಬೇಕು. ಜಮೀನು ಯಾರ ಹೆಸರು ಇದೆಯೋ ಅವರ ಹೆಸರು ಬರುತ್ತದೆ. ನಂತರ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿ Next ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಯಾರ ಹೆಸರಿನ ಮೇಲೆ ವರ್ಗಾವಣೆ ಮಾಡಿಕೊಳ್ಳಬೇಕು ಎಂಬುವವರ ಹೆಸರು ಟೈಪ್ ಮಾಡಬೇಕು. ನಂತರ add ಮೇಲೆ ಕ್ಲಿಕ್ ಮಾಡಬೇಕು. ನಂತರ ಮರಣ ಪ್ರಮಾಣ ಪತ್ರ, ವಂಶಾವಳಿ, ಪ್ರಮಾಣ ಪತ್ರ ಹಕ್ಕು ಪತ್ರ ಹೀಗೆ ಅಲ್ಲಿ ಕೇಳಿದ ಎಲ್ಲಾ ದಾಖಲೆಗಳನ್ನು ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿದ ನಂತರ ಸೇವ್ ಮಾಡಿಕೊಳ್ಳಬೇಕು. ಪೌತಿ ಖಾತೆಗೆ ಅಮೌಂಟ್ ಪೇ ಮಾಡಬೇಕು. ಪೇ ಮೇಲೆ ಕ್ಲಿಕ್ ಮಾಡಿ ಹಣ ಪಾವತಿಸಿದ ನಂತರ ಅಪ್ಲೈ ಮೇಲೆ ಕ್ಲಿಕ್ ಮಾಡಿದರೆ ಸಾಕು. ಅರ್ಜಿ ಸಲ್ಲಿಕೆಯಾಗುತ್ತದೆ. ನೀವು ಅರ್ಜಿ ಸಲ್ಲಿಕೆಯಾದನಂತರ ಪ್ರಿಂಟ್ ಸಹ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ 080-22113255 ಗೆ ಸಂಪರ್ಕಿಸಲು ಕೋರಲಾಗಿದೆ
ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣ ಪತ್ರ ಬೇಕು. ಇತ್ತೀಚಿನ ಪಹಣಿ ಹಾಗೂ 18 ವರ್ಷದ ಮ್ಯುಟೇಷನ್ ಸಲ್ಲಿಸಬೇಕು, ಚುನಾವಣೆ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ ಬೇಕು. ಉದಾಹರಣೆ ಒಂದು ಕುಟುಂಬದಲ್ಲಿ ನಾಲ್ಕೈದು ಮಕ್ಕಳಿದ್ದರೆ ಯಾರ ಹೆಸರಿನ ಮೇಲೆ ಎಷ್ಟು ಜಮೀನು ವರ್ಗಾವಣೆ ಮಾಡಬೇಕೆಂಬುದರ ವಿವರವನ್ನು ಅರ್ಜಿಯಲ್ಲಿ ನಮೂದಿಸಬೇಕು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ತೊಂದರೆಯಾದರೆ ತಾಲೂಕು ಮಟ್ಟದ ಅಥವಾ ಹೋಬಮಳಿ ಮಟ್ಟದ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಕೊಟ್ಟಿದ್ದ ಅಧಿಕಾರಿಯಿಂದ ಸಹಿ ಮಾಡಿಸಿಕೊಂಡು ಅಕ್ನಾಲ್ಜ್ಟಮೆಂಟ್ ಪಡೆಯಬೇಕು. ಕೆಲವು ದಿನಗಳ ನಂತರ ಗ್ರಾಮ ಲೆಕ್ಕಿಗರು ಮೂಲ ದಾಖಲೆಗಳನ್ನು ಸಲ್ಲಿಸಲು ಸೂಚಿಸುತ್ತಾರೆ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode=ac_t
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…