Categories: Motivation

Motivation: ನಿಮ್ಮ ಜೀವನವನ್ನೇ ಬದಲಿಸಬಲ್ಲ ಕಥೆಗಳು ಇವು .. ತಪ್ಪದೇ ಒಮ್ಮೆ ಓದಿ!

Spread the love

ಒಂದಾನೊಂದು ಕಾಲದಲ್ಲಿ ಒಂದು ಪಟ್ಟಣದಲ್ಲಿ ಇಬ್ಬರು ಸ್ನೇಹಿತರು ವಾಸವಾಗಿದ್ದರು. ಅವರಿಬ್ಬರೂ ಒಂದು ದಿನ ಶಂಖಗಳನ್ನ ಸಂಗ್ರಹಿಸಲು ಸಮುದ್ರದ ದಂಡೆಗೆ ಹೋದರು. ಕಾರಣ ಈ ಶಂಖಗಳನ್ನು ಮಾರಿ ತಮ್ಮ ಜೀವನೋಪಾಯ ನಡೆಸಲು ನಿರ್ಧರಿಸಿದ್ದರು. ಅವರಿಬ್ಬರೂ ಶಂಖಗಳನ್ನ ಸಂಗ್ರಹಿಸುವಾಗ ಮೊದಲನೇ ಗೆಳೆಯನಿಗೆ ಒಂದು ದೊಡ್ಡ ಶಂಖ ಸಿಗುತ್ತದೆ. ಇದನ್ನು ಕಂಡ ಎರಡನೇ ಗೆಳೆಯನು, ” ಅರೆ ಇವನಿಗೆ ನನಗಿಂತಲೂ ದೊಡ್ಡ ಶಂಖ ಸಿಕ್ಕಿದೆ ಮತ್ತು ಇವನು ನನಗಿಂತ ಹೆಚ್ಚಿನ ಹಣ ಗಳಿಸುತ್ತಾನೆ ಎಂದುಕೊಂಡು ತಾನು ಅವನಿಗಿಂತ ದೊಡ್ಡದಾದ ಶಂಖವನ್ನು ಹುಡುಕಿ ಅವನಿಗಿಂತ ಹೆಚ್ಚಿನ ಹಣ ಗಳಿಸುತ್ತೇನೆ” ಎಂದು ಆತ ದೊಡ್ಡ ಶಂಖದ ಹುಡುಕಾಟದಲ್ಲಿ ತೊಡಗಿಕೊಂಡ. ಅವನು ಸಾಕಷ್ಟು ಹುಡುಕಿದ, ಸಾಕಷ್ಟು ಪರಿಶ್ರಮ ಪಟ್ಟ. ಆದರೂ ಅವನಿಗೆ ದೊಡ್ಡದಾದ ಶಂಖ ಸಿಗಲೆ ಇಲ್ಲ ದೊಡ್ಡದಾದ ಶಂಖದ ಹುಡುಕಾಟದಲ್ಲಿ ಅವನ ಕೈಗೆ ಸಿಕ್ಕ ಚಿಕ್ಕ ಚಿಕ್ಕ ಶಂಖಗಳನ್ನೆಲ್ಲ ಆತ ತೆಗೆದು ಎಸೆದು ಬಿಟ್ಟಿದ್ದ. ಏಕೆಂದರೆ ಅವನ ಮನಸ್ಸಿನಲ್ಲಿ ಇದ್ದುದ್ದು ಒಂದೇ ಒಂದು ತನಗೆ ಶತಾಯ-ಗತಯ ಆ ದೊಡ್ಡದಾದ ಶಂಖ ಸಿಗಬೇಕು ಮತ್ತು ಅದರಿಂದ ತಾನು ತನ್ನ ಸ್ನೇಹಿತನಿಗಿಂತ ಹೆಚ್ಚು ಹಣ ಗಳಿಸಬೇಕು ಹೀಗೆ ದೊಡ್ಡ ಶಂಖದ ಹುಡುಕಾಟದಲ್ಲಿ ಮುಂಜಾನೆ ಕಳೆದು ಮಧ್ಯಾಹ್ನವಾಯಿತು ಮತ್ತು ಮಧ್ಯಾಹ್ನ ಕಳೆದು ರಾತ್ರಿಯಾಯಿತು. ಆದರೂ ಅವನ ಕೈಗೆ ಆ ದೊಡ್ಡ ಶಂಖ ಸಿಗಲೇ ಇಲ್ಲ. ಈ ದೊಡ್ಡ ಶಂಖದ ಹುಡುಕಾಟದಲ್ಲಿ ಕೈಗೆ ಬಂದಿದ್ದ ಚಿಕ್ಕ ಚಿಕ್ಕ ಶಂಖಗಳನ್ನು ಆತ ಸಮುದ್ರಕ್ಕೆ ಎಸೆದಿದ್ದನು,ಆದ್ದರಿಂದ ರಾತ್ರಿ ಹೊತ್ತಿಗೆ ಅವನ ಕೈಯಲ್ಲಿ ಏನೂ ಉಳಿದಿರಲಿಲ್ಲ. ಆದರೆ ಅವನ ಸ್ನೇಹಿತನ ಬಳಿ ಒಂದು ದೊಡ್ಡ ಶಂಖ ಮತ್ತು ಸಾಕಷ್ಟು ಚಿಕ್ಕ ಚಿಕ್ಕ ಶಂಖಗಳಿದ್ದವು. ಅವರಿಬ್ಬರೂ ರಾತ್ರಿ ಮನೆಗೆ ಮರಳುವ ಸಂದರ್ಭದಲ್ಲಿ ದೊಡ್ಡ ಶಂಖ ಹೊಂದಿದ ಮೊದಲನೇ ಸ್ನೇಹಿತ ಆ ಶಂಖವನ್ನು ಆತ ಒಂದು ಸಾವಿರಾರು ರೂಪಾಯಿಗೆ ಮಾರಿದನು. ಅದರ ಜೊತೆಗೆ ಅವನ ಬಳಿ ಇದ್ದ ಚಿಕ್ಕ ಪುಟ್ಟ ಶಂಖಗಳನ್ನು ಆತ 3000 ಗೆ ಮಾರಿದನು. ಇದನ್ನು ಕಂಡ ಎರಡನೇ ಸ್ನೇಹಿತನಿಗೆ ಬಹಳ ದುಃಖವಾಯಿತು. ತಾನು ಚಿಕ್ಕ ಚಿಕ್ಕ ಶಂಖಗಳನ್ನ ಅಷ್ಟೇ ಸಂಗ್ರಹಿಸಿದರೆ ಇವನಿಗಿಂತಲೂ ಹೆಚ್ಚು ಹಣವನ್ನು ನಾನು ಗಳಿಸಬಹುದಿತ್ತು ಎಂದು ಖಿನ್ನನಾದನು. ಅವನಿಗೆ ಮೊದಲನೇ ಸ್ನೇಹಿತ ಹೇಳ್ತಾನೆ ನೀನು ದೊಡ್ಡ ಶಂಖದ ಹುಡುಕಾಟದಲ್ಲಿ ಎಸೆದಿಂದ ಚಿಕ್ಕ ಚಿಕ್ಕ ಶಂಖಗಳನ್ನೇ ನಾನು ಸಂಗ್ರಹಿಸಿದೆ ಈಗ ಅವುಗಳಿಗೆ ರೂ.3,000 ಸಿಕ್ಕಿದೆ ಎಂದಾಗ ಎರಡನೇ ಸ್ನೇಹಿತ ಇದನ್ನ ಕೇಳಿ ಮತ್ತಷ್ಟು ನಿರಾಶೆಗೆ ಒಳಗಾದನು.

Thank you for reading this post, don't forget to subscribe!

ಸ್ನೇಹಿತರೆ ಈ ಕಥೆಯ ಉದ್ದೇಶ ಇಷ್ಟೇ ನಾವು ಜೀವನದಲ್ಲಿ ದೊಡ್ಡ ದೊಡ್ಡ ವಸ್ತುಗಳ ಹಿಂದೆ ಬಿದ್ದು ಅನೇಕ ಸಣ್ಣಪುಟ್ಟ ವಸ್ತುಗಳನ್ನ ಅಥವಾ ಅವಕಾಶಗಳನ್ನ ಕಳೆದುಕೊಳ್ಳುತ್ತೇವೆ. ದೊಡ್ಡ ವಸ್ತುಗಳ ಹುಡುಕಾಟದಲ್ಲಿ ಸಣ್ಣಪುಟ್ಟ ವಸ್ತುಗಳನ್ನ ನಿರ್ಲಕ್ಷಿಸಿ ಬಿಡುತ್ತೇವೆ. ಆದರೆ ಒಂದು ಮಾತು ನೆನಪಿಡಿ ಈ ಸಣ್ಣ ಪುಟ್ಟ ವಸ್ತುಗಳೇ ಮುಂದೆ ವಿಶಾಲರೂಪವನ್ನು ಪಡೆದುಕೊಳ್ಳುತ್ತವೆ. ಪ್ರತಿ ಸಣ್ಣ ವಸ್ತುಗಳ ಮೇಲು ನಿಮ್ಮ ಗಮನ ಇರಲಿ. ಅದರ ಮೇಲೆ ನಿರ್ಲಕ್ಷ ಬೇಡ. ಮುಂದೆ ಇದರ ಮಹತ್ವ ನಿಮಗೆ ತಿಳಿಯುತ್ತದೆ. ಹಾಗಂತ ನಾನು ನಿಮಗೆ ಸಣ್ಣದಾಗಿ ಯೋಚಿಸಿ ಸಣ್ಣದರಲ್ಲಿ ತೃಪ್ತಿಪಡಿ ಅಂತ ಹೇಳ್ತಾ ಇಲ್ಲ, ನಿಮ್ಮ ಆಲೋಚನೆ ದೊಡ್ಡದಾಗಿರಲಿ ಆದರೆ ಅದನ್ನು ಸಾಕಾರಗೊಳಿಸುವಲ್ಲಿ ಎದುರಾಗುವ ಸಣ್ಣಪುಟ್ಟ ಅವಕಾಶಗಳನ್ನ ಕೈ ಚೆಲ್ಲಬೇಡಿ. ಈ ಕಥೆಯಲ್ಲಿ ಬರುವ ಇಬ್ಬರೂ ಸ್ನೇಹಿತರ ಉದ್ದೇಶ ಒಂದೇ ಆಗಿತ್ತು ಅದು ಹಣ ಗಳಿಸುವುದು. ಆದರೆ ಮೊದಲನೇ ಸ್ನೇಹಿತ ದೊಡ್ಡದರ ಮೇಲು ಗಮನ ಹರಿಸಿದನಲ್ಲದೆ ಸಣ್ಣಪುಟ್ಟ ಶಂಖಗಳನ್ನು ಆತ ನಿರ್ಲಕ್ಷ ಮಾಡಲಿಲ್ಲ. ಎರಡನೇ ಸ್ನೇಹಿತ ಕೇವಲ ದೊಡ್ಡ ಶಂಖದ ಹುಡುಕಾಟದಲ್ಲಿ ಕೈಗೆ ಬಂದ ಎಲ್ಲಾ ಸಣ್ಣಪುಟ್ಟ ಶಂಖಗಳನ್ನ ಆತ ಎಸೆದುಬಿಟ್ಟಿದ್ದ ದಿನದ ಕೊನೆಯಲ್ಲಿ ಲಾಭದ ಫಲ ಸವಿಯ ಬೇಕಾದವನು ಕೊನೆಗೆ ಒಂದು ರೂಪಾಯಿಯೂ ಸಿಗದೇ ನಿರಾಶೆಗೆ ಒಳಗಾಗಬೇಕಾಯಿತು. ಕೊನೆಯದಾಗಿ ನಾನು ಹೇಳುವುದು ಇಷ್ಟೇ ಸ್ನೇಹಿತರೆ, ಸಣ್ಣ ಸಣ್ಣ ಬದಲಾವಣೆಗಳೇ ಅದ್ಭುತ ಯಶಸ್ಸಿನ ಮೆಟ್ಟಿಲುಗಳಾಗಿರುತ್ತವೆ. ನಮಸ್ಕಾರ.

ಎಲ್ಲರೂ ನಿಮಗೆ ಗೌರವ ಕೊಡಬೇಕಾದರೆ ಈ ಕಥೆಯನ್ನೊಮ್ಮೆ ಓದಿ…

ಒಮ್ಮೆ ಒಬ್ಬ ಬಾಲಕ ತನ್ನ ತಂದೆಯನ್ನು ಕೇಳಿದ “ಅಪ್ಪ ನನ್ನ ಜೀವನದ ಬೆಲೆ ಏನು?” ಅದಕ್ಕೆ ತಂದೆ ಹೇಳುತ್ತಾನೆ, “ನೀನು ನಿನ್ನ ಜೀವನದ ನಿಜವಾದ ಬೆಲೆ ತಿಳಿಯಲು ಬಯಸುವುದಾದರೆ ನಾನು ನಿನಗೊಂದು ಕಲ್ಲನ್ನು ಕೊಡುತ್ತೇನೆ ಇದನ್ನು ತೆಗೆದುಕೊಂಡು ಮಾರ್ಕೆಟಿಗೆ ಹೋಗುವ ಯಾರಾದರೂ ಈ ಕಲ್ಲಿನ ಬೆಲೆ ಕೇಳಿದರೆ ಏನು ಹೇಳಬೇಡ ಕೇವಲ ನಿನ್ನ ಎರಡು ಕೈಬೆರಳನ್ನ ತೋರಿಸು “. ಆ ಹುಡುಗ ಮಾರ್ಕೆಟಿಗೆ ಹೋದನು ಬಹಳ ಹೊತ್ತು ಕಾಯ್ದ ನಂತರ ಅವನ ಬಳಿ ಓರ್ವ ಹಣ್ಣು ಹಣ್ಣಾದ ಮುದುಕಿ ಬಂದು ಆ ಕಲ್ಲಿನ ಬೆಲೆ ಕೇಳಿದಳು. ಆ ಹುಡುಗ ಏನು ಮಾತನಾಡಲಿಲ್ಲ ಬದಲಾಗಿ ತನ್ನ ಎರಡು ಕೈ ಬೆರಳುಗಳನ್ನು ಮೇಲೆ ಮಾಡಿದ. ಅದಕ್ಕೆ ಆ ಮುದುಕಿ ಹೇಳಿದಳು “ಎರಡು ನೂರು ರೂಪಾಯಿಗಳ? ಸರಿ. ನಾನು ನಿನಗೆ ಎರಡು ನೂರು ರೂಪಾಯಿ ಕೊಡುತ್ತೇನೆ ಈ ಕಲ್ಲನ್ನ ನನಗೆ ಕೊಡು.” ಅದಕ್ಕೆ ಆ ಹುಡುಗ ಒಂದು ಕಲ್ಲಿನ ಬೆಲೆ ಎರಡು ನೂರು ರೂಪಾಯಿಯೇ? ಎಂದು ಅಚ್ಚರಿಗೊಂಡನು. ಅವನು ನೇರವಾಗಿ ಅವನ ತಂದೆ ಹತ್ತಿರ ಬಂದು ಹೇಳಿದ “ಅಪ್ಪ ನನಗೆ ಮಾರ್ಕೆಟ್ ನಲ್ಲಿ ಓರ್ವ ಮುದುಕಿ ಸಿಕ್ಕಿದಳು. ಈ ಕಲ್ಲಿಗೆ ಅವಳು ಎರಡು ನೂರು ರೂಪಾಯಿ ಕೊಡಲು ಸಿದ್ಧಳಿದ್ದಳು”. ಅದಕ್ಕೆ ತಂದೆ ಹೇಳಿದ “ಈ ಬಾರಿ ಈ ಕಲ್ಲನ್ನ ತೆಗೆದುಕೊಂಡು ಸಂಗ್ರಹಾಲಯಕ್ಕೆ ಅಂದ್ರೆ ಮ್ಯೂಸಿಯಂ ಗೆ ಹೋಗು. ಅಲ್ಲಿ ಯಾರಾದರೂ ಇದರ ಬೆಲೆ ಕೇಳಿದರೆ ಏನು ಮಾತನಾಡಬೇಡ ಕೇವಲ ನಿನ್ನ ಎರಡು ಬೆರಳನ್ನ ತೋರಿಸು.” ಆ ಹುಡುಗ ಮ್ಯೂಸಿಯಂಗೆ ಹೋದ. ಅಲ್ಲಿ ಓರ್ವ ವ್ಯಕ್ತಿಯ ಗಮನ ಈ ಹುಡುಗನ ಕೈಯಲ್ಲಿದ್ದ ಕಲ್ಲಿನ ಮೇಲೆ ಬೀಳುತ್ತದೆ. ಆಗ ಆತ ಈ ಕಲ್ಲಿನ ಬೆಲೆ ಕೇಳಿದ. ಅದಕ್ಕೆ ಆ ಹುಡುಗ ಏನು ಮಾತನಾಡದೆ ತನ್ನ ಎರಡು ಕೈ ಬೆರಳುಗಳನ್ನು ಮೇಲೆತ್ತಿದ. ಅದಕ್ಕೆ ಆ ವ್ಯಕ್ತಿ ಹೇಳಿದ ” 20000 ರೂಪಾಯಿಯೇ?ಆಗಲಿ. ನಾನು ನಿನಗೆ 20,000 ರೂ.ಕೊಡುತ್ತೇನೆ ಈ ಕಲ್ಲನ್ನ ನನಗೆ ಕೊಡು”. ಆ ಹುಡುಗ ಮತ್ತೊಮ್ಮೆ ಆಶ್ಚರ್ಯಗೊಂಡನು. ತನ್ನ ತಂದೆ ಬಳಿ ಹೋಗಿ “ಅಪ್ಪ ನನಗೆ ಮ್ಯೂಸಿಯಂನಲ್ಲಿ ಓರ್ವ ವ್ಯಕ್ತಿ ಸಿಕ್ಕಿದ್ದ, ಈ ಕಲ್ಲಿಗೆ ಆತ 20,000 ಕೊಟ್ಟು ಖರೀದಿಸಲು ಸಿದ್ಧನಿದ್ದ “.ಆಗ ತಂದೆ ಹೇಳಿದ,” ನಾನು ಕೊನೆಯದಾಗಿ ನಿನ್ನನ್ನ ಅಮೂಲ್ಯ ರತ್ನ ಹವಳುಗಳ ಅಂಗಡಿಗೆ ಕಳುಹಿಸುತ್ತೇನೆ. ಅಲ್ಲಿಯೂ ನಿನಗೆ ಯಾರಾದರೂ ಈ ಕಲ್ಲಿನ ಬೆಲೆ ಕೇಳಿದರೆ ಆಗಲು ನೀನು ಏನು ಮಾತನಾಡಬೇಡ. ಕೇವಲ ನಿನ್ನ ಎರಡು ಕೈಬೆರಳನ್ನ ಮಾತ್ರ ಮೇಲೆತ್ತು”. ಆ ಬಾಲಕ ಈ ಬಾರಿ ಅವಸರದಿಂದ ಅತ್ಯಮೂಲ್ಯವಾದ ರತ್ನ ಹವಳುಗಳ ಅಂಗಡಿಗೆ ಹೋದನು. ಅಲ್ಲಿ ಅವನು ಓರ್ವ ಮುದುಕನನ್ನ ಕಂಡನು ಆ ಮುದುಕನ ದೃಷ್ಟಿ ಈ ಕಲ್ಲಿನ ಮೇಲೆ ಬೀಳುತ್ತಿದ್ದಂತೆ ಆತ ಗಾಬರಿಯಿಂದ ಹೊರಗೆ ಬಂದು ಅವಸರದಿಂದ ಆ ಹುಡುಗನ ಕೈಯಲ್ಲಿರುವ ಕಲ್ಲನ್ನ ಕಸಿದುಕೊಂಡು ಹೇಳಿದ “ಓ ಮೈ ಗಾಡ್ ಈ ಒಂದು ಕಲ್ಲಿನ ಹುಡುಕಾಟದಲ್ಲಿ ನಾನು ಇಡೀ ನನ್ನ ಜೀವನವನ್ನೇ ಕಳೆದುಬಿಟ್ಟೆ. ಈ ಕಲ್ಲು ನಿನಗೆ ಎಲ್ಲಿ ಸಿಕ್ಕಿತು, ಈ ಕಲ್ಲಿನ ಬೆಲೆ ಎಷ್ಟು ಹೇಳು? ಈ ಕಲ್ಲಿನ ಬದಲಾಗಿ ನಿನಗೇನು ಬೇಕು ಕೇಳು?” ಎಂದಾಗ ಆ ಹುಡುಗ ಏನು ಮಾತನಾಡದೆ ತನ್ನ ಎರಡು ಕೈ ಬೆರಳುಗಳನ್ನು ಮೇಲಕ್ಕೆ ಎತ್ತಿದ. ಅದಕ್ಕೆ ಆ ಮುದುಕ ಹೇಳಿದ “ಎಷ್ಟು? ಎರಡು ಲಕ್ಷ ರೂಪಾಯಿಯೇ? ಸರಿ. ನಾನು ನಿನಗೆ ಎರಡು ಲಕ್ಷ ರೂಪಾಯಿ ಕೊಡಲು ಸಿದ್ಧನಿದ್ದೇನೆ. ದಯವಿಟ್ಟು ಈ ಕಲ್ಲನ್ನ ನೀನು ನನಗೆ ಕೊಡು” ಎಂದಾಗ ಆ ಹುಡುಗನಿಗೆ ತನ್ನ ಕಣ್ಣುಗಳನ್ನು ತನಗೆ ನಂಬಲು ಸಾಧ್ಯವಾಗಲಿಲ್ಲ. ಆತ ಅವಸರದಿಂದ ತನ್ನ ತಂದೆಯ ಬಳಿಗೆ ಬಂದು ಹೇಳಿದ “ಅಪ್ಪ ಆ ಮುದುಕ ಈ ಕಲ್ಲಿಗೆ ಎರಡು ಲಕ್ಷ ರೂಪಾಯಿ ಕೊಡಲು ಸಿದ್ಧನಿದ್ದಾನೆ” ಎಂದ. ಅದಕ್ಕೆ ಅವನ ತಂದೆ ಹೇಳಿದ “ಮಗು ಈಗ ನಿನಗೆ ಅರ್ಥವಾಯಿತೆ ನಿನ್ನ ಜೀವನದ ಮೌಲ್ಯ ಏನೆಂದು? ನಿನ್ನ ಜೀವನದ ಮೌಲ್ಯ ನೀನು ನಿನ್ನನ್ನು ಯಾವ ಸ್ಥಾನದಲ್ಲಿ ನೋಡಲು ಬಯಸುತ್ತಿಯ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ನೀನು ಎರಡು ನೂರು ರೂಪಾಯಿಯ ಕಲ್ಲಾಗಲು ಬಯಸುತ್ತಿಯೋ? ಅಥವಾ ಎರಡು ಲಕ್ಷ ರೂಪಾಯಿ ಕಲ್ಲಾಗಲು ಬಯಸುತ್ತಿಯ? ಇದನ್ನ ನೀನೆ ನಿರ್ಧರಿಸಬೇಕು. ನಿಮ್ಮ ಜೀವನದಲ್ಲಿ ಅನೇಕ ರೀತಿಯ ಜನ ಬಂದು ಹೋಗುತ್ತಾರೆ. ಯಾರು ನಿಮ್ಮನ್ನ ಪ್ರೀತಿಸುತ್ತಾರೋ ಅವರಿಗೆ ನೀವೇ ಎಲ್ಲ. ಇನ್ನು ಕೆಲವರಿರುತ್ತಾರೆ, ಅವರು ನಿಮ್ಮನ್ನು ಕೇವಲ ಸಂದರ್ಭಕ್ಕೆ ತಕ್ಕ ವಸ್ತುವಿನಂತೆ ಬಳಸಿಕೊಳ್ಳುತ್ತಾರೆ. ಅವರಿಗೆ ನೀವು ಏನು ಅಲ್ಲ. ಆದ್ದರಿಂದ ನಿಮ್ಮ ಜೀವನದ ಮೌಲ್ಯ ಏನೆಂಬುದು ಕೇವಲ ನಿಮ್ಮ ಮೇಲೆ ನಿರ್ಧಾರವಾಗುತ್ತದೆ. ನಮಸ್ಕಾರ.

ಅಲೆಕ್ಸಾಂಡರ್ ನನ್ನು ಮೀರಿಸಿದ ಮಹರ್ಷಿ ಪಾಣಿನಿ ಕಥೆ.. ತಪ್ಪದೇ ಓದಿ..!

ಇದೊಂದು ಅತಿ ಪ್ರಾಚೀನ ಕಥೆ ಒಂದು ಕಾಡಿನಲ್ಲಿ ಒಂದು ಗುರುಕುಲವಿತ್ತು, ಅಲ್ಲಿ ಅನೇಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಅಷ್ಟು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಗುರುಗಳು ಎಷ್ಟು ಹೇಳಿದರು ಅಭ್ಯಾಸ ಅವನ ತಲೆಗೆ ಹತ್ತುತ್ತಲೇ ಇರಲಿಲ್ಲ. ಹತ್ತೆಂಟು ಸಲ ಹೇಳಿದ ನಂತರವೂ ಆ ವಿದ್ಯಾರ್ಥಿಗೆ ತಿಳಿಯದಿದ್ದಾಗ ಗುರುಗಳಿಗೆ ಕೋಪ ಬಂದಿತು. ಅವರು ಆ ವಿದ್ಯಾರ್ಥಿಗೆ ಹೇಳಿದರು ” ಬಾಲಕ ಸ್ವಲ್ಪ ನಿನ್ನ ಅಂಗೈಯನ್ನ ತೋರಿಸು. ” ಆ ವಿದ್ಯಾರ್ಥಿಯು ಗುರುವಿಗೆ ತನ್ನ ಅಂಗೈಯನ್ನು ತೋರಿಸಿದ. ಅಂಗೈಯನ್ನು ನೋಡುತ್ತಿದ್ದಂತೆ ಗುರೂಜಿ ಹೇಳಿದರು “ಮಗು ನೀನು ನೇರವಾಗಿ ನಿನ್ನ ಮನೆಗೆ ಹೋಗಿಬಿಡು. ನೀನು ಆಶ್ರಮದಲ್ಲಿದ್ದು ಏನು ಪ್ರಯೋಜನವಿಲ್ಲ ಯಾಕೆಂದರೆ ನಿನ್ನ ಭಾಗ್ಯದಲ್ಲಿ ವಿದ್ಯೆ ಎಂಬುದು ಇಲ್ಲ” ಎಂದರು. ಅದಕ್ಕೆ ಆ ಶಿಷ್ಯ ಕೇಳಿದ, ” ಯಾಕೆ ಹೀಗೆ ಹೇಳುತ್ತಿದ್ದೀರಿ ಗುರೂಜಿ? ” ಅದಕ್ಕೆ ಗುರುಜಿಯು ಹೇಳಿದರು, “ಯಾಕೆಂದರೆ ನಿನ್ನ ಅಂಗೈಯಲ್ಲಿ ವಿದ್ಯೆಯ ರೇಖೆ ಇಲ್ಲ ಎಂದು ಹೇಳಿ ಇನ್ನೋರ್ವ ಜಾಣ ವಿದ್ಯಾರ್ಥಿಯ ಅಂಗೈಯನ್ನು ತೋರಿಸಿ ಹೇಳಿದರು ಇಲ್ಲಿ ನೋಡು ಇದೆ ವಿದ್ಯೆಯ ರೇಖೆ. ಇದು ನಿನ್ನ ಕೈಯಲ್ಲಿ ಇಲ್ಲ. ಆದ್ದರಿಂದ ನೀನು ಸುಖಾ ಸುಮ್ಮನೆ ಸಮಯವನ್ನು ಹಾಳು ಮಾಡದೆ ಮನೆಗೆ ಹೋಗಿ ಬೇರೆ ದಾರಿಯನ್ನು ನೋಡಿಕೋ ” ಎಂದರು. ಇದನ್ನು ಕೇಳಿದ ಆ ಶಿಷ್ಯನು ತನ್ನ ಜೇಬಿನಲ್ಲಿದ್ದ ಹರಿತವಾದ ಚಾಕು ಒಂದನ್ನು ತೆಗೆದು ತನ್ನ ಅಂಗೈಯಲ್ಲಿ ಆಳವಾದ ಗೆರೆ ಒಂದುನ್ನ ಕೊರೆದುಕೊಂಡು ಹೇಳಿದ “ಈಗ ನನ್ನ ಕೈಯಲ್ಲಿ ಆ ವಿದ್ಯೆಯ ರೇಖೆ ಮೂಡಿದೆ ಗುರೂಜಿ, ಇಲ್ಲಿ ನೋಡಿ.” ಎಂದಾಗ ಇದನ್ನ ಕಂಡ ಗುರೂಜಿಯು ಆ ಶಿಷ್ಯನಿಗೆ ಹೇಳಿದರು” ಮಗು ನೀನು ವಿದ್ಯೆಯನ್ನು ಕಲಿಯುವುದನ್ನು ಜಗತ್ತಿನ ಯಾವ ಶಕ್ತಿಯು ತಡೆಯಲು ಸಾಧ್ಯವಿಲ್ಲ”. ಎಂದು ಹೇಳಿ ಅವನನ್ನು ಪ್ರೀತಿಯಿಂದ ಅಪ್ಪಿಕೊಂಡರು.
ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರಮ ಅಂಗೈ ರೇಖೆಗಳನ್ನು ಬದಲಿಸುತ್ತವೆ. ಸ್ನೇಹಿತರೆ ಆ ಶಿಷ್ಯ ಯಾರು ಗೊತ್ತಾ ಇದೇ ಶಿಷ್ಯ ಮುಂದೆ ವ್ಯಾಕರಣ ಪಿತಾಮಹ ಎಂದು ಹೆಸರಾದ ಮಹರ್ಷಿ ಪಾಣಿನಿ. ಇಷ್ಟು ಶತಮಾನ ಕಳೆದರೂ ಜಗತ್ತಿನ ಬೆರಾವ ಭಾಷೆಯಲ್ಲಿ ರಚನೆಯಾಗದ” ಅಷ್ಟಾಧ್ಯಾಯಿ ಸೂತ್ರ ಪಾಠ “ಎಂಬ ಉತ್ಕೃಷ್ಟ ಮತ್ತು ಸಂಪೂರ್ಣ ವ್ಯಾಕರಣ ಗ್ರಂಥದ ಪಿತಾಮಹ. ಈ ಕಥೆಯ ನೀತಿ ಇಷ್ಟೇ..ಜಗತ್ತು ನಿಮ್ಮ ಬಗ್ಗೆ ಏನೇ ಆಡಿಕೊಂಡರು ಅದಕ್ಕೆ ತಲೆಕೆಡಿಸಿಕೊಳ್ಳದೆ ತಾಳ್ಮೆ ದೃಢ ನಿರ್ಧಾರ ಮತ್ತು ಕಠಿಣ ಪರಿಶ್ರಮ ನಿಮ್ಮದಾದರೆ ಜಗತ್ತೇ ನಿಮ್ಮದು. ನಮಸ್ಕಾರ.

Recent Posts

Bele Parihara Payment: ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯಾ ಚೆಕ್ ಮಾಡಿ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…

55 years ago

ಆಧಾರ್ ಕಾರ್ಡ್ ಹೊಂದಿದವರಿಗೆ ಮಹತ್ವದ ಮಾಹಿತಿ! ಈಗಲೇ ಈ ಕೆಲಸ ಮಾಡಿ!

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…

55 years ago

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರ ಕೊಡಲಿದೆ 20 ಕೋಳಿ ಮರಿ ಉಚಿತ ! ಈಗಲೇ ಅರ್ಜಿ ಸಲ್ಲಿಸಿ

ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…

55 years ago

Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ

ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…

55 years ago

PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ ! ಈಗಲೇ ಅರ್ಜಿ ಸಲ್ಲಿಸಿ

ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…

55 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

55 years ago